Gangster-Terror Nexus: ದರೋಡೆಕೋರರು-ಉಗ್ರರಿಗೆ ಸಂಪರ್ಕ; ದೇಶದ 72 ಕಡೆಗಳಲ್ಲಿ ಎನ್‌ಐಎ ದಾಳಿ

ಎನ್‌ಐಎ ಅಧಿಕಾರಿಗಳ ದಾಳಿ

ಎನ್‌ಐಎ ಅಧಿಕಾರಿಗಳ ದಾಳಿ

ಮಂಗಳವಾರ ನಡೆದ ಎನ್‌ಐಎ ದಾಳಿಯಲ್ಲಿ ಹಲವು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇದಲ್ಲದೇ, ಅಪರಾಧಿಗಳಿಗೆ ಪಾಕಿಸ್ತಾನದ ಐಎಸ್‌ಐ ಮತ್ತು ದರೋಡೆಕೋರರ ನಂಟು ಇರುವ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗಿದೆ. ದರೋಡೆಕೋರರನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ನಾಲ್ಕು ಸುತ್ತಿನ ದಾಳಿಗಳನ್ನು ಎನ್‌ಐಎ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

ಮುಂದೆ ಓದಿ ...
  • Share this:

ನವದೆಹಲಿ: ದರೋಡೆಕೋರರು ಮತ್ತು ಭಯೋತ್ಪಾದಕರಿಗೆ ನಂಟು (Gangster Terror Nexus) ಇರುವ ಆರೋಪದ ಮೇಲೆ ವಿವಿಧ ಪ್ರಕರಣಗಳಿಗೆ ಸಂಬಂಧಪಟ್ಟಂತೆ ರಾಷ್ಟ್ರೀಯ ತನಿಖಾ ದಳ (NIA) ದೇಶದ ಒಟ್ಟು 72 ಕಡೆಗಳಲ್ಲಿ ದಾಳಿ (NIA Raid) ನಡೆಸಿದೆ. ಉತ್ತರ ಪ್ರದೇಶ, ಪಂಜಾಬ್, ರಾಜಸ್ಥಾನ್, ಹರ್ಯಾಣ, ದೆಹಲಿ ಎನ್‌ಸಿಆರ್ ಸೇರಿದಂತೆ ವಿವಿಧ ಭಾಗಗಳ ಒಟ್ಟು 72 ಕಡೆಗಳಲ್ಲಿ ಎನ್‌ಐಎ ತಂಡ ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದು, (Crime News) ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದವರಿಗೆ ಅಧಿಕಾರಿಗಳ ತಂಡ ಬಿಸಿ ಮುಟ್ಟಿಸಿದೆ.


ಉತ್ತರ ಪ್ರದೇಶದ ಪಿಲಿಭಿತ್‌ನಲ್ಲಿ ಇರುವ ಶಸ್ತ್ರಾಸ್ತ್ರ ಪೂರೈಕೆದಾರರೊಬ್ಬರ ಮನೆ ಮೇಲೂ ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿದ್ದು, ಈ ವೇಳೆ ಪಾಕಿಸ್ತಾನದಿಂದ ಸರಬರಾಜು ಮಾಡಲಾದ ಈ ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ ಎಂದು ಎನ್‌ಐಎ ಮೂಲಗಳು ತಿಳಿಸಿವೆ. ಖತರ್ನಾಕ್ ರೌಡಿಗಳಾದ ಲಾರೆನ್ಸ್ ಬಿಷ್ಣೋಯ್ ಮತ್ತು ನೀರಜ್ ಬವಾನಾ ಗ್ಯಾಂಗ್‌ಗಳ ಡಜನ್‌ಗಟ್ಟಲೆ ಸಹಚರರನ್ನು ಎನ್‌ಐಎ ಅಧಿಕಾರಿಗಳು ಬಂಧಿಸಿ ವಿಚಾರಣೆ ನಡೆಸಿದ್ದು, ವಿಚಾರಣೆಯ ವೇಳೆ ಸಂಗ್ರಹವಾದ ಮಾಹಿತಿಯ ಆಧಾರದ ಮೇಲೆ ಅಧಿಕಾರಿಗಳು ವಿವಿಧ ಭಾಗಗಳಲ್ಲಿ ದಾಳಿ ನಡೆಸಿದ್ದಾರೆ ಎಂದು ಹೇಳಲಾಗಿದೆ.


ಇದನ್ನೂ ಓದಿ: Pulwama Attack: ಪುಲ್ವಾಮಾ ಉಗ್ರರ ದಾಳಿಗೆ 4 ವರ್ಷ! ಅಷ್ಟಕ್ಕೂ 2019 ಫೆಬ್ರುವರಿ 14ರಂದು ನಡೆದಿದ್ದೇನು?


ಪಾಕಿಸ್ತಾನದ ಐಎಸ್ಐ-ದರೋಡೆಕೋರರಿಗೆ ನಂಟು?


ಮಂಗಳವಾರ ನಡೆದ ಎನ್‌ಐಎ ದಾಳಿಯಲ್ಲಿ ಹಲವು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇದಲ್ಲದೇ, ಅಪರಾಧಿಗಳಿಗೆ ಪಾಕಿಸ್ತಾನದ ಐಎಸ್‌ಐ ಮತ್ತು ದರೋಡೆಕೋರರ ನಂಟು ಇರುವ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗಿದೆ. ದರೋಡೆಕೋರರನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ನಾಲ್ಕು ಸುತ್ತಿನ ದಾಳಿಗಳನ್ನು ಎನ್‌ಐಎ ನಡೆಸಿದೆ ಎಂದು ಮೂಲಗಳು ತಿಳಿಸಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಅನೇಕ ದರೋಡೆಕೋರರನ್ನು ಬಂಧಿಸಲಾಗಿದ್ದು, ಆರೋಪಿಗಳ ವಿರುದ್ಧ ಕಠಿಣ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.


ಕಳೆದ ವರ್ಷ ಅಕ್ಟೋಬರ್‌ ತಿಂಗಳಲ್ಲಿ ಭಯೋತ್ಪಾದಕರು, ದರೋಡೆಕೋರರು ಮತ್ತು ಮಾದಕವಸ್ತು ಕಳ್ಳಸಾಗಣೆದಾರರ ನಡುವಿನ ಜಾಲವನ್ನು ಗುರಿಯಾಗಿಟ್ಟುಕೊಂಡು ಒಟ್ಟು ಐದು ರಾಜ್ಯಗಳ 50 ಕ್ಕೂ ಹೆಚ್ಚು ಸ್ಥಳಗಳಲ್ಲಿ ಎನ್‌ಐಎ ಅಧಿಕಾರಿಗಳ ತಂಡ ದಾಳಿ ನಡೆಸಿತ್ತು. ಭಯೋತ್ಪಾದಕ ಜಾಲಗಳನ್ನು ಮಟ್ಟ ಹಾಕುವುದರ ಜೊತೆಗೆ ಅಂತಹ ಗುಂಪುಗಳಿಗೆ ಸಂದಾಯ ಆಗುವ ಹಣದ ಮೂಲ ಮತ್ತು ವಿವಿಧ ಸೌಕರ್ಯಗಳನ್ನು ಒದಗಿಸುವ ಮೂಲವನ್ನು ಹುಡುಕಿ ಹೊರತೆಗೆಯುವುದಾಗಿ ಎನ್‌ಐಎ ಅಧಿಕಾರಿಗಳು ತಿಳಿಸಿದ್ದಾರೆ.


ಇದನ್ನೂ ಓದಿ: Sharan Pumpwell: ನೀವು ಒಬ್ಬರನ್ನು ಕೊಂದ್ರೆ, ನಾವು ಮೂವರನ್ನು ಕೊಲ್ಲುತ್ತೇವೆ! ಜಿಹಾದ್ ವಿರೋಧಿಸೋ ಭರದಲ್ಲಿ VHP ನಾಯಕನ ವಿವಾದಾತ್ಮಕ ಹೇಳಿಕೆ


ಪಾಕಿಸ್ತಾನದ ಐಎಸ್‌ಐ ಮತ್ತು ದರೋಡೆಕೋರರ ನಡುವಿನ ನಂಟು ಕುರಿತು ಮಾಹಿತಿ ಕಲೆಹಾಕಿದ ಕೇಂದ್ರೀಯ ಸಂಸ್ಥೆ ಇದುವರೆಗೆ ನಾಲ್ಕು ಸುತ್ತಿನ ದಾಳಿಗಳನ್ನು ನಡೆಸಿದ್ದು, ಮಾತ್ರವಲ್ಲದೇ ಅನೇಕ ದರೋಡೆಕೋರರನ್ನು ಬಂಧಿಸಲಾಗಿದೆ.


ಸದ್ಯ ಎನ್‌ಐಎ ಅಧಿಕಾರಿಗಳು ಉತ್ತರ ಪ್ರದೇಶ, ಪಂಜಾಬ್, ರಾಜಸ್ಥಾನ್, ಹರ್ಯಾಣ, ದೆಹಲಿ ಎನ್‌ಸಿಆರ್ ಸೇರಿದಂತೆ ವಿವಿಧ ಭಾಗಗಳ ಒಟ್ಟು 72 ಕಡೆಗಳಲ್ಲಿ ದಾಳಿಯನ್ನು ಮುಂದುವರೆಸಿದ್ದು, ವಿವಿಧ ಭಾಗಗಳಲ್ಲಿ ಅನೇಕ ಶಸ್ತ್ರಾಸ್ತ್ರಗಳು ಸಿಕ್ಕಿವೆ ಅನ್ನೋದು ಬಿಟ್ಟರೆ, ಇನ್ನುಳಿದಂತೆ ಪ್ರಮುಖ ಮಾಹಿತಿಗಳನ್ನು ಅಧಿಕಾರಿಗಳು ಇನ್ನೂ ಬಹಿರಂಗಪಡಿಸಿಲ್ಲ. ಸದ್ಯ ದಾಳಿಯನ್ನು ಮುಂದುವರಿಸಿದ್ದು, ಅಧಿಕಾರಿಗಳ ತಂಡ ದಾಖಲೆಗಳನ್ನು ಪರಿಶೀಲನೆ ನಡೆಸಿವೆ.


ಇದನ್ನೂ ಓದಿ: Theft Case: ಎಚ್ಚರ! ಬೆಂಗಳೂರಿನಲ್ಲಿದೆ ಮನೆಕೆಲಸಕ್ಕೆ ಸೇರುವ ನೆಪದಲ್ಲಿ ದರೋಡೆ ಮಾಡುವ ಖತರ್ನಾಕ್‌ ಗ್ಯಾಂಗ್!

Published by:Avinash K
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು