Dawood Ibrahim: ದಾವೂದ್ ಇಬ್ರಾಹಿಂ ಬಗ್ಗೆ ಮಾಹಿತಿ ನೀಡಿದರೆ 25 ಲಕ್ಷ ಬಹುಮಾನ; ಡಿ ಕಂಪನಿ ಮಟ್ಟಹಾಕಲು ಯೋಜನೆ

ಅಲ್ಲದೇ  ದಾವೂದ್ ಇಬ್ರಾಹಿಂ ಆಪ್ತ ಸಹಾಯಕರಾದ ಜಾವೇದ್ ಪಟೇಲ್ ಅಲಿಯಾಸ್ ಜಾವೇದ್ ಚಿಕ್ನಾ, ಶಕೀಲ್ ಶೇಖ್ ಅಲಿಯಾಸ್ ಛೋಟಾ ಶಕೀಲ್ ಮತ್ತು ಇಬ್ರಾಹಿಂ ಮುಷ್ತಾಕ್ ಅಬ್ದುಲ್ ರಜಾಕ್ ಮೆಮನ್ ಅಲಿಯಾಸ್ ಟೈಗರ್ ಮೆಮನ್ ಕುರಿತು ಮಾಹಿತಿಯ ನೀಡಿದವರಿಗೆ ನಗದು ಬಹುಮಾನ ನೀಡುವುದಾಗಿ ಪ್ರಕಟಣೆ ಹೊರಡಿಸಿದೆ.  

ದಾವೂದ್ ಇಬ್ರಾಹಿಂ

ದಾವೂದ್ ಇಬ್ರಾಹಿಂ

 • Share this:
  ದೆಹಲಿ: ಮೋಸ್ಟ್ ವಾಂಟೆಡ್ ಭೂಗತ ಪಾತಕಿ ದಾವೂದ್ ಇಬ್ರಾಹಿಂ (Dawood Ibrahim) ಬಂಧಿಸಲು ಯತ್ನಿಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (National Investigation Agency) ಆತನ ಬಂಧನಕ್ಕೆ ಸಹಾಯವಾಗಬಲ್ಲ ಮಾಹಿತಿ ನೀಡಿದವರಿಗೆ 25 ಲಕ್ಷ ರೂಪಾಯಿ ನಗದು ಬಹುಮಾನ ನೀಡುವುದಾಗಿ ಘೋಷಣೆ ಮಾಡಿದೆ. ಅಲ್ಲದೇ ದಾವೂದ್ ಇಬ್ರಾಹಿಂ ಸಹಚರರ (‘D’ Company — Ibrahim’s Gang)  ಕುರಿತು ಮಾಹಿತಿ ನೀಡಿದವರಿಗೂ ಸಹ ವಿವಿಧ ನಗದು ಬಹುಮಾನ ನೀಡುವುದಾಗಿ ತಿಳಿಸಿದೆ.

  ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಭಾರತದಲ್ಲಿ ಶಸ್ತ್ರಾಸ್ತ್ರ, ಸ್ಫೋಟಕಗಳು, ಡ್ರಗ್ಸ್ ಮತ್ತು ನಕಲಿ ಭಾರತೀಯ ಕರೆನ್ಸಿ ನೋಟುಗಳನ್ನು (ಎಫ್‌ಐಸಿಎನ್) ಕಳ್ಳಸಾಗಣೆ ಮಾಡಲು ಮತ್ತು ಪಾಕಿಸ್ತಾನಿ ಏಜೆನ್ಸಿಗಳು ಮತ್ತು ಭಯೋತ್ಪಾದಕ ಸಂಘಟನೆಗಳೊಂದಿಗೆ ನಿಕಟ ಸಹಯೋಗದಲ್ಲಿ ಭಯೋತ್ಪಾದಕ ದಾಳಿಗಳನ್ನು ನಡೆಸಲು ಭಾರತದಲ್ಲಿ ಘಟಕವನ್ನು ಸ್ಥಾಪಿಸಲು 'ಡಿ' ಕಂಪನಿ - ಇಬ್ರಾಹಿಂ ಗ್ಯಾಂಗ್‌ ನಡೆಸಿದ ಪ್ರಕರಣಗಳನ್ನು ಒಳಗೊಂಡಿದೆ.

  ಈ ಸಹಚರರ ಬಗ್ಗೆ ಮಾಹಿತಿ ಸಿಕ್ಕರೂ ತಿಳಿಸಿ
  ರಾಷ್ಟ್ರೀಯ ತನಿಖಾ ಸಂಸ್ಥೆ (NIA) ದಾವೂದ್ ಇಬ್ರಾಹಿಂ ಸಹೋದರ ಅನೀಸ್ ಇಬ್ರಾಹಿಂ ಅಲಿಯಾಸ್ ಹಾಜಿ ಅನೀಸ್​ ಬಂಧನಕ್ಕೆ ಉಪಯುಕ್ತ ಆಗಬಲ್ಲ ಮಾಹಿತಿ ನೀಡಿದವರಿಗೂ ಬಹುಮಾನಗಳನ್ನು ಘೋಷಿಸಿದೆ.  ಅಲ್ಲದೇ  ದಾವೂದ್ ಇಬ್ರಾಹಿಂ ಆಪ್ತ ಸಹಾಯಕರಾದ ಜಾವೇದ್ ಪಟೇಲ್ ಅಲಿಯಾಸ್ ಜಾವೇದ್ ಚಿಕ್ನಾ, ಶಕೀಲ್ ಶೇಖ್ ಅಲಿಯಾಸ್ ಛೋಟಾ ಶಕೀಲ್ ಮತ್ತು ಇಬ್ರಾಹಿಂ ಮುಷ್ತಾಕ್ ಅಬ್ದುಲ್ ರಜಾಕ್ ಮೆಮನ್ ಅಲಿಯಾಸ್ ಟೈಗರ್ ಮೆಮನ್ ಕುರಿತು ಮಾಹಿತಿಯ ನೀಡಿದವರಿಗೆ ನಗದು ಬಹುಮಾನ ನೀಡುವುದಾಗಿ ಪ್ರಕಟಣೆ ಹೊರಡಿಸಿದೆ.  

  ಇದನ್ನೂ ಓದಿ: Dinosaur: ಹಿತ್ತಲಿಗೆ ಬಂದ ಡೈನೋಸಾರ್! ಶಾಕ್ ಆದ ಮನೆ ಓನರ್!

  ಯಾರ ಬಗ್ಗೆ ಸುಳಿವು ನೀಡಿದರೆ ಎಷ್ಟು ನಗದು ಬಹುಮಾನ?
  ದಾವೂದ್ ಇಬ್ರಾಹಿಂ ಕುರಿತು ಮಾಹಿತಿ ನೀಡಿದವರಿಗೆ 25 ಲಕ್ಷ ರೂಪಾಯಿ ಬಹುಮಾನ ನೀಡಿದರೆ, ಛೋಟಾ ಶಕೀಲ್‌ಗೆ 20 ಲಕ್ಷ ರೂಪಾಯಿ ಮತ್ತು ಅನೀಸ್, ಚಿಕ್ನಾ ಮತ್ತು ಮೆಮನ್‌ಗೆ ತಲಾ ರೂ. 15 ಲಕ್ಷ  ನಗದು ಬಹುಮಾನವನ್ನು ನೀಡುವುದಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಘೋಷಿಸಿದೆ.

  ಇದನ್ನೂ ಓದಿ: Giridih Jain Temple: 500 ಕೋಟಿ ಹಣ, 10 ವರ್ಷದಿಂದ ಕೆಲಸ! ಇನ್ನೂ ಮುಗಿದಿಲ್ಲ ಈ ದೇಗುಲದ ನಿರ್ಮಾಣ!

  ಈ ಎಲ್ಲರೂ ವಿವಿಧ ಭಯೋತ್ಪಾದನೆ-ಅಪರಾಧ ಚಟುವಟಿಕೆಗಳಾದ ಶಸ್ತ್ರಾಸ್ತ್ರ ಕಳ್ಳಸಾಗಣೆ, ನಾರ್ಕೋ ಭಯೋತ್ಪಾದನೆ, ಭೂಗತ ಪಾತಕಿ ಸಿಂಡಿಕೇಟ್, ಮನಿ ಲಾಂಡರಿಂಗ್, ಎಫ್‌ಐಸಿಎನ್ ಚಲಾವಣೆ, ಭಯೋತ್ಪಾದಕ ನಿಧಿಯನ್ನು ಸಂಗ್ರಹಿಸಲು ಪ್ರಮುಖ ಆಸ್ತಿಗಳ ಅನಧಿಕೃತ ಸ್ವಾಧೀನ ಮತ್ತು ಲಷ್ಕರ್ ಸೇರಿದಂತೆ ಅಂತರರಾಷ್ಟ್ರೀಯ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಕ್ರಿಯ ಸಹಯೋಗದಲ್ಲಿ ತೊಡಗಿಸಿಕೊಂಡಿದ್ದಾನೆ.

  ಕರಾಚಿಯಲ್ಲಿ ಇರುವ ಬಗ್ಗೆ ಸಾಕ್ಷ್ಯ ಸಿಕ್ಕಿತ್ತು
  ಭಾರತದ ಮೋಸ್ಟ್ ವಾಟೆಂಡ್ ಉಗ್ರ ದಾವೂದ್ ಇಬ್ರಾಹಿಂ ಕರಾಚಿಯಲ್ಲಿ ನೆಲೆಸಿದ್ದಾನೆ  ಎಂದು ಈ ಮುನ್ನ ಸಾಕ್ಷ್ಯಗಳು ತಿಳಿಸಿದ್ದವು. ಮಹಾರಾಷ್ಟ್ರದ ಸಚಿವ ನವಾಬ್ ಮಲಿಕ್ (Nawab Malik) ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಪರಾರಿಯಾಗಿರುವ ಉಗ್ರಗಾಮಿ ದಾವೂದ್ ಇಬ್ರಾಹಿಂ ಪಾಕಿಸ್ತಾನದ ಕರಾಚಿ (Karachi, Pakistan) ನಗರದಲ್ಲಿ ನೆಲೆಸಿದ್ದಾನೆ ಎಂದು ಇಡಿ ಎದುರು ಸಾಕ್ಷಿದಾರರು ಹೇಳಿಕೆ ನೀಡಿದ್ದರು. ಜೊತೆಗೆ ದಾವೂದ್ ತನ್ನ ಸಹೋದರರಿಗೆ ಪ್ರತಿ ತಿಂಗಳು 10 ಲಕ್ಷ ರೂ ಕಳುಹಿಸುತ್ತಾನೆ ಎಂದು ಸಹ ಹೇಳಿದ್ದಾರೆ. ಇಬ್ಬರು ಸಾಕ್ಷಿಗಳ ಹೇಳಿಕೆಗಳು ದಾವೂದ್ ಇಬ್ರಾಹಿಂ ಆಸ್ತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಲಿಕ್ ವಿರುದ್ಧ ಜಾರಿ ನಿರ್ದೇಶನಾಲಯ (ED) ಸಲ್ಲಿಸಿದ ಚಾರ್ಜ್ ಶೀಟ್​ನ ಭಾಗವಾಗಿತ್ತು.
  Published by:guruganesh bhat
  First published: