ಆರ್ಥಿಕ ಅಪರಾಧಿ ನೀರವ್ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸಿ; ಇಂಗ್ಲೆಂಡ್​ ನ್ಯಾಯಾಲಯ ತೀರ್ಪು

ನೀರವ್​ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸಿದರೆ ಅವರಿಗೆ ನ್ಯಾಯ ದೊರಕುವುದಿಲ್ಲ ಎಂಬ ವಾದಕ್ಕೆ ಯಾವುದೇ ಪುರಾವೆಗಳಿಲ್ಲ. ಭಾರತದಲ್ಲಿ ನೀರವ್ ಮೋದಿ ವಿರುದ್ಧ ಪ್ರಬಲವಾದ ಪ್ರಕರಣಗಳು ಇವೆ. ಅದರ ವಿಚಾರಣೆಯನ್ನು ಅವರು ಎದುರಿಸಲೇಬೇಕು ಎಂದು ನ್ಯಾಯಾಲಯ ಹೇಳಿದೆ.

ನೀರವ್ ಮೋದಿ.

ನೀರವ್ ಮೋದಿ.

 • Share this:
  ಇಂಗ್ಲೆಂಡ್​ (ಫೆಬ್ರವರಿ 25); ಪಂಜಾಬ್​ ನ್ಯಾಷನಲ್​ ಬ್ಯಾಂಕ್​ನಿಂದ ಸುಮಾರು 14,000 ಕೋಟಿ ಹಣವನ್ನು ಸಾಲವನ್ನಾಗಿ ಪಡೆದು, ವಂಚಿಸಿ ವಿದೇಶಕ್ಕೆ ಪಲಾಯನ ಮಾಡಿದ್ದ ವಜ್ರದ ವ್ಯಾಪಾರಿ, ಆರ್ಥಿಕ ಅಪರಾಧಿ ನೀರವ್ ಮೋದಿ ಅವರನ್ನು ಭಾರತಕ್ಕೆ ಹಸ್ತಾಂತರಿಸಬಹುದು ಎಂದು ಇಂಗ್ಲೆಂಡ್​ ನ್ಯಾಯಾಲಯ ಇಂದು ಮಹತ್ವದ ತೀರ್ಪು ನೀಡಿದೆ. ಭಾರತದ ಬ್ಯಾಂಕ್​ಗಳಿಗೆ ಬಹುಕೋಟಿ ವಂಚನೆ ಎಸಗಿದ್ದ ನೀರವ್ ಮೋದಿ ಹಣವನ್ನು ಪಾವತಿಸದೆ ಇಂಗ್ಲೆಂಡ್​ ಪಲಾಯನ ಮಾಡಿದ್ದರು. ಹೀಗಾಗಿ ಅವರನ್ನು ಹಸ್ತಾಂತರಿಸುವಂತೆ ಭಾರತ ಸರ್ಕಾರ ಇಂಗ್ಲೆಂಡ್ ಕೋರ್ಟ್​ನಲ್ಲಿ ಮನವಿ ಸಲ್ಲಿಸಿತ್ತು. ಈ ನಿಟ್ಟಿನಲ್ಲಿ ವಿಚಾರಣೆ ಆರಂಭಿಸಿದ್ದ ನ್ಯಾಯಾಲಯ "ಸಾಂಕ್ರಾಮಿಕ ರೋಗ ಮತ್ತು ಭಾರತೀಯ ಜೈಲು ಪರಿಸ್ಥಿತಿಗಳಲ್ಲಿ ಅವರ ಮಾನಸಿಕ ಆರೋಗ್ಯವು ಹದಗೆಡುತ್ತದೆ" ಎಂಬ ಆರೋಪಿಯ ವಾದಗಳನ್ನು ತಳ್ಳಿಹಾಕಿದೆ. ಅಲ್ಲದೆ, ಅವರನ್ನು ಭಾರತಕ್ಕೆ ಹಸ್ತಾಂತರಿಸಲು ಸಮ್ಮತಿಸಿದೆ.

  ಇಂದು ಈ ಕುರಿತ ಮಹತ್ವದ ತೀರ್ಪು ನೀಡಿರುವ ನ್ಯಾಯಾಧೀಶ ಸ್ಯಾಮ್ಯುವೆಲ್ ಗೂಝೀ, "ಮಾನವ ಹಕ್ಕುಗಳ ಅನುಸಾರವಾಗಿ ಭಾರತದ ಆರ್ಥಿಕ ಅಪರಾಧಿ ನೀರವ್​ ಮೋದಿ ಅವರನ್ನು ಭಾರತಕ್ಕೆ ಹಸ್ತಾಂತರಿಸುವುದು ನನಗೆ ತೃಪ್ತಿ ನೀಡಿದೆ. ಆದರೆ, ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲೂ ಸಹ ಆರೋಪಿಗೆ ಅವಕಾಶ ಇದೆ" ಎಂದು ತಿಳಿಸಿದ್ದಾರೆ.

  "ನೀರವ್​ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸಿದರೆ ಅವರಿಗೆ ನ್ಯಾಯ ದೊರಕುವುದಿಲ್ಲ ಎಂಬ ವಾದಕ್ಕೆ ಯಾವುದೇ ಪುರಾವೆಗಳಿಲ್ಲ. ಭಾರತದಲ್ಲಿ ನೀರವ್ ಮೋದಿ ವಿರುದ್ಧ ಪ್ರಬಲವಾದ ಪ್ರಕರಣಗಳು ಇವೆ. ನೀರವ್ ಮೋದಿ ನ್ಯಾಯಸಮ್ಮತ ವ್ಯವಹಾರದಲ್ಲಿ ಭಾಗಿಯಾಗಿದ್ದಾರೆಂದು ನಾನು ಒಪ್ಪುವುದಿಲ್ಲ. ಈ ವ್ಯವಹಾರಗಳಲ್ಲಿ ಅಪ್ರಾಮಾಣಿಕತೆಯ ಪ್ರಕ್ರಿಯೆ ಇದೆ. ಹೀಗಾಗಿ ಈ ಪ್ರಕರಣಗಳ ಕುರಿತು ವಿಚಾರಣೆಯನ್ನು ಅವರು ಎದುರಿಸಲೇಬೇಕು" ಎಂದು ಹೇಳುವ ಮೂಲಕ ನ್ಯಾಯಾಧೀಶರಾದ ಸ್ಯಾಮ್ಯುವೆಲ್​ ಗೂಝೀ ಭಾರತದ ಸಲ್ಲಿಕೆಗಳನ್ನು ಒಪ್ಪಿಕೊಂಡಿದ್ದಾರೆ.

  ಇದನ್ನೂ ಓದಿ: ಸಾಮಾಜಿಕ ಮಾಧ್ಯಮಗಳ ನಿಯಂತ್ರಣಕ್ಕೆ ಕೇಂದ್ರ ಸರ್ಕಾರದ ಹೊಸ ಮಾರ್ಗಸೂಚಿ; ಇಲ್ಲಿದೆ ಮಾಹಿತಿ!

  49 ವರ್ಷದ ನೀರವ್ ಮೋದಿ, ವೆಸ್ಟ್ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ನೈರುತ್ಯ ಲಂಡನ್‌ನ ವಾಂಡ್ಸ್‌ವರ್ತ್ ಕಾರಾಗೃಹದಿಂದ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನ್ಯಾಯಾಲಯದ ವಿಚಾರಣೆಗೆ ಹಾಜರಾಗಿದ್ದರು. ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ತೀರ್ಪನ್ನು ಇಂಗ್ಲೇಡ್‌ನ ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್ ಅವರಿಗೆ ಸಹಿ ಹಾಕಲು ಕಳುಹಿಸುತ್ತಾರೆ. ತೀರ್ಪಿನ ಫಲಿತಾಂಶವನ್ನು ಅವಲಂಬಿಸಿ ಎರಡೂ ಕಡೆಗಳಲ್ಲಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವ ಸಾಧ್ಯತೆಯಿದೆ.

  ನೀರವ್ ಮೋದಿಯನ್ನು ಹಸ್ತಾಂತರ ವಾರಂಟ್‌ನಲ್ಲಿ ಮಾರ್ಚ್ 19, 2019 ರಂದು ಬಂಧಿಸಲಾಯಿತು. ಇನ್ನೂ ನೀರವ್​ ಮೋದಿ ಸಂಬಂಧಿ ಮೇಹುಲ್​ ಚೋಸ್ಕಿ ಅವರನ್ನು ಬಂಧಿಸಲೂ ಸಹ ಭಾರತ ಸರ್ಕಾರ ಬಲೆ ಬೀಸಿದ್ದು, ಶೀಘ್ರದಲ್ಲೇ ಅವರನ್ನೂ ಬಂಧಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
  Published by:MAshok Kumar
  First published: