ಪುಲ್ವಾಮ ಕೇಸ್​: ಉಗ್ರರಿಗೆ ಆಶ್ರಯ ನೀಡಿದ್ದ ಆರೋಪದ ಮೇಲೆ ತಂದೆ ಮತ್ತು ಮಗಳ ಬಂಧನ

ಇನ್ನು, ಬಾಂಬ್​ ತಯಾರಿಗೆ ಬೇಕಾದ ಕೈಗವಸು, ಬ್ಯಾಟರಿ ಮತ್ತು ಅಮೋನಿಯಮ್​ ಪುಡಿಯನ್ನು ಅಮೆಜಾನ್​ನಿಂದ ಖರೀದಿಸಿದ್ದರು. ಈ ವಸ್ತುಗಳ ಬಳಕೆಯಾಗಿದೆ ಎಂದು ಪ್ರಯೋಗಾಲದಿಂದ ಬಂದ ವರದಿಗಳು ಸಾಬೀತುಪಡಿಸಿವೆ ಎನ್ನುತ್ತಾರೆ ರಾಷ್ಟ್ರೀಯ ತನಿಖಾ ಸಂಸ್ಥೆ ಅಧಿಕಾರಿಗಳು.

news18-kannada
Updated:March 3, 2020, 6:26 PM IST
ಪುಲ್ವಾಮ ಕೇಸ್​: ಉಗ್ರರಿಗೆ ಆಶ್ರಯ ನೀಡಿದ್ದ ಆರೋಪದ ಮೇಲೆ ತಂದೆ ಮತ್ತು ಮಗಳ ಬಂಧನ
ಪ್ರಾತಿನಿಧಿಕ ಚಿತ್ರ
  • Share this:
ನವದೆಹಲಿ(ಮಾ.03): ಒಂದು ವರ್ಷದ ಹಿಂದೆ ಕಾಶ್ಮೀರದ ಪುಲ್ವಾಮದಲ್ಲಿ ರಸ್ತೆಯಲ್ಲಿ ಸಾಗುತ್ತಿದ್ದ ಸೇನಾ ವಾಹನಗಳ ಮೇಲೆ ಉಗ್ರಗಾಮಿಗಳು ಆತ್ಮಾಹುತಿ ದಾಳಿ ನಡೆಸಿದ್ದರು. ಉಗ್ರಗಾಮಿಯೊಬ್ಬ ಕಾರ್​ನಲ್ಲಿ ಬಾಂಬ್ ತುಂಬಿಸಿ ಒಂದು ಸೇನಾ ವಾಹನಕ್ಕೆ ಡಿಕ್ಕಿ ಹೊಡೆದಿದ್ದ. ಆ ಘಟನೆಯಲ್ಲಿ 40 ಮಂದಿ ಬಲಿಯಾಗಿದ್ದರು. ಈ ಘಟನೆಯು ಬಿಜೆಪಿ, ಕಾಂಗ್ರೆಸ್ ಹಾಗೂ ಇತರ ಪಕ್ಷಗಳಿಗೆ ಪರಸ್ಪರ ದಾಳಿಗೆ ಅಸ್ತ್ರವಾಯಿತು. ಇದಾದ ಒಂದು ವರ್ಷದ ನಂತರ ಪುಲ್ವಾಮಾ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ ತಂದೆ ಮತ್ತು ಮಗಳನ್ನು ಬಂಧಿಸಿದೆ.

ಇತ್ತೀಚೆಗಷ್ಟೇ ನಾಲ್ಕು ದಿನಗಳ ಹಿಂದೆ ಪುಲ್ವಾಮಾ ಹಜಿಬಲ್​ ಪ್ರದೇಶ ಮೂಲದ ಪೀರ್​​​ ತಾರೀಕ್​​​​ ಎಂಬಾತನನ್ನು ಬಂಧಿಸಲಾಗಿತ್ತು. ಈಗ ಆತನ ಮಗಳು ಇಂಶಾ ಬಂಧನವಾಗಿದೆ. ಇಬ್ಬರು ಉಗ್ರರಿಗೆ ಆಶ್ರಯ ನೀಡಿ ಬಾಂಬ್​ ತಯಾರಿಸಲು ಸಹಾಯ ಮಾಡಿದ್ದರು ಎಂಬ ಆರೋಪದ ಮೇಲೆ ಬಂಧಿಸಲಾಗಿದೆ.

ಆತ್ಮಾಹುತಿ ದಳದ ಮುಖ್ಯಸ್ಥ ಅದಿಲ್​ ಅಮಹ್ಮದ್​ ದಾರ್​ನಿಗೆ ಆಶ್ರಯ ನೀಡಲಾಗಿತ್ತು. ಹಲವು ಬಾರಿ ಬಂದೂಕು, ಮದ್ದು ಗುಂಡು, ಹಣ ಮತ್ತಿತರ ಸ್ಫೋಟಕ ವಸ್ತುಗಳನ್ನು ಸರಬರಾಜು ಮಾಡಲಾಗಿದೆ. ಅವುಗಳನ್ನು ಪುಲ್ವಾಮಾ ದಾಳಿಗೆ ಬಳಸಲಾಗಿತ್ತು' ಎಂದು ವಿಚಾರಣೆ ವೇಳೆ ಪೀರ್​​ ತಾರೀಕ್​​​ ಬಾಯಿ ಬಿಟ್ಟಿದ್ದಾರೆ. ಹೀಗೆಂದು ರಾಷ್ಟ್ರೀಯ ತನಿಖಾ ಸಂಸ್ಥೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ದೆಹಲಿ ಹಿಂಸಾಚಾರ: ಪ್ರಚೋದನಕಾರಿ ಹೇಳಿಕೆ ಆರೋಪ ಹೊತ್ತ ಬಿಜೆಪಿ ನಾಯಕ ಕಪಿಲ್ ಮಿಶ್ರಾಗೆ ವೈ+ ಭದ್ರತೆ

ಇನ್ನು, ಬಾಂಬ್​ ತಯಾರಿಗೆ ಬೇಕಾದ ಕೈಗವಸು, ಬ್ಯಾಟರಿ ಮತ್ತು ಅಮೋನಿಯಮ್​ ಪುಡಿಯನ್ನು ಅಮೆಜಾನ್​ನಿಂದ ಖರೀದಿಸಿದ್ದರು. ಈ ವಸ್ತುಗಳ ಬಳಕೆಯಾಗಿದೆ ಎಂದು ಪ್ರಯೋಗಾಲದಿಂದ ಬಂದ ವರದಿಗಳು ಸಾಬೀತುಪಡಿಸಿವೆ ಎನ್ನುತ್ತಾರೆ ರಾಷ್ಟ್ರೀಯ ತನಿಖಾ ಸಂಸ್ಥೆ ಅಧಿಕಾರಿಗಳು.

ಕಳೆದ ವರ್ಷ ಫೆ.14ರಂದು ಮಧ್ಯಾಹ್ನ ಸಿಆರ್​​ಪಿಎಫ್​​ ಯೋಧರ ಮೇಲೆ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದ ಅವಂತಿಪೊರ ಎಂಬಲ್ಲಿ ಉಗ್ರರು ಬಾಂಬ್​​ ದಾಳಿ ನಡೆಸಿದ್ದರು. ಕೆಲಸದ ನಿಮಿತ್ತ ವಾಹನವೊಂದರಲ್ಲಿ ತೆರಳುತ್ತಿದ್ದ ಕರ್ತವ್ಯನಿರತ ಯೋಧರ ಮೇಲೆ ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆ ಆತ್ಮಾಹುತಿ ದಾಳಿಕೋರ ಆದಿಲ್ ಅಹ್ಮದ್ ದಾರ್ ಸ್ಫೋಟಕಗಳನ್ನು ತುಂಬಿದ್ದ ಕಾರನ್ನು ಸೇನೆ ವಾಹನಕ್ಕೆ ಡಿಕ್ಕಿ ಹೊಡೆಸಿದ್ದ. ಇದರ ಪರಿಣಾಮ 44 ಸಿಆರ್ ಪಿಎಫ್ ಯೋಧರು ಹುತಾತ್ಮರಾಗಿದ್ದರು.
First published: March 3, 2020, 6:24 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading