ದೇಶಾದ್ಯಂತ ವಿವಿಧ ಕ್ಷೇತ್ರಗಳಲ್ಲಿ ಇರುವ ಯುವ ಪ್ರತಿಭೆಗಳನ್ನು ಗುರುತಿಸಿ, ಉತ್ತೇಜಿಸುವ ಸಲು ವಾಗಿ ನ್ಯೂಸ್ 18 ನೆಟ್ವರ್ಕ್ ಮತ್ತು ಬೈಜೂಸ್ ಯಂಗ್ ಜೀನಿಯಸ್ ಕಾರ್ಯಕ್ರಮ ಪ್ರಸ್ತುತಪಡಿಸುತ್ತಿದೆ. ಇದೇ ಜ. 16ರ 2021 ಈ ಕಾರ್ಯಕ್ರಮ ಪ್ರಸಾರವಾಗಲಿದ್ದು, ಎಳೆಯ ಪ್ರತಿಭೆಗಳ ಅನಾವರಣಗೊಳ್ಳಲಿದೆ. ಕಳೆದ ನ. 14ರಂದು ಮಕ್ಕಳ ದಿನಾಚರಣೆಯಂದೇ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು, ಮಕ್ಕಳ ಪ್ರತಿಭೆ ಪ್ರದರ್ಶಿಸಲು ಆಹ್ವಾನ ನೀಡಲಾಗಿತ್ತು. ದೇಶದ ಮೂಲೆ ಮೂಲೆಯ ಶಿಕ್ಷಣ, ಪ್ರದರ್ಶನ ಕಲೆ, ತಂತ್ರಜ್ಞಾನ, ಕ್ರೀಡೆ, ವ್ಯವಹಾರ, ಮತ್ತು ಮುಂತಾದ ವಿವಿಧ ಕ್ಷೇತ್ರಗಳಿಂದ ಪ್ರತಿಭಾನ್ವಿತ ಮಕ್ಕಳನ್ನು ಆಯ್ಕೆ ಮಾಡಲಾಗಿದೆ. ನೀತಿ ಆಯೋಗದ ಸಿಇಒ ಪದ್ಮಭೂಷಣ್ ಡಾ. ಮಲ್ಲಿಕಾ ಸರಾಬಾಯಿ, ಮಾಜಿ ಹಾಕಿಪಟು ಸರ್ದಾರ್ ಸಿಂಗ್, ಸಿಎನ್ಬಿಸಿ ಟಿವಿ 18 ನಿರ್ವಹಣಾ ಸಂಪಾದಕ ಶೆರೀನ್ ಭಾನ್ ಒಳಗೊಂಡ ತೀರ್ಪುಗಾರರ ತಂಡ ಪತ್ರಿಭಾನ್ವಿತ ಮಕ್ಕಳನ್ನು ಆಯ್ಕೆ ಮಾಡಿದ್ದಾರೆ.
ಶ್ರದ್ಧಾಪಂಡಿತ್ ಸಂಯೋಜಿಸಿದ 'ಉಮರ್ ಚೋಟಿ, ಕಾಮ್ ಬಡೆ' ಎಂಬ ಶೀರ್ಷಿಕೆ ಗೀತೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಈ ಹಾಡನ್ನು ಟಿವಿ, ಡಿಜಿಟಲ್, ರೆಡಿಯೋ ಮೂಲಕ ಬಿಡುಗಡೆ ಮಾಡಲಾಗುವುದು. ಈ ಹಾಡನ್ನು ಸಲೀಮ್ ಸುಲೈಮನ್ ಸಂಯೋಜಿಸಿದ್ದು, ಯಾರ್ನ್ ಫೀಲ್ಮ್ ನಿರ್ಮಾಣಮಾಡಿದೆ, ಮಕ್ಕಳಲ್ಲಿ ಸೃಜನಶೀಲತೆ ಮತ್ತು ಕ್ರಿಯಾತ್ಮಕತೆ ಈ ಗೀತೆಯಲ್ಲಿ ತಿಳಿಸಲಾಗಿದೆ.
ಇನ್ನು ಈ ಹಾಡಿನ ಕುರಿತು ಅಭಿಪ್ರಾಯ ವ್ಯಕ್ತಪಡಿಸಿರುವ ಸಲೀಮ್ ಯಂಗ್ ಜೀನಿಯಸ್ ಹಾಡಿಗೆ ಸಂಗೀತ ಸಂಯೋಜಿಸುವ ಅವಕಾಶ ಸಿಕ್ಕಿದ್ದು ಅದೃಷ್ಟವಾಗಿದೆ. ಅಸಾಧಾರಣಾ ಪ್ರತಿಭೆ ಹೊಂದಿರುವ ಮಕ್ಕಳಿಗೆ ಕಾರ್ಯಕ್ರಮ ವೇದಿಕೆಯಾಗಿದೆ. ನ್ಯೂಸ್ 18 ನೆಟ್ವರ್ಕ್ ಮತ್ತು ಬೈಜೂಸ್ ಸಮಾಜಕ್ಕೆ ವಿಶಿಷ್ಠ ಕೊಡುಗೆ ನೀಡುವ ಮೂಲಕ ಮಕ್ಕಳ ಪ್ರತಿಭೆ ಪ್ರೋತ್ಸಾಹಿಸುತ್ತಿವುದಕ್ಕೆ ಸಂತಸ ವ್ಯಕ್ತಪಡಿಸಿದರು. ಈ ಕಾರ್ಯಕ್ರಮದಲ್ಲಿ ಎಲ್ಲಾ ಮಕ್ಕಳಿ ಅದ್ಭುತ ಪ್ರದರ್ಶನ ನೀಡಲಿ. ಸ್ಪೂರ್ತಿದಾಯಕವಾದ ಈ ಕಾರ್ಯಕ್ರಮ ಇನ್ನಷ್ಟು ಸರಣಿ ಬರಬೇಕು ಎಂದು ಆಶಿಸಿದರು.
ಈಗಾಗಲೇ ಈ ಮಕ್ಕಳ ಪ್ರತಿಭೆಗಳಿಗೆ ಈಗಾಗಲೇ ಅನೇಕ ಸೆಲೆಬ್ರಿಟಿಗಳು ಬೆನ್ನುತಟ್ಟಿದ್ದಾರೆ. ಲಿಯಾಂಡರ್ ಪೇಟ್ ಡುಟಿ ಚಂದ್, ಶಂಕರ್ ಮಹಾದೇವನ್, ರಾಜಕುಮಾರ್ ರಾವ್, ಪಿವಿ ಸಿಂಧು, ಸೋನ್ ಸೂದ್, ಸೋಹಾ ಆಲಿ ಖಾನ್ ಮತ್ತು ವಿರೇಂದ್ರ ಸೆಹ್ವಾಗ್ ಈಗಾಗಲೇ ಮಕ್ಕಳನ್ನು ಹುರಿದುಂಬಿಸಿ ಅನೇಕ ಕಂತುಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇನ್ನು ಈ ಕಾರ್ಯಕ್ರಮದ ಸ್ವರೂಪ ವಿವರಿಸಿದ 18 ನೆಟ್ವರ್ಕ್ನ ನ್ಯೂಸ್ 18 ಸಿಇಒ ಮಯಾಂಕ್ ಜೈನ್, ಇದೊಂದು ಅದ್ಭುತ ಕಾರ್ಯಕ್ರಮವಾಗಿದ್ದು, ಮಕ್ಕಳ ಪ್ರತಿಭೆ ಅನಾವರಣಗೊಳ್ಳಲಿದೆ. ಕುಟುಂಬ ಸಮೇತರಾಗಿ ಈ ಕಾರ್ಯಕ್ರಮ ನೋಡಲು ಜನರು ಉತ್ಸಾಕರಾಗುತ್ತಾರೆ. ಇದು ಎಲ್ಲರಲ್ಲಿಯೂ ಸ್ಪೂರ್ತಿದಾಯಕ ಕೂಡ ಆಗಿರಲಿದೆ. ನಮ್ಮ ನ್ಯೂಸ್ 18 ನೆಟ್ವರ್ಕ್ ಚಾನೆಲ್ಗಳಾದ ಸಿಎನ್ಎನ್ ನ್ಯೂಸ್ 18, ನ್ಯೂಸ್ 18 ಲೋಕಮತ್, ನ್ಯೂಸ್ 18 ಬಾಂಗ್ಲಾ, ನ್ಯೂಸ್ 18 ತಮಿಳಿನಲ್ಲಿ ಈ ಕಾರ್ಯಕ್ರಮ ಪ್ರಸಾರವಾಗಲಿದೆ. ಜ.16ರಿಂದ ಮಾರ್ಚ್ 27ರವರೆಗೆ ಹನ್ನೊಂದು ಸಂಚಿಕೆ ಪ್ರಸಾರವಾಗಲಿದ್ದು, 21 ಮಕ್ಕಳ ಪ್ರತಿಭೆ ಪ್ರದರ್ಶನವಾಗಲಿದೆ. ನೆಟ್ವರ್ಕ್ 18 ಟಿವಿಯಲ್ಲಿ 70 ಕೋಟಿ ಮತ್ತು ಡಿಜಿಟಲ್ನಲ್ಲಿ 20 ಕೋಟಿ ಜನರನ್ನು ತಲುಪಿದ ದೊಡ್ಡ ಜಾಲತಾಣವಾಗಿದೆ. ಭವಿಷ್ಯದ ಭಾರತದ ಬೈಜೂಸ್ನ ಯುವ ಪ್ರತಿಭೆಗಳನ್ನು ನೋಡುತ್ತೇವೆ ಎಂದರು.
ಕಾರ್ಯಕ್ರಮದ ಶೀರ್ಷಿಕೆ ಗೀತೆ ಬಿಡುಗಡೆ ಕುರಿತು ಮಾತನಾಡಿದ ಬೈಜುಸ್ ಮಾರ್ಕೆಟಿಂಗ್ ವೈಸ್ ಪ್ರೆಸಿಡೆಂಟ್, ಪ್ರತಿ ಮಗುವು ವಿಶಿಷ್ಟ. ತಮ್ಮದೇ ಆದ ಪ್ರತಿಭೆಯನ್ನು ಮಕ್ಕಳು ಹೊಮದಿರುತ್ತಾರೆ. ಬೈಜುಸ್ ಯಂಗ್ ಜೀನಿಯಸ್ ಮಕ್ಕಳು ಆಯ್ಕೆಮಾಡುವ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಅಸಾಧಾರಣ ಮಕ್ಕಳ ಪ್ರತಿಭೆಗಳ ಪ್ರದರ್ಶಿಸುವ ವೇದಿಕೆಯಾಗಿದೆ. ಈ ಮೂಲಕ ಇಂದು ದೇಶಾದ್ಯಾಂತದ ಮಕ್ಕಳು ಕೂಡ ತಮ್ಮಲ್ಲಿನ ಕೌಶಲ್ಯವೃದ್ಶಿಸಲು ಉತ್ಸಾಹ ತೋರಿ ಪರಿಶ್ರಮಿಸುವಂತೆ ಪ್ರೇರೇಪಿಸುತ್ತದೆ. ಈ ಅಭಿಯಾನ ಅವರ ಉತ್ಸಾಹ ಹೆಚ್ಚುವಂತೆ ಮಾಡುತ್ತದೆ ಎಂದರು.
ಕಾರ್ಯಕ್ರಮ ಶಿರ್ಷೀಕೆ ಗೀತೆ ಕೇಳಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ
https://www.youtube.com/watch?v=O5CU0hYqrfQ
ಈ ಕಾರ್ಯಕ್ರಮದ ಪ್ರಚಾರದ ಕುರಿತ ಮಾಹಿತಿಗೆ #BYJUSYoungGenius ಫಾಲೋ ಮಾಡಿ ಅಥವಾ ಈ ಜಾಲತಾಣಕ್ಕೆ ಭೇಟಿ ನೀಡಿ
https://www.news18.com/younggenius/
ಈ ಕಾರ್ಯಕ್ರಮ ಜ. 16ರಿಂದ ಪ್ರತಿಶನಿವಾರ ಸಂಜೆ ನ್ಯೂಸ್ 18ನೆಟ್ವರ್ಕ್ನಲ್ಲಿ ಪ್ರಸಾರವಾಗಲಿದೆ. ಭಾನುವಾರ ಬೆಳಗ್ಗೆ ಮತ್ತು ಮಧ್ಯಾಹ್ನ ಪುನರ್ ಪ್ರಸಾರವಾಗಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ