ನಿರ್ಭಯಾ ಅತ್ಯಾಚಾರ ಪ್ರಕರಣ : ದೋಷಿಗಳಿಗೆ ಫೆಬ್ರವರಿ 1 ರಂದು ಗಲ್ಲು ಶಿಕ್ಷೆ

ಅರ್ಜಿಯ ವಿಚಾರಣೆ ನಡೆಸಿದ ಹೆಚ್ಚುವರಿ ಸೆಷನ್ಸ್​​ ನ್ಯಾಯಾಧೀಶ ಸತೀಶ್ ಕುಮಾರ್​ ಅರೋರಾ ಅವರು. ಫೆ.1 ರಂದು  ಗಲ್ಲು ಶಿಕ್ಷೆಯನ್ನು ಜಾರಿ ಮಾಡುವಂತೆ ವಾರೆಂಟ್ ಹೊರಡಿಸಿದ್ದಾರೆ.

ರೇಖಾಚಿತ್ರ- ಮೀರ್ ಸುಹೈಲ್

ರೇಖಾಚಿತ್ರ- ಮೀರ್ ಸುಹೈಲ್

  • Share this:
ನವದೆಹಲಿ(ಜ.17): ನಿರ್ಭಯಾ ಅತ್ಯಾಚಾರ ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳಿಗೆ ಫೆಬ್ರವರಿ 1 ರಂದು ಬೆಳಿಗ್ಗೆ 6 ಗಂಟೆಗೆ ಗಲ್ಲಿಗೇರಿಸಬೇಕೆಂದು ದೆಹಲಿ ಹೈಕೋರ್ಟ್ ಡೆತ್ ವಾರೆಂಟ್ ಹೊರಡಿಸಿದೆ.

ಇದೇ ಜನವರಿ 22 ರಂದು  ಮರಣ ದಂಡನೆ  ನಿಗದಿಯಾಗಿತ್ತು ಅದನ್ನು ಮುಂದುಡುವಂತೆ ಕೋರಿ ನಾಲ್ವರು ಅರೋಪಿಗಳ ಪೈಕಿ ಮುಕೇಶ್ ಸಿಂಗ್​​ ದೆಹಲಿ ನ್ಯಾಯಾಲಯದ ಮೊರೆ ಹೋಗಿದ್ದರು. ರಾಷ್ಟ್ರಪತಿಗಳು ಕ್ಷಮಾಧಾನ ಅರ್ಜಿಯನ್ನು ತಿರಸ್ಕರಿಸಿದ್ದರು

ಅರ್ಜಿಯ ವಿಚಾರಣೆ ನಡೆಸಿದ ಹೆಚ್ಚುವರಿ ಸೆಷನ್ಸ್​​ ನ್ಯಾಯಾಧೀಶ ಸತೀಶ್ ಕುಮಾರ್​ ಅರೋರಾ ಅವರು. ಫೆ.1 ರಂದು  ಗಲ್ಲು ಶಿಕ್ಷೆಯನ್ನು ಜಾರಿ ಮಾಡುವಂತೆ ವಾರೆಂಟ್ ಹೊರಡಿಸಿದ್ದಾರೆ. ನಿಮಗಳ ಪ್ರಕಾರ ಅಪರಾಧಿಯ ಕ್ಷಮದಾನದ ಅರ್ಜಿ ತಿರಸ್ಕಾರಗೊಂಡ ಎರಡು ವಾರಗಳ ನಂತರ ಆತನಿಗೆ ಗಲ್ಲು ಜಾರಿಗೊಳಿಸಬೇಕು.

ಇದೇ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಫೆ. 1 ರಂದು ನಾಲ್ವರು ಅಪರಾಧಿಗಳಾದ ವಿನಯ್​ ಶರ್ಮಾ, ಮುಕೇಶ್ ಸಿಂಗ್​​, ಅಕ್ಷಯ್​​ ಕುಮಾರ್​ ಸಿಂಗ್​​ ಹಾಗೂ ಪವನ್​​​​​​ ಗುಪ್ತಾನನ್ನು ನೇಣಿಗೇರಿಸಲಾಗುತ್ತದೆ.

2012ರಲ್ಲಿ ದೆಹಲಿಯಲ್ಲಿ ಆರು ಮಂದಿ ಸೇರಿ ನಿರ್ಭಯಾ(ಹೆಸರು ಬದಲಿಸಲಾಗಿದೆ)ಮೇಲೆ ಅಮಾನುಷ ರೀತಿಯಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಕೆಲ ದಿನಗಳ ಜೀವನ್ಮರಣ ಹೋರಾಟದ ಬಳಿಕ ಆಕೆ ಸಾವನ್ನಪ್ಪಿದ್ದರು. ಪೊಲೀಸರು ಎಲ್ಲಾ 6 ಮಂದಿಯನ್ನು ಬಂಧಿಸಿದ್ದರು. ಅವರಲ್ಲಿ ಒಬ್ಬ ಬಾಲಾಪರಾಧಿಯಾಗಿದ್ದು, ಆತನಿಗೆ ಬಾಲಾಪರಾಧ ನಿಯಮದ ಪ್ರಕಾರ ಶಿಕ್ಷೆಯಾಗಿದೆ. ರಾಮ್ ಸಿಂಗ್ ಎಂಬ ಪ್ರಮುಖ ಆರೋಪಿಯು ತಿಹಾರ್ ಜೈಲಿನಲ್ಲೇ ನೇಣಿಗೆ ಶರಣಾಗಿದ್ದ. ಉಳಿದ ನಾಲ್ವರಿಗೆ ಮರಣದಂಡನೆ ಶಿಕ್ಷೆಯಾಗಿದೆ. ಆದರೆ, ಮೇಲ್ಮನವಿ, ಕ್ಷಮಾದಾನ ಅರ್ಜಿಗಳ ಕಾರಣದಿಂದಾಗಿ ಅವರನ್ನು ಗಲ್ಲಿಗೇರಿಸುವುದು ತಡವಾಗಿದೆ.

ಇದನ್ನೂ ಓದಿನಿರ್ಭಯಾ ಪ್ರಕರಣ: ಅಪರಾಧಿ ಮುಕೇಶ್ ಸಿಂಗ್ ಕ್ಷಮಾದಾನ ಮನವಿ ತಿರಸ್ಕರಿಸುವಂತೆ ರಾಷ್ಟ್ರಪತಿಗೆ ಗೃಹ ಸಚಿವಾಲಯ ಶಿಫಾರಸು

ದೆಹಲಿ ಹೈಕೋರ್ಟ್ ಈ ನಾಲ್ವರಿಗೆ ಈಗಾಗಲೇ ಡೆತ್ ವಾರೆಂಟ್ ಹೊರಡಿಸಿದೆ. ಜನವರಿ 22, ಬೆಳಗ್ಗೆ 7ಗಂಟೆಗೆ ನೇಣಿಗೇರಿಸಲು ಸಮಯ ನಿಗದಿಯಾಗಿತ್ತು. ಆದರೆ, ಕ್ಷಮಾದಾನ ಅರ್ಜಿ ಹಾಗೂ ಸರ್ಕಾರಗಳ ಔದಾಸೀನ್ಯದಿಂದಾಗಿ ಅಪರಾಧಿಗಳನ್ನು ನೇಣಿಗೇರಿಸುವುದು ವಿಳಂಬವಾಗುತ್ತಾ ಬಂದಿದೆ. ನಿರ್ಭಯಾಳ ತಾಯಿ ಕೂಡ ಇದೇ ವಿಚಾರವಾಗಿ ನಿನ್ನೆ ಆಕ್ರೋಶ ವ್ಯಕ್ತಪಡಿಸಿದ್ದರು. ಅಪರಾಧಿಗಳಿಗೆ ಶಿಕ್ಷೆಯಾಗುವುದಕ್ಕಿಂತ ತಮಗೆಯೇ ಶಿಕ್ಷೆಯಾಗುತ್ತಿರುವ ಭಾವನೆ ಬರುತ್ತಿದೆ ಎಂದು ಅಳಲು ತೋಡಿಕೊಂಡಿದ್ದರು.
First published: