HOME » NEWS » National-international » NIRBHAYA CASE CONVICT FILES FRESH MERCY PLEA SAYS PREVIOUS ONE DIDNT HAVE ALL THE FACTS SNVS

ನಿರ್ಭಯಾ ಪ್ರಕರಣ: ಮತ್ತೆ ಹೊಸದಾಗಿ ಕ್ಷಮಾದಾನ ಅರ್ಜಿ ಸಲ್ಲಿಸಿದ ಒಬ್ಬ ಹಂತಕ

ದೆಹಲಿ ನ್ಯಾಯಾಲಯವು ಈ ನಾಲ್ವರಿಗೆ ಮೂರು ಬಾರಿ ಡೆತ್ ವಾರಂಟ್ ಹೊರಡಿಸಿದೆ. ಇದೀಗ ಇವರ ಸಾವಿಗೆ ಮಾರ್ಚ್ 3 ರಂದು ದಿನ ನಿಗದಿಯಾಗಿದೆ. ಹಿಂದೆ ಹೊರಡಿಸಿದ್ದ ಡೆತ್ ವಾರೆಂಟ್​ಗಳು ಜಾರಿಗೊಂಡಿರಲಿಲ್ಲ.

Vijayasarthy SN | news18
Updated:February 29, 2020, 6:03 PM IST
ನಿರ್ಭಯಾ ಪ್ರಕರಣ: ಮತ್ತೆ ಹೊಸದಾಗಿ ಕ್ಷಮಾದಾನ ಅರ್ಜಿ ಸಲ್ಲಿಸಿದ ಒಬ್ಬ ಹಂತಕ
ರೇಖಾಚಿತ್ರ- ಮೀರ್ ಸುಹೈಲ್
  • News18
  • Last Updated: February 29, 2020, 6:03 PM IST
  • Share this:
ನವದೆಹಲಿ(ಫೆ. 29): ಎಂಟು ವರ್ಷಗಳ ಹಿಂದಿನ ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ನಾಲ್ವರು ವ್ಯಕ್ತಿಗಳಿಗೆ ನೇಣು ಹಾಕುವ ಕಾಲ ಸದ್ಯಕ್ಕೆ ಕೂಡಿಬರುವಂತೆ ಕಾಣುತ್ತಿಲ್ಲ. ಅಪರಾಧಿಗಳು ಮೇಲಿಂದ ಮೇಲೆ ಅರ್ಜಿಗಳನ್ನು ಸಲ್ಲಿಸಿ ನೇಣುಶಿಕ್ಷೆ ಜಾರಿಯನ್ನು ವಿಳಂಬ ಮಾಡುತ್ತಿದ್ಧಾರೆ. ಹಲವು ಬಾರಿ ಕ್ಷಮಾದಾನ, ಮೇಲ್ಮನವಿ ಸಲ್ಲಿಸಿ ವಿಫಲರಾಗಿದ್ದರೂ ಹಂತಕರು ಮರಳಿ ಮರಳಿ ಯತ್ನಿಸುತ್ತಲೇ ಇದ್ಧಾರೆ. ನಿನ್ನೆ ಪವನ್ ಗುಪ್ತಾ ಎಂಬಾತ ಸುಪ್ರೀಂ ಕೋರ್ಟ್​ನಲ್ಲಿ ಶಿಕ್ಷೆಯ ಪ್ರಮಾಣ ತಗ್ಗಿಸುವಂತೆ ಕೋರಿ ಮೇಲ್ಮನವಿ ಸಲ್ಲಿಸಿದ ಬೆನ್ನಲ್ಲೇ ಇವತ್ತು ಶುಕ್ರವಾರ ಅಕ್ಷಯ್ ಕುಮಾರ್ ಠಾಕೂರ್ ಎಂಬ ಮತ್ತೊಬ್ಬ ಅಪರಾಧಿ ಹೊಸದಾಗಿ ರಾಷ್ಟ್ರಪತಿಗಳ ಬಳಿ ಕ್ಷಮಾದಾನ ಕೋರಿ ಮನವಿ ಮಾಡಿಕೊಂಡಿದ್ಧಾನೆ. ತಾನು ಹಿಂದೆ ಸಲ್ಲಿಸಿದ್ದ ಅರ್ಜಿಯಲ್ಲಿ ಎಲ್ಲಾ ಅಂಶಗಳು ಇರಲಿಲ್ಲ. ಹೀಗಾಗಿ, ಮತ್ತೊಮ್ಮೆ ಅರ್ಜಿ ಸಲ್ಲಿಸುತ್ತಿದ್ದೇನೆಂದು ಆತ ಹೇಳಿಕೊಂಡಿದ್ದಾನೆ.

ಅಕ್ಷಯ್ ಠಾಕೂರ್ ಫೆಬ್ರುವರಿ ಮೊದಲ ವಾರದಲ್ಲಿ ರಾಷ್ಟ್ರಪತಿಗಳಿಗೆ ಕ್ಷಮಾದಾನ ಕೋರಿ ಅರ್ಜಿ ಸಲ್ಲಿಸಿದ್ದ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಈತನ ಅರ್ಜಿಯನ್ನು ತಿರಸ್ಕರಿಸಿದ್ದರು. ಈಗ ಮತ್ತೊಮ್ಮೆ ಸಲ್ಲಿಸಿದ್ದಾನೆ. ಮಾರ್ಚ್ 3ರಂದು ಪ್ರಕರಣದ ನಾಲ್ವರು ಅಪರಾಧಿಗಳಿಗೆ ನೇಣುಶಿಕ್ಷೆ ಜಾರಿ ಮಾಡಲು ದಿನ ನಿಗದಿಯಾಗಿದೆ. ಈ ಹಂತದಲ್ಲಿ ಈತ ಮತ್ತೊಮ್ಮೆ ಕ್ಷಮಾದಾನ ಅರ್ಜಿಯ ಪುನರಾವರ್ತನೆ ಮಾಡಿರುವುದು ಗಮನಾರ್ಹ. ನೇಣು ಹಾಕುವ ಪ್ರಕ್ರಿಯೆ ಮತ್ತೊಮ್ಮೆ ಮುಂದೂಡಿಕೆಯಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ದೆಹಲಿಯಲ್ಲಿ ಮತ್ತೊಮ್ಮೆ ಗೋಲಿಮಾರೋ ಸದ್ದು: ಆರು ಮಂದಿ ಬಂಧನ

ನಿನ್ನೆ ಶುಕ್ರವಾರ ಪವನ್ ಕುಮಾರ್ ಗುಪ್ತಾ ಸುಪ್ರೀಂ ಕೋರ್ಟ್​ನಲ್ಲಿ ಕ್ಯುರೇಟಿವ್ ಪೆಟಿಷನ್ ಹಾಕಿದ್ದಾನೆ. ತನಗೆ ವಿಧಿಸಲಾಗಿರುವ ಮರಣದಂಡನೆ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಮಾರ್ಪಡಿಸುವಂತೆ ಆತ ಸರ್ವೊಚ್ಚ ನ್ಯಾಯಪೀಠಕ್ಕೆ ಮನವಿ ಮಾಡಿಕೊಂಡಿದ್ಧಾನೆ. ಈ ಅರ್ಜಿಯ ವಿಚಾರಣೆ ನಡೆಯುವುದು ಬಾಕಿ ಇದೆ.

ದೆಹಲಿ ನ್ಯಾಯಾಲಯವು ಈ ನಾಲ್ವರಿಗೆ ಮೂರು ಬಾರಿ ಡೆತ್ ವಾರಂಟ್ ಹೊರಡಿಸಿದೆ. ಇದೀಗ ಇವರ ಸಾವಿಗೆ ಮಾರ್ಚ್ 3 ರಂದು ದಿನ ನಿಗದಿಯಾಗಿದೆ. ಹಿಂದೆ ಹೊರಡಿಸಿದ್ದ ಡೆತ್ ವಾರೆಂಟ್​ಗಳು ಜಾರಿಗೊಂಡಿರಲಿಲ್ಲ. ಅಪರಾಧಿಗಳು ಲಭ್ಯವಿರುವ ವಿವಿಧ ಕಾನೂನುಗಳನ್ನು ಬಳಸಿಕೊಂಡು ನೇಣುಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಲೇ ಇದ್ದಾರೆ.

2012ರಲ್ಲಿ ಸಂಭವಿಸಿದ ಪ್ರಕರಣ ಇದಾಗಿದೆ. ಆ ವರ್ಷದ ಡಿಸೆಂಬರ್ 16ರ ರಾತ್ರಿಯಂದು ನಿರ್ಭಯಾ ಮೇಲೆ ಆರು ಮಂದಿ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಬಸ್​ನೊಳಗೆ ಸೇರಿ ಬಹಳ ಕ್ರೂರ ರೀತಿಯಲ್ಲಿ ಅಪರಾಧ ಎಸಗಿದ್ದರು. ಅತ್ಯಾಚಾರದ ಬಳಿಕ ಬಹು ಅಂಗಾಂಗ ವೈಫಲ್ಯಕ್ಕೊಳಗಾಗಿ ಎರಡು ವಾರಗಳ ನಂತರ ಸಿಂಗಾಪುರದ ಆಸ್ಪತ್ರೆಯೊಂದರಲ್ಲಿ ನಿರ್ಭಯಾ ಸಾವನ್ನಪ್ಪಿದ್ದರು. ಈ ಆರು ಅಪರಾಧಿಗಳ ಪೈಕಿ ಒಬ್ಬ ಬಾಲಾಪರಾಧಿಯಾಗಿದ್ದು ಆತನಿಗೆ ಸಾಧಾರಣ ಶಿಕ್ಷೆ ನೀಡಿ ಬಿಡುಗಡೆಗೊಳಿಸಲಾಗಿದೆ. ಇನ್ನು ರಾಮ್ ಸಿಂಗ್ ಎಂಬ ಒಬ್ಬ ಅಪರಾಧಿ ತಿಹಾರ್ ಜೈಲಿನಲ್ಲಿ ನೇಣಿಗೆ ಶರಣಾಗಿದ್ದ. ಉಳಿದ ನಾಲ್ವರು ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
Youtube Video
First published: February 29, 2020, 6:03 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories