News18 India World Cup 2019

ವಾಯುಮಾಲಿನ್ಯ ತಪಾಸಣೆ ವೇಳೆ ಯಾಮಾರಿಸುತ್ತಿದ್ದ ಫೋಕ್ಸ್​ ವ್ಯಾಗನ್; 500 ಕೋಟಿ ರೂ. ದಂಡ ವಿಧಿಸಿದ ಹಸಿರು ನ್ಯಾಯಾಧೀಕರಣ

ಎಮಿಷನ್​ ಟೆಸ್ಟ್​ ವೇಳೆ ವಾಯು ಮಾಲಿನ್ಯದ ಮಟ್ಟದ ಗೊತ್ತಾಗದ ಹಾಗೆ ಉಪಕರಣವೊಂದನ್ನು ಅಳವಡಿಕೆ ಮಾಡಿದ್ದ ಫೋಕ್ಸ್​ ವ್ಯಾಗನ್ ಕಂಪನಿಗೆ ಎನ್​ಜಿಟಿ 500 ಕೋಟಿ ರೂ. ದಂಡ ವಿಧಿಸಿದೆ.

sushma chakre | news18
Updated:March 7, 2019, 1:19 PM IST
ವಾಯುಮಾಲಿನ್ಯ ತಪಾಸಣೆ ವೇಳೆ ಯಾಮಾರಿಸುತ್ತಿದ್ದ ಫೋಕ್ಸ್​ ವ್ಯಾಗನ್; 500 ಕೋಟಿ ರೂ. ದಂಡ ವಿಧಿಸಿದ ಹಸಿರು ನ್ಯಾಯಾಧೀಕರಣ
ಫೋಕ್ಸ್​ ವ್ಯಾಗನ್​ ಲೋಗೋ
sushma chakre | news18
Updated: March 7, 2019, 1:19 PM IST
ನವದೆಹಲಿ (ಮಾ.7): ತನ್ನ ಕಂಪನಿಯ ಕಾರಿನಲ್ಲಿ ವಾಯುಮಾಲಿನ್ಯ ತಪಾಸಣೆ (ಎಮಿಷನ್​ ಟೆಸ್ಟ್​) ವೇಳೆ ಮಾಲಿನ್ಯದ ಮಟ್ಟ ಗೊತ್ತಾಗದಂತೆ ಮೋಸ ಮಾಡಿದ್ದಕ್ಕಾಗಿ ಫೋಕ್ಸ್​ ವ್ಯಾಗನ್​ ಕಂಪನಿಗೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ (ಎನ್​ಜಿಟಿ) ಬರೋಬ್ಬರಿ 500 ಕೋಟಿ ರೂ. ದಂಡ ವಿಧಿಸಿದೆ.

ಕಾರು ಚಲಾಯಿಸುವಾಗ ಅದರಿಂದ ಎಷ್ಟು ಪ್ರಮಾಣದಲ್ಲಿ ಹೊಗೆ ಹೊರಹೋಗುತ್ತದೆ ಎಂದು ಪರಿಶೀಲಿಸಲು ವಾಯುಮಾಲಿನ್ಯದ ತಪಾಸಣೆ ನಡೆಸಲಾಗುತ್ತದೆ. ಆದರೆ, ಫೋಕ್ಸ್​ ವ್ಯಾಗನ್​ ಕಾರಿನಲ್ಲಿ ಈ ಬಗ್ಗೆ ನಿಖರ ಮಾಹಿತಿ ಗೊತ್ತಾಗದಂತೆ ಉಪಕರಣವೊಂದನ್ನು ಇನ್​ಸ್ಟಾಲ್​ ಮಾಡಿತ್ತು. ಇದರಿಂದಾಗಿ ಎಮಿಷನ್​ ಟೆಸ್ಟ್​ ವೇಳೆ ಖಚಿತವಾದ ಮಾಹಿತಿ ಸಿಗುತ್ತಿರಲಿಲ್ಲ. ಹೀಗಾಗಿ, 500 ಕೋಟಿ ರೂ. ದಂಡ ವಿಧಿಸಲಾಗಿದ್ದು, ಈ ದಂಡವನ್ನು ಪಾವತಿಸಲು 2 ತಿಂಗಳ ಗಡುವು ನೀಡಿ ಹಸಿರು ನ್ಯಾಯಾಧೀಕರಣ ಆದೇಶ ಹೊರಡಿಸಿದೆ.

ವೇದಾಂತ ಸಂಸ್ಥೆಯ ಸ್ಟೆರ್​ಲೈಟ್ ತಾಮ್ರ ಘಟಕದ ಪುನರಾರಂಭಕ್ಕೆ ಸುಪ್ರೀಂಕೋರ್ಟ್ ನಕಾರ

ಇದೇ ರೀತಿ 2018ರ ನವೆಂಬರ್​ನಲ್ಲಿ ಈ ಜರ್ಮನ್ ಆಟೋ ಮೇಜರ್​ಗೆ 100 ಕೋಟಿ ರೂ. ದಂಡ ವಿಧಿಸಲಾಗಿತ್ತು. ಆ ಮೊತ್ತವನ್ನು ಪಾವತಿಸದ ಹಿನ್ನೆಲೆಯಲ್ಲಿ 2019ರ ಜನವರಿ 18ರಂದು 24 ಗಂಟೆಯೊಳಗೆ ದಂಡವನ್ನು ಸಂಪೂರ್ಣವಾಗಿ ಪಾವತಿಸಬೇಕೆಂದು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಆದೇಶ ನೀಡಿತ್ತು. ಅದರ ಬೆನ್ನಲ್ಲೇ ಇದೀಗ ಫೋಕ್ಸ್​ ವ್ಯಾಗನ್ ಕಂಪನಿಗೆ 500 ಕೋಟಿ ರೂ. ದಂಡ ವಿಧಿಸಿದೆ.

ಫೋಕ್ಸ್​ ವ್ಯಾಗನ್​ ಕಂಪನಿಯ ಭಾರತದ ಡೀಸೆಲ್​ ಕಾರುಗಳಲ್ಲಿ ಮೋಸದ ಉಪಕರಣ ಅಳವಡಿಸಿರುವುದರಿಂದ ಪರಿಸರಕ್ಕೆ ಸಾಕಷ್ಟು ಹಾನಿಯಾಗುತ್ತಿದೆ. ಹೀಗಾಗಿ, ಕೇಂದ್ರ ಪರಿಸರ ನಿಯಂತ್ರಣ ಮಂಡಳಿಗೆ (ಸಿಪಿಸಿಬಿ) 100 ಕೋಟಿ ರೂ. ದಂಡ ಕಟ್ಟಬೇಕೆಂದು ಕಳೆದ ವರ್ಷ ನವೆಂಬರ್​ 16ರಂದು ಸೂಚಿಸಿತ್ತು.

First published:March 7, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...