Karol Bagh Hotel Fire: ದೆಹಲಿ ಹೋಟೆಲ್​ನಲ್ಲಿ ಅಗ್ನಿ ಅವಘಡ; 17 ಮಂದಿ ಸಜೀವ ದಹನ

Fire Broke out at Karol Bagh: ಬೆಂಕಿಯನ್ನು ಸಂಪೂರ್ಣವಾಗಿ ಆರಿಸಲು ಈವರೆಗೆ ಸಾಧ್ಯವಾಗಿದೆಯೋ ಅಥವಾ ಇಲ್ಲವೋ ಎಂಬುದು ತಿಳಿದು ಬಂದಿಲ್ಲ. ಅಗ್ನಿ ಅವಘಡದಲ್ಲಿ ಸಾಕಷ್ಟು ಮಂದಿ ಗಾಯಗೊಂಡಿದ್ದಾರೆ. ಕೆಲವರ ಸ್ಥಿತಿ ಚಿಂತಾಜನಕವಾಗಿದೆ.

Rajesh Duggumane | news18
Updated:February 12, 2019, 10:40 AM IST
Karol Bagh Hotel Fire: ದೆಹಲಿ ಹೋಟೆಲ್​ನಲ್ಲಿ ಅಗ್ನಿ ಅವಘಡ; 17 ಮಂದಿ ಸಜೀವ ದಹನ
ಹೋಟೆಲ್​ನಲ್ಲಿ ಕಾಣಿಸಿಕೊಂಡ ಬೆಂಕಿ
Rajesh Duggumane | news18
Updated: February 12, 2019, 10:40 AM IST
ನವದೆಹಲಿ (ಫೆ.12): ದೆಹಲಿಯ ಅರ್ಪಿತ್ ಪ್ಯಾಲೇಸ್ ಹೋಟೆಲ್​ನಲ್ಲಿ ಮಂಗಳವಾರ ಬೆಳಿಗ್ಗೆ ಸಂಭವಿಸಿದ ಅಗ್ನಿ ಅವಘಡದಲ್ಲಿ 17 ಮಂದಿ ಮೃತಪಟ್ಟಿದ್ದಾರೆ. ಹಲವರ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆಯಲ್ಲಿ ಏರಿಕೆ ಆಗುವ ಸಾಧ್ಯತೆ ಇದೆ.

ಕರೋಲ್ ಬಾಘ್​ನಲ್ಲಿರುವ ಈ ಹೋಟೆಲ್​ ಇದ್ದು, ಇಂದು ಮುಂಜಾನೆ 4.30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಮಾತ್ರದಲ್ಲಿ ಬೆಂಕಿಯ ಕೆನ್ನಾಲಿಗೆ ಹೋಟೆಲ್​ ಆವರಿಸಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದಾರೆ. ಶಾರ್ಟ್​ ಸರ್ಕ್ಯೂಟ್​ನಿಂದ್​ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ಶಂಕಿಸಲಾಗಿದೆ.

ಹೋಟೆಲ್​ನ ನಾಲ್ಕನೇ ಅಂತಸ್ತಿನಲ್ಲಿ ಮೊದಲು ಅಗ್ನಿ ಕಾಣಿಸಿಕೊಂಡಿತ್ತು. ನಂತರ ಎರಡನೇ ಅಂತಸ್ತಿನವರೆಗೂ ಬೆಂಕಿ ಹಬ್ಬಿದೆ. ಮೊದಲ ಅಂತಸ್ತು ಹಾಗೂ ಗ್ರೌಂಡ್​ ಫ್ಲೋರ್​ ಸುರಕ್ಷಿತವಾಗಿದೆ. ಬೆಂಕಿ ಹೊತ್ತಿಕೊಂಡ ವೇಳೆ ಜೀವ ರಕ್ಷಣೆಗೆ ಇಬ್ಬರು ಕಟ್ಟಡದಿಂದ ಹಾರಿದ್ದಾರೆ.

ಬೆಳಗ್ಗೆ 7 ಗಂಟೆಯವರೆಗೂ ದಟ್ಟವಾದ ಹೊಗೆ ಆವರಿಸಿತ್ತು. ಬೆಂಕಿಯನ್ನು ಸಂಪೂರ್ಣವಾಗಿ ಆರಿಸುವಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಸದ್ಯ, ಹೋಟೆಲ್​ನಲ್ಲಿ ಶೋಧ ಕಾರ್ಯಾಚಾರಣೆ ಆರಂಭಿಸಲಾಗಿದೆ. ಹೋಟೆಲ್​ನಲ್ಲಿ ಹಲವರು ಸಿಲುಕಿರುವ ಶಂಕೆ ಇದೆ ಎನ್ನಲಾಗಿದೆ.

"ನಮಗೆ ಕರೆ ಬರುವಾಗ ಸ್ವಲ್ಪ ತಡವಾಗಿತ್ತು. ಆ ವೇಳೆಗಾಗಲೇ ಬೆಂಕಿ ಎಲ್ಲ ಕಡೆಗಳಲ್ಲೂ ಆವರಿಸಿತ್ತು. ಇದರಿಂದಾಗಿ ಬೆಂಕಿ ಆರಿಸುವುದು ದೊಡ್ಡ ಸವಾಲಿನ ಕೆಲಸವಾಯಿತು," ಎಂದು ಅಗ್ನಿ ಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ. ಶಾರ್ಟ್​ ಸರ್ಕ್ಯೂಟ್​ನಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಹೇಳಲಾಗುತ್ತಿದೆಯಾದರೂ, ಸರಿಯಾದ ಕಾರಣ ತನಿಖೆಯ ನಂತರವೇ ತಿಳಿದು ಬರಬೇಕಿದೆ.

First published:February 12, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ