NIA: ರಹಸ್ಯ ಮಾಹಿತಿ ಕೊಡುತ್ತಿದ್ದ ಮಾಜಿ ಅಧಿಕಾರಿ ಅರೆಸ್ಟ್, ಆತ ಮಾಡಿದ ದ್ರೋಹ ಏನ್ ಗೊತ್ತಾ?

ಆತ ಎಂತಾ ಸಂದರ್ಭ ಬಂದರೂ ದೇಶದ ಸುರಕ್ಷತೆ, ಭದ್ರತೆಗೆ ಧಕ್ಕೆ ತರುವ ಕೆಲಸ ಮಾಡುವುದಿಲ್ಲ ಅಂತ ಪ್ರಮಾಣ ಮಾಡಿದವ. ಆದರೆ ಆತ ಮಾಡಿದ್ದು ಮಾತ್ರ ದೇಶದ್ರೋಹದ ಕೆಲಸ. ಇಷ್ಟು ವರ್ಷ ಕಳ್ಳಾಟ ಆಡಿ, ದೇಶದ ಭದ್ರತೆ, ಸುರಕ್ಷತೆಗೆ ಧಕ್ಕೆ ತಂದಿದ್ದ ಆ ದೇಶದ್ರೋಹಿ, ಇದೀಗ ಅರೆಸ್ಟ್ ಆಗಿದ್ದಾನೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನವದೆಹಲಿ: ಆತ ದೇಶವನ್ನು ರಕ್ಷಿಸಬೇಕಾಗಿದ್ದ ತಂಡದಲ್ಲಿದ್ದವ. ಅದೇ ಕೆಲಸದಲ್ಲೇ ಸರ್ವಿಸ್ (Service) ಮಾಡಿ, ನಿವೃತ್ತಿ (Retirement) ಪಡೆದವ. ಎಂತಾ ಸಂದರ್ಭ ಬಂದರೂ ದೇಶದ ಸುರಕ್ಷತೆ (Security), ಭದ್ರತೆಗೆ ಧಕ್ಕೆ ತರುವ ಕೆಲಸ ಮಾಡುವುದಿಲ್ಲ ಅಂತ ಪ್ರಮಾಣ ಮಾಡಿದವ. ಆದರೆ ಆತ ಮಾಡಿದ್ದು ಮಾತ್ರ ದೇಶದ್ರೋಹದ (Treason) ಕೆಲಸ. ಇಷ್ಟು ವರ್ಷ ಕಳ್ಳಾಟ ಆಡಿ, ದೇಶದ ಭದ್ರತೆ, ಸುರಕ್ಷತೆಗೆ ಧಕ್ಕೆ ತಂದಿದ್ದ ಆ ದೇಶದ್ರೋಹಿ, ಇದೀಗ ಅರೆಸ್ಟ್ (Arrest) ಆಗಿದ್ದಾನೆ. ರಾಷ್ಟ್ರೀಯ ತನಿಖಾ ದಳ (NIA) ಆತನನ್ನು ಬಂಧಿಸಿದೆ. ಇದೀಗ ಆತನ ವಿಚಾರಣೆಯಲ್ಲಿ (Enquiry) ಸ್ಫೋಟಕ ವಿಚಾರಣೆಗಳು ಹೊರಕ್ಕೆ ಬರುತ್ತಿವೆ. ಹಾಗಿದ್ರೆ ಆತ ಯಾರು? ಆತ ಮಾಡಿದ ರಾಷ್ಟ್ರದ್ರೋಹದ ಕೆಲಸ ಏನು? ಎನ್ಐಎ ತನಿಖೆ ವೇಳೆ ಸಿಕ್ಕಿದ ಮಾಹಿತಿಗಳೇನು ಎಂಬ ಬಗ್ಗೆ ಇಲ್ಲಿದೆ ವರದಿ…

ಮಾಜಿ ಪೊಲೀಸ್ ವರಿಷ್ಠಾಧಿಕಾರಿ ಅರೆಸ್ಟ್

ದೇಶದ ರಹಸ್ಯ ಮಾಹಿತಿ ಸೋರಿಕೆ ಮಾಡಿ, ದೇಶದ್ರೋಹ ಮಾಡಿದ ಆರೋಪದ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆಯು ತನ್ನ ಮಾಜಿ ಪೊಲೀಸ್ ವರಿಷ್ಠಾಧಿಕಾರಿ ಪಿ ಅರವಿಂದ್ ದಿಗ್ವಿಜಯ್ ನೇಗಿಯನ್ನು ನವದೆಹಲಿಯಲ್ಲಿ ಬಂಧಿಸಿದೆ. ಈತ ಲಷ್ಕರ್-ಎ-ತೊಯ್ಬಾದ ಉಗ್ರರಿಗೆ ದೇಶದ ಗೌಪ್ಯ ದಾಖಲೆಯನ್ನು ಹಂಚಿಕೊಂಡ ಆರೋಪ ಎದುರಿಸುತ್ತಿದ್ದಾನೆ.

ಕಳೆದ ವರ್ಷ ಜಮ್ಮು ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಕಾರ್ಯಕರ್ತ ಪರ್ವೇಜ್‌ ಎಂಬಾತನನ್ನು ಇದೇ ಆರೋಪದ ಮೇಲೆ ಬಂಧಿಸಲಾಗಿತ್ತು. ಇದೀಗ ಇದೇ ಕೇಸ್‌ಗೆ ಸಂಬಂಧಿಸಿದಂತೆ ಎನ್ಐಎ ಅಧಿಕಾರಿಗಳು ದಿಗ್ವಿಜಯ್ ನೇಗಿಯನ್ನು ಅರೆಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: Drink & Drive: ಎಣ್ಣೆ ಏಟಲ್ಲಿ ಗಾಡಿ ಓಡಿಸಿ, ಪೊಲೀಸರ ಕೆನ್ನೆಗೇ ಏಟು ಕೊಡೋದಾ? ಈ ನಟಿ ಕೈಗೆ ಬಿತ್ತು ಕೋಳ!

ದಿಗ್ವಿಜಯ್ ನೇಗಿ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ

ದಿಗ್ವಿಜಯ್ ನೇಗಿ ಕಾರ್ಯಗಳು, ಚಲನವಲನದ ಬಗ್ಗೆ ಗುಪ್ತಚರ ಸಂಸ್ಥೆಯಿಂದ ಎನ್‌ಐಎಗೆ ಮಾಹಿತಿ ಲಭ್ಯವಾಗಿತ್ತು. ಅದರ ಪ್ರಕಾರ ದೇಶದ ಭದ್ರತೆಗೆ ಸಂಬಂಧಿಸಿದಂತೆ ಮಹತ್ವದ ದಾಖಲೆಗಳು ಪರ್ವೇಜ್ ಮೂಲಕ ಭೂಗತ ಕೆಲಸಗಾರನನ್ನು ತಲುಪಿದೆ.

ಪ್ರಾರಂಭದಿಂದಲೂ NIA ಯೊಂದಿಗೆ ಕೆಲಸ ಮಾಡಿದ ನೇಗಿ ಕಳೆದ ವರ್ಷ ತನ್ನ ಕೇಡರ್ ಮತ್ತು ತವರು ರಾಜ್ಯ ಹಿಮಾಚಲ ಪ್ರದೇಶಕ್ಕೆ ಮರಳಿದ್ದರು. ಕಳೆದ ನವೆಂಬರ್‌ನಲ್ಲಿ  ಎನ್‌ಐಎ ತಾನು ತನಿಖೆ ನಡೆಸುತ್ತಿರುವ ಈ ಪ್ರಕರಣದಲ್ಲಿ ಶಿಮ್ಲಾದಲ್ಲಿನ ಅವರ ನಿವಾಸವನ್ನು ಶೋಧಿಸಿತ್ತು. ಈ ವೇಳೆ ದಿಗ್ವಿಜಯ್ ನೇಗಿ ಮೇಲಿನ ಆರೋಪ ಸಾಬೀತಾಗಿತ್ತು.

ಯಾರು ಈ ದಿಗ್ವಿಜಯ್ ನೇಗಿ?

ದಿಗ್ಲಿಜಯ್ ನೇಗಿ ಮಾಜಿ ಐಪಿಎಸ್ ಅಧಿಕಾರಿ. ಈ ಹಿಂದೆ ಎನ್ಐಎನಲ್ಲೇ ಕೆಲಸ ಮಾಡಿದ್ದರು ಎನ್ನಲಾಗಿದೆ., ಹುರಿಯತ್ ನಾಯಕರ ವಿರುದ್ಧ ಸೇರಿದಂತೆ J&K ನಲ್ಲಿ ಭಯೋತ್ಪಾದನೆಯ ಹಲವಾರು ಪ್ರಕರಣಗಳನ್ನು ತನಿಖೆ ಮಾಡಿದ್ದು ಮಾತ್ರವಲ್ಲದೆ, ತಂಡದಲ್ಲಿ ಪ್ರಮುಖ ಅಧಿಕಾರಿಯೂ ಆಗಿದ್ದರು.

ಭಯೋತ್ಪಾದನೆಗೆ ಯುವಕರನ್ನು ಸೆಳೆಯುತ್ತಿದ್ದರಾ ನೇಗಿ?

ಭಯೋತ್ಪಾದಕ ಸಂಘಟನೆ ಎಲ್​ಇಟಿಗೆ ಸೇರಲು ಯುವಕರನ್ನು ಪ್ರೇರೇಪಿಸುವ ಮತ್ತು ಅವರನ್ನ ನೇಮಕ ಮಾಡಿಕೊಳ್ಳುತ್ತಿರುವ ಕೇಸ್​ಗೆ ಸಂಬಂಧಪಟ್ಟಂತೆ ಎನ್​ಐಎ ಜಮ್ಮು-ಕಾಶ್ಮೀರದ ಮೂರು ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಿದೆ. ಇದಕ್ಕೆ ಕೇಂದ್ರ ಮೀಸಲು ಪಡೆ ಮತ್ತು ಜಮ್ಮು ಕಾಶ್ಮೀರ ಪೊಲೀಸರ ಸಹಾಯವನ್ನೂ ತೆಗೆದುಕೊಂಡಿದೆ.

ಲಷ್ಕರ್​ ಇ ತೊಯ್ಬಾದ ಅಂಗ ಸಂಸ್ಥೆ ದಿ ರೆಸಿಸ್ಟನ್ಸ್​ ಫ್ರಂಟ್​​ನ ಕಮಾಂಡರ್​ಗಳಾದ ಸಜ್ಜದ್​ ಗುಲ್​, ಸಲೀಂ ರೆಹಮಾನಿ ಅಲಿಯಾಸ್ ಅಬು ಸಾದ್​ ಮತ್ತು ಸೈಫುಲ್ಲಾ ಸಜೀದ್​ ಜಟ್​ ಸೇರಿ ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ಯುವಕರನ್ನು ಸೆಳೆಯುವ ಕಾರ್ಯ ಮಾಡುತ್ತಿದ್ದಾರೆ. ಅವರನ್ನು ಉಗ್ರ ಸಂಘಟನೆಗೆ ಸೇರಿಸಲು ಪ್ರಚೋದಿಸುತ್ತಿದ್ದಾರೆ ಎಂದೂ ಎನ್​ಐಎ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Hijab ಪರವಾಗಿ ಪ್ರತಿಭಟನೆ ನಡೆಸಿದ್ದ 58 ವಿದ್ಯಾರ್ಥಿನಿಯರು ಕಾಲೇಜಿನಿಂದ ಅಮಾನತು

ತನಿಖೆ ವೇಳೆ ಸ್ಫೋಟಕ ಮಾಹಿತಿ

ಶೋಧ ಕಾರ್ಯ ನಡೆಸಿದ ಎನ್​ಐಎ ಅಧಿಕಾರಿಗಳು ಹಲವು ಡಿಜಿಟಲ್​ ಡಿವೈಸ್​​ಗಳನ್ನು, ವಸ್ತುಗಳನ್ನೂ ಜಪ್ತಿ ಮಾಡಿದ್ದಾರೆ. ಇದೀಗ ಎನ್ಐಎ ಅಧಿಕಾರಿಗಳು ತನಿಖೆ ಮುಂದುವರೆಸಿದ್ದು, ದಿಗ್ವಿಜಯ್ ನೇಗಿ ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಹೊರಬೀಳುವ ಸಾಧ್ಯತೆಯಿದೆ.
Published by:Annappa Achari
First published: