ಭಾರತೀಯ (Indian) ಮೂಲದ ಯುಎಸ್ ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿ ನಿಕ್ಕಿ ಹ್ಯಾಲೆ (Nikki Haley) ಭಾರತವನ್ನು ಅತಿದೊಡ್ಡ ಮಾಲಿನ್ಯಕಾರಕಗಳಲ್ಲಿ ಒಂದಾಗಿದೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದು, ಸಾಮಾಜಿಕ ಮಾಧ್ಯಮದಲ್ಲಿ ನಿಕ್ಕಿ ಹ್ಯಾಲೆಯನ್ನು ಬಳಕೆದಾರರು ತರಾಟೆಗೆ ತೆಗೆದುಕೊಂಡಿದ್ದಾರೆ ಪರಿಸರವನ್ನು ಉಳಿಸಲು ಭಾರತ ಹಾಗೂ ಚೀನಾದಲ್ಲಿ ಮಾಲಿನ್ಯ ನಿಯಂತ್ರಣ ಕಾರ್ಯಗಳನ್ನು ಮೊದಲು ಕೈಗೊಳ್ಳಬೇಕಿದೆ ಎಂದು ನಿಕ್ಕಿ ಹೇಳಿಕೆ ನೀಡಿದ್ದರು.
ಪರಿಸರ ಹಾನಿಯಲ್ಲಿ ಭಾರತ ಹಾಗೂ ಚೀನಾದ ಪಾತ್ರ ದೊಡ್ಡದು
ಪರಿಸರವನ್ನು ಸಂರಕ್ಷಿಸುವ ಗಂಭೀರತೆಯ ಬಗ್ಗೆ ಯೋಚಿಸಲು ಬಯಸುವುದಾದರೆ ಭಾರತ ಹಾಗೂ ಚೀನಾದಲ್ಲಿ ಮೊದಲು ಬದಲಾವಣೆಯನ್ನು ತರಬೇಕಿದೆ, ಏಕೆಂದರೆ ಈ ದೇಶಗಳು ಅತಿದೊಡ್ಡ ಮಾಲಿನ್ಯಕಾರಕರಗಳಾಗಿವೆ ಎಂದು ಹ್ಯಾಲೆ ಟ್ವೀಟ್ ಮಾಡಿದ್ದಾರೆ. ಹ್ಯಾಲೆ ಟ್ವೀಟ್ ಮಾಡಿದ ಕೆಲವೇ ಕ್ಷಣಗಳಲ್ಲಿ ಆಕೆಗೆ ಭಾರೀ ಮುಖಭಂಗವಾಗಿದೆ.
ಸಾಮಾಜಿಕ ತಾಣದಲ್ಲಿ ನಿಕ್ಕಿಯನ್ನು ತರಾಟೆಗೆ ತೆಗೆದುಕೊಂಡ ಬಳಕೆದಾರರು
US ಐತಿಹಾಸಿಕವಾಗಿ ಗ್ರಹ-ತಾಪನ ಅನಿಲಗಳ ವಿಶ್ವದ ಅತಿದೊಡ್ಡ ಹೊರಸೂಸುವಿಕೆಯಾಗಿದೆ ಮತ್ತು ವಿಶ್ವದ ಐತಿಹಾಸಿಕ ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಯ ಕಾಲುಭಾಗಕ್ಕೆ ಕಾರಣವಾಗಿದೆ ಎಂಬುದಾಗಿ ಅಧ್ಯಯನಗಳು ಬಹಿರಂಗಪಡಿಸಿವೆ ಎಂದು ಟ್ವಿಟರ್ ಬಳಕೆದಾರರು ಹ್ಯಾಲಿಯ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ: ನಿರ್ಮಲಾ ಸೀತಾರಾಮನ್ ಪುತ್ರಿಯ ಸರಳ ವಿವಾಹ, ಮೊಳಕಾಲ್ಮೂರು ಸೀರೆಯಲ್ಲಿ ಮಿಂಚಿದ ವಿತ್ತ ಸಚಿವೆ!
ಭಾರತೀಯ ಮೂಲದ ಅಮೆರಿಕನ್ ರಾಜಕಾರಣಿಗಳು ನಿಷ್ಪ್ರಯೋಜಕರು
ಲೇಖಕ ಶೈಲೇಂದ್ರ ಮಲಿಕ್ ಕೂಡ ನಿಕ್ಕಿಯವರನ್ನು ತರಾಟೆಗೆ ತೆಗೆದುಕೊಂಡಿದ್ದು ವಿವಿಧ ಅಮೆರಿಕನ್ ಕಂಪನಿಗಳ ಸಿಇಒಗಳಾಗಿ ಭಾರತೀಯರು ಕಾರ್ಯನಿರ್ವಹಿಸುತ್ತಿರುವುದು ಉತ್ತಮ ವಿಚಾರ ಆದರೆ ರಾಜಕಾರಣಿಗಳಾಗಿ ಅವರಷ್ಟು ನಿಷ್ಪ್ರೋಜಕರು ಬೇರೆ ಯಾರೂ ಇಲ್ಲ ಎಂದು ಟೀಕಿಸಿದ್ದಾರೆ.
ಅವರ ವಿಶ್ವ ದೃಷ್ಟಿಕೋನ ಮತ್ತು ಅವಶ್ಯಕತೆ ತಾವೊಬ್ಬ ಅಮೆರಿಕನ್ನರು ಹಾಗೂ ಬ್ರಿಟನ್ನಿಗರು ಎಂಬುದನ್ನು ಸಾರಲು ಬಳಸುವಂತಹದ್ದಾಗಿದೆ. ಸತ್ಯ ಹಾಗೂ ತಮ್ಮ ಹೇಳಿಕೆಯ ಕುರಿತು ಕೂಲಂಕುಷವಾಗಿ ಪರಾಮರ್ಶಿಸದೆ ಭಾರತದ ಕುರಿತು ಅಸಂಬಂದ್ಧ ಹೇಳಿಕೆಗಳನ್ನು ನೀಡಲು ಮುಂದುವರಿಯುತ್ತಾರೆ ಎಂದು ಶೈಲೇಂದ್ರ ಕಿಡಿಕಾರಿದ್ದಾರೆ.
ಯುಎಸ್ ಅತಿ ಹೆಚ್ಚು ಇಂಗಾಲ ಹೊರಸೂಸುವ ದೇಶ
ಬಳಕೆದಾರರು, ಉನ್ನತ ಇಂಗಾಲದ ಡೈಆಕ್ಸೈಡ್ ಹೊರಸೂಸುವ ದೇಶಗಳ ಗ್ರಾಫ್ ಅನ್ನು ಹಂಚಿಕೊಂಡಿದ್ದು ಇದರಲ್ಲಿ ಯುಎಸ್ ಅತಿಹೆಚ್ಚಿನ ಇಂಗಾಲ ಹೊರಸೂಸುವ ದೇಶ ಎಂಬುದನ್ನು ಬಹಿರಂಗಪಡಿಸಿದೆ, ಅಂತೆಯೇ ಅವರು ಮೊದಲು ನಿಮ್ಮ ಮುಖವನ್ನು ಕನ್ನಡಿಯಲ್ಲಿ ನೋಡಿಕೊಳ್ಳಿ ಎಂದು ಚಾಟಿ ಏಟು ನೀಡಿದ್ದಾರೆ.
If we want to be serious about saving the environment, we need to confront India and China. They are some of the biggest polluters.
— Nikki Haley (@NikkiHaley) June 5, 2023
ತಪ್ಪು ಮಾಹಿತಿಯ ಆಧಾರದ ಮೇಲೆ ಭಾರತವನ್ನು ದೂಷಿಸುವ ಭಾರತೀಯ ಮೂಲದ ರಾಜಕೀಯ ವ್ಯಕ್ತಿಗಳು ವಿದೇಶದಲ್ಲಿ ನೆಲೆಯೂರಿದ ನಂತರ ದೇಶವನ್ನು ಜರೆಯುವ ಕಾರ್ಯದಲ್ಲಿ ತೊಡಗಬಾರದು ಎಂದು ಬಳಕೆದಾರರು ನಿಕ್ಕಿಗೆ ಕಾಮೆಂಟ್ ಮಾಡಿದ್ದಾರೆ.
ಇನ್ನೊಬ್ಬ ಬಳಕೆದಾರರು ನಿಕ್ಕಿಯವರು ಈ ವಿಷಯದಲ್ಲಿ ಗಂಭೀರರಾಗಿದ್ದಾರೆಯೇ ಎಂದು ಕಾಮೆಂಟ್ ಮಾಡಿದ್ದಾರೆ. ಹೇಳಿಕೆ ನೀಡುವುದಕ್ಕೂ ಮುನ್ನ ಅಂಕಿ ಅಂಶಗಳನ್ನು ವಿಶ್ಲೇಷಿಸಿಕೊಳ್ಳಿ ಎಂದು ತಿಳಿಸಿದ್ದಾರೆ.
ಭಾರತೀಯ ಮೂಲದ ಯಾರಾದರೂ ವಿದೇಶದಲ್ಲಿ ಯಶಸ್ಸನ್ನು ಸಾಧಿಸಿದಾಗ ಭಾರತೀಯರು ಆ ಬಗ್ಗೆ ಹೆಮ್ಮೆಪಡಬಾರದು ಎಂಬುದಕ್ಕೆ ನಿಕ್ಕಿ ಹ್ಯಾಲಿಯಂತವರು ಉದಾಹರಣೆಯಾಗಿದ್ದಾರೆ ಎಂದು ಬಳಕೆದಾರರು ತಿಳಿಸಿದ್ದಾರೆ. ವಿದೇಶದಲ್ಲಿ ಭಾರತೀಯರು ಯಶಸ್ಸು ಸಾಧಿಸಿದಾಗ ಅದನ್ನು ಕೊಂಡಾಡುವ ಮೊದಲು ಅವರ ಪರಂಪರೆ ಹಾಗೂ ಅವರ ಪೂರ್ವಜರು ತಮ್ಮ ತಾಯ್ನಾಡನ್ನು ಒಪ್ಪಿಕೊಳ್ಳಲು ಸಿದ್ಧರಿದ್ದಾರೆಯೇ ಎಂಬುದನ್ನು ಕಾಯುವುದು ಉತ್ತಮ ಎಂದು ತಿಳಿಸಿದ್ದಾರೆ.
ಡೊನಾಲ್ಡ್ ಟ್ರಂಪ್ ಕೂಡ ಭಾರತವನ್ನು ದೂಷಿಸಿದ್ದರು
ದೇಶದ ಪ್ರಮುಖ ನಾಯಕರೊಬ್ಬರು ಮಾಲಿನ್ಯಕ್ಕೆ ಭಾರತ ಮತ್ತು ಚೀನಾವನ್ನು ದೂಷಿಸುವುದು ಇದೇ ಮೊದಲಲ್ಲ. ಸೆಪ್ಟೆಂಬರ್‌ನಲ್ಲಿ, ಮಾಜಿ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ, ಚೀನಾ ಮತ್ತು ರಷ್ಯಾವನ್ನು ಜಾಗತಿಕ ಮಾಲಿನ್ಯಕ್ಕೆ ಕಾರಣವೆಂದು ದೂಷಿಸಿದ್ದರು.
ಚೀನಾ ಗಾಳಿಯಲ್ಲಿಯೇ ನಿಜವಾದ ಮಾಲಿನ್ಯವನ್ನು ರವಾನಿಸುತ್ತದೆ ಎಂಬುದಾಗಿ ಟ್ರಂಪ್ ಕಾಮೆಂಟ್ ಮಾಡಿದ್ದರು. ಮಾಲಿನ್ಯದ ವಿಷಯದಲ್ಲಿ ರಷ್ಯಾ, ಭಾರತ ಹೀಗೆ ಪ್ರತಿಯೊಬ್ಬರ ಪಾಲಿದೆ. ಟ್ರಂಪ್ ನೀಡಿದ್ದ ಇನ್ನೊಂದು ಹೇಳಿಕೆಯಲ್ಲಿ ಭಾರತದ ಗಾಳಿಯೇ ಕೊಳಕು ಎಂದು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ