HOME » NEWS » National-international » NIRBHAYA CASE CONVICTS TO BE HANDED ON MARCH 3RD AS SUPREME COURT DISMISSES THEIR PLEAS MAK

ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲು ಖಾಯಂಗೊಳಿಸಿದ ಸುಪ್ರೀಂ; ನಾಳೆ ಬೆಳಗ್ಗೆ 6ಕ್ಕೆ ನೆರವೇರಲಿರುವ ಶಿಕ್ಷೆ

2012ರಲ್ಲಿ ಸಂಭವಿಸಿದ ಪ್ರಕರಣ ಇದಾಗಿದೆ. ಆ ವರ್ಷದ ಡಿಸೆಂಬರ್ 16ರ ರಾತ್ರಿಯಂದು ನಿರ್ಭಯಾ ಮೇಲೆ ಆರು ಮಂದಿ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಬಸ್​ನೊಳಗೆ ಸೇರಿ ಬಹಳ ಕ್ರೂರ ರೀತಿಯಲ್ಲಿ ಅಪರಾಧ ಎಸಗಿದ್ದರು. ಅತ್ಯಾಚಾರದ ಬಳಿಕ ಬಹು ಅಂಗಾಂಗ ವೈಫಲ್ಯಕ್ಕೊಳಗಾಗಿ ಎರಡು ವಾರಗಳ ನಂತರ ಸಿಂಗಾಪುರದ ಆಸ್ಪತ್ರೆಯೊಂದರಲ್ಲಿ ನಿರ್ಭಯಾ ಸಾವನ್ನಪ್ಪಿದ್ದರು.

MAshok Kumar | news18-kannada
Updated:March 2, 2020, 11:35 AM IST
ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲು ಖಾಯಂಗೊಳಿಸಿದ ಸುಪ್ರೀಂ; ನಾಳೆ ಬೆಳಗ್ಗೆ 6ಕ್ಕೆ ನೆರವೇರಲಿರುವ ಶಿಕ್ಷೆ
ನಿರ್ಭಯಾ ಅತ್ಯಾಚಾರಿಗಳು.
  • Share this:
ನವದೆಹಲಿ(ಫೆ. 29): ಎಂಟು ವರ್ಷಗಳ ಹಿಂದಿನ ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ನಾಲ್ವರು ವ್ಯಕ್ತಿಗಳ ಶಿಕ್ಷೆ ಕೊನೆಗೂ ನೆರವೇರುವ ಕಾಲ ಕೂಡಿ ಬಂದಿದೆ. ನಾಳೆ ಬೆಳಗ್ಗೆ 6 ಗಂಟೆಗೆ ಎಲ್ಲಾ ಆರೋಪಿಗಳು ಗಲ್ಲಿಗೇರುವುದು ನಿಕ್ಕಿ ಆಗಿದೆ.

ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ನಿರ್ಭಯಾ ಅತ್ಯಾಚಾರಿಗಳನ್ನು ಆದಷ್ಟು ಬೇಗ ಗಲ್ಲಿಗೆ ಏರಿಸಬೇಕು ಎಂದು ದೇಶದೆಲ್ಲೆಡೆ ಜನ ವ್ಯಾಪಕವಾಗಿ ಒತ್ತಾಯಿಸಿದ್ದರು. ಹತ್ತಾರು ಪ್ರತಿಭಟನೆಗಳನ್ನೂ ನಡೆಸಲಾಗಿತ್ತು. ಆದರೆ, ಆರೋಪಿಗಳು ಪದೇ ಪದೇ ಕಾನೂನಿನ ಸಹಾಯ ಪಡೆದು ಶಿಕ್ಷೆಯಿಂದ ಬಜಾವ್ ಆಗುತ್ತಿದ್ದರು.

ದೆಹಲಿ ಪಟಿಯಾಲ ಕೋರ್ಟ್​ ಸತತ ನಾಲ್ಕು ಬಾರಿ ಡೆತ್ ವಾರೆಂಟ್​ ಹೊರಡಿಸಿದ್ದರೂ, ಅತ್ಯಾಚಾರಿಗಳ ಶಿಕ್ಷೆಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ಸುಪ್ರೀಂ ಕೋರ್ಟ್​ ಖಾಯಂಗೊಳಿಸಿದ್ದರೂ ಸಹ ಶಿಕ್ಷೆಯನ್ನು ನೆರವೇರಿಸಲು ಸಾಧ್ಯವಾಗಿರಲಿಲ್ಲ. ಆದರೆ, ಅಪರಾಧಿಗಳ ಕೊನೆಯ ಅಸ್ತ್ರವಾಗಿದ್ದ ಕ್ಯುರೇಟಿವ್ ಅರ್ಜಿಯನ್ನೂ ಸಹ ಸುಪ್ರೀ ಕೋರ್ಟ್​ ಇಂದು ವಜಾ ಮಾಡಿರುವ ಹಿನ್ನೆಲೆಯಲ್ಲಿ ಮಾರ್ಚ್​. 3ರ ಬೆಳಗ್ಗೆ 6 ಗಂಟೆಗೆ ನಾಲ್ವರೂ ಅಪರಾಧಿಗಳು ನೇಣಿಗೆ ಏರುವುದು ಕೊನೆಗೂ ಖಚಿತವಾಗಿದೆ

ಘಟನೆ ಹಿನ್ನೆಲೆ:

2012ರಲ್ಲಿ ಸಂಭವಿಸಿದ ಪ್ರಕರಣ ಇದಾಗಿದೆ. ಆ ವರ್ಷದ ಡಿಸೆಂಬರ್ 16ರ ರಾತ್ರಿಯಂದು ನಿರ್ಭಯಾ ಮೇಲೆ ಆರು ಮಂದಿ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಬಸ್​ನೊಳಗೆ ಸೇರಿ ಬಹಳ ಕ್ರೂರ ರೀತಿಯಲ್ಲಿ ಅಪರಾಧ ಎಸಗಿದ್ದರು. ಅತ್ಯಾಚಾರದ ಬಳಿಕ ಬಹು ಅಂಗಾಂಗ ವೈಫಲ್ಯಕ್ಕೊಳಗಾಗಿ ಎರಡು ವಾರಗಳ ನಂತರ ಸಿಂಗಾಪುರದ ಆಸ್ಪತ್ರೆಯೊಂದರಲ್ಲಿ ನಿರ್ಭಯಾ ಸಾವನ್ನಪ್ಪಿದ್ದರು.

ಈ ಆರು ಅಪರಾಧಿಗಳ ಪೈಕಿ ಒಬ್ಬ ಬಾಲಾಪರಾಧಿಯಾಗಿದ್ದು ಆತನಿಗೆ ಸಾಧಾರಣ ಶಿಕ್ಷೆ ನೀಡಿ ಬಿಡುಗಡೆಗೊಳಿಸಲಾಗಿದೆ. ಇನ್ನು ರಾಮ್ ಸಿಂಗ್ ಎಂಬ ಒಬ್ಬ ಅಪರಾಧಿ ತಿಹಾರ್ ಜೈಲಿನಲ್ಲಿ ನೇಣಿಗೆ ಶರಣಾಗಿದ್ದ. ಉಳಿದ ನಾಲ್ವರು ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ.

ಇದನ್ನೂ ಓದಿ : ಭಾರತದಲ್ಲಿ ಗಲ್ಲು ಶಿಕ್ಷೆಯ ಇತಿಹಾಸ ಮತ್ತು ಜನಾಭಿಪ್ರಾಯವೇನು? ನೇಣಿಗೆ ಕೊರಳುಕೊಟ್ಟವರ ಸಂಖ್ಯೆ ಎಷ್ಟು? ಇಲ್ಲಿದೆ ಆಸಕ್ತಿಕರ ಮಾಹಿತಿ
First published: March 2, 2020, 11:22 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories