ದೇವೇಂದರ್​​ ಸಿಂಗ್ ಬಳಿ ಬರೋಬ್ಬರಿ 32 ಸಾಮಾಗ್ರಿ ಜಪ್ತಿ: ಟೂತ್​​ ಬ್ರಷ್​​ನಿಂದ ಎ ಕೆ-47 ರೈಫಲ್ ಸಹಿತ ಪೊಲೀಸರ ವಶಕ್ಕೆ

ದೇವಿಂದರ್​​ ಸಿಂಗ್​​​ ಟಾಪ್ ರ್‍ಯಾಂಕರ್. ಕಳೆದ ವರ್ಷ ಆಗಸ್ಟ್​ 15ರಂದು ದೇವಿಂದರ್ ಸಿಂಗ್​ಗೆ ಶೌರ್ಯ ಪ್ರಶಸ್ತಿಯನ್ನು ನೀಡಲಾಯ್ತು. ಶ್ರೀನಗರ ಇಂಟರ್​ನ್ಯಾಷನಲ್ ಏರ್​ಪೋರ್ಟ್​ನಲ್ಲಿ ಆಯಂಟಿ ಹೈಜಾಕಿಂಗ್ ಸ್ಕ್ವಾಡ್​ನಲ್ಲಿ ಡಿಎಸ್​​​ಪಿ ಕಾರ್ಯನಿರ್ವಹಿಸುತ್ತಿದ್ದರು. ಆದರೀಗ ಇಬ್ಬರು ಉಗ್ರೊಂದಿಗೆ ಸಿಕ್ಕಿಬಿದ್ದಿದ್ಧಾರೆ.

ದೇವಿಂದರ್​​ ಸಿಂಗ್

ದೇವಿಂದರ್​​ ಸಿಂಗ್

 • Share this:
  ನವದೆಹಲಿ(ಜ.23): ಮೂವರು ಉಗ್ರರಿಗೆ ಮನೆಯಲ್ಲಿ ಆಶ್ರಯ ನೀಡಿದ್ದ ಮಾಜಿ ಡೆಪ್ಯುಟಿ ಸೂಪರಿಂಟೆಂಡೆಂಟ್ ಆಫ್‌ ಪೊಲೀಸ್‌ ದೇವಿಂದರ್ ಸಿಂಗ್ ಅವ​​ರಿಂದ ಜಪ್ತಿ ಮಾಡಲಾದ ಸಾಮಾಗ್ರಿಗಳ ಪಟ್ಟಿಯನ್ನು ಜಮ್ಮು-ಕಾಶ್ಮೀರ ಪೊಲೀಸರು ಬಿಡುಗಡೆಗೊಳಿಸಿದ್ಧಾರೆ. ದೇವೆಂದರ್​​ ಸಿಂಗ್​​ ಮನೆ ಮತ್ತು ಕಚೇರಿ ಪರಿಶೀಲನೆ ವೇಳೆ ಬರೋಬ್ಬರಿ 32 ಸಾಮಾಗ್ರಿಗಳ ಜಪ್ತಿ ಮಾಡಲಾಗಿದೆ. ಜಪ್ತಿಯಾದ ಸಾಮಾಗ್ರಿಗಳ ಪೈಕಿ ಅತ್ತರ್ ಶೀಶೆಯಿಂದ ಹಿಡಿದು ಎಕೆ 47 ರೈಫಲ್ ತನಕ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

  ಪೊಲೀಸರು ಬಿಡುಗಡೆ ಮಾಡಿದ ಸಾಮಾಗ್ರಿಗಳ ಪಟ್ಟಿ

  • ಎಕೆ 47 ರೈಫಲ್ ಯುಬಿಜಿಎಲ್ ಲಾಂಚರ್

  • 6 ಮ್ಯಾಗಜೀನ್ (ಎಕೆ 47 ರೈಫಲ್ ಗೆ ಸೇರಿದ್ದು)

  • 174 ರೌಂಡ್ಸ್ ಗುಂಡು

  • ಟಿಯರ್ ಗ್ಯಾಸ್ ಗ್ರೆನೇಡ್

  • ಸ್ಕ್ರ್ಯೂ ಡ್ರೈವರ್

  • ಶೇವಿಂಗ್ ಬ್ಲೇಡ್

  • 3 ಮ್ಯಾಗಜೀನ್ (ಪಿಸ್ತೂಲ್)

  • 7 ಸಜೀವ ಪಿಸ್ತೂಲ್ ರೌಂಡ್

  • 10 ಚೈನೀಸ್ ಪಿಸ್ತೂಲ್ ರೌಂಡ್

  • ಸಿಗರೇಟ್ ಲೈಟರ್

  • ಟೇಪ್ ರೋಲ್ಸ್ ಸಣ್ಣದ್ದು

  • ಅತ್ತರ್ ಶೀಶೆ

  • ಕನ್ನಡಿ

  • ಟೂತ್ ಬ್ರಷ್

  • ಸೂಜಿ ದಾರ

  • ಶಸ್ತ್ರಾಸ್ತ್ರ ಸ್ವಚ್ಛಗೊಳಿಸುವ ಎಣ್ಣೆ

  • ನೇಲ್ ಕಟ್ಟರ್

  • 2 ಪೌಂಚ್

  • ಪವರ್ ಬ್ಯಾಂಕ್

  • ಟೇಪ್ ರೋಲ್ಸ್

  • ಬ್ಯಾಂಡ್ ಏಡ್ಸ್

  • ಸನ್ ಸ್ಕ್ರೀನ್

  • ಪೆನ್

  • ಚೈನೀಸ್ ಪಿಸ್ತೂಲು

  • ಯುಎಸ್ ನಿರ್ಮಿತ ಪಿಸ್ತೂಲ್ ಒಂದು ಮ್ಯಾಗಜೀನ್

  • 4 ಯುಬಿಜಿಎಲ್ ಗ್ರೇನೇಡ್

  • ಲೈವ್ ಚೈನೀಸ್ ಗ್ರೇನೆಡ್


  ಈ ಹಿಂದೆಯೇ ಉಗ್ರರಿಗೆ ಮನೆಯಲ್ಲಿ ಆಶ್ರಯ ನೀಡಿದ್ದ ಜಮ್ಮು-ಕಾಶ್ಮೀರದ ಡೆಪ್ಯುಟಿ ಸೂಪರಿಂಟೆಂಡೆಂಟ್ ಆಫ್‌ ಪೊಲೀಸ್‌ ದೇವಿಂದರ್ ಸಿಂಗ್​​ರನ್ನು ಸೇವೆಯಿಂದ ಅಮಾನತು ಮಾಡಲಾಗಿತ್ತು. ಇಲ್ಲಿನ ಬಾದಾಮಿ ಬಾಗ್ ಕಂಟೋನ್ಮೆಂಟ್ ಬಳಿಯ ಎಕ್ಸ್​​ ವಿ ಕಾರ್ಪ್ಸ್ ಸೇನೆಯ ಪ್ರಧಾನ ಕಚೇರಿಯ ಪಕ್ಕದ ತನ್ನ ಮನೆಯಲ್ಲಿ ಮೂವರು ಉಗ್ರರಿಗೆ ದೇವೇಂದರ್​​ ಸಿಂಗ್ ಆಶ್ರಯ ನೀಡಿದ್ದರು. ಹಾಗಾಗಿ ದೇವೇಂದ್ರ ಸಿಂಗ್​​ರನ್ನು ಅಮಾನತು ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದರು.

  ಜನವರಿ 12ನೇ ತಾರೀಕಿನಂದು ಭಾನುವಾರ ಜಮ್ಮು-ಕಾಶ್ಮೀರದ ಡಿವೈಎಸ್​ಪಿ ದೇವಿಂದರ್ ಸಿಂಗ್​​ ಸೇರಿದಂತೆ ಇಬ್ಬರು ಉಗ್ರರ ಬಂಧನವಾಗಿತ್ತು. ದಕ್ಷಿಣ ಕಾಶ್ಮೀರದಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಮತ್ತು ಲಷ್ಕರ್‌– ಇ ತೊಯ್ಬಾ ಸಂಘಟನೆಗೆ ಸೇರಿದ ಇಬ್ಬರು ಉಗ್ರರ ಜತೆಗೆ ಹಿರಿಯ ಪೊಲೀಸ್​ ಅಧಿಕಾರಿ ದೇವಿಂದರ್ ಸಿಂಗ್ ಅವರನ್ನು ವಶಕ್ಕೆ ಪಡೆಯಲಾಗಿತ್ತು. ಕಾನೂನುಬಾಹಿರ ಚಟುವಟಿಕೆ ನಿಯಂತ್ರಣ ಕಾಯ್ದೆಯಡಿ ಮೂವರ ವಿರುದ್ಧ ಎಫ್​​ಐಆರ್​​ ದಾಖಲಿಸಿಕೊಂಡ ಜಮ್ಮು-ಕಾಶ್ಮೀರದ ಪೊಲೀಸರು ವಿಚಾರಣೆ ಮುಂದುವರೆಸಿದ್ದರು.

  ಇದನ್ನೂ ಓದಿ: ಕಾಶ್ಮೀರದ ಬಿಕ್ಕಟ್ಟಿನಲ್ಲಿ ಮೂರನೇ ಶಕ್ತಿಯ ಹಸ್ತಕ್ಷೇಪದ ಪ್ರಶ್ನೆಯೇ ಇಲ್ಲ; ಡೊನಾಲ್ಡ್ ಟ್ರಂಪ್ ಆಫರ್​ ತಿರಸ್ಕರಿಸಿದ ಭಾರತ

  ದೇವಿಂದರ್​​ ಸಿಂಗ್​​​ ಟಾಪ್ ರ್‍ಯಾಂಕರ್. ಕಳೆದ ವರ್ಷ ಆಗಸ್ಟ್​ 15ರಂದು ದೇವಿಂದರ್ ಸಿಂಗ್​ಗೆ ಶೌರ್ಯ ಪ್ರಶಸ್ತಿಯನ್ನು ನೀಡಲಾಯ್ತು. ಶ್ರೀನಗರ ಇಂಟರ್​ನ್ಯಾಷನಲ್ ಏರ್​ಪೋರ್ಟ್​ನಲ್ಲಿ ಆಯಂಟಿ ಹೈಜಾಕಿಂಗ್ ಸ್ಕ್ವಾಡ್​ನಲ್ಲಿ ಡಿಎಸ್​​​ಪಿ ಕಾರ್ಯನಿರ್ವಹಿಸುತ್ತಿದ್ದರು. ಆದರೀಗ ಇಬ್ಬರು ಉಗ್ರೊಂದಿಗೆ ಸಿಕ್ಕಿಬಿದ್ದಿದ್ಧಾರೆ.

  ಪ್ರಾಥಮಿಕ ತನಿಖೆಯಿಂದ ಪೊಲೀಸರಿಗೆ ತಿಳಿದುಬಂದ ಮಾಹಿತಿ ಎಂದರೆ, ಉಗ್ರಗಾಮಿಗಳನ್ನು ಸಾಗಿಸಲು ದವಿಂದರ್ 12 ಲಕ್ಷಕ್ಕೆ ಡೀಲ್ ಕುದುರಿಸಿದ್ದರು. ಹಿರಿಯ ಪೊಲೀಸ್ ಅಧಿಕಾರಿಯ ಕಾರನ್ನು ಯಾರೂ ತಡೆದು ತಪಾಸನೆ ನಡೆಸುವುದಿಲ್ಲವಾದ್ದರಿಂದ ಅವರು ತಮ್ಮ ಕಾರಿನಲ್ಲೇ ಅವರನ್ನು ಸಾಗಿಸುತ್ತಿದ್ದರು. ಹಿಜ್ಬುಲ್ ಕಮಾಂಡರ್ ಆಗಿರುವ ನಾವೀದ್ ಮುಷ್ತಾಕ್ ಅವರು ಹಿಂದೆ ಪೊಲೀಸ್ ಇಲಾಖೆಯಲ್ಲೇ ಇದ್ದವರು. ಈಗ ಉಗ್ರ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. 370ನೇ ವಿಧಿ ರದ್ದಾದ ಬಳಿಕ ಸೇಬು ಸಾಗಿಸುವ ಟ್ರಕ್ ಡ್ರೈವರ್​​ಗಳ ಹತ್ಯೆಯಲ್ಲಿ ಇವರ ಕೈವಾಡ ಇರುವ ಶಂಕೆ ಇದೆ.
  First published: