ನೀರವ್​ ಮೋದಿಯ 100 ಕೋಟಿ ರೂ. ಮೌಲ್ಯದ ಐಷಾರಾಮಿ ಬಂಗಲೆ ಇಂದು ತೆರವು

ರೂಪಾನ್ಯ ಎಂಬ ಹೆಸರಿನ ಈ ಬಂಗಲೆಯನ್ನು 100 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ನೆಲಮಹಡಿ ಮತ್ತು ಮೇಲ್ಭಾಗವನ್ನು ಈ ಐಷಾರಾಮಿ ಕಟ್ಟಡ ಒಳಗೊಂಡಿದೆ.

sushma chakre | news18
Updated:March 8, 2019, 11:30 AM IST
ನೀರವ್​ ಮೋದಿಯ 100 ಕೋಟಿ ರೂ. ಮೌಲ್ಯದ ಐಷಾರಾಮಿ ಬಂಗಲೆ ಇಂದು ತೆರವು
ನೀರವ್​ ಮೋದಿ ಬಂಗಲೆ
sushma chakre | news18
Updated: March 8, 2019, 11:30 AM IST
ನವದೆಹಲಿ (ಮಾ.8): ಪಂಜಾಬ್‌ ನ್ಯಾಷನಲ್‌ ಬ್ಯಾಂಕ್​ (ಪಿಎನ್​ಬಿ) ಹಗರಣದ ಆರೋಪಿ ಉದ್ಯಮಿ ನೀರವ್‌ ಮೋದಿಗೆ ಸೇರಿದ ಮಹಾರಾಷ್ಟ್ರದ ಅಲಿಬಾಗ್‌ ಕಡಲ ತೀರದಲ್ಲಿರುವ 100 ಕೋಟಿ ರೂ. ಮೌಲ್ಯದ ಐಷಾರಾಮಿ ಬಂಗಲೆಯನ್ನು ಇಂದು ಡೈನಾಮೈಟ್‌ ಸಿಡಿಸಿ ಕೆಡವಲಾಗುತ್ತದೆ.

ರಾಯಗಢದ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಬಂಗಲೆಗೆ ಡೈನಾಮೈಟ್​ ಇಟ್ಟು ಧ್ವಂಸಗೊಳಿಸಲಾಗುತ್ತದೆ ಎಂದು ಹೇಳಲಾಗಿದೆ. ಕರಾವಳಿ ನಿಯಂತ್ರಣ ವಲಯ ಹಾಗೂ ಕಾನೂನು ನಿಯಮಾವಳಿ ಉಲ್ಲಂಘಿಸಿ 33,000 ಚದರ ಅಡಿ ವ್ಯಾಪ್ತಿಲ್ಲಿ ನಿರ್ಮಿಸಲಾಗಿರುವ ಬಂಗಲೆಯನ್ನು ತೆರವುಗೊಳಿಸಲು ಹೈಕೋರ್ಟ್‌ ಆದೇಶಿಸಿತ್ತು. ಹೀಗಾಗಿ, ಈ ಐಷಾರಾಮಿ ಬಂಗಲೆಯನ್ನು ಇಂದು ನೆಲಸಮಗೊಳಿಸಲಾಗುತ್ತಿದೆ. ಕಳೆದ ಆರು ವಾರಗಳಿಂದ ಬುಲ್ಡೋಜರ್‌ ಹಾಗೂ ಇತರ ಯಂತ್ರಗಳ ಮೂಲಕ ಬಂಗಲೆಯನ್ನು ನೆಲಸಮಗೊಳಿಸುವ ಕಾರ್ಯ ನಡೆಯುತ್ತಿದೆ.

Ayodhya Verdict: ಅಯೋಧ್ಯೆ ಭೂ ವಿವಾದದ ಸಂಧಾನಕ್ಕೆ ರವಿಶಂಕರ್ ಗುರೂಜಿ​ ಸೇರಿ ಮೂವರನ್ನು ನೇಮಿಸಿದ ಸುಪ್ರೀಂಕೋರ್ಟ್​ರೂಪಾನ್ಯ ಎಂಬ ಹೆಸರಿನ ಈ ಬಂಗಲೆಯನ್ನು 100 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ನೆಲಮಹಡಿ ಮತ್ತು ಮೇಲ್ಭಾಗವನ್ನು ಈ ಐಷಾರಾಮಿ ಕಟ್ಟಡ ಒಳಗೊಂಡಿದೆ. ಬಂಗಲೆಯ ಅಡಿಪಾಯ ಗಟ್ಟಿಯಾಗಿರುವುದರಿಂದ ಬಂಗಲೆಯ ಪಿಲ್ಲರ್​ಗಳನ್ನು ಕೊರೆದು ಡೈನಾಮೈಟ್​ ಬಳಸಿ ಕೆಡವಲಾಗುತ್ತಿದೆ. ಮುಂಬೈನಿಂದ 90 ಕಿ.ಮೀ. ದೂರದ ಕಿಹಿಂ ಕಡಲ ದಡದಲ್ಲಿ ಈ ಬಂಗಲೆಯಿದೆ. ಬಂಗಲೆ ಸುತ್ತ ಉಕ್ಕಿನ ಕಾಂಪೌಂಡ್​ ನಿರ್ಮಿಸಿ ಬೃಹತ್​ ಗೇಟು ಅಳವಡಿಸಲಾಗಿದೆ. ಈಜುಕೊಳ ಸೇರಿದಂತೆ ಎಲ್ಲ ರೀತಿಯ ಆಧುನಿಕ ಸೌಲಭ್ಯಗಳನ್ನು ಈ ಬಂಗಲೆ ಹೊಂದಿದೆ.


Loading...

ಮಹಿಳಾ ದಿನಾಚರಣೆಗೆ ಗೂಗಲ್​ ಗೌರವ; ಡೂಡಲ್​ನಲ್ಲಿ ವಿಶ್ವದ 13 ಪ್ರಸಿದ್ಧ ಸ್ತ್ರೀಯರ ಸ್ಫೂರ್ತಿದಾಯಕ ನುಡಿ

ಶಂಬುರಾಜೆ ಯುವ ಕ್ರಾಂತಿ ಎಂಬ ಎನ್‌ಜಿಒ 2009ರಲ್ಲಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ್ದ ಬಾಂಬೆ ಹೈಕೋರ್ಟ್​ ಪರಿಸರ ವಲಯನ್ನು ಉಲ್ಲಂಘಿಸಿ ನಿರ್ಮಿಸಲಾದ ಕಟ್ಟಡ ಹಾಗೂ ಬಂಗಲೆಗಳನ್ನು ತೆರವುಗೊಳಿಸಲು ಆದೇಶಿಸಿತ್ತು. ಆ ಬಂಗಲೆಗಳ ಪಟ್ಟಿಯಲ್ಲಿ ನೀರವ್​ ಮೋದಿಯ ಬಂಗಲೆಯೂ ಸೇರಿತ್ತು.

First published:March 8, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...