ಮಕ್ಕಳ ಸುಪ್ತ ಪ್ರತಿಭೆಯ ಅನಾವರಣ: ಇದೇ ಜ.16ರಿಂದ 'ಯಂಗ್ ಜೀನಿಯಸ್ ಶೋ' ಪ್ರಾರಂಭ

ಯಂಗ್ ಜೀನಿಯಸ್​ ಕಾರ್ಯಕ್ರಮವು ಸಲೀಮ್-ಸುಲೈಮಾನ್ ಅವರ ಸಂಗೀತ ಸಂಯೋಜನೆ ಮತ್ತು ಅವರೇ ಹಾಡಿರುವ ಉಮರ್ ಚೋಟಿ, ಕಾಮ್ ಬಡೆ ಎಂಬ ಹಾಡಿನೊಂದಿಗೆ ಪ್ರಾರಂಭವಾಗಲಿದೆ. ಈ ಹಾಡನ್ನು ಶ್ರದ್ಧಾ ಪಂಡಿತ್ ಬರೆದಿದ್ದು, ಟಿವಿ ಹಾಗೂ ರೇಡಿಯೋದಲ್ಲಿ ಪ್ರಸಾರವಾಗಲಿದೆ.

ಗಾಯಕ ಸಲೀಂ ಮರ್ಚೆಂಟ್

ಗಾಯಕ ಸಲೀಂ ಮರ್ಚೆಂಟ್

 • Share this:
  ನವದೆಹಲಿ(ಜ.11): ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರತರಲು ಹಲವಾರು ಖಾಸಗಿ ವಾಹಿನಿಗಳು ಸಾಕಷ್ಟು ಕಾರ್ಯಕ್ರಮಗಳನ್ನು ನಡೆಸುತ್ತಿವೆ. ಆ ಮೂಲಕ ಮಕ್ಕಳು ತಮ್ಮೊಳಗಿರುವ ಪ್ರತಿಭೆಯನ್ನು ಹೊರಹಾಕಲು ಒಂದು ಸೂಕ್ತ ವೇದಿಕೆಯನ್ನು ಕಲ್ಪಿಸಿಕೊಡಲಾಗುತ್ತಿದೆ. ಅಂತೆಯೇ ದೇಶಾದ್ಯಂತ ವಿವಿಧ ಕ್ಷೇತ್ರಗಳಲ್ಲಿರುವ ಯುವ ಪ್ರತಿಭೆಗಳನ್ನು ಗುರುತಿಸಲು, ಪ್ರೋತ್ಸಾಹಿಸಲು ಮತ್ತು ಅವರನ್ನು ಸಮಾಜಕ್ಕೆ ತೋರಿಸುವ ಉದ್ದೇಶದಿಂದ, ನ್ಯೂಸ್ 18 ನೆಟ್​ವರ್ಕ್​ ಮತ್ತು ಬೈಜೂಸ್(BYJU'S) ಕೂಡ ಇಂದು ಒಂದು ಕಾರ್ಯಕ್ರಮವನ್ನು ಆಯೋಜಿಸುತ್ತಿವೆ. 'ಯಂಗ್​ ಜೀನಿಯಸ್'​​ನ ಒಂದು ಭಾಗವಾಗಿ ಈ ಕಾರ್ಯಕ್ರಮ ಪ್ರಸಾರವಾಗಲಿದೆ. ಶೋ ಪ್ರಾರಂಭವಾಗುವ ದಿನಾಂಕವನ್ನು ಇಂದು ಪ್ರಕಟಿಸಲಾಗಿದ್ದು, 2021ರ ಜನವರಿ 16ರಿಂದ ಯಂಗ್​ ಜೀನಿಯಸ್ ಕಾರ್ಯಕ್ರಮ​ ಪ್ರಾರಂಭವಾಗಲಿದೆ. 'ಕಾಲ್​ ಫಾರ್ ಎಂಟ್ರಿ' ಎಂಬ ಪ್ರಚಾರ ಅಭಿಯಾನದೊಂದಿಗೆ ಯಂಗ್​ ಜೀನಿಯಸ್ ಕಾರ್ಯಕ್ರಮ ಶುರುವಾಗಲಿದೆ. ಅಂತಿಮವಾಗಿ ಆಯ್ಕೆ ಮಾಡಿದ ಯುವ ಪ್ರತಿಭೆಗಳು 11 ಭಾಗಗಳಲ್ಲಿ ವಾರದ ಶೋಗಳಲ್ಲಿ ಪ್ರದರ್ಶನ ನೀಡಲಿದ್ದಾರೆ.

  ಬೈಜೂಸ್​-ಇದು ಭಾರತೀಯ ಶೈಕ್ಷಣಿಕ ತಂತ್ರಜ್ಞಾನ ಮತ್ತು ಆನ್​ಲೈನ್​ ಟುಟೋರಿಂಗ್​ ಫರ್ಮ್​ ಆಗಿದೆ. ಈ ಸಂಸ್ಥೆಯನ್ನು 2011ರಲ್ಲಿ ಬೈಜು ರವೀಂದ್ರನ್​​ ಅವರು ಸ್ಥಾಪಿಸಿದರು.

  ಜನವರಿ 16ರಿಂದ ಪ್ರಾರಂಭವಾಗುವ ಯಂಗ್​ ಜೀನಿಯಸ್​ನ ಪ್ರತಿಯೊಂದು ಸಂಚಿಕೆಯಲ್ಲಿ(ಎಪಿಸೋಡ್​​) ಪ್ರದರ್ಶನ ಕಲೆಗಳು, ತಂತ್ರಜ್ಞಾನ, ಕ್ರೀಡೆ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಪರಿಣಿತಿ ಹೊಂದಿರುವ ಮಕ್ಕಳು ತಮ್ಮ ಪ್ರದರ್ಶನವನ್ನು ತೋರುತ್ತಾರೆ. ಈ ಕಾರ್ಯಕ್ರಮದಲ್ಲಿ ನೀತಿ ಆಯೋಗದ ಸಿಇಒ ಅಮಿತಾಬ್ ಕಾಂತ್, ಪದ್ಮಭೂಷಣ ಡಾ.ಮಲ್ಲಿಕಾ ಸರಭೈ, ಮಾಜಿ ಭಾರತದ ಹಾಕಿ ನಾಯಕ ಸರ್ದಾರ್ ಸಿಂಗ್, ಸಿಎನ್​ಬಿಸಿ ಟಿವಿ-18ನ ವ್ಯವಸ್ಥಾಪಕ ಸಂಪಾದಕ ಶೆರೀನ್​ ಭಾನ್​ ಇವರ ನೇತೃತ್ವದ ಶ್ರೇಷ್ಠ ತೀರ್ಪುಗಾರರನ್ನು ಒಳಗೊಂಡ ತಂಡವು ಪ್ರತಿಭಾನ್ವಿತ ಮಕ್ಕಳನ್ನು ಆಯ್ಕೆ ಮಾಡುತ್ತದೆ.

  ಯಂಗ್ ಜೀನಿಯಸ್​ ಕಾರ್ಯಕ್ರಮವು ಸಲೀಮ್-ಸುಲೈಮಾನ್ ಅವರ ಸಂಗೀತ ಸಂಯೋಜನೆ ಮತ್ತು ಅವರೇ ಹಾಡಿರುವ ಉಮರ್ ಚೋಟಿ, ಕಾಮ್ ಬಡೆ ಎಂಬ ಹಾಡಿನೊಂದಿಗೆ ಪ್ರಾರಂಭವಾಗಲಿದೆ. ಈ ಹಾಡನ್ನು ಶ್ರದ್ಧಾ ಪಂಡಿತ್ ಬರೆದಿದ್ದು, ಟಿವಿ ಹಾಗೂ ರೇಡಿಯೋದಲ್ಲಿ ಪ್ರಸಾರವಾಗಲಿದೆ.

  ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಜಮೀನು ಗುಳುಂ; ಕೋಟಿ ಲಿಂಗೇಶ್ವರ ದೇಗುಲದ ಆಡಳಿತಾಧಿಕಾರಿ ವಿರುದ್ದ ಕ್ರಿಮಿನಲ್ ಕೇಸ್ ದಾಖಲು

  ಯಂಗ್ ಜೀನಿಯಸ್​ ಕಾರ್ಯಕ್ರಮಕ್ಕೆ ಕೈ ಜೋಡಿಸಿರುವ ಪ್ರಸಿದ್ಧ ಸಂಗೀತ ಸಂಯೋಜಕ ಸಲೀಮ್ ಮರ್ಚೆಂಟ್  ಈ ಕುರಿತಾಗಿ ಸಂತಸ ವ್ಯಕ್ತಪಡಿಸಿದ್ದಾರೆ. ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರತರಲು ಇದೊಂದು ಉತ್ತಮ ವೇದಿಕೆಯಾಗಿದೆ. ನನಗೆ ಈ ಯಂಗ್​ ಜೀನಿಯಸ್​ ಕಾರ್ಯಕ್ರಮದಲ್ಲಿ ಸಂಗೀತ ಸಂಯೋಜನೆ ಮಾಡುವ ಅವಕಾಶ ಸಿಕ್ಕಿರುವುದು ನಿಜಕ್ಕೂ ನನ್ನ ಅದೃಷ್ಟ. ಎಷ್ಟೋ ಪ್ರತಿಭಾನ್ವಿತ ಮಕ್ಕಳು ಎಲೆಮರೆ ಕಾಯಿಯಂತೆ ಇರುತ್ತಾರೆ. ಅಂತಹವರನ್ನು ಗುರುತಿಸಿ ಈ ವೇದಿಕೆಗೆ ಕರೆತಂದು ಇಡೀ ದೇಶಕ್ಕೆ ಅವರ ಪ್ರತಿಭೆ ಪ್ರದರ್ಶನ ಮಾಡುವುದು ಒಂದು ಅತ್ಯುತ್ತಮ ಕೆಲಸವಾಗಿದೆ. ನ್ಯೂಸ್​ 18 ನೆಟ್​ವರ್ಕ್​ ಮತ್ತು ಬೈಜೂಸ್​ ಅವರು ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಮಾಜಕ್ಕೆ ಉತ್ತಮ ಕೊಡುಗೆ ನೀಡುತ್ತಿದ್ದಾರೆ. ಇದು ನಿಜಕ್ಕೂ ಸಂತಸದ ವಿಷಯ. ನಾನು ಹಾಗೂ ಸುಲೈಮಾನ್ ಇಬ್ಬರೂ ಸಹ ಈ ಕಾರ್ಯಕ್ರಮಕ್ಕೆ ಪ್ರಯತ್ನ ಮೀರಿ ಉತ್ತಮ ಕೊಡುಗೆ ನೀಡಲು ಉತ್ಸುಕರಾಗಿದ್ದೇವೆ. ಇದು ನಮಗೂ ಸಹ ಹೊಸ ಅನುಭವ ಹಾಗೂ ಕಲಿಕೆಯಾಗಿದೆ. ಎಲ್ಲಾ ಮಕ್ಕಳು ತಮ್ಮ ಅಸಾಧಾರಣ ಪ್ರತಿಭೆಯನ್ನು ಪ್ರದರ್ಶಿಸಬೇಕೆಂದು ನಾವು ಆಶಿಸುತ್ತೇವೆ ಎಂದಿದ್ದಾರೆ.

  ಯಂಗ್ ಜೀನಿಯಸ್ ಕಾರ್ಯಕ್ರಮಕ್ಕೆ ಹಲವಾರು ಸೆಲೆಬ್ರಿಟಿಗಳು ಮತ್ತು ಪ್ರಸಿದ್ಧ ವ್ಯಕ್ತಿಗಳು ಬೆಂಬಲ ನೀಡಿ ಪ್ರೋತ್ಸಾಹಿಸಿದ್ದಾರೆ. ಲಿಯಾಂಡರ್ ಪೇಸ್, ದ್ಯುತಿ ಚಂದ್, ಶಂಕರ್ ಮಹಾದೇವನ್, ರಾಜ್​ಕುಮಾರ್ ರಾವ್, ಪಿ.ವಿ.ಸಿಂಧು, ಸೋನು ಸೂದ್, ಸೊಹಾ ಅಲಿ ಖಾನ್ ಮತ್ತು ವೀರೇಂದ್ರ ಸೆಹ್ವಾಗ್ -ಇವರು ಮಕ್ಕಳನ್ನು ಪ್ರೋತ್ಸಾಹಿಸುವ ಈ ​ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

  ಈ ಕಾರ್ಯಕ್ರಮವು ಇದೇ ಜನವರಿ 16ರಿಂದ ಪ್ರತಿ ಶನಿವಾರ ಸಂಜೆ ನ್ಯೂಸ್​ 18 ನೆಟ್​ವರ್ಕ್​​ನ 18 ಚಾನೆಲ್​ಗಳಲ್ಲಿ ಪ್ರಸಾರವಾಗಲಿದೆ. ಜೊತೆಗೆ ಭಾನುವಾರ ಮರುಪ್ರಸಾರ ಮಾಡಲಾಗುತ್ತದೆ.
  Published by:Latha CG
  First published: