• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Death Penalty: ಭೋಪಾಲ್-ಉಜ್ಜೈನಿ ರೈಲು ಸ್ಫೋಟದ ಏಳು ಅಪರಾಧಿಗಳಿಗೆ ಮರಣದಂಡನೆ ವಿಧಿಸಿ ತೀರ್ಪು ಪ್ರಕಟ

Death Penalty: ಭೋಪಾಲ್-ಉಜ್ಜೈನಿ ರೈಲು ಸ್ಫೋಟದ ಏಳು ಅಪರಾಧಿಗಳಿಗೆ ಮರಣದಂಡನೆ ವಿಧಿಸಿ ತೀರ್ಪು ಪ್ರಕಟ

ನ್ಯಾಯಾಲಯ

ನ್ಯಾಯಾಲಯ

ಆರು ವರ್ಷಗಳ ಹಿಂದೆ ಭೋಪಾಲ್ ಮತ್ತು ಉಜ್ಜೈನಿ ನಡುವೆ ಸಂಚರಿಸುವ ಪ್ಯಾಸೆಂಜರ್ ರೈಲು ಸ್ಫೋಟಗೊಂಡಿತ್ತು. ಈ ಘಟನೆಯಲ್ಲಿ 9 ಮಂದಿ ಪ್ರಯಾಣಿಕರು ಗಾಯಗೊಂಡಿದ್ದರು. ರೈಲಿನಲ್ಲಿ ಮತ್ತೆ ಭಯದ ವಾತಾವರಣ ನಿರ್ಮಾಣ ಆದ ಪರಿಣಾಮ ರೈಲಿನಲ್ಲಿ ಇದ್ದ ಅನೇಕ ಪ್ರಯಾಣಿಕರು ಪ್ರಾಣ ಉಳಿಸಿಕೊಳ್ಳುವ ಸಲುವಾಗಿ ರೈಲಿನಿಂದ ಜಿಗಿದು ಗಾಯಗೊಂಡಿದ್ದರು.

ಮುಂದೆ ಓದಿ ...
  • Share this:

ನವದೆಹಲಿ: ಭೋಪಾಲ್- ಉಜ್ಜೈನಿ (Bhopal Ujjain) ಪ್ಯಾಸೆಂಜರ್ ರೈಲು ಸ್ಫೋಟದ (Train Blast Case) ಎಂಟು ಮಂದಿ ಅಪರಾಧಿಗಳ ಪೈಕಿ ಏಳು ಮಂದಿಗೆ ರಾಷ್ಟ್ರೀಯ ತನಿಖಾ ಸಂಸ್ಥೆ ವಿಶೇಷ ನ್ಯಾಯಾಲಯ ಮರಣ ದಂಡನೆ ವಿಧಿಸಿ ಆದೇಶ ಹೊರಡಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಉಳಿದ ಒಬ್ಬ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.


ಆರು ವರ್ಷಗಳ ಹಿಂದೆ ಮಧ್ಯ ಪ್ರದೇಶದ ಶಾಜಾಪುರ ಜಿಲ್ಲೆಯ ಜಬ್ಡಿ ರೈಲು ನಿಲ್ದಾಣದಲ್ಲಿ ಬೆಳಗ್ಗೆ 9.30ರ ಸಮಯದಲ್ಲಿ ಭೋಪಾಲ್ ಮತ್ತು ಉಜ್ಜೈನಿ ನಡುವೆ ಸಂಚರಿಸುವ ಪ್ಯಾಸೆಂಜರ್ ರೈಲು ಸ್ಫೋಟಗೊಂಡಿತ್ತು. ಈ ಘಟನೆಯಲ್ಲಿ 9 ಮಂದಿ ಪ್ರಯಾಣಿಕರು ಗಾಯಗೊಂಡಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿತ್ತಾದರೂ ರೈಲಿನಲ್ಲಿ ಮತ್ತೆ ಭಯದ ವಾತಾವರಣ ನಿರ್ಮಾಣ ಆಗಿತ್ತು. ಪರಿಣಾಮ ರೈಲಿನಲ್ಲಿ ಇದ್ದ ಅನೇಕ ಪ್ರಯಾಣಿಕರು ಪ್ರಾಣ ಉಳಿಸಿಕೊಳ್ಳುವ ಸಲುವಾಗಿ ರೈಲಿನಿಂದ ಜಿಗಿದು ಗಾಯಗೊಂಡಿದ್ದರು.


ಇದನ್ನೂ ಓದಿ: Bomb Blast: ಪಾಕಿಸ್ತಾನದಲ್ಲಿ ಪಿಎಸ್‌ಎಲ್‌ ಪಂದ್ಯದ ವೇಳೆಯೇ ಬಾಂಬ್ ಬ್ಲಾಸ್ಟ್! ಕ್ಯಾಪ್ಟನ್ ಬಾಬರ್ ಅಜಮ್ ಮೈದಾನದಲ್ಲಿದ್ದಾಗಲೇ ಸ್ಫೋಟ!


8 ಮಂದಿಯನ್ನು ಬಂಧಿಸಿದ್ದ ಎನ್‌ಐಎ


ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ ವಹಿಸಿತ್ತು. ಎಲ್ಲಾ ಪ್ರಕರಣದ ತನಿಖೆ ನಡೆಸಿದ ಎನ್‌ಐಎ ಎಂಟು ಆರೋಪಿಗಳನ್ನು ಬಂಧಿಸಿತ್ತು. ಬಂಧಿತ ಅಪರಾಧಿಗಳನ್ನು ಮೊಹಮ್ಮದ್ ಫೈಸಲ್, ಗೌಸ್ ಮೊಹಮ್ಮದ್, ಅಜರ್, ಅತೀಫ್ ಮುಜಾಫರ್, ಡ್ಯಾನಿಶ್, ಮೀರ್ ಹುಸೇನ್, ಆಸಿಫ್, ಇಕ್ಬಾಲ್ ಮತ್ತು ಅತೀಫ್ ಇರಾನಿ ಎಂದು ಗುರುತಿಸಲಾಗಿದೆ.


ಇದೀಗ ಈ ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಲಕ್ನೋದಲ್ಲಿ ಇರುವ ಎನ್‌ಐಎ ವಿಶೇಷ ನ್ಯಾಯಾಲಯ ಘಟನೆಯಲ್ಲಿ ಭಾಗಿಯಾದ ಬಂಧಿತ ಎಂಟು ಮಂದಿ ಆರೋಪಿಗಳೂ ಅಪರಾಧಿಗಳು ಎಂದು ಘೋಷಿಸಿದ್ದು, ಆ ಪೈಕಿ ಭೋಪಾಲ್- ಉಜ್ಜೈನಿ ಪ್ಯಾಸೆಂಜರ್ ರೈಲು ಸ್ಫೋಟದ ಎಂಟು ಮಂದಿ ಅಪರಾಧಿಗಳ ಪೈಕಿ ಏಳು ಮಂದಿಗೆ ಮರಣ ದಂಡನೆ ಶಿಕ್ಷೆ ವಿಧಿಸಿದರೆ, ಉಳಿದ ಒಬ್ಬನಿಗೆ ಜೀವಾವಧಿ ಶಿಕ್ಷೆ ವಿಧಿಸಿ ಎನ್‌ಐಎ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ವಿವೇಕಾನಂದ ಶರಣ್ ಪಾಂಡೆ ಅವರು ತೀರ್ಪು ಪ್ರಕಟಿಸಿದ್ದಾರೆ.


ತನಿಖೆ ವೇಳೆ ಹಲವು ಅಂಶಗಳು ಬಯಲಿಗೆ!


ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ ತನಿಖಾಧಿಕಾರಿಗಳು ಪ್ರಕರಣದ ಎಲ್ಲಾ ಆರೋಪಿಗಳು ದೇಶದ ವಿರುದ್ಧ ಅಲ್ಲಲ್ಲಿ ಭಯೋತ್ಪಾದನಾ ಚಟುವಟಿಕೆ ನಡೆಸಲು ಸಂಚು ರೂಪಿಸಿದ್ದಾರೆ. ಅದಕ್ಕಾಗಿ ನಿಧಿ ಸಂಗ್ರಹವನ್ನೂ ಮಾಡಿದ್ದಾರೆ, ಜೊತೆಗೆ ಸ್ಫೋಟಕಗಳು ಮತ್ತು ಶಸ್ತ್ರಾಸ್ತ್ರಗಳನ್ನು ಸಂಗ್ರಹ ಮಾಡಿದ್ದಾರೆ ಎಂದು ಆರೋಪ ಮಾಡಲಾಗಿತ್ತು. ಈ ಘಟನೆಯ ನಂತರ ಕಾರ್ಯಾಚರಣೆಗೆ ಇಳಿದ ಪೊಲೀಸರಿಗೆ ಎಲ್ಲಾ ಆರೋಪಿಗಳು ಐಎಸ್‌ನ ಖೊರಾಸನ್ ಮಾಡ್ಯೂಲ್‌ನೊಂದಿಗೆ ಸಂಬಂಧ ಹೊಂದಿದ್ದರು ಎಂಬ ಅಂಶ ಸಿಕ್ಕಿತ್ತು. ನಂತರ ಉತ್ತರ ಪ್ರದೇಶದ ಎಟಿಎಸ್ ಕೂಡ ಪ್ರಕರಣ ದಾಖಲಿಸಿತ್ತು.


ಇದನ್ನೂ ಓದಿ: Bengaluru: ಲೇಡೀಸ್​ ಟಾಯ್ಲೆಟ್​ಗೆ ನುಗ್ಗಿ ಯುವತಿಯನ್ನ ಎಳೆದಾಡಿದ; ಇಂಜಿನಿಯರಿಂಗ್ ಪದವಿ ಪಡೆದು ದುಬೈನಲ್ಲಿ ಕೆಲಸ ಮಾಡುತ್ತಿದ್ದಾತನ ಕುಕೃತ್ಯ!


ಇನ್ನು ವಿಚಾರಣೆಯ ಆಧಾರದ ಮೇಲೆ ಉತ್ತರ ಪ್ರದೇಶದಿಂದ ಗೌಸ್ ಮೊಹಮ್ಮದ್ ಖಾನ್‌ನನ್ನು ಬಂಧಿಸಲಾಗಿತ್ತು. ಉತ್ತರ ಪ್ರದೇಶದ ಎಟಿಎಸ್ ಕೂಡ ಪ್ರಕರಣ ದಾಖಲಿಸಿಕೊಂಡು ಇಬ್ಬರನ್ನು ಬಂಧಿಸಿತ್ತು. ಇದೀಗ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ತೀರ್ಪು ಹೊರಬಿದ್ದಿದ್ದು, 8 ಅಪರಾಧಿಗಳ ಪೈಕಿ 7 ಮಂದಿಗೆ ಮರಣದಂಡನೆ ಮತ್ತು ಒಬ್ಬ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ಪ್ರಕಟ ಮಾಡಿದೆ.

Published by:Avinash K
First published: