ಛತ್ತೀಸ್​ಗಡ: ನಕ್ಸಲರ ದಾಳಿಗೆ 9 ಸಿಆರ್​ಪಿಎಫ್ ಯೋಧರು ಬಲಿ


Updated:March 13, 2018, 3:54 PM IST
ಛತ್ತೀಸ್​ಗಡ: ನಕ್ಸಲರ ದಾಳಿಗೆ 9 ಸಿಆರ್​ಪಿಎಫ್ ಯೋಧರು ಬಲಿ
ಛತ್ತೀಸ್​ಗಡದ ಸುಕ್ಮಾ ಜಿಲ್ಲೆಯಲ್ಲಿ ನಕ್ಸಲ್ ದಾಳಿಗೆ ತುತ್ತಾದ ಸಿಆರ್​ಪಿಎಫ್ ಬಸ್ಸು

Updated: March 13, 2018, 3:54 PM IST
- ನ್ಯೂಸ್18 ಕನ್ನಡ

ನವದೆಹಲಿ(ಮಾ. 13): ನಕ್ಸಲರ ಭೀಕರ ದಾಳಿಗೆ 9 ಸಿಆರ್​ಪಿಎಫ್ ಯೋಧರು ಬಲಿಯಾಗಿರುವ ದಾರುಣ ಘಟನೆ ಛತ್ತೀಸ್​ಗಡದಲ್ಲಿ ಸಂಭವಿಸಿದೆ. ಸುಕ್ಮಾ ಜಿಲ್ಲೆಯ ಕಿಸ್ತಾರಾಮ್​-ಪಾಲೋಡಿ ರಸ್ತೆಯಲ್ಲಿ ಪಹರೆ ನಡೆಸುತ್ತಿದ್ದ ಸಿಆರ್​ಪಿಎಫ್​ನ 212ನೇ ತುಕಡಿಯ ಮೇಲೆ ನಕ್ಸಲರು ಬಾಂಬ್​ಗಳ ದಾಳಿ ನಡೆಸಿದರೆನ್ನಲಾಗಿದೆ. ಯೋಧರನ್ನು ಹೊತ್ತೊಯ್ಯುತ್ತಿದ್ದ ಬಸ್ಸನ್ನು ನಕ್ಸಲರು ಬಾಂಬ್ ಸ್ಫೋಟಿಸಿ ಉಡಾಯಿಸಿದ್ದಾರೆ. ಈ ಘಟನೆಯಲ್ಲಿ 9 ಯೋಧರು ಹುತಾತ್ಮರಾಗಿದ್ದಾರೆ, ಇನ್ನೂ ಇಬ್ಬರಿಗೆ ಗಾಯಗಳಾಗಿವೆ.

ಬಾಂಬ್ ನಿರೋಧಕವಾಗಿದ್ದ ಸಿಆರ್​ಪಿಎಫ್​ನ ಬಸ್ಸನ್ನು ಉಡಾಯಿಸಲು ನಕ್ಸಲರು ಐಇಡಿ ಬಾಂಬ್​ಗಳನ್ನು ಬಳಸಿದ್ದಾರೆ. ಕಚ್ಛಾ ರಸ್ತೆಯ ತಳದಲ್ಲಿ ಹಲವಾರು ಸುಧಾರಿತ ಸ್ಫೋಟಕ ಸಾಧನ(ಐಇಡಿ)ಗಳನ್ನ ನಕ್ಸಲರು ಹುದುಗಿಸಿಟ್ಟಿದ್ದರೆನ್ನಲಾಗಿದೆ.

ನಕ್ಸಲರ ಭದ್ರಕೋಟೆ ಎನ್ನಲಾದ ಸುಕ್ಮಾ ಜಿಲ್ಲೆಯಲ್ಲಿ ವರ್ಷದ ಹಿಂದಷ್ಟೇ ಮಾವೋವಾದಿ ಉಗ್ರರು ಸಿಆರ್​ಪಿಎಫ್ ಪಡೆಯ ಮೇಲೆ ದಾಳಿ ನಡೆಸಿ 25 ಯೋಧರನ್ನು ಹತ್ಯೆಗೈದಿದ್ದರು.
First published:March 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ