News18 Public Sentimeter on China: ಚೀನಾ ವಸ್ತುಗಳನ್ನು ಬಹಿಷ್ಕರಿಸಿ; ಡ್ಯ್ರಾಗನ್ ರಾಷ್ಟ್ರದ ವಿರುದ್ಧ ಭಾರತೀಯರ-ಕನ್ನಡಿಗರ ಆಕ್ರೋಶ

ಚೀನಾ ವಸ್ತುಗಳನ್ನು ನಿಷೇಧಿಸುವ ಮೂಲಕ ಆ ದೇಶದ ಆರ್ಥಿಕತೆಗೆ ಪೆಟ್ಟು ನೀಡಬಹುದು ಎಂದು ಜನಾಭಿಪ್ರಾಯ ರೂಪುಗೊಂಡಿದೆ. ಅದರಲ್ಲೂ ಶೇ.97 ರಷ್ಟು ಮರಾಠಿಗಳು ಒಮ್ಮತದಿಂದ ಈ ಅಭಿಪ್ರಾಯವನ್ನು ಮುಂದಿಟ್ಟಿದ್ದಾರೆ. ಆದರೆ, ದೇಶಾದ್ಯಂತ ಶೇ.4 ರಷ್ಟು ಜನ ಮಾತ್ರ ಚೀನಾದ ವಸ್ತುಗಳನ್ನು ಬಳಸುವುದರಿಂದ ಸಮಸ್ಯೆ ಇಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

MAshok Kumar | news18-kannada
Updated:June 5, 2020, 10:08 PM IST
News18 Public Sentimeter on China: ಚೀನಾ ವಸ್ತುಗಳನ್ನು ಬಹಿಷ್ಕರಿಸಿ; ಡ್ಯ್ರಾಗನ್ ರಾಷ್ಟ್ರದ ವಿರುದ್ಧ ಭಾರತೀಯರ-ಕನ್ನಡಿಗರ ಆಕ್ರೋಶ
ಪ್ರಾತಿನಿಧಿಕ ಚಿತ್ರ.
  • Share this:
ಭಾರತ-ಚೀನಾ ಗಡಿ ಸಮಸ್ಯೆ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಲೇ ಇದೆ. ಇಡೀ ದೇಶ ಇದೀಗ ಕೊರೋನಾ ಸಂಕಷ್ಟದಲ್ಲಿ ಸಿಲುಕಿರುವ ಸಂದರ್ಭದಲ್ಲಿ ಚೀನಾ ಭಾರತದ ಜೊತೆಗೆ ಪದೇ ಪದೇ ಖ್ಯಾತೆ ತೆಗೆಯುತ್ತಿರುವುದು ಭಾರತದ 130 ಕೋಟಿ ಜನರ ಕೆಂಗಣ್ಣಿಗೆ ಗುರಿಯಾಗಿದೆ. ಪರಿಣಾಮ ಭಾರತೀಯರು-ಕನ್ನಡಿಗರು ಚೀನಾ ವಸ್ತುಗಳನ್ನು ಬಹಿಷ್ಕರಿಸಿ ಎಂಬ ಕರೆ ನೀಡಿದ್ದಾರೆ.

ಭಾರತ-ಚೀನಾ ವಿದೇಶಾಂಗ ಸಂಬಂಧ ಹದಗೆಡುತ್ತಿರುವ ಹಿನ್ನೆಲೆಯಲ್ಲಿ ಸಿಬಿಎನ್‌ಸಿ-ಟಿವಿ18 ನೆಟ್‌ವರ್ಕ್‌ ಸಮೂಹ ಒಂದು ಸಮೀಕ್ಷೆಯನ್ನು ನಡೆಸಿತ್ತು. ಈ ಸಮೀಕ್ಷೆಯಲ್ಲಿ ಭಾರತ-ಚೀನಾ ರಾಜತಾಂತ್ರಿಕ ನೀತಿ ಮತ್ತು ಗಡಿ ವಿವಾದದ ಸೇರಿದಂತೆ 21 ಪ್ರಶ್ನೆಗಳನ್ನು ಕೇಳಲಾಗಿತ್ತು. ಡಿಜಿಟಲ್ ಮಾಧ್ಯಮದ ಮೂಲಕ 4 ದಿನ ನಡೆಸಲಾದ ಈ ಸಮೀಕ್ಷೆಯಲ್ಲಿ 16 ವೆಬ್‌ಸೈಟಿನಲ್ಲಿ 13 ಭಾಷಿಕರು 31 ಸಾವಿರ ಜನ ಪಾಲ್ಗೊಂಡು ತಮ್ಮ ಅಭಿಪ್ರಾಯವನ್ನು ಮುಂದಿಟ್ಟಿದ್ದಾರೆ. ಅದರ ವಿವರ ಇಲ್ಲಿದೆ….

ಚೀನಾ ವಸ್ತುಗಳನ್ನು ಬಹಿಷ್ಕರಿಸಿ:

ಈ ಸಮೀಕ್ಷೆಯಲ್ಲಿ ಪಾಲ್ಗೊಂಡ ಭಾರತೀಯರ ಪೈಕಿ ಶೇ. 91 ರಷ್ಟು ಭಾರತೀಯರು ಮತ್ತು ಇಷ್ಟೇ ಸಂಖ್ಯೆಯ ಕನ್ನಡಿಗರು ಚೀನಾದ ವಸ್ತುಗಳನ್ನು ನಿಷೇಧಿಸುವುದೊಂದೆ ಭಾರತ ಚೀನಾಗೆ ಕಲಿಸುವ ಪಾಠವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಚೀನಾ ವಸ್ತುಗಳನ್ನು ನಿಷೇಧಿಸುವ ಮೂಲಕ ಆ ದೇಶದ ಆರ್ಥಿಕತೆಗೆ ಪೆಟ್ಟು ನೀಡಬಹುದು ಎಂದು ಜನಾಭಿಪ್ರಾಯ ರೂಪುಗೊಂಡಿದೆ. ಅದರಲ್ಲೂ ಶೇ.97 ರಷ್ಟು ಮರಾಠಿಗಳು ಒಮ್ಮತದಿಂದ ಈ ಅಭಿಪ್ರಾಯವನ್ನು ಮುಂದಿಟ್ಟಿದ್ದಾರೆ. ಆದರೆ, ದೇಶಾದ್ಯಂತ ಶೇ.4 ರಷ್ಟು ಜನ ಮಾತ್ರ ಚೀನಾದ ವಸ್ತುಗಳನ್ನು ಬಳಸುವುದರಿಂದ ಸಮಸ್ಯೆ ಇಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಚೀನಾ-ಪಾಕಿಸ್ತಾನದ ಸ್ನೇಹದ ಕುರಿತು ಕಳವಳ ವ್ಯಕ್ತೊಪಡಿಸಿರುವ ಶೇ.80 ರಷ್ಟು ಜನ, ಭಾರತದಲ್ಲಿ ಚೀನಾದ ಹೂಡಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಈ ರಾಷ್ಟ್ರದ ಜೊತೆಗೆ ಯಾವುದೇ ಸಂಬಂಧ ಮುಂದುವರೆಸುವುದು ಉತ್ತಮವಲ್ಲ ಎಂದಿದ್ದಾರೆ.

ಇನ್ನೂ ಶೇ.53 ರಷ್ಟು ಜನ ಚೀನಾದ ಜೊತೆಗಿನ ವಿವಾದವನ್ನು ಮಾತುಕತೆ ಮೂಲಕ ಶಾಂತಿಯಿಂದ ಬಗೆಹರಿಸುವುದು ಉತ್ತಮ ಎಂದು ಅಭಿಪ್ರಾಯಪಟ್ಟಿದ್ದರೆ, ಶೇ. 47 ರಷ್ಟು ಜನ ಶಾಂತಿ ಮಾತುಕತೆ ವ್ಯರ್ಥ ಎಂದು ತಮ್ಮ ನಿಲುವನ್ನು ದಾಖಲಿಸಿದ್ದಾರೆ.
First published: June 5, 2020, 9:09 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading