ಪಿಎನ್​​ಬಿ ಹಗರಣ: ಮತ್ತೆ ನೀರವ್​​ ಮೋದಿಗೆ ಸೇರಿದ 56 ಕೋಟಿ ಮೌಲ್ಯದ ಆಸ್ತಿ ಜಪ್ತಿ..!

ನೀರವ್​​ ಮೋದಿ ಮಾಲೀಕತ್ವದ ಡೈಮಂಡ್ ಕಂಪನಿಗೆ ಸೇರಿದ 7.79 ಮಿಲಿಯನ್ ಅಮೆರಿಕನ್ ಡಾಲರ್ (56.8 ಕೋಟಿ ರುಪಾಯಿ) ಆಸ್ತಿಯನ್ನು ವಶಪಡಿಸಿಕೊಂಡಿದ್ದೇವೆ | Nirav Modi's Properties In Dubai which Worth Rs. 56 Crore Seized By ED

Ganesh Nachikethu
Updated:November 6, 2018, 10:35 PM IST
ಪಿಎನ್​​ಬಿ ಹಗರಣ: ಮತ್ತೆ ನೀರವ್​​ ಮೋದಿಗೆ ಸೇರಿದ 56 ಕೋಟಿ ಮೌಲ್ಯದ ಆಸ್ತಿ ಜಪ್ತಿ..!
ನೀರವ್​​ ಮೋದಿ
Ganesh Nachikethu
Updated: November 6, 2018, 10:35 PM IST
ನ್ಯೂಸ್​​-18 ಕನ್ನಡ

ನವದೆಹಲಿ(ನವೆಂಬರ್​​​.06): ಪಂಜಾಬ್​​ ನ್ಯಾಷನಲ್​​ ಬ್ಯಾಂಕಿಗೆ ಸಾವಿರಾರು ಕೋಟಿ ವಂಚಿಸಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಆರೋಪಿ ನೀರವ್ ಮೋದಿಗೆ ಸೇರಿದ 56 ಕೋಟಿ ಮೌಲ್ಯದ ಆಸ್ತಿಯನ್ನು ಜಾರಿನಿರ್ದೇಶನಾಲಯ ಅಧಿಕಾರಿಗಳು ಜಪ್ತಿ ಮಾಡಿಕೊಂಡಿದ್ದಾರೆ. ಕೋಟಿಗಟ್ಟಲೇ ಮೌಲ್ಯದ ಆಸ್ತಿಯನ್ನು ದುಬೈನಲ್ಲಿ ಇಡಿ ವಶಕ್ಕೆ ಪಡೆದಿದೆ ಎನ್ನಲಾಗಿದೆ.

ನೀರವ್​​ ಮೋದಿ ಮಾಲೀಕತ್ವದ ಡೈಮಂಡ್ ಕಂಪನಿಗೆ ಸೇರಿದ 7.79 ಮಿಲಿಯನ್ ಅಮೆರಿಕನ್ ಡಾಲರ್ (56.8 ಕೋಟಿ ರುಪಾಯಿ) ಆಸ್ತಿಯನ್ನು ವಶಪಡಿಸಿಕೊಂಡಿದ್ದೇವೆ. ಸುಪ್ರೀಕೋರ್ಟ್​ ಆದೇಶಿಸಿದಂತೆ ಅಕ್ರಮ ಹಣ ವರ್ಗಾವಣೆ ನಿಯಂತ್ರಣ ಕಾಯ್ದೆ ಅಡಿಯಲ್ಲಿ ಆಸ್ತಿ ಜಪ್ಪಿ ಮಾಡಿದ್ದೇವೆ ಎಂದು ಜಾರಿನಿರ್ದೇಶನಾಲಯ ಅಧಿಕಾರಿಯೊಬ್ಬರು ತಿಳಿಸಿದ್ಧಾರೆ.

ಕಳೆದ ವಾರವೂ ಪಂಜಾಬ್ ನ್ಯಾಷನಲ್ ಬ್ಯಾಂಕ್​​ನ ಬಹುಕೋಟಿ ಹಗರಣದ ರೂವಾರಿ ಆಸ್ತಿಯನ್ನು ಕರಗಿಸುವ ಕಾರ್ಯದಲ್ಲಿ ಭಾರತದ ತನಿಖಾ ಸಂಸ್ಥೆಗಳು ನಿರತವಾಗಿದ್ದವು. ಅಲ್ಲದೇ ಇತ್ತೇಗಷ್ಟೇ ನೀರವ್ ಮೋದಿ ಅವರ ಒಡೆತನದ ಕಂಪೆನಿಗೆ ಸೇರಿದ, 523.72 ಕೋಟಿ ರು ಮೌಲ್ಯದ 21 ಸ್ಥಿರಾಸ್ತಿಗಳನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು. ಇದೀಗ ಮತ್ತೆ ಇಡಿ 56 ಕೋಟಿ ಮೌಲ್ಯದ ಆಸ್ತಿ ಇಡಿ ವಶಕ್ಕೆ ಪಡೆದಿದೆ.

ಯಾರಿವ ನೀರವ್​ ಮೋದಿ: ನೀರವ್ ಮೋದಿ (47) ವಿಶ್ವ ಪ್ರಸಿದ್ಧ ಆಭರಣ ವಿನ್ಯಾಸಕ. ಕೇಟ್ ವಿನ್ಸ್ ಲೆಟ್, ಐಶ್ವರ್ಯಾ ರೈ, ಪ್ರಿಯಾಂಕಾ ಛೋಪ್ರಾ ಸೇರಿದಂತೆ ಹಲವರು ಈತನ ವಿನ್ಯಾಸದ ಆಭರಣಕ್ಕಾಗಿ ಹಾತೊರೆಯುತ್ತಿದ್ದರು. ಈತನ ಬಳಿ ವಜ್ರದ ಆಭರಣಗಳನ್ನು ಖರೀದಿಸಲು ವಿದೇಶಿಯಿಂದಲೂ ಬರುತ್ತಿದ್ದರು. ಅತೀಹೆಚ್ಚು ನಟ-ನಟಿಯರು ಈತನ ಬಳಿಯೇ ವಜ್ರಾಭರಣಗಳನ್ನು ಖರೀದಿಸುತ್ತಿದ್ದರು ಎನ್ನಲಾಗಿದೆ.

ಪ್ರಕರಣ:  ಆದರೀಗ ಪಂಜಾಬ್ ನ್ಯಾಷನಲ್ ಬ್ಯಾಂಕಿನ ಮುಂಬೈ ಶಾಖೆಯೊಂದರಲ್ಲಿ 11,500 ಕೋಟಿ ರೂ.ಗಳು ವಂಚಿಸಿ, ಅಕ್ರಮ ವಹಿವಾಟು ನಡೆಸಿ ವಿದೇಶಕ್ಕೆ ನೀರವ್​​ ಮೋದೊ ಪರಾರಿಯಾಗಿದ್ದಾನೆ. ನೀರವ್ ವಿರುದ್ಧ ಪಿಎನ್​ಬಿ ನೀಡಿದ್ದ ದೂರಿನ ಆಧಾರದ ಮೇಲೆ ಜಾರಿ ನಿರ್ದೇಶನಾಲಯ ರೆಡ್​​ಕಾರ್ನರ್​​ ನೋಟಿಸ್​ ಜಾರಿ ಮಾಡಿದೆ. ಅಲ್ಲದೇ ದೇಶ-ವಿದೇಶಗಳಲ್ಲಿ ನೀರವ್​ಗೆ ಸೇರಿದ ಸಾವಿರಾರೂ ಕೋಟಿ ಆಸ್ತಿಯನ್ನು ಇಡಿ ವಶಕ್ಕೆ ಪಡೆಯುತ್ತಿದೆ.

ಇನ್ನು ಹಗರಣದಲ್ಲಿ ಉದ್ಯಮಿ ನೀರವ್ ಮೋದಿ, ಅವರ ಸಹೋದರ ನಿಶಾಲ್, ಸಂಬಂಧಿ ಮೆಹುಲ್ ಚೋಕ್ಸಿ ಮತ್ತು ಗೀತಾಂಜಲಿ ಗ್ರೂಪ್​ನ ಅಧಿಕಾರಿ ಸುಭಾಷ್ ಪರಬ್ ವಿರುದ್ಧವೂ ಆರೋಪಪಟ್ಟಿ ದಾಖಲಾಗಿದೆ. ಈ ವಿಚಾರ ಬೆಳಕಿಗೆ ಬರುವ ಮುನ್ನವೇ ನೀರವ್ ಮೋದಿ ಮತ್ತಿತರ ಕೆಲ ಆರೋಪಿಗಳು ಭಾರತ ಬಿಟ್ಟು ವಿದೇಶಕ್ಕೆ ಪರಾರಿಯಾಗಿದ್ದರು. ಇದೀಗ ಜಾರಿ ನಿರ್ದೇಶನಾಲಯವು ನೀರವ್​ ಬೆನ್ನತ್ತಿ ತನಿಖೆ ನಡೆಸುತ್ತಿದೆ.
First published:November 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ