ಭೂಮಿ (Earth) ಯ ಮೇಲಿನ ಅಭಿವೃದ್ಧಿ ಚಟುವಟಿಕೆಗಳನ್ನು ವೀಕ್ಷಿಸಲು ವಿಜ್ಞಾನಿಗಳು ನೈಟ್ ಟೈಮ್ ಲೈಟ್ (ಉಪಗ್ರಹ ವೀಕ್ಷಣೆಗಳು) ಎಂಬ ಸ್ಯಾಟಲೈಟ್ (Satilite) ಚಿತ್ರಗಳನ್ನು ಬಳಸುತ್ತಿದ್ದು ಇದರೊಂದಿಗೆ ನೈಸರ್ಗಿಕ ಘಟನೆ (Natural) ಗಳನ್ನು ಅಧ್ಯಯನ ಮಾಡಬಹುದು ಎಂಬುದಾಗಿ ತಿಳಿಸಿದ್ದಾರೆ. ನೈಟ್ ಟೈಮ್ ಲೈಟ್ (Night Time Light) ಬಳಸಿಕೊಂಡು ಜನಸಂಖ್ಯೆಯನ್ನು ಪತ್ತೆಹಚ್ಚಬಹುದು ಜೊತೆಗೆ ದೂರ ಪ್ರದೇಶಗಳ ವಿದ್ಯುತ್ (Power) ಸೌಲಭ್ಯ ಹಾಗೂ ವಿಪತ್ತುಗಳನ್ನು ಕಂಡುಹಿಡಿಯಬಹುದಾಗಿದೆ.
ಆರ್ಥಿಕ ಪ್ರಗತಿ ಅರಿತುಕೊಳ್ಳಲು ನೈಟ್ ಟೈಮ್ ಲೈಟ್ ಸಹಕಾರಿ
ಸರಿಸುಮಾರು ಮೂರು ವರ್ಷಗಳಿಂದ ಈ ಸ್ಯಾಟಲೈಟ್ ಚಿತ್ರಗಳು ವಿಜ್ಞಾನಿಗಳಿಗೆ ಈ ಅಂಶಗಳನ್ನು ಅರಿತುಕೊಳ್ಳಲು ನೆರವನ್ನು ನೀಡಿದ್ದು ಇದೀಗ ಅರ್ಥಶಾಸ್ತ್ರಜ್ಞರು ಕೂಡ ಆರ್ಥಿಕತೆಗೆ, ಆರ್ಥಿಕ ಪ್ರಗತಿಗೆ ಸಂಬಂಧಿಸಿದ ಕೆಲವೊಂದು ಅಂಶಗಳನ್ನು ಅರಿತುಕೊಳ್ಳಲು ಈ ಚಿತ್ರಗಳು ಪ್ರಯೋಜನಕಾರಿ ಎಂದು ತಿಳಿಸಿದ್ದಾರೆ. ರಾತ್ರಿ ಸಮಯದಲ್ಲಿ ತೆಗೆದ ಭೂಮಿಯ ಉಪಗ್ರಹ ಚಿತ್ರಗಳು ಆರ್ಥಿಕ ಬೆಳವಣಿಗೆಗೆ ಹೇಗೆ ಸಹಕಾರಿಯಾಗಿದೆ ಎಂಬ ಅಂಶಗಳನ್ನು ಈ ಲೇಖನದಲ್ಲಿ ಬಹಿರಂಗಪಡಿಸಲಾಗಿದೆ.
ಭೌಗೋಳಿಕ ವ್ಯಾಪ್ತಿಯನ್ನು ಬಳಸಿಕೊಂಡು ಡೇಟಾ ಬಹಿರಂಗ
ಇಸ್ರೋದ ನ್ಯಾಶನಲ್ ಸೆನ್ಸಿಂಗ್ ಸೆಂಟರ್ 2012 ಕ್ಕೆ ಹೋಲಿಸಿದರೆ 2021 ರಲ್ಲಿ ಸಾಮಾನ್ಯೀಕರಿಸಿದ NTL ವಿಕಿರಣವು 43% ಹೆಚ್ಚಾಗಿದೆ ಎಂದು ತಿಳಿಸಿದ್ದು ಆರ್ಥಿಕ ಬೆಳವಣಿಗೆ ಪ್ರಗತಿಯಾಗಿದೆ ಎಂಬುದನ್ನು ಈ ಡೇಟಾ ತಿಳಿಸಿದೆ. ನಾಸಾ ಹಾಗೂ ನೋವಾ (ರಾಷ್ಟ್ರೀಯ ಸಾಗರ ಮತ್ತು ವಾಯುಮಂಡಲದ ಆಡಳಿತ) ಅಂಕಿ ಅಂಶಗಳನ್ನು NRSC ಬಳಸಿದ್ದು ಒಟ್ಟು ಭೌಗೋಳಿಕ ಪ್ರದೇಶವನ್ನು ವಿಭಾಗಿಸಿಕೊಂಡು NTL ಡೇಟಾವನ್ನು ಪಡೆದುಕೊಂಡಿದೆ. ದೇಶ ಹಾಗೂ ರಾಜ್ಯಗಳ ಅಂಕಿ ಅಂಶಗಳನ್ನು ಪಡೆದುಕೊಳ್ಳಲು NRSC ಭೌಗೋಳಿಕ ವ್ಯಾಪ್ತಿಯನ್ನು ಬಳಸಿಕೊಂಡಿದೆ.
ರಾಜ್ಯವಾರು ಬೆಳವಣಿಗೆಗೆ ಸಂಬಂಧಿಸಿದಂತೆ ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಮಧ್ಯಮ ಗತಿಯಲ್ಲಿ ಅಂದರೆ 55% ದಂತೆ ಆರ್ಥಿಕ ಪ್ರಗತಿ ಸಾಧಿಸಿದ್ದರೆ ಕಡಿಮೆ ಅಭಿವೃದ್ಧಿ ಹೊಂದಿದ ರಾಜ್ಯಗಳು ಕೂಡ ಹೆಚ್ಚಿನ ಶೇಕಡಾವಾರು ಪ್ರಗತಿಯನ್ನು ಸಾಧಿಸಿವೆ ಎಂಬುದು ತಿಳಿದುಬಂದಿದೆ.
ಡೇಟಾ ಬಹಿರಂಗಪಡಿಸಿದ ಮಾಹಿತಿ
ರಾಷ್ಟ್ರೀಯ, ರಾಜ್ಯ ಹಾಗೂ ಜಿಲ್ಲಾವಾರು ಆರ್ಥಿಕ ಪ್ರಗತಿಯನ್ನು ನೈಟ್ ಟೈಮ್ ಲೈಟ್ಸ್ ಬಹಿರಂಗಪಡಿಸಿದ್ದು ವಾರ್ಷಿಕ ಆಧಾರಿತವಾಗಿ ಬೆಳವಣಿಗೆಯನ್ನು ಸೂಚಿಸಿವೆ ಎಂದು NRSC ತಿಳಿಸಿದೆ. ಬಿಹಾರ 474% ಪ್ರಗತಿ ಸಾಧಿಸಿದರೆ, ಮಣಿಪುರ 441%, ಲಡಾಕ್ 280%, ಕೇರಳ 119%, ಅರುಣಾಚಲ ಪ್ರದೇಶ 66%, ಮಧ್ಯ ಪ್ರದೇಶ 66%, ಉತ್ತರ ಪ್ರದೇಶ 61%, ಗುಜರಾತ್ 58% ಆರ್ಥಿಕ ಪ್ರಗತಿ ಸಾಧಿಸಿವೆ ಎಂದು ನೈಟ್ ಟೈಮ್ ಲೈಟ್ ಅಂಕಿಅಂಶಗಳು ತಿಳಿಸಿವೆ.
ಎನ್‌ಟಿಎಲ್ ಅಟ್ಲಾಸಿನ ಪ್ರಕಾರ ಮಧ್ಯಗತಿಯ ಹೆಚ್ಚಳವನ್ನು ಲಕ್ಷದ್ವೀಪ, ಮಹಾರಾಷ್ಟ್ರ, ತಮಿಳುನಾಡು, ಜಾರ್ಖಂಡ್, ಹರ್ಯಾಣ, ಪಂಜಾಬ್, ಪಶ್ಚಿಮ ಬಂಗಾಳ, ಉತ್ತರಾಂಚಲ, ಕರ್ನಾಟಕ, ಒಡಿಸ್ಸಾ, ತೆಲಂಗಾಣ, ಆಂಧ್ರ ಪ್ರದೇಶ, ನಾಗಾಲ್ಯಾಂಡ್, ಚಂಡೀಘಢ, ಹಿಮಾಚಲ ಪ್ರದೇಶ, ರಾಜಸ್ತಾನ, ತ್ರಿಪುರಾ, ಗೋವಾ, ಛತ್ತೀಸ್‌ಗಢ್, ಅಸ್ಸಾಂ, ಅಂಡಮಾನ್ ಹಾಗೂ ನಿಕೋಬಾರ್, ಮೇಘಾಲಯ ಹಾಗೂ ಜಮ್ಮು ಮತ್ತು ಕಾಶ್ಮೀರ ಸಾಧಿಸಿರುವುದಾಗಿ ತಿಳಿದುಬಂದಿದೆ.
ಸೆನ್ಸಾರ್‌ಗಳ ಅಂಕಿಅಂಶಗಳ ಬಳಕೆ
ನಾಸಾ ಹಾಗೂ ನೋವಾದ ಸಂಯೋಜಿತ ಯೋಜನೆಗಳ ಸೆನ್ಸರ್‌ಗಳ ಅಂಕಿಅಂಶವನ್ನು ಎನ್‌ಟಿಎಲ್ ಪಡೆದುಕೊಂಡಿದೆ. ಪ್ರಾಕೃತಿಕ ಬದಲಾವಣೆಗಳು, ವಿದ್ಯುತ್ ಬಳಕೆ, ಜಿಡಿಪಿ, ಜನಸಂಖ್ಯೆ, ನಗರಗಳ ವಿಸ್ತರಣೆ, ಬಡತನ ಮೊದಲಾದವನ್ನು ಅರಿತುಕೊಳ್ಳಲು ಈ ಉತ್ಪನ್ನಗಳು ಸಹಕಾರಿಯಾಗಿವೆ ಎಂದು ಎನ್‌ಆರ್‌ಎಸ್‌ಸಿಯ ನಿರ್ದೇಶಕರಾದ ಪ್ರಕಾಶ್ ಚೌಹಾಣ್ ತಿಳಿಸಿದ್ದಾರೆ.
ಐಎಮ್‌ಎಫ್ ಮಾತ್ರವಲ್ಲದೆ ವಿಶ್ವ ಬ್ಯಾಂಕ್, ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ ಹಾಗೂ ಇತರ ಸಂಸ್ಥೆಗಳು ಸ್ಯಾಟಲೈಟ್‌ಗಳ ರಾತ್ರಿ ಚಿತ್ರಗಳನ್ನು ಅವಲೋಕಿಸುತ್ತಿದ್ದು ಇದರಿಂದ ಹೆಚ್ಚಿನ ಸಾಮಾಜಿಕ ಆರ್ಥಿಕ ಬೆಳವಣಿಗೆಯನ್ನು ಕಂಡುಕೊಳ್ಳಬಹುದಾಗಿದೆ ಎಂದು ತಿಳಿಸಿವೆ.
ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ ಹಾಗೂ ವಿಶ್ವಬ್ಯಾಂಕ್ ಈ ಉಪಗ್ರಹ ಚಿತ್ರಗಳು ಸಾಮಾಜಿಕ ಆರ್ಥಿಕ ಬೆಳವಣಿಗೆಯನ್ನು ಕಂಡುಕೊಳ್ಳಲು ನೆರವಾಗಿವೆ ಎಂಬುದನ್ನು ದೃಢೀಕರಿಸಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ