Akhil Gogoi| ಅಸ್ಸಾಂ ಸಿಎಎ ವಿರೋಧಿ ಗಲಭೆ; ಹೋರಾಟ ಅಖಿಲ್ ಗೊಗೋಯ್​ ವಿರುದ್ಧ ಎಲ್ಲಾ ಪ್ರಕರಣ ಕೈಬಿಟ್ಟ ಎಎನ್​ಐ ಕೋರ್ಟ್

ಅಸ್ಸಾಮಿನ ಪ್ರಮುಖ ರೈತ ಸಂಘಟನೆಯಾದ ಕೃಷಿಕ್ ಮುಕ್ತಿ ಸಂಗ್ರಾಮ್ ಸಮಿತಿ (KMSS)ಯ ನಾಯಕನೂ ಆಗಿರುವ, ಶಾಸಕ ಅಖಿಲ್ ಗೊಗೋಯ್‌ ವಿರುದ್ಧ ಇದ್ದ ಎಲ್ಲಾ ಆರೋಪಗಳನ್ನು ಇಂದು ಎನ್‌ಐಎ ನ್ಯಾಯಾಲಯ ತೆರವುಗೊಳಿಸಿದೆ ಎಂದು ವರದಿಯಾಗಿದೆ.

ಅಖಿಲ್ ಗೊಗೋಯ್.

ಅಖಿಲ್ ಗೊಗೋಯ್.

 • Share this:
  ನವ ದೆಹಲಿ (ಜುಲೈ 01); ಕೇಂದ್ರ ಸರ್ಕಾರದ ಸಿಎಎ (ಪೌರತ್ವ ತಿದ್ದುಪಡಿ ಕಾಯ್ದೆ) ವಿರುದ್ಧ ಡಿಸೆಂಬರ್ 2019ರಿಂದ ರಾಷ್ಟ್ರವ್ಯಾಪಿ ಹೋರಾಟಗಳು ನಡೆಯುತ್ತಿವೆ. ಈ ಪೈಕಿ ಕೊರೋನಾ ಮೊದಲ ಅಲೆಗೂ ಮುಂಚೆಯೇ ಅಸ್ಸಾಂನಲ್ಲಿ ಹೋರಟ ತೀವ್ರ ರೂಪ ಪಡೆದಿದ್ದು, ಜನ ಹೋರಾಟವಾಗಿ ಬದಲಾಗಿತ್ತು. ಪರಿಣಾಮ ಅಸ್ಸಾಂ ವಿದ್ಯಾರ್ಥಿ ಸಂಘಟನೆಗಳು ಕೇಂದ್ರದ ವಿರುದ್ಧ ಒಟ್ಟಾಗಿ ಅಸ್ಸಾಂ ಬಂದ್ ಸಹ ಮಾಡಿದ್ದವು. ಈ ವೇಳೆ ಗಲಭೆ-ಘರ್ಷಣೆಗೂ ಅಸ್ಸಾಂ ಸಾಕ್ಷಿಯಾಗಿತ್ತು. ಹೀಗಾಗಿ ಡಿಸೆಂಬರ್ 2019 ರಲ್ಲಿ ಅಸ್ಸಾಂನಲ್ಲಿ ಹಿಂಸಾತ್ಮಕ ಸಿಎಎ ವಿರೋಧಿ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಶಿವ್‌ಸಾಗರ್ ಶಾಸಕ ಅಖಿಲ್ ಗೊಗೋಯ್‌ ವಿರುದ್ಧ ಯುಎಪಿಎ ಅಡಿಯಲ್ಲಿ ಪ್ರಕರಣವೂ ದಾಖಲಾಗಿತ್ತು. ಆದರೆ, ಈ ಎಲ್ಲಾ ಆರೋಪಗಳನ್ನು ಎನ್ಐಎ (ರಾಷ್ಟ್ರೀಯ ತನಿಖಾ ಸಂಸ್ಥೆ) ವಿಶೇಷ ನ್ಯಾಯಾಲಯ ಇಂದು ತೆರವುಗೊಳಿಸಿದೆ.

  ಅಸ್ಸಾಮಿನ ಪ್ರಮುಖ ರೈತ ಸಂಘಟನೆಯಾದ ಕೃಷಿಕ್ ಮುಕ್ತಿ ಸಂಗ್ರಾಮ್ ಸಮಿತಿ (KMSS)ಯ ನಾಯಕನೂ ಆಗಿರುವ, ಶಾಸಕ ಅಖಿಲ್ ಗೊಗೋಯ್‌ ವಿರುದ್ಧ ಇದ್ದ ಎಲ್ಲಾ ಆರೋಪಗಳನ್ನು ಇಂದು ಎನ್‌ಐಎ ನ್ಯಾಯಾಲಯ ತೆರವುಗೊಳಿಸಿದೆ ಎಂದು ವರದಿಯಾಗಿದೆ.

  ಅಸ್ಸಾಂನಲ್ಲಿ ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಕ್ಕಾಗಿ ರೈತ ಹೋರಾಟಗಾರ ಗೊಗೋಯ್‌ ಡಿಸೆಂಬರ್ 2019 ರಿಂದ ಬಂಧನಕ್ಕೊಳಗಾಗಿದ್ದರು. ಕೆಲವು ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿರುವ ಕಾರಣ ಅವರನ್ನು ಪ್ರಸ್ತುತ ಗುವಾಹಟಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ (ಜಿಎಂಸಿಎಚ್) ದಾಖಲಿಸಲಾಗಿದೆ.

  ಗುವಾಹಟಿಯ ಚಾಂದಮರಿಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಎನ್‌ಐಎ ನ್ಯಾಯಾಲಯ ಅಖಿಲ್ ಗೊಗೋಯ್‌ ಅವರನ್ನು ಬಿಡುಗಡೆ ಮಾಡಿದೆ. ದಿಬ್ರುಗಢ ಜಿಲ್ಲೆಯ ಚಾಬುವಾದಲ್ಲಿ ಎನ್ಐಎ ದಾಖಲಿಸಿದ ಇತರ ಪ್ರಕರಣದಲ್ಲಿ ನ್ಯಾಯಾಲಯವು ಈ ಹಿಂದೆಯೇ ಅವರನ್ನು ಬಿಡುಗಡೆ ಮಾಡಿದೆ ಎಂದು ಗೊಗೋಯ್‌ ಪರ ವಕೀಲ ಶಾಂತನು ಬೋರ್ತಾಕೂರ್ ಹೇಳಿದ್ದಾರೆ.

  ನಿಷೇಧಿತ ಸಿಪಿಐ (ಮಾವೋವಾದಿ)ಯೊಂದಿಗಿನ ಸಂಪರ್ಕವಿದೆ ಎಂದು ಆರೋಪಿಸಿ ದೇಶದ್ರೋಹದ ಆರೋಪದ ಮೇಲೆ ಮತ್ತು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯಡಿ, ಅಖಿಲ್ ಗೊಗೋಯ್‌ ವಿರುದ್ಧ ಎನ್‌ಐಎ ಎರಡು ಪ್ರಕರಣಗಳನ್ನು ದಾಖಲಿಸಿತ್ತು. ಈ ಹಿಂದೆ ಚಾಬುವಾ ಪ್ರಕರಣದಲ್ಲಿ ಅವರನ್ನು ಬಿಡುಗಡೆ ಮಾಡಲಾಗಿದೆ.

  ಈ ಹಿಂದೆ ಜೂನ್​ 17 ರಂದು ಈಶಾನ್ಯ ದೆಹಲಿಯಲ್ಲಿ 2020ರಲ್ಲಿ ನಡೆದ ಕೋಮು ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಹೊರಿಸಿ ಬಂಧಿಸಲಾಗಿದ್ದ ವಿದ್ಯಾರ್ಥಿ ಹೋರಾಟಗಾರರಾದ ನತಾಶಾ ನರ್ವಾಲ್, ದೇವಂಗಾನಾ ಕಾಳಿತಾ ಮತ್ತು ಆಸಿಫ್ ಇಕ್ಬಾಲ್ ತನ್ಹಾ ಅವರಿಗೆ ದೆಹಲಿ ಹೈಕೋರ್ಟ್‌ ಜಾಮೀನು ನೀಡಿ ಆದೇಶಿಸಿತ್ತು.

  ಇದನ್ನೂ ಓದಿ: ಆ್ಯಪ್‌ಗಳಿಂದ ಆರ್ಡರ್‌ ಮಾಡುವಾಗ ಗ್ರಾಹಕರು ಮಾಡುವ ತಪ್ಪುಗಳನ್ನು ಬಹಿರಂಗಪಡಿಸಿದ ಆಹಾರ ವಿತರಣಾ ಏಜೆಂಟ್

  ಕೇಂದ್ರ ಸರ್ಕಾರದ ಜಾರಿಗೆ ತರಲು ಮುಂದಾಗಿರುವ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಕಳೆದ ವರ್ಷ ದೇಶದಾದ್ಯಂತ ಹಲವೆಡೆ ಪ್ರತಿಭಟನೆಗಳು ನಡೆದಿದ್ದವು. ದೆಹಲಿಯ ಶಾಹೀನ್​ ಭಾಗ್ ಪ್ರತಿಭಟನೆ ಎಲ್ಲಾ ಪ್ರತಿಭಟನೆಗಳ ಕೇಂದ್ರವಾಗಿತ್ತು. ಈ ವೇಳೆ ಸಿಎಎ ಪರ ಹೋರಾಟಗಳೂ ಸಹ ಅದೇ ಕಣದಲ್ಲಿ ನಡೆದಿದ್ದವು. ನಂತರ ದಿನಗಳಲ್ಲಿ ಇದು ಕೋಮು ಗಲಭೆಯಾಗಿ ಬದಲಾಗಿ ಇಡೀ ಈಶಾನ್ಯ ದೆಹಲಿ ಹೊತ್ತಿ ಉರಿದದ್ದು ಇಂದು ಇತಿಹಾಸ.

  ಆದರೆ, ದೆಹಲಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಂಜ್ರಾ ತೋಡ್ ಕಾರ್ಯಕರ್ತರಾದ ನತಾಶಾ, ದೇವಂಗಾನಾ ಮತ್ತು ವಿದ್ಯಾರ್ಥಿ ಹೋರಾಟಗಾರ ಆಸಿಫ್‌ ಅವರ ಕೈವಾಡವಿದೆ ಎಂದು ಆರೋಪಿಸಿ ಅವರ ವಿರುದ್ಧ ಯುಎಪಿಎ ಭಯೋತ್ಪಾದನಾ ವಿರೋಧಿ ಕಾನೂನಿನ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

  ಇದನ್ನೂ ಓದಿ: ಸಾರ್ವಜನಿಕರು ಕೋವಿಡ್​ ಮಾರ್ಗಸೂಚಿ ಪಾಲನೆ ಮಾಡುವವರೆಗೆ ಅನ್​ಲಾಕ್​ ಸಾಧ್ಯವಿಲ್ಲ; ಗೌರವ್ ಗುಪ್ತಾ

  ಬಂಧಿತರು ಜಾಮೀನಿಗಾಗಿ ಎಷ್ಟೇ ಓಡಾಡಿದ್ದರೂ ಸಹ ದೆಹಲಿ ಪೊಲೀಸರ ಕಾರಣಕ್ಕೆ ಸೆಷನ್ಸ್ ನ್ಯಾಯಾಲಯ ಅವರನ್ನು ಬಿಡುಗಡೆ ಮಾಡಿರಲಿಲ್ಲ. ಇದರ ವಿರುದ್ದ ವಿದ್ಯಾರ್ಥಿನಿಯರು ಮತ್ತೆ ದೆಹಲಿ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಜೂನ್ 17 ರಂದು ವಿಚಾರಣೆ ನಡೆಸಿ ಆದೇಶ ಬಿಡುಗಡೆ ಮಾಡಿದ್ದ ಕೋರ್ಟ್ ಕೂಡಲೇ ಇಬ್ಬರನ್ನೂ ಬಿಡುಗಡೆ ಮಾಡಬೇಕು ಎಂದು ಆದೇಶಿಸುವ ಮೂಲಕ ಒಂದು ವರ್ಷದ ಜೈಲುವಾಸಕ್ಕೆ ತೆರೆ ಎಳೆದಿತ್ತು.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  Published by:MAshok Kumar
  First published: