Coronavirus: ದೆಹಲಿಯಲ್ಲಿ ಇಂದಿನಿಂದ ಏಪ್ರಿಲ್ 30ರವರೆಗೆ ನೈಟ್​ ಕರ್ಫ್ಯೂ ಜಾರಿ

ವಿಮಾನ ನಿಲ್ದಾಣಗಳು, ರೈಲ್ವೆ ನಿಲ್ದಾಣಗಳು ಮತ್ತು ಬಸ್​ ನಿಲ್ದಾಣಗಳಿಗೆ ಹೋಗುವ ಪ್ರಯಾಣಿಕರಿಗೂ ಈ ನೈಟ್​​ ಕರ್ಫ್ಯೂ ಅನ್ವಯವಾಗುವುದಿಲ್ಲ. ಆದರೆ ಸಂಬಂಧಿತ ಮಾನ್ಯತೆ ಹೊಂದಿರುವ ಟಿಕೆಟ್ ತೋರಿಸಬೇಕಾಗುತ್ತದೆ. ಗರ್ಭಿಣಿಯರು ಹಾಗೂ ರೋಗಿಗಳಿಗೂ ಸಹ ವಿನಾಯಿತಿ ನೀಡಲಾಗಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ನವದೆಹಲಿ(ಏ.06): ಮಹಾಮಾರಿ ಕೊರೋನಾ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ದೇಶದೆಲ್ಲೆಡೆ ತನ್ನ ಕದಂಬಬಾಹುಗಳನ್ನು ಚಾಚುತ್ತಿದೆ. ಕೊರೋನಾ ಎರಡನೇ ಅಲೆಯ ತೀವ್ರತೆ ಹೆಚ್ಚಾಗಿರುವ ಕಾರಣ ಜನರು ನಲುಗಿ ಹೋಗಿದ್ದಾರೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಕೊರೋನಾ ಸ್ಪೋಟಗೊಂಡಿದೆ. ಹೀಗಾಗಿ ಬೆಚ್ಚಿಬಿದ್ದ ದೆಹಲಿ ಸರ್ಕಾರವು ಇಂದಿನಿಂದ ಏಪ್ರಿಲ್ 30ರವರೆಗೆ ನೈಟ್​ ಕರ್ಫ್ಯೂ ಜಾರಿ ಮಾಡಿ ಘೋಷಿಸಿದೆ. ಸರ್ಕಾರದ ಆದೇಶದ ಪ್ರಕಾರ, ಇಂದಿನಿಂದ ರಾತ್ರಿ 10 ಗಂಟೆಯಿಂದ ಮುಂಜಾನೆ 5 ಗಂಟೆಯವರೆಗೆ ನೈಟ್​ ಕರ್ಫ್ಯೂ ಜಾರಿಯಲ್ಲಿರಲಿದೆ. ಕೊರೋನಾ ನಿಯಂತ್ರಣಕ್ಕಾಗಿ ಸಿಎಂ ಅರವಿಂದ್ ಕೇಜ್ರಿವಾಲ್ ಈ ಕ್ರಮ ಕೈಗೊಂಡಿದ್ದಾರೆ.

  ಸಿಎಂ ಅರವಿಂದ್ ಕೇಜ್ರಿವಾಲ್ ಶುಕ್ರವಾರ, ದೆಹಲಿಯಲ್ಲಿ ಕೋವಿಡ್​-19 ನಾಲ್ಕನೇ ಅಲೆ ಪಸರಿಸುತ್ತಿದೆ. ಆದರೆ ಸಂಪೂರ್ಣ ಲಾಕ್​ಡೌನ್​ ಮಾಡುವ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಪ್ರಸ್ತುತ ಸಂದರ್ಭದಲ್ಲಿ ಲಾಕ್​ಡೌನ್ ಮಾಡುವುದು ಅಷ್ಟು ಸಮಯೋಚಿತ ಅಲ್ಲ, ಆದರೆ ಸದ್ಯದ ಪರಿಸ್ಥಿತಿಯನ್ನು ಎದುರಿಸುವುದು ನಮ್ಮ ಮುಂದಿರುವ ಸವಾಲಾಗಿದೆ. ಒಂದು ವೇಳೆ ಪರಿಸ್ಥಿತಿ ಕೈ ಮೀರಿ ಹೋದರೆ, ಸಾರ್ವಜನಿಕ ಸಮಾಲೋಚನೆಯ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದರು.

  ಕೊಪ್ಪಳದಲ್ಲಿ ಎಗ್ಗಿಲ್ಲದೇ ನಡೆಯುತ್ತಿದೆ ಅಕ್ರಮ ಮರಳು ಮಾಫಿಯಾ; ದಂಧೆಕೋರರಿಗೆ ರಾತ್ರಿಯೇ ಹಗಲು

  ಕಳೆದ ಎರಡು ವಾರಗಳಲ್ಲಿ ದೆಹಲಿಯಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿತ್ತು. ಸೋಮವಾರ ದೆಹಲಿಯಲ್ಲಿ 3,548 ಹೊಸ ಕೋವಿಡ್​ ಪ್ರಕರಣಗಳು ಪತ್ತೆಯಾಗಿದ್ದು, 15 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ.

  ಸದ್ಯ ಸರ್ಕಾರ ವಿಧಿಸಿರುವ ನೈಟ್​ ಕರ್ಫ್ಯೂ ಇಂದು ರಾತ್ರಿಯಿಂದ ಜಾರಿಯಾಗಲಿದ್ದು, ಏಪ್ರಿಲ್​ 30ರವರೆಗೆ ಮುಂದುವರೆಯಲಿದೆ.

  ಸರ್ಕಾರದ ಹೊಸ ನಿಯಮಗಳ ಪ್ರಕಾರ, ಖಾಸಗಿ ವೈದ್ಯರು, ನರ್ಸ್​​ಗಳು ಮತ್ತು ಅರೆ ವೈದ್ಯಕೀಯ ಸಿಬ್ಬಂದಿಗೆ ರಾತ್ರಿ ಕರ್ಫ್ಯೂನಿಂದ ವಿನಾಯಿತಿ ನೀಡಲಾಗಿದೆ. ಆದರೆ ಅವರು ತಮ್ಮ ಗುರುತಿನ ಚೀಟಿ ತೋರಿಸಬೇಕು.

  ಇನ್ನು, ವಿಮಾನ ನಿಲ್ದಾಣಗಳು, ರೈಲ್ವೆ ನಿಲ್ದಾಣಗಳು ಮತ್ತು ಬಸ್​ ನಿಲ್ದಾಣಗಳಿಗೆ ಹೋಗುವ ಪ್ರಯಾಣಿಕರಿಗೂ ಈ ನೈಟ್​​ ಕರ್ಫ್ಯೂ ಅನ್ವಯವಾಗುವುದಿಲ್ಲ. ಆದರೆ ಸಂಬಂಧಿತ ಮಾನ್ಯತೆ ಹೊಂದಿರುವ ಟಿಕೆಟ್ ತೋರಿಸಬೇಕಾಗುತ್ತದೆ. ಗರ್ಭಿಣಿಯರು ಹಾಗೂ ರೋಗಿಗಳಿಗೂ ಸಹ ವಿನಾಯಿತಿ ನೀಡಲಾಗಿದೆ.

  ಸಾರಿಗೆ ಸಂಚಾರಕ್ಕೆ ಯಾವುದೇ ನಿರ್ಬಂಧ ಹೇರಿಲ್ಲ. ಬಸ್​ಗಳು, ಮೆಟ್ರೋ, ಆಟೋ ಹಾಗೂ ಟ್ಯಾಕ್ಸಿಗಳು ಚಲಿಸಬಹುದಾಗಿದೆ. ಆದರೆ ನೈಟ್​ ಕರ್ಫ್ಯೂನಿಂದ ವಿನಾಯಿತಿ ಪಡೆದ ಜನರಿಗೆ ಮಾತ್ರ ಅವುಗಳು ಸೇವೆ ನೀಡಬೇಕು.

  ಅತ್ಯಗತ್ಯ ಮತ್ತು ತುರ್ತು ಸೇವೆಗಳಿಗೆ ಯಾವುದೇ ನಿರ್ಬಂಧ ಹಾಕಿಲ್ಲ. ದಿನಸಿ, ಹಣ್ಣು-ತರಕಾರಿ, ಮೆಡಿಕಲ್​ ಸ್ಟೋರ್​ಗಳು ತೆರೆದಿರುತ್ತವೆ. ಮುದ್ರಣ ಮತ್ತು ಎಲೆಕ್ಟ್ರಾನಿಕ್​ ಸಿಬ್ಬಂದಿಗೆ ಇ-ಪಾಸ್​ನೊಂದಿಗೆ ಓಡಾಡಲು ಅವಕಾಶ ಇರುತ್ತದೆ.
  Published by:Latha CG
  First published: