• ಹೋಂ
 • »
 • ನ್ಯೂಸ್
 • »
 • ದೇಶ-ವಿದೇಶ
 • »
 • News18 Survey: ಕಳೆದ 10 ವರ್ಷಗಳಲ್ಲಿ ಪದ್ಮ ಪ್ರಶಸ್ತಿಗಳು ಅರ್ಹರಿಗೆ ಸಿಗುತ್ತಿವೆಯಾ? ನ್ಯೂಸ್ 18 ಸಮೀಕ್ಷೆಯಲ್ಲಿ ಜನ ಹೇಳಿದ್ದೇನು?

News18 Survey: ಕಳೆದ 10 ವರ್ಷಗಳಲ್ಲಿ ಪದ್ಮ ಪ್ರಶಸ್ತಿಗಳು ಅರ್ಹರಿಗೆ ಸಿಗುತ್ತಿವೆಯಾ? ನ್ಯೂಸ್ 18 ಸಮೀಕ್ಷೆಯಲ್ಲಿ ಜನ ಹೇಳಿದ್ದೇನು?

ರೈಸಿಂಗ್ ಇಂಡಿಯಾ ಶೃಂಗಸಭೆ

ರೈಸಿಂಗ್ ಇಂಡಿಯಾ ಶೃಂಗಸಭೆ

ಕಳೆದ ದಶಕದಲ್ಲಿ ಭಾರತದಲ್ಲಿ ಆರೋಗ್ಯ ಮತ್ತು ಮೂಲಸೌಕರ್ಯಗಳಲ್ಲಿ (Health and Infra in the Past Decade) ಗಮನಾರ್ಹ ಸುಧಾರಣೆಯನ್ನು ಕಂಡಿದೆ ಮತ್ತು ಪದ್ಮ ಗೌರವ ಅರ್ಹರಿಗೆ ಸಿಗುತ್ತಿದೆ ಎಂದು ಜನರು ಅಭಿಪ್ರಾಯ ವ್ಯಕ್ತಪಡಿಸಿದ್ಧಾರೆ.

 • News18 Kannada
 • 5-MIN READ
 • Last Updated :
 • Mumbai, India
 • Share this:

ನವದೆಹಲಿ: ರೈಸಿಂಗ್ ಇಂಡಿಯಾ ಶೃಂಗಸಭೆ ಸಂದರ್ಭದಲ್ಲಿ ನ್ಯೂಸ್ 18 ನಡೆಸಿದ ಆನ್‌ಲೈನ್ ಸಮೀಕ್ಷೆ (News18 Survey) ವೇಳೆ, ಕಳೆದ ದಶಕದಲ್ಲಿ ಭಾರತದಲ್ಲಿ ಆರೋಗ್ಯ ಮತ್ತು ಮೂಲಸೌಕರ್ಯಗಳಲ್ಲಿ (Health and Infra in the Past Decade) ಗಮನಾರ್ಹ ಸುಧಾರಣೆಯನ್ನು ಕಂಡಿದೆ ಮತ್ತು ಪದ್ಮ ಗೌರವ ಅರ್ಹರಿಗೆ ಸಿಗುತ್ತಿದೆ ಎಂದು ಜನರು ಉತ್ತರಿಸಿದ್ದಾರೆ. ರೈಸಿಂಗ್ ಇಂಡಿಯಾ ಸಮ್ಮಿಟ್​ 2023ರ (Rising India Summit) ವೇಳೆ ಆನ್​ಲೈನ್​ನಲ್ಲಿ ಸಮೀಕ್ಷೆ ನಡೆಸಲಾಗಿತ್ತು. Instagram ಮತ್ತು Twitter ನಲ್ಲಿ ಜನರಿಗೆ 2 ಪ್ರಶ್ನೆಗಳಿಗೆ ಪ್ರತಿಕ್ರಿಯೆಯನ್ನು ಕೇಳಲಾಗಿತ್ತು ಮೊದಲ ಪ್ರಶ್ನೆಯಲ್ಲಿ ಕಳೆದ ದಶಕದಲ್ಲಿ ಪದ್ಮ ಪ್ರಶಸ್ತಿಗಳಂತಹ ಗೌರವಗಳು ಹೆಚ್ಚು ಪ್ರಜಾಪ್ರಭುತ್ವವಾಗಿವೆ ಎಂದು ನೀವು ಭಾವಿಸುತ್ತೀರಾ? ಸಾಮಾನ್ಯ ಭಾರತೀಯರು ತಮ್ಮ ಸೇವೆಗಾಗಿ ಗುರುತಿಸಲ್ಪಡುತ್ತಿದ್ದಾರೆಯೇ? ಎಂದು ಕೇಳಲಾಗಿತ್ತು. ಎರಡನೇ ಪ್ರಶ್ನೆಯಲ್ಲಿ 'ಸರ್ಕಾರಿ ನೀತಿಗಳು ಭಾರತವನ್ನು ಉತ್ಪಾದನಾ ಸೂಪರ್ ಪವರ್ ಮಾಡಬಹುದೇ? ಪ್ರಶ್ನೆ ಕೇಳಲಾಗಿತ್ತು.


ಈ ಪ್ರಶ್ನೆಗಳಿಗೆ 1. ಹೌದು, 2. ಸ್ವಲ್ಪಮಟ್ಟಿಗೆ, 3. ಇಲ್ಲ ಮತ್ತು 4. ಹೇಳಲು ಸಾಧ್ಯವಿಲ್ಲ ಎಂಬ ಬಹು ಆಯ್ಕೆಗಳ ಉತ್ತರವನ್ನು ನೀಡಲಾಗಿತ್ತು. 'News18 ರೈಸಿಂಗ್ ಇಂಡಿಯಾ ಸಮ್ಮಿಟ್ 2023' ಅನ್ನು ಹಿಂದೂಸ್ತಾನ್ ಟೈಮ್ಸ್‌ನ ಸಹಭಾಗಿತ್ವದಲ್ಲಿ, ಆರ್​ಐಎಲ್, ಡಿಜಿಟಲ್ ಪಾಲುದಾರ ಹ್ಯಾವೆಲ್ಸ್ ಮತ್ತು ಸಾಮಾಜಿಕ ನಾವೀನ್ಯತೆ ಪಾಲುದಾರ M3M ಫೌಂಡೇಶನ್‌ನ ಸಹಯೋಗದೊಂದಿಗೆ ಪೂನಾವಲಾ ಫಿನ್‌ಕಾರ್ಪ್ ಪ್ರಸ್ತುತಪಡಿತ್ತು ಇದರ ಮೂರನೇ ಆವೃತ್ತಿಯನ್ನು ಮಾರ್ಚ್ 29 ಮತ್ತು 30 ರಂದು ದೆಹಲಿಯ ತಾಜ್ ಪ್ಯಾಲೇಸ್‌ನಲ್ಲಿ ಆಯೋಜಿಸಲಾಗಿತ್ತು.


ಅರ್ಹರಿಗೆ ಪದ್ಮಶ್ರೀ ಪ್ರಶಸ್ತಿ ಸಿಗುತ್ತಿದೆ ಎಂದ ಜನರು


ಪದ್ಮ ಪ್ರಶಸ್ತಿಗಳು ಮತ್ತು ಸಾಮಾನ್ಯ ಭಾರತೀಯರಿಗೆ ಮನ್ನಣೆಯ ಬಗ್ಗೆ ಕೇಳಿದ್ದ ಪ್ರಶ್ನೆಗೆ, ಇನ್​ಸ್ಟಾಗ್ರಾಮ್​ನಲ್ಲಿ 50 ಪ್ರತಿಶತದಷ್ಟು ಜನರು ಪ್ರತಿಷ್ಠಿತ ಗೌರವವು ಖಂಡಿತವಾಗಿಯೂ ಹೆಚ್ಚು ಪ್ರಜಾಪ್ರಭುತ್ವವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಶೇ.19ರಷ್ಟು ಜನರು 'ಸ್ವಲ್ಪಮಟ್ಟಿಗೆ' ಎಂದು ತಿಳಿಸಿದ್ದಾರೆ. 16 ರಷ್ಟು ಜನರು 'ಇಲ್ಲ' ಎಂಬ ಆಯ್ಕೆಯನ್ನು ಆರಿಸಿಕೊಂಡಿದ್ದಾರೆ. ಶೇ. 15% ಜನರು 'ಹೇಳಲು ಸಾಧ್ಯವಿಲ್ಲ' ಎಂದು ಹೇಳಿದ್ದಾರೆ. ಟ್ವಿಟರ್‌ನಲ್ಲಿ ಈ ಅಂಕಿಅಂಶಗಳು ಕ್ರಮವಾಗಿ ಶೇ.83.10, ಶೇ.2.80, ಶೇ.9.90 ಮತ್ತು ಶೇ.4.20 ಎಂದು ಬಂದಿದೆ.


ಕಳೆದ ದಶಕದಲ್ಲಿ ಪದ್ಮ ಪ್ರಶಸ್ತಿಗಳಂತಹ ನಾಗರಿಕ ಪ್ರಶಸ್ತಿಗಳು ಹೆಚ್ಚು ಪ್ರಜಾಪ್ರಭುತ್ವೀಕರಣಗೊಂಡಿವೆ ಮತ್ತು ಸಾಮಾನ್ಯ ಭಾರತೀಯರು ಈ ಪ್ರಶಸ್ತಿಗಳ ಮೂಲಕ ತಮ್ಮ ಆದರ್ಶಪ್ರಾಯ ಕೆಲಸಕ್ಕಾಗಿ ಗೌರವ ಮತ್ತು ಮನ್ನಣೆಯನ್ನು ಪಡೆಯುತ್ತಿದ್ದಾರೆ ಎಂಬ ಪ್ರಶ್ನೆಗೆ Instagram ಸರ್ವೆಯಲ್ಲಿ ಪಾಲ್ಗೊಂಡವರಲ್ಲಿ ಶೇಕಾಡ 50ರಷ್ಟು ಜನರು ಹೌದು ಎಂದು ಪ್ರತಿಕ್ರಿಯಿಸಿದ್ದಾರೆ. ಶೇ.19ರಷ್ಟು ಜನರು ಸ್ವಲ್ಪಮಟ್ಟಿಗೆ ಎಂದು ಹೇಳಿದ್ದಾರೆ. 16 ರಷ್ಟು ಜನರು 'ಇಲ್ಲ' ಎಂಬುದ್ದನ್ನ ಆಯ್ಕೆ ಮಾಡಿದ್ದರೆ, ಶೇ.15% ಜನರು 'ಹೇಳಲು ಸಾಧ್ಯವಿಲ್ಲ' ಎಂದು ಹೇಳಿದ್ದಾರೆ. ಟ್ವಿಟರ್‌ನಲ್ಲಿ ಇದೇ ಪ್ರಶ್ನೆಗೆ ಕ್ರಮವಾಗಿ ಶೇ.83.10, ಶೇ.2.80, ಶೇ.9.90 ಮತ್ತು ಶೇ.4.20 ಎಂದು ಫಲಿತಾಂಶ ಬಂದಿದೆ.


ಸರ್ಕಾರಿ ನೀತಿಗಳ ಪರ ಹೆಚ್ಚಿನ ಜನರ ಬ್ಯಾಟಿಂಗ್


ನ್ಯೂಸ್ 18 ಸಮೀಕ್ಷೆಯ ಎರಡನೇ ಪ್ರಶ್ನೆ, " ಸರ್ಕಾರಿ ನೀತಿಗಳು ಭಾರತವನ್ನು ಉತ್ಪಾದನಾ ಸೂಪರ್ ಪವರ್ ಮಾಡಬಹುದೇ? ಎಂದು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಲಾಗಿತ್ತು. ಈ ಪ್ರಶ್ನೆಗೆ ಹೌದು, ಹೇಳಬಹುದು, ಸುಧಾರಣೆ ಅಗತ್ಯವಿದೆ ಎಂಬ 3 ಆಯ್ಕೆಗಳನ್ನು ನೀಡಲಾಗಿತ್ತು. ಇದಕ್ಕೆ ಶೇ. 57.90% ಜನರು ಸರ್ಕಾರದ ಪ್ರಸ್ತುತ ನೀತಿಗಳು ಭಾರತವನ್ನು ಉತ್ಪಾದನಾ ಸೂಪರ್ ಪವರ್ ಮಾಡಬಹುದು ಎಂದು ನಂಬಿದ್ದಾರೆ. ಶೇ. 10.50% ಜನರು 'ಹೇಳಬಹುದು' ಆಯ್ಕೆಯನ್ನು ಆರಿಸಿಕೊಂಡಿದ್ದರೆ, 31.60% ಜನರು ಭಾರತವನ್ನು ಉತ್ಪಾದನಾ ಸೂಪರ್ ಪವರ್ ಮಾಡಲು ಅಸ್ತಿತ್ವದಲ್ಲಿರುವ ನೀತಿಗಳನ್ನು ಸುಧಾರಿಸುವ ಅಗತ್ಯವಿದೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.


ಆರೋಗ್ಯ ಮತ್ತು ಮೂಲ ಸೌಕರ್ಯದಲ್ಲಿ ಸುಧಾರಣೆ


ಕಳೆದ ದಶಕದಲ್ಲಿ ಭಾರತವು ಯಾವ ಕ್ಷೇತ್ರದಲ್ಲಿ ಆಡಳಿತದಲ್ಲಿ ಗಮನಾರ್ಹ ಸುಧಾರಣೆಯನ್ನು ಕಂಡಿದೆ ಎಂದು ನೀವು ಭಾವಿಸುತ್ತೀರಿ? ಎಂಬ 3ನೇ ಪ್ರಶ್ನೆಗೆ ಆರೋಗ್ಯ ಮತ್ತು ಮೂಲ ಸೌಕ, ಉದ್ಯೋಗಗಳು, ಮಹಿಳಾ ಕಲ್ಯಾಣ ಮತ್ತು ಈ ಎಲ್ಲಾ ಕ್ಷೇತ್ರಗಳಲ್ಲೂ ಆಯ್ಕೆಗಳನ್ನ ನೀಡಲಾಗಿತ್ತು. ಈ ಸಮೀಕ್ಷೆಯಲ್ಲಿ ಜನರು ಉತ್ಸಾಹದಿಂದ ಪಾಲ್ಗೊಂಡು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


ಶೇಕಡಾ 30 ರಷ್ಟು ಜನರು ಭಾರತವು ಆರೋಗ್ಯ ಮತ್ತು ಮೂಲ ಸೌಕರ್ಯ ಆಡಳಿತದಲ್ಲಿ ಗಮನಾರ್ಹ ಸುಧಾರಣೆಯನ್ನು ಕಂಡಿದೆ ಎಂದು ಹೇಳಿದ್ದಾರೆ, ಆದರೆ 24 ಶೇಕಡಾ ಜನರು ಶಿಕ್ಷಣ ಮತ್ತು ಉದ್ಯೋಗಗಳ ಪರವಾಗಿ ಮತ ಹಾಕಿದ್ದಾರೆ. ಮಹಿಳಾ ಕಲ್ಯಾಣಕ್ಕೆ ಶೇಕಡಾ 16 ರಷ್ಟು ಮತಗಳು ಬಂದರೆ, ಉಳಿದ ಶೇಕಡಾ 30 ರಷ್ಟು ಮಂದಿ ಮೇಲಿನ ಎಲ್ಲಾ ಎಂದು ಮತ ಚಲಾಯಿಸಿದ್ದಾರೆ.


ಟ್ವಿಟರ್​ನಲ್ಲಿ ಶೇಕಡಾ 44.10 ಪ್ರತಿಸ್ಪಂದಕರು ಆರೋಗ್ಯ ಮತ್ತು ಮೂಲಸೌಕರ್ಯಕ್ಕೆ ಮತ ಹಾಕಿದ್ದಾರೆ. ಶೇ. 8.60 ರಷ್ಟು ಜನರು ಶಿಕ್ಷಣ ಮತ್ತು ಉದ್ಯೋಗಕ್ಕೆ, ಶೇ. 4.30 ಜನರು ಮಹಿಳಾ ಕಲ್ಯಾಣಕ್ಕೆ ಮತ್ತು ಶೇಕಡಾ 43 ರಷ್ಟು ಮೇಲಿನ ಎಲ್ಲಾ ವಿಷಯಗಳು ಎಂದು ಮತ ಹಾಕಿದ್ದಾರೆ.


'ನ್ಯೂಸ್ 18 ರ ರೈಸಿಂಗ್ ಇಂಡಿಯಾ ಇನಿಶಿಯೇಟಿವ್' ಚಿಂತನೆಯ ನಾಯಕತ್ವವನ್ನು ಉತ್ತೇಜಿಸುವ ಮೂಲತತ್ವದೊಂದಿಗೆ - ವಿಮರ್ಶಾತ್ಮಕ ಸಂಭಾಷಣೆಗಳು, ಅನೇಕ ಆವಿಷ್ಕಾರಗಳು ಮತ್ತು ಭವಿಷ್ಯವು ಏನನ್ನು ಹೊಂದಿದೆ ಎಂಬುದನ್ನು ದೇಶಕ್ಕೆ ಪರಿಚಯಿಸುವುದರ ಮೇಲೆ ಕೇಂದ್ರೀಕರಿಸಿದೆ. ಮಾರ್ಚ್ 29 ಮತ್ತು 30 ರಂದು ನವದೆಹಲಿಯಲ್ಲಿ ನಡೆದ ಈ ಶೃಂಗಸಭೆಯು 'ದಿ ಹೀರೋಸ್ ಆಫ್ ರೈಸಿಂಗ್ ಇಂಡಿಯಾ' ವಿಷಯವಾಗಿತ್ತು ಮತ್ತು 'ಅಸಾಧಾರಣ ಸಾಮಾಜಿಕ ಪರಿಣಾಮ' ಮಾಡಿದ 'ಸಾಮಾನ್ಯ ಜನರ' ಗಮನಾರ್ಹ ಸಾಧನೆಗಳನ್ನು ಗುರುತಿಸಿ ಸನ್ಮಾನ ಮಾಡಲಾಗಿತ್ತು.

First published: