ನೀರವ್ ಮೋದಿ ಪತ್ನಿ ವಿರುದ್ಧ ಜಾಮೀನು ರಹಿತ ವಾರೆಂಟ್; ಹರಾಜಾಗಲಿವೆ ಮೋದಿ ಒಡೆತನದ ಪೇಂಟಿಂಗ್ಸ್ ಮತ್ತು ಕಾರುಗಳು

ಪಿಎನ್​ಬಿ ಹಗರಣದಲ್ಲಿ ನೀರವ್ ಮೋದಿ ಅವರ ಪತ್ನಿ ಅಮಿ ಅವರ ಪಾತ್ರವೂ ಇದೆ ಎಂದು ಇಡಿ ಚಾರ್ಜ್​ಶೀಟ್ ಹಾಕಿರುವ ಹಿನ್ನೆಲೆಯಲ್ಲಿ ಅವರಿಗೂ ಜಾಮೀನು ರಹಿತ ವಾರಂಟ್ ಹೊರಡಿಸಲಾಗಿದೆ.

Vijayasarthy SN | news18
Updated:March 20, 2019, 7:41 PM IST
ನೀರವ್ ಮೋದಿ ಪತ್ನಿ ವಿರುದ್ಧ ಜಾಮೀನು ರಹಿತ ವಾರೆಂಟ್; ಹರಾಜಾಗಲಿವೆ ಮೋದಿ ಒಡೆತನದ ಪೇಂಟಿಂಗ್ಸ್ ಮತ್ತು ಕಾರುಗಳು
ನೀರವ್ ಮೋದಿ ಒಡೆತನದ ಕಾರುಗಳು
Vijayasarthy SN | news18
Updated: March 20, 2019, 7:41 PM IST
ನವದೆಹಲಿ(ಮಾ. 20): ಲಂಡನ್​ನಲ್ಲಿ ಬಂಧಿತರಾಗಿರುವ ಪಿಎನ್​ಬಿ ಬ್ಯಾಂಕಿಂಗ್ ಹಗರಣದ ಪ್ರಮುಖ ಆರೋಪಿ ಹಾಗೂ ವಜ್ರೋದ್ಯಮಿ ನೀರವ್ ಮೋದಿ ಅವರ ಕೆಲ ಆಸ್ತಿಗಳನ್ನು ಮಾರಾಟ ಮಾಡಲು ವಿಶೇಷ ನ್ಯಾಯಾಲಯವೊಂದು ಜಾರಿ ನಿರ್ದೇಶನಾಲಯಕ್ಕೆ ಅನುಮತಿ ಕೊಟ್ಟಿದೆ. ಇದರ ಬೆನ್ನಲ್ಲೇ ನೀರವ್ ಮೋದಿ ಒಡೆತನದ ಸುಮಾರು 173 ಪೇಂಟಿಂಗ್​ಗಳು ಹಾಗೂ 11 ವಾಹನಗಳನ್ನು ಇಡಿ ಮಾರಾಟ ಮಾಡಲಿದೆ. ಈ ದುಬಾರಿ ಪೇಂಟಿಂಗ್​ಗಳ ಒಟ್ಟು ಮೌಲ್ಯ 57.72 ಕೋಟಿ ರೂ ಎಂದು ಅಂದಾಜಿಸಲಾಗಿದೆ. ಮೋದಿ ಅವರಿಗೆ ಸೇರಿದ 11 ವಾಹನಗಳಲ್ಲಿ ರಾಲ್ಸ್ ರಾಯ್ಸ್, ಪೋರ್ಷೆ, ಮೆರ್ಸಿಡೆಸ್ ಮತ್ತು ಟೊಯೋಟಾ ಫಾರ್ಚೂನರ್ ಕಾರುಗಳೂ ಇವೆ. ಇವುಗಳನ್ನ ಈ ತಿಂಗಳ ಕೊನೆಯಲ್ಲಿ ಸಾರ್ವಜನಿಕವಾಗಿ ಹರಾಜು ಮಾಡಲಾಗುವುದು ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಸಂಜೋತಾ ರೈಲು ಸ್ಫೋಟ ಪ್ರಕರಣ; ಅಸೀಮಾನಂದ ಸ್ವಾಮಿ ಸೇರಿ ನಾಲ್ವರು ಆರೋಪಿಗಳು ಖುಲಾಸೆ

ಇದೇ ವೇಳೆ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದಲ್ಲಿ ನೀರವ್ ಮೋದಿ ಅವರ ಪತ್ನಿ ಅಮಿ ಮೋದಿ ಅವರ ಪಾತ್ರವೂ ಇದೆ ಎಂದು ಜಾರಿ ನಿರ್ದೇಶನಾಲಯವು ಆಕೆಯ ವಿರುದ್ಧ ಪೂರಕ ಚಾರ್ಜ್ ಶೀಟ್ ಸಲ್ಲಿಸಿತ್ತು. ಇದರ ಬೆನ್ನಲ್ಲೇ ನ್ಯಾಯಾಲಯವು ಅಮಿ ಮೋದಿ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿದೆ.

ಇದನ್ನೂ ಓದಿ: ಲಂಡನ್​ನಲ್ಲಿ ನೀರವ್​ ಮೋದಿ ಬಂಧನ; ಜಾಮೀನು ನಿರಾಕರಿಸಿದ ಕೋರ್ಟ್; ಮಾ. 29ರವರೆಗೆ ಪೊಲೀಸ್ ಕಸ್ಟಡಿಗೆ

ಇದರ ಜೊತೆಗೆ ಬೇರೆ ಪ್ರಕರಣದಲ್ಲಿ ನೀರವ್ ಮೋದಿ ಅವರ ಇತರ 68 ಪೇಂಟಿಂಗ್​ಗಳನ್ನು ಮಾರಾಟ ಮಾಡಲು ಆದಾಯ ತೆರಿಗೆ ಇಲಾಖೆಗೂ ಕೋರ್ಟ್ ಅನುಮತಿ ನೀಡಿದೆ.

ಸಾವಿರಾರು ಕೋಟಿ ಪಿಎನ್​ಬಿ ಹಗರಣದ ಪ್ರಮುಖ ಆರೋಪಿ ನೀರವ್ ಮೋದಿ ಅವರು ದೇಶ ತೊರೆದು ಹೋಗಿದ್ದರು. ಇವತ್ತು ಲಂಡನ್​ನಲ್ಲಿ ಸ್ಕಾಟ್​ಲೆಂಡ್ ಯಾರ್ಡ್ ಪೊಲೀಸರು ನೀರವ್ ಅವರನ್ನು ಬಂಧಿಸಿದ್ದಾರೆ. ವೆಸ್ಟ್​ಮಿಂಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ನೀರವ್ ಜಾಮೀನು ಅರ್ಜಿ ತಿರಸ್ಕರಿಸಿ ಅವರನ್ನು ಮಾರ್ಚ್ 29ವರೆಗೆ ಪೊಲೀಸ್ ಕಸ್ಟಡಿಗೆ ಕಳುಹಿಸಿದೆ.
First published:March 20, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ