ನವದೆಹಲಿ (ಮೇ 31): ನೈಜೀರಿಯದ ನೈಜೆರ್ ಎಂಬ ಪ್ರದೇಶದ ಇಸ್ಲಾಮಿಕ್ ಸ್ಕೂಲ್ ಮೇಲೆ ಶಸ್ತ್ರಧಾರಿ ಉಗ್ರರ ಗುಂಪು ದಾಳಿ ನಡೆಸಿದೆ. ಶಾಲೆಯ ಮೇಲೆ ದಾಳಿ ನಡೆಸಿದ ಗನ್ಮ್ಯಾನ್ಗಳು ಸುಮಾರು 150 ವಿದ್ಯಾರ್ಥಿಗಳನ್ನು ಎಳೆದುಕೊಂಡು ಹೋಗಿದ್ದಾರೆ. ಭಾನುವಾರ ಈ ಘಟನೆ ನಡೆದಿದೆ ಎಂದು ನೈಜೆರ್ ಸರ್ಕಾರ ತಿಳಿಸಿದೆ.
ಇತ್ತೀಚಿನ ತಿಂಗಳುಗಳಲ್ಲಿ ಶಾಲೆಗಳ ಮೇಲೆ ಸರಣಿ ದಾಳಿ ನಡೆಸಿದ್ದ ಉಗ್ರರು ವಿದ್ಯಾರ್ಥಿಗಳನ್ನು ಅಪಹರಿಸಿದ್ದರು. ಕಳೆದ ಡಿಸೆಂಬರ್ ತಿಂಗಳಿನಿಂದ ಸುಮಾರು 700ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಗನ್ಮ್ಯಾನ್ಗಳು ಅಪಹರಣ ಮಾಡಿದ್ದರು. ಭಾನುವಾರ ನಡೆದಿರುವ ಘಟನೆ ಬಗ್ಗೆ ಮಾಹಿತಿ ನೀಡಿರುವ ನೈಜೆರ್ ರಾಜ್ಯದ ಪೊಲೀಸ್ ಇಲಾಖೆಯ ಅಧಿಕಾರಿಗಳು, ಭಾನುವಾರ ಸಂಜೆ 3.30ರ ಸುಮಾರಿಗೆ ಬೈಕ್ನಲ್ಲಿ ಬಂದ ಗನ್ಮ್ಯಾನ್ಗಳು ಶಾಲೆಯ ಮೇಲೆ ದಾಳಿ ನಡೆಸಿದ್ದಾರೆ. ಬಳಿಕ ವಿದ್ಯಾರ್ಥಿಗಳನ್ನು ಎಳೆದುಕೊಂಡು ಹೋಗಿದ್ದಾರೆ. ಶಾಲೆಯ ಶಿಕ್ಷಕರ ಕಣ್ಣೆದುರೇ ಈ ಘಟನೆ ನಡೆದಿದೆ ಎಂದು ತಿಳಿಸಿದ್ದಾರೆ.
20ರಿಂದ 25 ಬೈಕ್ಗಳಲ್ಲಿ ಬಂದ ಶಸ್ತ್ರಧಾರಿಗಳು ಈ ಕೃತ್ಯ ಎಸಗಿದ್ದಾರೆ. ಶಾಲೆಯ ಒಳಗೆ ನುಗ್ಗಿದವರೇ 150ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಎಳೆದುಕೊಂಡು ಹೋಗಿದ್ದಾರೆ ಎಂದು ಸ್ಥಳೀಯರು ನಡೆದ ಘಟನೆಯನ್ನು ವಿವರಿಸಿದ್ದಾರೆ.
GOVERNOR ABUBAKAR SANI BELLO SADDENED BY RECENT BANDITS ATTACK ON SEVERAL COMMUNITIES IN TEGINA, WUSHISHI AND BATATI
SAYS GOVERNMENT WORRIED BY THE ESCALATING CASES OF BANDITRY IN THE STATE.
ಕಳೆದ ತಿಂಗಳು ನೈಜೀರಿಯದಲ್ಲಿ ಗನ್ಗಳನ್ನು ಹಿಡಿದಿದ್ದ ಮುಸುಕುಧಾರಿ ಉಗ್ರರು ಜೈಲಿನ ಮೇಲೆ ದಾಳಿ ನಡೆಸಿದ್ದರು. ಈ ಘಟನೆಯಲ್ಲಿ 1800 ಕೈದಿಗಳು ಜೈಲಿನಿಂದ ಪರಾರಿಯಾಗಿದ್ದರು. ಮಷಿನ್ ಗನ್ಗಳನ್ನು ಹಿಡಿದಿದ್ದ ಉಗ್ರರ ಗುಂಪು ಜೈಲಿನ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಮೇಲೆ ಮನಸಿಗೆ ಬಂದಂತೆ ಗುಂಡಿನ ದಾಳಿ ನಡೆಸಿದ್ದರು.
ಏಪ್ರಿಲ್ ಆರಂಭದಲ್ಲಿ ರಾತ್ರಿ ವೇಳೆ ನಡೆದ ಈ ಘಟನೆಯಲ್ಲಿ ಪೊಲೀಸರು ಹಾಗೂ ಉಗ್ರರಿಗೆ ಗಾಯಗಳಾಗಿದ್ದು, ಜೈಲಿನ ಕಟ್ಟಡ ಕೂಡ ಜಖಂ ಆಗಿತ್ತು. ಈ ಘಟನೆಯ ಹಿಂದೆ ಜೈಲಿನಲ್ಲಿದ್ದ ಕೈದಿಗಳದ್ದೇ ಕೆಲವರ ಕೈವಾಡವಿರುವ ಶಂಕೆ ವ್ಯಕ್ತವಾಗಿತ್ತು.
Published by:Sushma Chakre
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ