HOME » NEWS » National-international » NEWS18 HAS ACCESSED THE INTEL REPORT ON BALAKOT TRAINING CAMP

ನ್ಯೂಸ್ 18 ಎಕ್ಸ್​​ಕ್ಲೂಸಿವ್​: ಬಾಲಕೋಟ್ ಕ್ಯಾಂಪ್ ಬಗ್ಗೆ ಭಾರತೀಯ ಸೇನೆಗೆ ಸಿಕ್ಕ ಗುಪ್ತಚರ ಮಾಹಿತಿ ಇಲ್ಲಿದೆ

ಇತ್ತೀಚೆಗೆ ಜೆಇಎಂನ 60 ಉಗ್ರರು ಇಲ್ಲಿ ತರಬೇತಿ ಪಡೆದುಕೊಂಡಿದ್ದರು. ಆತ್ಮಾಹುತಿ ಬಾಂಬ್​ ದಾಳಿ ನಡೆಸುವುದು ಹೇಗೆ ಎಂಬುದನ್ನು ಹೇಳಿಕೊಡಲಾಗಿತ್ತು. ಮೂರು ತಿಂಗಳುಗಳ ಕಾಲ ಟ್ರೈನಿಂಗ್​ ನೀಡಲಾಗಿತ್ತು.

Rajesh Duggumane | news18
Updated:February 26, 2019, 3:59 PM IST
ನ್ಯೂಸ್ 18 ಎಕ್ಸ್​​ಕ್ಲೂಸಿವ್​: ಬಾಲಕೋಟ್ ಕ್ಯಾಂಪ್ ಬಗ್ಗೆ ಭಾರತೀಯ ಸೇನೆಗೆ ಸಿಕ್ಕ ಗುಪ್ತಚರ ಮಾಹಿತಿ ಇಲ್ಲಿದೆ
ಸಾಂದರ್ಭಿಕ ಚಿತ್ರ
  • News18
  • Last Updated: February 26, 2019, 3:59 PM IST
  • Share this:
ನವದೆಹಲಿ (ಫೆ.26): ಪಾಕ್​ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಸೇನೆ ಬಾಲಕೋಟ್​ ಪ್ರದೇಶವನ್ನು  ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ಈ ಶಿಬಿರವನ್ನೇ ಗುರಿಯಾಗಿಸಿಕೊಳ್ಳಲು ಸಾಕಷ್ಟು ಕಾರಣಗಳಿವೆ. ಈ ಕ್ಯಾಂಪ್​ ಬಗ್ಗೆ ಭಾರತೀಯ ಸೇನೆಗೆ ಏನೆಲ್ಲ ಮಾಹಿತಿ ಲಭ್ಯವಿತ್ತು ಎನ್ನುವ ವಿಚಾರ ನ್ಯೂಸ್ 18​ಗೆ ಮಿಲಿಟರಿ ಇಂಟೆಲಿಜೆನ್ಸ್​​ ಮೂಲಗಳಿಂದ ಲಭ್ಯವಾಗಿವೆ. ಅದರ ವಿವರ ಇಲ್ಲಿದೆ.

ಬಾಲಕೋಟ್​ ಪ್ರದೇಶ ಜೈಶ್​-ಇ-ಮೊಹ್ಮದ್​ ಉಗ್ರ ಸಂಘಟನೆಯ ತರಬೇತಿ ಕೇಂದ್ರ. ಇಲ್ಲಿ ಈ ಮೊದಲು ಸಾಕಷ್ಟು ಉಗ್ರರಿಗೆ ತರಬೇತಿ ನೀಡಲಾಗಿದೆ. 2017ರ ಡಿಸೆಂಬರ್​ ತಿಂಗಳಲ್ಲಿ ಜೆಇಎಮ್​ ಮುಖ್ಯಸ್ಥ ಮಸೂದ್​ ಅಜರ್​ನ ಮಗ ಅಜಾಹರ್​ ಉನ್ನತ ತರಬೇತಿ ಪಡೆದಿದ್ದು ಇದೇ ಶಿಬಿರದಲ್ಲಿ. ಹಾಗಾಗಿ ಸೂಕ್ಷ್ಮ ಹಾಗೂ ಮಹತ್ವದ ತರಬೇತಿ ಕೇಂದ್ರ ಇದಾಗಿದೆ.

ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ 40 ಯೋಧರು ಹುತಾತ್ಮರಾಗಿದ್ದರು. ಸಾಕಷ್ಟು ಸೈನಿಕರು ಗಾಯಗೊಂಡಿದ್ದರು. ಈ ದಾಳಿ ಹೇಗೆ ನಡೆಯಬೇಕು, ಯಾರು ಇದರ ನೇತೃತ್ವ ಪಡೆಯಬೇಕು ಎಂಬುದರ ಯೋಜನೆ ಸಿದ್ಧಗೊಂಡಿದ್ದು ಇಲ್ಲಿಯೇ. ಈ ದಾಳಿಯ ಸಂಚುಕೋರ ಮೊಹ್ಮದ್​ ಘಾಜಿ ಕೂಡ ಬಾಲಕೋಟ್​ನಲ್ಲಿ ತರಬೇತಿ ಪಡೆದಿದ್ದ ಎನ್ನುತ್ತವೆ ಸೇನೆಯ ಗುಪ್ತಚರ ದಳದ ಮಾಹಿತಿ.

ಇದನ್ನೂ ಓದಿ: ಪುಲ್ವಾಮಾ ದಾಳಿಗೆ ಪ್ರತೀಕಾರ: ಪಾಕಿಸ್ತಾನದ ಗಡಿಯೊಳಗೆ ನುಗ್ಗಿ ದಾಳಿ ನಡೆಸಿದ ಭಾರತೀಯ ಯುದ್ಧ ವಿಮಾನಗಳು

ಇತ್ತೀಚೆಗೆ ಜೆಇಎಂನ 60 ಉಗ್ರರು ಇಲ್ಲಿ ತರಬೇತಿ ಪಡೆದುಕೊಂಡಿದ್ದರು. ಅವರಿಗೆ ಆತ್ಮಾಹುತಿ ಬಾಂಬ್​ ದಾಳಿ ನಡೆಸುವುದು ಹೇಗೆ ಎಂಬುದನ್ನು ಹೇಳಿಕೊಡಲಾಗಿತ್ತು. ಇಲ್ಲಿ ಮೂರು ತಿಂಗಳುಗಳ ಕಾಲ ಟ್ರೈನಿಂಗ್​ ನೀಡಲಾಗಿತ್ತು. ದಾಳಿ ನಡೆಯುವ ಸಂದರ್ಭದಲ್ಲಿ ಸುಮಾರು 200-300 ಉಗ್ರರು ಇದ್ದರು ಎನ್ನಲಾಗಿದೆ. ವೈಮಾನಿಕ ದಾಳಿಯಿಂದ ಇವರಲ್ಲಿ ಬಹುತೇಕರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಇದಿಷ್ಟು ಮಾಹಿತಿಗಳು ನ್ಯೂಸ್​ 18ಗೆ ಲಭ್ಯವಾಗಿದೆ.

ಪುಲ್ವಾಮಾ ದಾಳಿಗೆ ಭಾರತೀಯ ಸೇನೆ ಪ್ರತೀಕಾರ ತೀರಿಸಿಕೊಂಡಿದೆ. ಪಾಕ್​ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿದ ಭಾರತೀಯ ಯುದ್ಧ ವಿಮಾನಗಳು ಅಲ್ಲಿರುವ ಉಗ್ರರ ಅಡಗು ತಾಣಗಳನ್ನು ನಾಶ ಮಾಡಿವೆ. ಈ ಮೂಲಕ ಸರ್ಜಿಕಲ್​ ಸ್ಟ್ರೈಕ್​ 2 ನಡೆಸುವಲ್ಲಿ ಭಾರತ ಯಶಸ್ವಿಯಾಗಿದೆ.

ಇದನ್ನೂ ಓದಿ: ಇಲ್ಲಿದೆ ಸರ್ಜಿಕಲ್​ ಸ್ಟ್ರೈಕ್​ನ ಆ 21 ನಿಮಿಷಗಳ ಸಂಪೂರ್ಣ ಮಾಹಿತಿ  ಇದೇ ಮೊದಲ ಬಾರಿಗೆ ಭಾರತೀಯ ವಾಯುಸೇನೆ ವಿಮಾನಗಳು ಪಾಕ್​ ಗಡಿ ದಾಟಿ ದಾಳಿ ನಡೆಸಿತು. ಇಂದು ಬೆಳಗಿನ ಜಾವ 3.30ರ ಸುಮಾರಿಗೆ ಬಾಲಕೋಟ್​ ಪ್ರದೇಶದಲ್ಲಿ ದಾಳಿ ನಡೆಸಿದೆ. 200-300 ಉಗ್ರರು ದಾಳಿಯಲ್ಲಿ ಸತ್ತಿದ್ದಾರೆ ಎನ್ನಲಾಗುತ್ತಿದೆ. 12 ಮಿರಾಜ್​ ಯುದ್ಧ ವಿಮಾನಗಳು ದಾಳಿಯಲ್ಲಿ ಪಾಲ್ಗೊಂಡಿದ್ದವು ಎನ್ನಲಾಗಿದೆ.

First published: February 26, 2019, 3:40 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories