ನೀರವ್​​ ಮೋದಿ ನಕಲಿ ವಜ್ರದುಂಗುರ ಮಾರಾಟ ಮತ್ತು ಮುರಿದು ಬಿದ್ದ ಪ್ರೇಮಕಥೆ..

2012 ರಲ್ಲಿ ನೀರವ್​​ ಮೋದಿ ಮತ್ತು ಕೆನಾಡದ ಅಲ್ಫೋನ್ಸೋ ಎಂಬಾತ ಭೇಟಿಯಾಗಿದ್ದರು. ಈ ವೇಳೆ ನೀರವ್​​ ಮಾತಿಗೆ ಮರುಳಾಗಿ 1.4 ಕೋಟಿ ಮೌಲ್ಯದ  ಎರಡು ವಜ್ರದ ಉಂಗುರವನ್ನು ಅಲ್ಫೋನ್ಸೋ ಖರೀದಿಸಿದ್ದಾರೆ. ಬಳಿಕ ಈತ ತನ್ನ ಪ್ರೇಯಸಿಗೆ ಪ್ರಪೋಸ್​​ ಮಾಡುವ ವೇಳೆ ಉಂಗುರ ನಕಲಿ ಎಂದು ಗೊತ್ತಾಗಿ ಮದುವೆ ಮುರಿದು ಬಿದ್ದಿದೆ.

Ganesh Nachikethu
Updated:October 8, 2018, 2:02 PM IST
ನೀರವ್​​ ಮೋದಿ ನಕಲಿ ವಜ್ರದುಂಗುರ ಮಾರಾಟ ಮತ್ತು ಮುರಿದು ಬಿದ್ದ ಪ್ರೇಮಕಥೆ..
ನೀರವ್​​ ಮೋದಿ
Ganesh Nachikethu
Updated: October 8, 2018, 2:02 PM IST
ನ್ಯೂಸ್​​-18 ಕನ್ನಡ

ನವದೆಹಲಿ(ಅ.08): ಭಾರತದ ಪಂಜಾಬ್​​ ನ್ಯಾಷನಲ್​​ ಬ್ಯಾಂಕಿಗೆ ಸಾವಿರಾರೂ ಕೋಟಿ ರೂಪಾಯಿ ವಂಚಿಸಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ, ಉದ್ಯಮಿ ನೀರವ್ ಮೋದಿ ಮೋಸಕ್ಕೆ ಕೆನಡಾ ಮೂಲದ ವ್ಯಕ್ತಿಯೋರ್ವನ ನಿಶ್ಚಿತಾರ್ಥ ಮುರಿದು ಬಿದ್ದಿದೆ. ನೀರವ್ ಮೋದಿ ಮಾರಾಟ ಮಾಡಿದ್ದ 1.4 ಕೋಟಿ ಮೌಲ್ಯದ ವಜ್ರದ ಉಂಗುರ ನಕಲಿಯಾಗಿದ್ದ ಕಾರಣಕ್ಕೆ ತನ್ನ ಮದುವೆಯೇ ನಿಂತು ಹೋಗಿದೆ ಎಂದು ವಿದೇಶಿ ಪತ್ರಿಕೆಯೊಂದು ವರದಿ ಮಾಡಿದೆ.

ಆರು ವರ್ಷಗಳ ಹಿಂದೆ 2012 ರಲ್ಲಿ ನೀರವ್​​ ಮೋದಿ ಮತ್ತು ಕೆನಾಡದ ಅಲ್ಫೋನ್ಸೋ ಎಂಬಾತ ಭೇಟಿಯಾಗಿದ್ದರು. ಈ ವೇಳೆ ನೀರವ್​​ ಮಾತಿಗೆ ಮರುಳಾಗಿ 1.4 ಕೋಟಿ ಮೌಲ್ಯದ  ಎರಡು ವಜ್ರದ ಉಂಗುರವನ್ನು ಅಲ್ಫೋನ್ಸೋ ಖರೀದಿಸಿದ್ದಾರೆ. ಬಳಿಕ ಈತ ತನ್ನ ಪ್ರೇಯಸಿಗೆ ಪ್ರಪೋಸ್​​ ಮಾಡುವ ವೇಳೆ ಉಂಗುರ ನಕಲಿ ಎಂದು ಗೊತ್ತಾಗಿ ಮದುವೆ ಮುರಿದು ಬಿದ್ದಿದೆ. ಹೀಗಾಗಿ ಅಲ್ಫೋನ್ಸೋ ಖಿನ್ನತೆಗೊಳಗಾಗಿದ್ದಾನೆ ಎನ್ನಲಾಗಿದೆ.

ನೀರವ್ ಮೋದಿ (47) ವಿಶ್ವ ಪ್ರಸಿದ್ಧ ಆಭರಣ ವಿನ್ಯಾಸಕ. ಕೇಟ್ ವಿನ್ಸ್ ಲೆಟ್, ಐಶ್ವರ್ಯಾ ರೈ, ಪ್ರಿಯಾಂಕಾ ಛೋಪ್ರಾ ಸೇರಿದಂತೆ ಹಲವರು ಈತನ ವಿನ್ಯಾಸದ ಆಭರಣಕ್ಕಾಗಿ ಹಾತೊರೆಯುತ್ತಿದ್ದರು. ಈತನ ಬಳಿ ವಜ್ರದ ಆಭರಣಗಳನ್ನು ಖರೀದಿಸಲು ವಿದೇಶಿಯಿಂದಲೂ ಬರುತ್ತಿದ್ದರು. ಅತೀಹೆಚ್ಚು ನಟ-ನಟಿಯರು ಈತನ ಬಳಿಯೇ ವಜ್ರಾಭರಣಗಳನ್ನು ಖರೀದಿಸುತ್ತಿದ್ದರು.

ಆದರೀಗ ಪಂಜಾಬ್ ನ್ಯಾಷನಲ್ ಬ್ಯಾಂಕಿನ ಮುಂಬೈ ಶಾಖೆಯೊಂದರಲ್ಲಿ 11,500 ಕೋಟಿ ರೂ.ಗಳು ವಂಚಿಸಿ, ಅಕ್ರಮ ವಹಿವಾಟು ನಡೆಸಿ ವಿದೇಶಕ್ಕೆ ಪರಾರಿಯಾಗಿದ್ದಾನೆ. ನೀರವ್ ವಿರುದ್ಧ ಪಿಎನ್​ಬಿ ನೀಡಿದ್ದ ದೂರಿನ ಆಧಾರದ ಮೇಲೆ ಜಾರಿ ನಿರ್ದೇಶನಾಲಯ ರೆಡ್​​ಕಾರ್ನರ್​​ ನೋಟಿಸ್​ ಜಾರಿ ಮಾಡಿದೆ. ಅಲ್ಲದೇ ದೇಶ-ವಿದೇಶಗಳಲ್ಲಿ ನೀರವ್​ಗೆ ಸೇರಿದ ಸಾವಿರಾರೂ ಕೋಟಿ ಆಸ್ತಿಯನ್ನು ವಶಕ್ಕೆ ಪಡೆದಿದ್ಧಾರೆ.

ಪಿಎನ್​ಬಿ ಹಗರಣವು ದೇಶದ ಅತಿದೊಡ್ಡ ಬ್ಯಾಂಕಿಂಗ್ ಹಗರಣಗಳಲ್ಲೊಂದು. ನೀರವ್ ಮೋದಿ ಪಂಜಾಬ್ ನ್ಯಾಷನಲ್ ಬ್ಯಾಂಕ್​ನಲ್ಲಿ 200 ಕೋಟಿ ಡಾಲರ್ ಹಣದ ಹಗರಣ ನಡೆಸಿ ತಲೆಮರೆಸಿಕೊಂಡಿದ್ಧಾನೆ. ಮುಂಬೈನ ವಿಶೇಷ ಸಿಬಿಐ ಕೋರ್ಟ್​ನಲ್ಲಿ ಪ್ರಕರಣದ ಚಾರ್ಜ್​ಶೀಟ್ ಸಲ್ಲಿಕೆಯಾಗಿತ್ತು. ಬಳಿಕ ಈತನ ಬಣ್ಣ ಬಯಲಾಗಿದೆ.

ಹಗರಣದಲ್ಲಿ ಉದ್ಯಮಿ ನೀರವ್ ಮೋದಿ, ಅವರ ಸಹೋದರ ನಿಶಾಲ್, ಸಂಬಂಧಿ ಮೆಹುಲ್ ಚೋಕ್ಸಿ ಮತ್ತು ಗೀತಾಂಜಲಿ ಗ್ರೂಪ್​ನ ಅಧಿಕಾರಿ ಸುಭಾಷ್ ಪರಬ್ ವಿರುದ್ಧ ಆರೋಪಪಟ್ಟಿ ದಾಖಲಾಗಿತ್ತು. ಈ ವಿಚಾರ ಬೆಳಕಿಗೆ ಬರುವ ಮುನ್ನವೇ ನೀರವ್ ಮೋದಿ ಮತ್ತಿತರ ಕೆಲ ಆರೋಪಿಗಳು ಭಾರತ ಬಿಟ್ಟು ವಿದೇಶಕ್ಕೆ ಪರಾರಿಯಾಗಿದ್ದರು. ಇದೀಗ ಜಾರಿ ನಿರ್ದೇಶನಾಲಯವು ನೀರವ್​ ಬೆನ್ನತ್ತಿ ತನಿಖೆ ನಡೆಸುತ್ತಿದೆ.
Loading...

---------------
ಉಜ್ಜಯಿನಿ: ಮಹಾಕಾಳೇಶ್ವರ ಜ್ಯೋತಿರ್ಲಿಂಗಕ್ಕೆ ಡಿಕೆ ಶಿವಕುಮಾರ್ ಪೂಜೆ
First published:October 8, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ