HOME » NEWS » National-international » NHRC NOTICE TO ANDHRA AND CENTRAL GOVERNMENT OVER DEATHS AND SUFFERINGS TO SEVERAL PEOPLE DUE TO STYRENE GAS LEAKAGE IN VIZAG SNVS

ವೈಜಾಗ್ ಗ್ಯಾಸ್ ದುರಂತ: ಆಂಧ್ರ ಮತ್ತು ಕೇಂದ್ರ ಸರ್ಕಾರಗಳಿಗೆ ಮಾನವ ಹಕ್ಕು ಆಯೋಗ ನೋಟೀಸ್

Vizag Gas Leak Case: ರಕ್ಷಣಾ ಕಾರ್ಯಾಚರಣೆ ಬಗ್ಗೆ ವಿವರ ನೀಡುವಂತೆ ರಾಜ್ಯ ಸರ್ಕಾರಕ್ಕೆ, ತನಿಖೆ ಸ್ಥಿತಿಗತಿ ಬಗ್ಗೆ ತಿಳಿಸುವಂತೆ ಪೊಲೀಸ್ ಇಲಾಖೆಗೆ, ಹಾಗೂ ಕಾರ್ಖಾನೆಯ ನಿಯಮಬದ್ಧತೆ ಬಗ್ಗೆ ವರದಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮಾನವ ಹಕ್ಕು ಆಯೋಗ ನೋಟೀಸ್ ಕಳುಹಿಸಿದೆ.

news18
Updated:May 7, 2020, 4:52 PM IST
ವೈಜಾಗ್ ಗ್ಯಾಸ್ ದುರಂತ: ಆಂಧ್ರ ಮತ್ತು ಕೇಂದ್ರ ಸರ್ಕಾರಗಳಿಗೆ ಮಾನವ ಹಕ್ಕು ಆಯೋಗ ನೋಟೀಸ್
ಎಲ್​ಜಿ ಪಾಲಿಮರ್ಸ್ ಕಂಪನಿಯ ಆಡಳಿತಾಧಿಕಾರಿಗಳೊಂದಿಗೆ ಸಿಎಂ ಜಗನ್ಮೋಹನ್ ರೆಡ್ಡಿ
  • News18
  • Last Updated: May 7, 2020, 4:52 PM IST
  • Share this:
ಹೈದರಾಬಾದ್(ಮೇ 07): ಆಂಧ್ರಪ್ರದೇಶದ ವಿಶಾಖಪಟ್ಟಣ ನಗರದಲ್ಲಿ ಸ್ಟೈರೀನ್ ಅನಿಲ ಸೋರಿಕೆಯಿಂದಾಗಿ 11 ಮಂದಿ ಸತ್ತು, 5 ಸಾವಿರಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡ ಘಟನೆ ಇಡೀ ದೇಶವನ್ನು ಬೆಚ್ಚಿಬೀಳಿಸಿದೆ. ಇದರ ಬೆನ್ನಲ್ಲೇ ರಾಷ್ಟ್ರೀಯ ಮಾನವ ಹಕ್ಕು ಆಯೋಗವು ಸುವೋ ಮೋಟೋ (ಸ್ವಪ್ರೇರಣೆ) ಪ್ರಕರಣ ದಾಖಲಿಸಿದೆ. ಆಂಧ್ರ ಸರ್ಕಾರ ಮತ್ತು ಕೇಂದ್ರ ಸರ್ಕಾರಕ್ಕೆ ನೋಟೀಸ್ ಜಾರಿ ಮಾಡಿದೆ.

ಎಂಟು ಮಂದಿ ಅಮಾಯಕ ಜನರು ಅಸುನೀಗಿರುವುದು ಹಾಗೂ ಸಾವಿರಾರರು ಜನರು ಅಸ್ವಸ್ಥಗೊಂಡಿರುವುದು ಗಂಭೀರ ಸ್ವರೂಪದ ಮಾನವ ಹಕ್ಕು ಉಲ್ಲಂಘನೆಯಾಗಿದೆ. ಪೀಡಿತ ಜನರ ಬದುಕಿನ ಹಕ್ಕನ್ನು ಕಿತ್ತುಕೊಂಡಂತಾಗಿದೆ. ಕೋವಿಡ್-19 ವೈರಸ್ ಸೋಂಕು ಹರಡುತ್ತಿರುವುದರಿಂದಾಗಿ ದೇಶಾದ್ಯಂತ ಜನರ ಜೀವ ಅಪಾಯದಲ್ಲಿದ್ದು, ಪ್ರತಿಯೊಬ್ಬರೂ ಮನೆಯಲ್ಲೇ ಬಂಧಿಯಾಗಬೇಕಾದ ಸಂದರ್ಭದಲ್ಲೇ ಈ ದುರ್ಘಟನೆ ನಡೆದಿರುವುದು ಜನರಿಗೆ ಆಘಾತ ತಂದಿದೆ ಎಂದು ಮಾನವ ಹಕ್ಕು ಆಯೋಗ ಕಳವಳ ವ್ಯಕ್ತಪಡಿಸಿದೆ.

ಇದನ್ನೂ ಓದಿ: Visakhapatnam Gas Leak: ವಿಶಾಖಪಟ್ಟಣಂ ರಾಸಾಯನಿಕ ಕಾರ್ಖಾನೆಯಲ್ಲಿ ವಿಷಾನಿಲ ಸೋರಿಕೆ; 11 ಸಾವು, 5,000ಕ್ಕೂ ಹೆಚ್ಚು ಜನ ಅಸ್ವಸ್ಥ

ದುರಂತ ಸಂಭವಿಸಿದ ನಂತರ ನಡೆಸಲಾದ ರಕ್ಷಣಾ ಕಾರ್ಯಾಚರಣೆ, ಅಸ್ವಸ್ಥರಿಗೆ ವೈದ್ಯಕೀಯ ಚಿಕಿತ್ಸೆ, ಸಂತ್ರಸ್ತರಿಗೆ ಪರಿಹಾರ ಮತ್ತು ಪುನರ್ವಸತಿ ಇತ್ಯಾದಿ ಕ್ರಮಗಳ ಬಗ್ಗೆ ವಿಸ್ತೃತ ವರದಿ ನೀಡುವಂತೆ ಆಂಧ್ರಪ್ರದೇಶ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ನೋಟೀಸ್ ಹೊರಡಿಸಿದೆ.

ಹಾಗೆಯೇ, ಎಫ್​ಐಆರ್ ದಾಖಲಾಗಿರುವುದು ಮತ್ತು ತನಿಖೆ ಯಾವ ಹಂತದಲ್ಲಿದೆ ಎಂದು ಮಾಹಿತಿ ನೀಡುವಂತೆ ಆಂಧ್ರದ ಡಿಜಿಪಿಗೂ ನೋಟೀಸ್ ಕೊಡಲಾಗಿದೆ. ದುರ್ಘಟನೆ ಸಂಭವಿಸಿದ ಕೆಮಿಕಲ್ ಫ್ಯಾಕ್ಟರಿಯಲ್ಲಿ ಕಾನೂನು ನಿಯಮಾವಳಿಗಳನ್ನು ಸರಿಯಾಗಿ ಪಾಲಿಸಲಾಗಿತ್ತಾ ಎಂಬುದನ್ನು ಪತ್ತೆ ಹಚ್ಚಿ ತನಗೆ ವರದಿ ಸಲ್ಲಿಸಬೇಕು ಎಂದು ಕೇಂದ್ರ ಸರ್ಕಾರಕ್ಕೂ ಸೂಚಿಸಿದೆ. ಹಾಗೂ ನಾಲ್ಕು ವಾರದೊಳಗೆ ಎಲ್ಲರೂ ವರದಿ ಕೊಡಬೇಕು ಎಂದು ನಿರ್ದೇಶಿಸಿದೆ.

ಇದನ್ನೂ ಓದಿ: What is Styrene Gas: ಆಂಧ್ರ ಅನಿಲ ದುರಂತ: ಏನಿದು ಸ್ಟೈರೀನ್ ಗ್ಯಾಸ್? ಅದರಿಂದ ಏನಪಾಯ?

ವಿಶಾಖಪಟ್ಟಣಂನ ನಾಯ್ಡುತೋಟ ಬಳಿಯ ಆರ್.ಆರ್. ವೆಂಕಟಾಪುರಂ ಪ್ರದೇಶದಲ್ಲಿರುವ ಎಲ್​ಜಿ ಪಾಲಿಮರ್ಸ್ ಎಂಬ ರಾಸಾಯನಿಕ ಕಾರ್ಖಾನೆಯಲ್ಲಿ ಇಂದು ಬೆಳಗ್ಗೆ 3 ಗಂಟೆಗೆ ಅನಿಲ ಸೋರಿಕೆಯಾಗಿದೆ. ಲಾಕ್ ಡೌನ್ ಆಗಿ ಹಲವು ದಿನಗಳ ಬಳಿಕ ಈ ಕೆಮಿಕಲ್ ಯೂನಿಟ್ ಕಾರ್ಯಾರಂಭ ಮಾಡಿತ್ತು. ಇಷ್ಟು ದಿನ ತಟಸ್ಥವಿದ್ದರಿಂದ ಉಷ್ಣಾಂಶ ಹೆಚ್ಚಳವಾಗಿ ಸ್ಟೈರೀನ್ ಅನಿಲ ರೂಪ ಪಡೆದು ಸೋರಿಕೆಯಾಗಿರಬಹುದು ಎಂದು ಶಂಕಿಸಲಾಗಿದೆ.ಕಾರ್ಖಾನೆ ಬಳಿ ಇರುವ ಪ್ರದೇಶಗಳಲ್ಲಿ ಜನರು ದಿಢೀರ್ ನಿತ್ರಾಣಗೊಂಡು ಕುಸಿದುಬೀಳುತ್ತಿದ್ದುದು ಕಂಡು ಬಂದಿತು. 11 ಕ್ಕೂ ಮಂದಿ ಸಾವನ್ನಪ್ಪಿದ್ದಾರೆ. 200 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 5 ಸಾವಿರಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದಾರೆ. ಎನ್​ಡಿಆರ್​ಎಫ್ ಮತ್ತು ಎಸ್​ಡಿಆರ್​ಎಫ್ ತಂಡಗಳು ಸ್ಥಳದಲ್ಲಿ ನಿಯೋಜನೆಗೊಂಡು ರಕ್ಷಣಾ ಕಾರ್ಯಾಚರಣೆ ನಡೆಸಿವೆ.

 
First published: May 7, 2020, 4:34 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading