News18 India World Cup 2019

13 ಜನರ ಸಾವಿಗೆ ಕಾರಣವಾದ ಸ್ಟೆರಲೈಟ್​ ಕಾರ್ಖಾನೆ ಮರುಆರಂಭಕ್ಕೆ ಎನ್​ಜಿಟಿ ಆದೇಶ; ಸುಪ್ರೀಂ ಮೆಟ್ಟಿಲೇರಲು ತ.ನಾಡು ನಿರ್ಧಾರ

ಸ್ಟೆರಲೈಟ್​ ಕಾರ್ಖಾನೆಯನ್ನು ಮುಚ್ಚುವಾಗ ಸರ್ಕಾರದಿಂದ ಯಾವುದೇ ನೋಟಿಸ್​ ನೀಡಿಲ್ಲ. ಕಾರ್ಖಾನೆಗಳಿಂದ ಪರಿಸರ ಮಾಲಿನ್ಯವಾಗದ ಹಾಗೆ ತಡೆಗಟ್ಟುವುದು ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಜವಾಬ್ದಾರಿ. ಆದರೆ, ಯಾವ ಮಾನದಂಡವನ್ನೂ ಅನುಸರಿಸದೆ ನೇರವಾಗಿ ಕಾರ್ಖಾನೆಯನ್ನೇ ಮುಚ್ಚಿಸಿರುವುದು ಸರಿಯಲ್ಲ ಎಂದು ಎನ್​ಜಿಟಿ ಹೇಳಿದೆ. 

sushma chakre | news18
Updated:December 15, 2018, 4:10 PM IST
13 ಜನರ ಸಾವಿಗೆ ಕಾರಣವಾದ ಸ್ಟೆರಲೈಟ್​ ಕಾರ್ಖಾನೆ ಮರುಆರಂಭಕ್ಕೆ ಎನ್​ಜಿಟಿ ಆದೇಶ; ಸುಪ್ರೀಂ ಮೆಟ್ಟಿಲೇರಲು ತ.ನಾಡು ನಿರ್ಧಾರ
ಸ್ಟೆರಲೈಟ್​ ಕಾರ್ಖಾನೆ ಮುಂದೆ ನಿಂತಿರುವ ಪೊಲೀಸರು
sushma chakre | news18
Updated: December 15, 2018, 4:10 PM IST
ಚೆನ್ನೈ (ಡಿ. 15): 13 ಜನರ ಸಾವಿಗೆ ಕಾರಣವಾದ ಚೆನ್ನೈನ ತೂತುಕುಡಿಯಲ್ಲಿರುವ ವೇದಾಂತ ಸ್ಟೆರಲೈಟ್ ತಾಮ್ರ ಸಂಸ್ಕರಣ ಕಾರ್ಖಾನೆ ಮುಚ್ಚುವಂತೆ ತಮಿಳುನಾಡು ಸರ್ಕಾರ ಹೊರಡಿಸಿದ್ದ ಆದೇಶವನ್ನು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (ಎನ್​ಜಿಟಿ) ವಜಾಗೊಳಿಸಿ, ಕಾರ್ಖಾನೆ ಮರುಆರಂಭಕ್ಕೆ ಆದೇಶ ನೀಡಿದೆ. ಎನ್​ಜಿಟಿ ಆದೇಶಕ್ಕೆ ಅಚ್ಚರಿ ವ್ಯಕ್ತಪಡಿಸಿರುವ ತಮಿಳುನಾಡು, ಈ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್​ನಲ್ಲಿ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದೆ.

ಸ್ಟೆರಲೈಟ್​ನ ಕಾರ್ಖಾನೆಯಿಂದ ಸುತ್ತಮುತ್ತಲಿನ ನೀರು ಕಲುಷಿತಗೊಂಡಿದೆ. ಜನರು ಮಾಲಿನ್ಯಯುಕ್ತ ನೀರನ್ನು ಬಳಸುವಂತಾಗಿದೆ. ಇದರಿಂದ ಆರೋಗ್ಯದ ಮೇಲೂ ಅಡ್ಡ ಪರಿಣಾಮಗಳು ಉಂಟಾಗುತ್ತಿವೆ. ಹೀಗಾಗಿ ಈ ಘಟಕವನ್ನು ಮುಚ್ಚುವಂತೆ ಕಳೆದ ಮೇ ತಿಂಗಳಲ್ಲಿ ಕುಮರೆಡ್ಡಿಯಾಪುರ ಮತ್ತು ಮಿಲವಿತ್ತನ್ ಪ್ರದೇಶದ ರೈತರು ಬೃಹತ್​ ಪ್ರತಿಭಟನೆ ನಡೆಸಿದ್ದರು. ಈ ವೇಳೆ ನಡೆದ ಗೋಲಿಬಾರ್​ನಲ್ಲಿ 13 ಜನರು ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ಸ್ಟೆರಲೈಟ್​ ತಾಮ್ರ ಸಂಸ್ಕರಣ ಘಟಕವನ್ನು ಮುಚ್ಚುವಂತೆ ತಮಿಳುನಾಡು ಸರ್ಕಾರ ಆದೇಶ ನೀಡಿತ್ತು.

ಆದರೆ, ಇದೀಗ ಕಾರ್ಖಾನೆಯನ್ನು ಪುನಾರಂಭಿಸಲು ಒಪ್ಪಿಗೆ ಸೂಚಿಸಿರುವ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಇನ್ನು 3 ವರ್ಷಗಳಲ್ಲಿ ಅಲ್ಲಿನ ಸುತ್ತಮುತ್ತಲಿನ ಜನರ ಪುನರ್ವಸತಿಗಾಗಿ 100 ಕೋಟಿ ರೂ. ಹಣವನ್ನು ವಿನಿಯೋಗಿಸಬೇಕೆಂದು ಆದೇಶಿಸಿದೆ.

ತಮಿಳುನಾಡು ಮಾಲಿನ್ಯ ನಿಯಂತ್ರಣ ಮಂಡಳಿಗೆ ನಿರ್ದೇಶನ ನೀಡಿರುವ ಎನ್​ಜಿಟಿ ವೇದಾಂತಾ ತಾಮ್ರ ಸಂಸ್ಕರಣ ಕಾರ್ಖಾನೆಯ ಮರು ಆರಂಭದ ಬಗ್ಗೆ 3 ವಾರಗಳೊಳಗೆ ಹೊಸ ಆದೇಶವನ್ನು ಬಿಡುಗಡೆ ಮಾಡಲು ಸೂಚಿಸಿದೆ. ಹಾಗೇ, ಕಂಪನಿಗೆ ಕೂಡ ಕೆಲವು ನಿಬಂಧನೆಗಳನ್ನು ವಿಧಿಸಲಾಗಿದ್ದು, 3 ವರ್ಷಗಳ ಒಳಗೆ 100 ಕೋಟಿ ರೂ. ವಿನಿಯೋಗಿಸಿ ಸುತ್ತಲಿನ ಜನರ ಪುನರ್ವಸತಿಗೆ ನೆರವಾಗಬೇಕೆಂದು ಆದೇಶಿಸಿದೆ. ಅಲ್ಲಿನ ಜನರಿಗೆ ಶುದ್ಧ ನೀರಿನ ಸರಬರಾಜು, ಆಸ್ಪತ್ರೆ, ಆರೋಗ್ಯ ಸೇವೆಯಂತಹ ಕಾರ್ಯಗಳಿಗೆ ಆ ಹಣವನ್ನು ಬಳಸಬಹುದು ಎಂದು ಕೂಡ ಕಂಪನಿಗೆ ಎನ್​ಜಿಟಿ ನಿರ್ದೇಶನ ನೀಡಿದೆ.

ಇದನ್ನೂ ಓದಿ: ಸುಪ್ರೀಂಕೋರ್ಟ್​ಗೆ ಸುಳ್ಳು ದಾಖಲೆ ನೀಡಿದ ಮೋದಿ ಸರ್ಕಾರ, ಮಹಾಲೇಖಪಾಲರು, ಅಟಾರ್ನಿ ಜನರಲ್​ಗೆ ಸಮನ್ಸ್; ಖರ್ಗೆ

ತಮಿಳುನಾಡಿನಲ್ಲಿ ಅಧಿಕಾರದಲ್ಲಿರುವ ಪಳನಿಸ್ವಾಮಿ ಅವರ ಎಐಎಡಿಎಂಕೆ ಸರ್ಕಾರ ದುರಂತ ಸಂಭವಿಸಿದ ಮೇಲೆ ಕಾರ್ಖಾನೆ ನಿಲ್ಲಿಸಿದ್ದರು. ಇದೀಗ ಎನ್​ಜಿಟಿ ಕಾರ್ಖಾನೆ ಮರುಆರಂಭಕ್ಕೆ ಆದೇಶ ನೀಡಿದೆ. ಹೀಗಾಗಿ ಈ ತೀರ್ಪನ್ನು ಪ್ರಶ್ನಿಸಿ, ಸರ್ಕಾರ ಸುಪ್ರೀಂಕೋರ್ಟ್​ನಲ್ಲಿ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದೆ ಎಂದು ಪರಿಸರ ಇಲಾಖೆ ಸಚಿವ ಕೆ.ಸಿ. ಕರುಪ್ಪಣ್ಣನ್ ತಿಳಿಸಿದ್ದಾರೆ. ನಮಗೆ ಈ ಕಾರ್ಖಾನೆ ಮತ್ತೆ ಆರಂಭವಾಗುವುದು ಇಷ್ಟವಿಲ್ಲ. ಇದರಿಂದ ಸಾಕಷ್ಟು ಜನರಿಗೆ ಹಾಗೂ ರೈತರಿಗೆ ಮುಖ್ಯವಾಗಿ ಪರಿಸರದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಅಂತರ್ಜಲವೂ ಕಲುಷಿತವಾಗುತ್ತಿದೆ. ನಮ್ಮ ನಿರ್ಧಾರದಲ್ಲಿ ಗೊಂದಲವಿಲ್ಲ. ಹೀಗಾಗಿ ಸುಪ್ರೀಂಕೋರ್ಟ್​ನಲ್ಲಿ ಮೇಲ್ಮನವಿ ಸಲ್ಲಿಸಲು ಯೋಚಿಸಿದ್ದೇವೆ ಎಂದು ಅವರು ತಿಳಿಸಿದ್ದಾರೆ.
Loading...

ಇದನ್ನೂ ಓದಿ: ಮೇಘಾಲಯದಲ್ಲಿ 700 ಅಡಿ ಆಳದ ಕಲ್ಲಿದ್ದಲು ಗಣಿಯಲ್ಲಿ ಸಿಲುಕಿದ 13 ಕಾರ್ಮಿಕರು; ರಕ್ಷಣೆಗೆ ಹರಸಾಹಸ

ಹಸಿರು ನ್ಯಾಯಾಧಿಕರಣದ ಮೂವರು ಸದಸ್ಯರನ್ನು ಒಳಗೊಂಡ ಸಮಿತಿ ಈ ತೀರ್ಪನ್ನು ನೀಡಿದೆ. ಮೇಘಾಲಯ ಹೈಕೋರ್ಟ್​ ಮುಖ್ಯ ನ್ಯಾಯಮೂರ್ತಿ ತರುಣ್​ ಅಗರ್​ವಾಲ್ ನೇತೃತ್ವದ ಸಮಿತಿ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಸ್ಟೆರಲೈಟ್​ ಕಾರ್ಖಾನೆಯನ್ನು ಮುಚ್ಚುವಾಗ ಸರ್ಕಾರದಿಂದ ಯಾವುದೇ ನೋಟಿಸ್​ ನೀಡಿಲ್ಲ. ವಿಚಾರಣೆಗೂ ಅವಕಾಶ ನೀಡಿಲ್ಲ. ಕಾರ್ಖಾನೆಗಳಿಂದ ಪರಿಸರ ಮಾಲಿನ್ಯವಾಗದ ಹಾಗೆ ತಡೆಗಟ್ಟುವುದು ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಜವಾಬ್ದಾರಿ. ಆದರೆ, ಯಾವ ಮಾನದಂಡವನ್ನೂ ಅನುಸರಿಸದೆ ನೇರವಾಗಿ ಕಾರ್ಖಾನೆಯನ್ನೇ ಮುಚ್ಚಿಸಿರುವುದು ಸರಿಯಲ್ಲ ಎಂದು ಹೇಳಿದೆ.

ಇದನ್ನೂ ಓದಿ: ಮಾರಮ್ಮ ಪ್ರಸಾದಕ್ಕೆ ವಿಷ: ಬಣ ರಾಜಕೀಯಕ್ಕೆ ಬಲಿಯಾದವೇ ಅಮಾಯಕ ಜೀವಗಳು?

ದೇಶದ ತಾಮ್ರದ ಉತ್ಪಾದನೆಯಲ್ಲಿ ಶೇ. 40ರಷ್ಟು ತಾಮ್ರವನ್ನು ಸ್ಟೆರಲೈಟ್​ ಕಾರ್ಖಾನೆಯಲ್ಲೇ ಉತ್ಪಾದಿಸಲಾಗುತ್ತಿತ್ತು. ಅಂದಾಜು 10 ಲಕ್ಷ ಟನ್​ ತಾಮ್ರವನ್ನು ಉತ್ಪಾದನೆ ಮಾಡಲಾಗುತ್ತಿತ್ತು. ಈ ಕಾರ್ಖಾನೆಯಿಂದ ಪರಿಸರದ ಮೇಲೆ ಬಹಳ ಹಾನಿಯುಂಟಾಗಿರುವ ಕಾರಣ 2.5 ಕೋಟಿ ರೂ. ಮೊತ್ತವನ್ನು ಮುಂಗಡವಾಗಿ ಕಟ್ಟಿ ಮತ್ತೆ ಕಾರ್ಖಾನೆಯನ್ನು ಆರಂಭಿಸಲು ವೇದಾಂತಾಸ್​ ಸ್ಟೆರಲೈಟ್​ಗೆ ಸೂಚಿಸಲಾಗಿದೆ.

ಕಳೆದ ಮೇ ತಿಂಗಳಲ್ಲಿ ರೈತರಿಂದ ಪ್ರತಿಭಟನೆಯಾದ ನಂತರ ಸರ್ಕಾರ ಈ ಕಾರ್ಖಾನೆಗೆ ವಿದ್ಯುತ್​ ಸಂಪರ್ಕವನ್ನು ಕಡಿತಗೊಳಿಸಿತ್ತು. ಇದೀಗ ಎನ್​ಜಿಟಿ ಈ ಬಗ್ಗೆ ವಿಚಾರಣೆ ನಡೆಸಿದ್ದು, ಪರಿಸರಕ್ಕೆ ಹಾನಿ ಉಂಟುಮಾಡದ ಹಾಗೆ ಕಾರ್ಖಾನೆ ಭರವಸೆ ನೀಡಿದರೆ ಮಾತ್ರ ಸ್ಟೆರಲೈಟ್​ ಕಾರ್ಖಾನೆಗೆ ಮತ್ತೆ ವಿದ್ಯುತ್​ ಸಂಪರ್ಕ ಕಲ್ಪಿಸಲು ಸರ್ಕಾರಕ್ಕೆ ಆದೇಶ ನೀಡಿದೆ.

First published:December 15, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...