UP Election: ರಂಗೇರಿದ ಚುನಾವಣಾ ರಣಕಣ, ತಲಾಖ್ ಸಂತ್ರಸ್ತೆ ನಿದಾ ಖಾನಾ ಬಿಜೆಪಿಗೆ ಸೇರ್ಪಡೆ

ಉತ್ತರ ಪ್ರದೇಶ ಚುನಾವಣಾ ಕಣ ರಂಗೇರಿದೆ. ಮತದಾನ ಹತ್ತಿರ ಬರ್ತಿದ್ದಂತೆ ಪಕ್ಷಾಂತರ ಜೋರಾಗಿದೆ. ಇದೀಗ ಬೇರೆ ಬೇರೆ ಪಕ್ಷಗಳ ಪ್ರಮುಖ ನಾಯಕರೇ ಬಿಜೆಪಿ ಸೇರಿದ್ದಾರೆ.

ಬಿಜೆಪಿ ಸೇರಿದ ನಿದಾ ಖಾನ್

ಬಿಜೆಪಿ ಸೇರಿದ ನಿದಾ ಖಾನ್

  • Share this:
ಮಹಾಸಮರಕ್ಕೆ ಉತ್ತರ ಪ್ರದೇಶ (Uttara Pradesh) ಸಜ್ಜಾಗಿದೆ. ಫೆಬ್ರವರಿ 10ರಿಂದ ವಿಧಾನಸಭಾ ಚುನಾವಣೆ (Vidhanasabha Election) ನಡೆಯಲಿದೆ. ಒಟ್ಟು 7 ಹಂತಗಳಲ್ಲಿ (7 Phase) ಉತ್ತರ ಪ್ರದೇಶದಾದ್ಯಂತ ವಿಧಾನಸಭಾ ಚುನಾವಣೆಗೆ ಮತದಾನ ನಡೆಯಲಿದೆ. ಅಧಿಕಾರಾರೂಢ ಬಿಜೆಪಿ (BJP) ಮತ್ತೊಮ್ಮೆ ಗದ್ದುಗೆ ಏರುವ ಕನಸು ಕಾಣುತ್ತಿದೆ. ಯೋಗಿ ಆದಿತ್ಯನಾಥ್ (Yogi Adityanath) ಅವರನ್ನು ಕಟ್ಟಿ ಹಾಕಲು ಕಾಂಗ್ರೆಸ್ (Congess), ಬಿಎಸ್‌ಪಿ (BSP) ಸೇರಿದಂತೆ ವಿಪಕ್ಷಗಳು ಶತಾಯಗತಾಯ ಪ್ರಯತ್ನ ಮಾಡುತ್ತಿವೆ.  ಚುನಾವಣೆ ಘೋಷಣೆಯಾಗುವ ಮುನ್ನನೇ ಪಕ್ಷಾಂತರ ಪರ್ವ ಆರಂಭವಾಗಿತ್ತು. ಅದೀಗ ಮತ್ತಷ್ಟು ಮುಂದುವರೆದಿದೆ. ಇದೀಗ ಚುನಾವಣೆಗೆ ಕೆಲವೇ ಕೆಲವು ದಿನಗಳು ಬಾಕಿ ಇರುವಾಗಲೇ ಬಿಜೆಪಿಗೆ ಹಲವು ನಾಯಕರು ಸೇರ್ಪಡೆಯಾಗಿದ್ದಾರೆ. ತಲಾಖ್ ಸಂತ್ರಸ್ತೆ ಹಾಗೂ ಮಹಿಳಾ ಹಕ್ಕುಗಳ ಹೋರಾಟಗಾರ್ತಿ ನಿದಾ ಖಾನ್ (Nida Khan) ಇಂದು ಬಿಜೆಪಿ ಸೇರಿದ್ದಾರೆ. ಜೊತೆಗೆ ಬಿಎಸ್‌ಪಿ ನಾಯಕಿ ಮಾಯಾವತಿ ಅವರ ಪರಮಾಪ್ತರಲ್ಲಿ ಒಬ್ಬರಾಗಿದ್ದ ಗಂಗಾರಾಮ್ ಅಂಬೇಡ್ಕರ್ ಕೂಡ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.

ತಲಾಖ್ ಪ್ರಕರಣದ ಸಂತಸ್ತೆಯಾಗಿರುವು ನಿದಾ ಖಾನ್

ನಿದಾ ಖಾನ್ ಈ ಹಿಂದೆ ತಲಾಖ್ ಪ್ರಕರಣದ ವಿಚಾರದಲ್ಲಿ ಸಾಕಷ್ಟು ಸುದ್ದಿಯಾಗಿದ್ದರು. ಬರೇಲ್ವಿ ಪಂಗಡದ ಧರ್ಮಗುರು ತೌಖೀರ್ ರಜಾ ಖಾನ್‌ರ ಸಹೋದರನ ಸೊಸೆಯಾಗಿರುವ ನಿದಾ ಖಾನ್ ಅವರು ತ್ರಿವಳಿ ತಲಾಖ್‌ನ ಸಂತ್ರಸ್ತೆಯಾಗಿದ್ದಾರೆ. ತಲಾಖ್ ವಿರೋಧಿಸಿ ತನ್ನ ಮಾವನ ವಿರುದ್ಧವೇ ಸಿಡಿದು ನಿಂತಿದ್ದರು. "ತನ್ನ ಸ್ವಂತ ಕುಟುಂಬಕ್ಕಾಗಿ ಹೋರಾಡಲು ಸಾಧ್ಯವಾಗದ ಅವರು ಈಗ ಮಹಿಳಾ ಹಕ್ಕುಗಳ ಬಗ್ಗೆ ಮಾತನಾಡುತ್ತಾರೆ" ಅಂತ ಬಹಿರಂಗವಾಗಿಯೇ ಟೀಕಿಸಿದ್ದರು. ಸದ್ಯ ವಳಿ ತಲಾಖ್ ವ್ಯವಸ್ಥೆಯ ಅಡಿಯಲ್ಲಿ ವಿಚ್ಛೇದನ ಹೊಂದಿರುವ ಮಹಿಳೆಯರಿಗೆ ಕಾನೂನು ಸಹಾಯ ಒದಗಿಸಲು ನಿದಾ ಕೆಲಸ ಮಾಡುತ್ತಿದ್ದಾರೆ.

ಬಿಜೆಪಿ ಸೇರಿದ ನಿದಾ ಖಾನ್

ಉತ್ತರ ಪ್ರದೇಶದ ಬಿಜೆಪಿ ನಾಯಕರ ಸಮ್ಮುಖದಲ್ಲಿ ನಿದಾ ಖಾನ್ ಬಿಜೆಪಿಗೆ ಸೇರಿದ್ದಾರೆ. ಪಕ್ಷದ ಬಾವುಟ ಕೊಟ್ಟು, ಶಾಲು ಹೊದೆಸಿ ನಿದಾ ಖಾನ್ ಅವರನ್ನು ಪಕ್ಷದ ನಾಯಕರು ಬರಮಾಡಿಕೊಂಡಿದ್ದಾರೆ. ಬಿಜೆಪಿ ಪ್ರಧಾನ ಕಚೇರಿಯಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆದಿದೆ.

ಇದನ್ನೂ ಓದಿ: UP Election: ನೋಯ್ಡಾದಲ್ಲಿ ಇಂದು ಮನೆ-ಮನೆಗೆ ತೆರಳಿ ಪ್ರಚಾರ ಮಾಡಲಿರುವ ಪ್ರಿಯಾಂಕಾ ಗಾಂಧಿ

“ಮಹಿಳಾ ಸಬಲೀಕರಣಕ್ಕಾಗಿ ಬಿಜೆಪಿ ಸೇರಿದ್ದೇನೆ”

ANI ಜೊತೆ ಮಾತನಾಡಿರುವ ನಿದಾ ಖಾನ್, ಬಿಜೆಪಿ ತತ್ವಗಳನ್ನು ಮೆಚ್ಚಿ ಬಿಜೆಪಿಗೆ ಸೇರ್ಪಡೆ ಗೊಂಡಿದ್ದಾಗಿ ಹೇಳಿದ್ದಾರೆ. “ತ್ರಿವಳಿ ತಲಾಖ್ ನಿಷೇಧ ಕಾನೂನು ತಂದ ಕಾರಣ ಮತ್ತು ಎಲ್ಲಾ ಧರ್ಮಗಳ ಮಹಿಳೆಯರ ಸಬಲೀಕರಣಕ್ಕಾಗಿ ನಾನು ಬಿಜೆಪಿಗೆ ಸೇರಿದ್ದೇನೆ" ಎಂದು ನಿದಾ ಖಾನ್  ಹೇಳಿ್ದಾರೆ. ಚುನಾವಣೆಯ ನಂತರ ಬಿಜೆಪಿ ಸರ್ಕಾರ ರಚಿಸಲಿದೆ ಮತ್ತು ಮುಸ್ಲಿಂ ಸಮುದಾಯವೂ ಪಕ್ಷಕ್ಕೆ ಬಹಿರಂಗವಾಗಿ ಮತ ಚಲಾಯಿಸಲಿದೆ,'' ಎಂದು ಅವರು ತಿಳಿಸಿದ್ದಾರೆ.

ಪ್ರಿಯಾಂಕಾ ಗಾಂಧಿಗೆ “ಅಕ್ಕಾ” ಎನ್ನುತ್ತಿದ್ದ ನಿದಾ ಖಾನ್

ನಿದಾ ಖಾನ್ ಈ ಹಿಂದೆ ಕಾಂಗ್ರೆಸ್ ಜೊತೆಗೆ ಗುರುತಿಸಿಕೊಂಡಿದ್ದರು ಎನ್ನಲಾಗಿದೆ. ಅಲ್ಲದೇ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿಯವರನ್ನು ಅಕ್ಕಾ ಅಂತಲೇ ಕರೆಯುತ್ತಿದ್ದರು. ಇದೀಗ ಬಿಜೆಪಿ ಸೇರಿದ್ದು, ಕುತೂಹಲಕ್ಕೆ ಕಾರಣವಾಗಿದೆ. ಅಲ್ಲದೇ ಕಾಂಗ್ರೆಸ್ ಪ್ರಣಾಳಿಕೆ ಹಾಗೂ ಕಾಂಗ್ರೆಸ್ ಪಕ್ಷದ ನಿಲುವುಗಳ ವಿರುದ್ಧ ನಿದಾ ಖಾನ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Budget Session: ಜಂಟಿ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ಭಾಷಣ; ಇಲ್ಲಿದೆ ಪ್ರಮುಖಾಂಶಗಳು

ಮಾಯಾವತಿಗೆ ಶಾಕ್ ಕೊಟ್ಟ ಪರಮಾಪ್ತ

ಮತ್ತೊಂದೆಡೆ ಬಹುಜನ ಸಮಾಜವಾದಿ ಪಾರ್ಟಿ ಮುಖ್ಯಸ್ಥೆ ಮಾಯಾವತಿಗೆ ಶಾಕ್ ಎದುರಾಗಿದೆ. ಮಾಯಾವತಿ ಅವರ ಪರಮಾಪ್ತರಲ್ಲಿ ಒಬ್ಬರಾಗಿದ್ದ ಮಾಜಿ ಅಧಿಕಾರಿ ಮತ್ತು ಬಿಎಸ್‌ಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಗಂಗಾರಾಮ್‌ ಅಂಬೇಡ್ಕರ್ ಸಹ ಬಿಎಸ್‌ಪಿ ತೊರೆದಿದ್ದಾರೆ. ಅವರೂ ಕೂಡ ಬಿಜೆಪಿ ಸೇರಿದ್ದಾರೆ.

ಒಟ್ಟು 21 ಮಂದಿ ಬಿಜೆಪಿಗೆ ಸೇರ್ಪಡೆ

ಇನ್ನು ಕಾಂಗ್ರೆಸ್, ಎಸ್‌ಪಿ, ಬಿಎಸ್‌ಪಿ ಸೇರಿದಂತೆ ಹಲವು ಪಕ್ಷಗಳ ನಾಯಕರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ನಿದಾ ಖಾನ್ ಸೇರಿ ಒಟ್ಟು 21 ವಿವಿಧ ನಾಯಕರು ಬಿಜೆಪಿ ಸೇರಿದ್ದಾರೆ. ಇದರೊಂದಿಗೆ ಬಿಜೆಪಿಗೆ ಬಲ ಬಂದಂತಾಗಿದ್ದು, ಇದು ಚುನಾವಣೆಗೆ ಎಷ್ಟು ಲಾಭ ತಂದುಕೊಡುತ್ತದೆ ಎನ್ನುವ ಲೆಕ್ಕಾಚಾರ ಶುರುವಾಗಿದೆ.
Published by:Annappa Achari
First published: