ನಿರ್ಭಯಾ ಅತ್ಯಾಚಾರಿಗಳಿಗೆ 7 ದಿನದಲ್ಲಿ ಗಲ್ಲು; ದೆಹಲಿ ಹೈಕೋರ್ಟ್​ನಿಂದ ಮಹತ್ವದ ಆದೇಶ

ನಿರ್ಭಯಾ ಅತ್ಯಾಚಾರಿಗಳು

ನಿರ್ಭಯಾ ಅತ್ಯಾಚಾರಿಗಳು

ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಆರೋಪಿಗಳ ಗಲ್ಲು ಶಿಕ್ಷೆಯನ್ನು ಸುಪ್ರೀಂ ಕೋರ್ಟ್​ ಕಳೆದ ತಿಂಗಳೇ ಖಚಿತಪಡಿಸಿತ್ತು. ಅಲ್ಲದೆ, ದೆಹಲಿ ಹೈಕೋರ್ಟ್​ ಇವರಿಗೆ ಗಲ್ಲು ಶಿಕ್ಷೆ ವಿಧಿಸಲು ಎರಡು ಬಾರಿ ಡೆತ್​ ವಾರಂಟ್​ ಹೊರಡಿಸಿತ್ತು. ಎಲ್ಲವೂ ಅಂದುಕೊಂಡತೆ ಆಗಿದ್ದರೆ ಜುಲೈ.01 ರಂದು ಇವರಿಗೆ ಗಲ್ಲು ಶಿಕ್ಷೆ ಜಾರಿಯಾಗಬೇಕಿತ್ತು.

ಮುಂದೆ ಓದಿ ...
  • Share this:

ದೆಹಲಿ (ಫೆಬ್ರವರಿ 05); ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ನಾಲ್ವರೂ ಆರೋಪಿಗಳನ್ನು ಇನ್ನೂ 7 ದಿನಗಳ ಒಳಗಾಗಿ ಗಲ್ಲಿಗೆ ಏರಿಸಬೇಕು ಎಂದು ದೆಹಲಿ ಹೈಕೋರ್ಟ್​ ಆದೇಶ ನೀಡಿದೆ.


ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಆರೋಪಿಗಳ ಗಲ್ಲು ಶಿಕ್ಷೆಯನ್ನು ಸುಪ್ರೀಂ ಕೋರ್ಟ್​ ಕಳೆದ ತಿಂಗಳೇ ಖಚಿತಪಡಿಸಿತ್ತು. ಅಲ್ಲದೆ, ದೆಹಲಿ ಹೈಕೋರ್ಟ್​ ಇವರಿಗೆ ಗಲ್ಲು ಶಿಕ್ಷೆ ವಿಧಿಸಲು ಎರಡು ಬಾರಿ ಡೆತ್​ ವಾರಂಟ್​ ಹೊರಡಿಸಿತ್ತು. ಎಲ್ಲವೂ ಅಂದುಕೊಂಡತೆ ಆಗಿದ್ದರೆ ಜುಲೈ.01 ರಂದು ಇವರಿಗೆ ಗಲ್ಲು ಶಿಕ್ಷೆ ಜಾರಿಯಾಗಬೇಕಿತ್ತು. ಆದರೆ, ತಾಂತ್ರಿಕವಾಗಿ ಈ ನಾಲ್ವರೂ ಆರೋಪಿಗಳ ಕ್ಷಮಾಪಣಾ ಅರ್ಜಿ ಇನ್ನೂ ಇತ್ಯರ್ಥವಾಗದ ಹಿನ್ನೆಲೆಯಲ್ಲಿ ಗಲ್ಲು ಶಿಕ್ಷೆ ವಿಧಿಸಲು ತಡವಾಗುತ್ತಿದೆ.


ಆರೋಪಿಗಳ ಶಿಕ್ಷೆ ಜಾರಿ ತಡವಾಗುತ್ತಿರುವ ಹಿನ್ನೆಲೆ ಇಡೀ ದೇಶ ಅಸಮಾಧಾನ ಹೊರಹಾಕಿದೆ. ಅಲ್ಲದೆ, ನಿರ್ಭಯಾ ತಾಯಿ ಸಹ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದರು. ಈ ಸಂಬಂಧ ಇಂದು ದೆಹಲಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದ ಕೇಂದ್ರ ಸರ್ಕಾರ ಆರೋಪಿಗಳ ಶಿಕ್ಷೆಯನ್ನು ಶೀಘ್ರದಲ್ಲಿ ಜಾರಿ ಮಾಡಲು ಅನುವು ಮಾಡಿಕೊಡುವಂತೆ ಕೇಳಿಕೊಂಡಿತ್ತು.


ಈ ಕುರಿತ ಅರ್ಜಿಯನ್ನು ಇಂದು ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್​, "ನಿರ್ಭಯಾ ಅತ್ಯಾಚಾರಿ ಆರೋಪಿಗಳಿಗೆ ಪ್ರತ್ಯೇಕ ಗಲ್ಲುಶಿಕ್ಷೆ ಸಾಧ್ಯವಿಲ್ಲ. ನಾಲ್ವರನ್ನೂ ಒಟ್ಟಿಗೆ ಗಲ್ಲಿಗೆ ಏರಿಸಿ. ಅಲ್ಲದೆ, ಈ ವಿಚಾರದಲ್ಲಿ ವಿಳಂಭ ಮಾಡುವುದೂ ಸಹ ಸರಿಯಲ್ಲ. ಅಧಿಕಾರಿಗಳ ಅಸಮರ್ಥತೆಯಿಂದ ದೋಷಿಗಳು ಲಾಭ ಪಡೆಯುತ್ತಿದ್ದಾರೆ. ಹೀಗಾಗಿ ಇನ್ನೂ 7 ದಿನಗಳ ಒಳಗಾಗಿ ಈ ನಾಲ್ವರನ್ನೂ ಒಟ್ಟಿಗೆ ಗಲ್ಲಿಗೆ ಏರಿಸಿ" ಎಂದು ಆದೇಶ ನೀಡಿದೆ.


ಇದನ್ನೂ ಓದಿ : ನಿರ್ಭಯಾ ಕೇಸ್​​: ಗಲ್ಲುಶಿಕ್ಷೆ ತಡೆ ಪ್ರಶ್ನಿಸಿ ದೆಹಲಿ ಹೈಕೋರ್ಟ್​ ಮೆಟ್ಟಿಲೇರಿದ್ದ ಕೇಂದ್ರ ಸರ್ಕಾರ; ಇಂದು ತೀರ್ಪು​ ಸಾಧ್ಯತೆ

Published by:MAshok Kumar
First published: