ಒಬ್ಬ ಸಾಕ್ಷಿಗೆ ಬೆದರಿಕೆ, ಮತ್ತೊಬ್ಬನನ್ನು ಕೊಳ್ಳುವ ಯತ್ನ; ನೀರವ್​ ಮೋದಿಗೆ ಜಾಮೀನಿಲ್ಲ

ಇಂಗ್ಲೆಂಡ್​ನ ಕ್ರೌನ್​ ಪ್ರಾಸಿಕ್ಯೂಷನ್​ ಸೇವಾ ಸಂಸ್ಥೆಯ ಟಾಬಿ ಕ್ಯಾಡ್​ಮ್ಯಾನ್​ ಭಾರತದ ಪರವಾಗಿ ವಾದ ಮಂಡಿಸುತ್ತಿದ್ದು, ನೀರವ್​ ಮೋದಿ ಕೆಲವೊಂದು ಸಾಕ್ಷಿಗಳನ್ನು ಈಗಾಗಲೇ ನಾಶಮಾಡಲಾಗಿದೆ ಎಂದಿದ್ದಾರೆ

news18
Updated:March 29, 2019, 8:38 PM IST
ಒಬ್ಬ ಸಾಕ್ಷಿಗೆ ಬೆದರಿಕೆ, ಮತ್ತೊಬ್ಬನನ್ನು ಕೊಳ್ಳುವ ಯತ್ನ; ನೀರವ್​ ಮೋದಿಗೆ ಜಾಮೀನಿಲ್ಲ
ನೀರವ್ ಮೋದಿ
news18
Updated: March 29, 2019, 8:38 PM IST
ಲಂಡನ್​: ಪಂಜಾಬ್​ ನ್ಯಾಷನಲ್​ ಬ್ಯಾಂಕ್​ 13,500 ಕೋಟಿ ರೂ. ಹಗರಣದ ಆರೋಪಿ ನೀರವ್​ ಮೋದಿ, ಪ್ರಕರಣದ ಒಬ್ಬ ಸಾಕ್ಷಿಯನ್ನು ಬೆದರಿಸಿದ್ದಾರೆ ಇನ್ನೊಬ್ಬರನ್ನು ಹಣದ ಆಮಿಷವೊಡ್ಡಿ ಕೊಂಡುಕೊಳ್ಳುವ ಯತ್ನ ಮಾಡಿದ್ದಾರೆ. ಇಂಥಾ ಗಂಭೀರ ಆರೋಪವನ್ನು ಇಂಗ್ಲೆಂಡ್​ನ ಪ್ರಾಸಿಕ್ಯೂಟರ್​ ವೆಸ್ಟ್​ಮಿನಿಸ್ಟರ್ ನ್ಯಾಯಾಲಯದಲ್ಲಿ ಮಾಡಿದ್ದಾರೆ. ನೀರವ್​ ಮೋದಿ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ವೇಳೆ ಈ ಆರೋಪವನ್ನು ಮಾಡಿದ್ದಾರೆ.

ಇಂಗ್ಲೆಂಡ್​ನ ಕ್ರೌನ್​ ಪ್ರಾಸಿಕ್ಯೂಷನ್​ ಸೇವಾ ಸಂಸ್ಥೆಯ ಟಾಬಿ ಕ್ಯಾಡ್​ಮ್ಯಾನ್​ ಭಾರತದ ಪರವಾಗಿ ವಾದ ಮಂಡಿಸುತ್ತಿದ್ದು, ನೀರವ್​ ಮೋದಿ ಕೆಲವೊಂದು ಸಾಕ್ಷಿಗಳನ್ನು ಈಗಾಗಲೇ ನಾಶಮಾಡಲಾಗಿದೆ ಎಂದಿದ್ದಾರೆ.

"ನೀರವ್​ ಮೋದಿ ಮೇಲಿರುವ ಗುರುತರ ಆರೋಪಗಳಿಗೆ ತಕ್ಕ ಸಾಕ್ಷಿಗಳಿವೆ ಮತ್ತು ಅವರಿಗೆ ಜಾಮೀನು ನೀಡಿದರೆ ಅವರು ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಮತ್ತು ಪುರಾವೆಗಳನ್ನು ತಿರುಚುವ ಸಾಧ್ಯತೆಇದೆ. ಈ ಕಾರಣದಿಂದ ಅವರಿಗೆ ಜಾಮೀನು ನೀಡಬೇಡಿ," ಎಂದು ಟಾಬಿ ಕ್ಯಾಡ್​​ಮ್ಯಾನ್​ ಕೋರ್ಟ್​ಗೆ ತಿಳಿಸಿದರು.

ಮುಂದುವರೆದ ಅವರು, ನೀರವ್​ ಮೋದಿ ದೇಶ ಬಿಟ್ಟು ಓಡಿಹೋಗುವ ಆತುರದಲ್ಲಿದ್ದಾರೆ ಎಂಬುದು ಕೂಡ ತನಿಖೆಯಿಂದ ತಿಳಿದುಬಂದಿದೆ ಎಂದಿದ್ದಾರೆ. "ಕೋಟ್ಯಾಂತರ ರೂಪಾಯಿ ಮೌಲ್ಯದ ಡೈಮಂಡ್​, ಚಿನ್ನ ಮತ್ತು ಮುತ್ತುರತ್ನಗಳು ನೀರವ್​ ಮೋದಿ ಬಳಿ ಇವೆ. ವಿಚಾರಣೆ ವೇಳೆ ಪೊಲೀಸರಿಗೆ ಮೋದಿ ಎಂದೂ ಸಹಕಾರ ನೀಡಿಲ್ಲ. ನೀರವ್​ ಮೋದಿಗೆ ಜಾಮೀನು ನೀಡಲೇಬಾರದು," ಎಂದು ಕ್ಯಾಡ್​ಮ್ಯಾನ್​ ವಾದ ಮಂಡಿಸಿದರು.

ಇದನ್ನೂ ಓದಿ: PHOTOS: ನೀರವ್​ ಮೋದಿ ಐಷಾರಾಮಿ ಬಂಗಲೆ ನೆಲಸಮ

ವಿಚಾರಣೆಯ ಆರಂಭಕ್ಕೂ ಮುನ್ನ ಪ್ರಕರಣಕ್ಕೆ ಸಂಬಂಧಿಸಿದ ಇನ್ನಷ್ಟು ಸಾಕ್ಷಿಗಳನ್ನು ಕೋರ್ಟ್​ಗೆ ಸಲ್ಲಿಕೆ ಮಾಡಲಾಗಿತ್ತು. ವಾದ ಪ್ರತಿವಾದಗಳನ್ನು ಆಲಿಸಿದ ನಂತರ ನೀರವ್​ ಮೋದಿಯ ಜಾಮೀನು ಅರ್ಜಿಯನ್ನು ವೆಸ್ಟ್​ಮಿನಿಸ್ಟರ್​ ನ್ಯಾಯಾಲಯ ತಿರಸ್ಕರಿಸಿದೆ. ಈ ಹಿಂದೆ ವಿಜಯ್​ ಮಲ್ಯಾರ ಹಸ್ತಾಂತರ ಪ್ರಕ್ರಿಯೆಗೆ ಅವಕಾಶ ನೀಡಿದ್ದ ನ್ಯಾಯಾಧೀಶರೇ ಈ ಪ್ರಕರಣವನ್ನೂ ಆಲಿಸುತ್ತಿದ್ದಾರೆ.
Loading...

First published:March 29, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...