ನೀರವ್​ ಮೋದಿಗೆ ಜಾಮೀನು ನಿರಾಕರಿಸಿದ ಲಂಡನ್​ ಹೈಕೋರ್ಟ್​; ವಜ್ರ ವ್ಯಾಪಾರಿಗೆ ಜೈಲೇ ಗತಿ

ಇಲ್ಲಿನ ಕಾನೂನಿಗೆ ಅವರು ಬದ್ಧರಾಗಿದ್ದಾರೆ. ಮತ್ತು ಇಲ್ಲಿ ಉದ್ಯೋಗ ಮಾಡಿಕೊಂಡು, ತೆರಿಗೆ ಪಾವತಿಸುತ್ತಿದ್ದಾರೆ ಎಂದು ನೀರವ್ ಮೋದಿ ಪರ ವಕೀಲರು ವಾದ ಮಂಡಿಸಿ, ಜಾಮೀನು ನೀಡುವಂತೆ ಮನವಿ ಮಾಡಿದ್ದರು. ಆದರೆ, ಈ ವಾದವನ್ನು ತಳ್ಳಿಹಾಕಿದ ನ್ಯಾಯಾಲಯ ಜಾಮೀನು ನಿರಾಕರಿಸಿದೆ. 

HR Ramesh | news18
Updated:June 12, 2019, 3:29 PM IST
ನೀರವ್​ ಮೋದಿಗೆ ಜಾಮೀನು ನಿರಾಕರಿಸಿದ ಲಂಡನ್​ ಹೈಕೋರ್ಟ್​; ವಜ್ರ ವ್ಯಾಪಾರಿಗೆ ಜೈಲೇ ಗತಿ
ನೀರವ್ ಮೋದಿ
  • News18
  • Last Updated: June 12, 2019, 3:29 PM IST
  • Share this:
ಲಂಡನ್​: ಪಂಜಾಬ್​ ನ್ಯಾಷನಲ್​ ಬ್ಯಾಂಕ್​ನಿಂದ 13 ಸಾವಿರ ಕೋಟಿ ವಂಚಿಸಿ ದೇಶದಿಂದ ಪಲಾಯನಗೈದು ಲಂಡನ್​ನಲ್ಲಿ ಸೆರೆಯಾಗಿರುವ ವಜ್ರ ವ್ಯಾಪಾರಿ ನೀರವ್ ಮೋದಿಗೆ ಲಂಡನ್​ ಹೈಕೋರ್ಟ್​ ಜಾಮೀನು ನಿರಾಕರಿಸಿದೆ. ಹೀಗಾಗಿ ನೀರವ್​ ಮೋದಿ ಪಶ್ಚಿಮ ಯುರೋಪ್​ನ ಅತಿದೊಡ್ಡ ಕಾರಾಗೃಹ ವಾಂಡ್ಸ್​ವರ್ಥ್​ನಲ್ಲಿ ಜೈಲೇ ಗತಿಯಾಗಿದೆ.


ಮಾರ್ಚ್​ 20ರಂದು ಲಂಡನ್​ನಲ್ಲಿ ನೀರವ್​ ಮೋದಿಯನ್ನು ಬಂಧಿಸಲಾಗಿತ್ತು. ಭಾರತ ಅವರ ಮೇಲೆ ಅಪರಾದ ಆರೋಪ ಮಾಡುವ ಮುನ್ನವೇ ನೀರವ್​ ಮೋದಿ 2018ರ ಜನವರಿಯಲ್ಲಿ ಯುನೈಟೆಡ್​ ಕಿಂಗ್​ಡಮ್​ಗೆ ಬಂದಿದ್ದಾರೆ. ಇಲ್ಲಿನ ಕಾನೂನಿಗೆ ಅವರು ಬದ್ಧರಾಗಿದ್ದಾರೆ. ಮತ್ತು ಇಲ್ಲಿ ಉದ್ಯೋಗ ಮಾಡಿಕೊಂಡು, ತೆರಿಗೆ ಪಾವತಿಸುತ್ತಿದ್ದಾರೆ ಎಂದು ನೀರವ್ ಮೋದಿ ಪರ ವಕೀಲರು ವಾದ ಮಂಡಿಸಿ, ಜಾಮೀನು ನೀಡುವಂತೆ ಮನವಿ ಮಾಡಿದ್ದರು. ಆದರೆ, ಈ ವಾದವನ್ನು ತಳ್ಳಿಹಾಕಿದ ನ್ಯಾಯಾಲಯ ಜಾಮೀನು ನಿರಾಕರಿಸಿದೆ. 



First published:June 12, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...