ಅಸ್ಸಾಮ್​ನಲ್ಲಿ ನ್ಯೂಸ್18 ಪತ್ರಕರ್ತನ ಮೇಲೆ ಮಾರಣಾಂತಿಕ ಹಲ್ಲೆ

ಹೋಳಿ ಆಡುವ ವಿಚಾರಕ್ಕೆ ನಡೆದ ಗಲಾಟೆಯನ್ನು ಕವರ್ ಮಾಡಲು ಹೋಗಿದ್ದಕ್ಕೆ ಹೋಟೆಲ್ ಮಾಲೀಕ ಮತ್ತು ಕಾರ್ಮಿಕರು ನ್ಯೂಸ್18 ಪತ್ರಕರ್ತನ ಮೇಲೆ ಬರ್ಬರ ಹಲ್ಲೆ ನಡೆಸಿದ್ದಾರೆ.

Vijayasarthy SN | news18
Updated:March 22, 2019, 7:56 PM IST
ಅಸ್ಸಾಮ್​ನಲ್ಲಿ ನ್ಯೂಸ್18 ಪತ್ರಕರ್ತನ ಮೇಲೆ ಮಾರಣಾಂತಿಕ ಹಲ್ಲೆ
ಚಕ್ರಪಾಣಿ ಪರಾಶರ್
Vijayasarthy SN | news18
Updated: March 22, 2019, 7:56 PM IST
ಗುವಾಹತಿ(ಮಾ. 22): ಅಸ್ಸಾಮ್​ನ ಜನಪ್ರಿಯ ನ್ಯೂಸ್ ಆ್ಯಂಕರ್ ಹಾಗೂ ನ್ಯೂಸ್18 ಪತ್ರಕರ್ತ ಚಕ್ರಪಾಣಿ ಪರಾಶರ್ ಅವರ ಮೇಲೆ ಹೋಟೆಲ್ ಮಾಲೀಕರು ಮತ್ತು ನೌಕರರು ಗಂಭೀರ ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ. ಗಣೇಶ್​ಗುರಿ ಪ್ರದೇಶದ ನ್ಯೂಸ್18 ಕಚೇರಿಯ ಕಟ್ಟಡದಲ್ಲೇ ಇರುವ ಹೋಟೆಲ್​ನಲ್ಲಿ ಈ ಪೈಶಾಚಿಕ ಘಟನೆ ಸಂಭವಿಸಿದೆ. ಆಲ್ಬರ್​ಈಟ್ಸ್ ಎಂಬ ಹೋಟೆಲ್​ನ ನೌಕರರು ಚಕ್ರಪಾಣಿ ಪರಾಶರ್ ಅವರ ದೇಹದ ವಿವಿಧ ಭಾಗಗಳ ಮೇಲೆ ಬಾರಿ ಬಾರಿ ಇರಿದು ಗಂಭೀರವಾಗಿ ಗಾಯಗೊಳಿಸಿ ಹೋಟೆಲ್​ನಿಂದ ಹೊರಗೆಸಿದಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ನಾಲ್ವರು ಆರೋಪಿಗಳಾದ ಸಯದ್ ಅಲಿ, ನಿರಾಜ್ ಅಹ್ಮದ್, ನಿತಿನ್ ಶರ್ಮಾ ಮತ್ತು ಭಬೇಶ್ ದಾಸ್ ಅವರನ್ನು ಬಂಧಿಸಿದ್ದಾರೆ. ಇವರಲ್ಲಿ ಸಯದ್ ಅಲಿ ಮತ್ತು ನಿರಾಜ್ ಅಹ್ಮದ್ ಅವರು ಹೋಟೆಲ್ ಮಾಲೀಕರಾಗಿದ್ದಾರೆ. ಗಂಭೀರವಾಗಿ ಗಾಯಗೊಂಡ ಪರಾಶರ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯಕ್ಕೆ ಅವರು ಅಪಾಯದಿಂದ ಪಾರಾಗಿದ್ಧಾರೆ ಎಂದು ನ್ಯೂಸ್18 ಅಸ್ಸಾಮ್​ನ ಸಂಪಾದಕ ಸಂಜಯ್ ಪೌಲ್ ತಿಳಿಸಿದ್ದಾರೆ.

ಇದನ್ನೂ ಓದಿ: ನಿಯಮ ಉಲ್ಲಂಘನೆ ಆರೋಪ; ಓಲಾ ಕ್ಯಾಬ್​ಗೆ ಲೈಸೆನ್ಸ್ ರದ್ದು

ಹೋಳಿ ಆಡುವ ವಿಚಾರಕ್ಕೆ ಹೋಟೆಲ್​ನ ಮಾಲೀಕರಿಗೂ ಸ್ಥಳೀಯ ಯುವಕರಿಗೂ ಗಲಾಟೆ ನಡೆದಿದೆ. ಈ ವೇಳೆ, ನ್ಯೂಸ್18 ಪತ್ರಕರ್ತ ಚಕ್ರಪಾಣಿ ಪರಾಶರ್ ಅವರು ಈ ಗಲಾಟೆಯನ್ನು ಸುದ್ದಿಗಾಗಿ ಕವರ್ ಮಾಡಲು ಅಲ್ಲಿಗೆ ಹೋಗಿದ್ದಾರೆ. ಆದರೆ, ಹೋಟೆಲ್ ಮಾಲೀಕ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಬೆಂಗಳೂರು ದಕ್ಷಿಣದಿಂದ ನರೇಂದ್ರ ಮೋದಿ ಸ್ಪರ್ಧೆ?

ಅದೇ ದಿನ ಸಂಜೆಯಂದು ಪರಾಶರ್ ಸೇರಿದಂತೆ ಐದಾರು ಪತ್ರಕರ್ತರು ಹೋಟೆಲ್​ಗೆ ಹೋಗಿ ಮತ್ತೊಮ್ಮೆ ಮಾತನಾಡಲು ಯತ್ನಿಸಿದ್ದಾರೆ. ಆಗ ಆರೋಪಿಗಳು ಪರಾಶರ್ ಹೊಟ್ಟೆಗೆ ಇರಿದಿದ್ದಾರೆ. ನಂತರವೂ ಅವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಹೋಟೆಲ್​ನಿಂದ ಹೊರ ಹಾಕಿದ್ದಾರೆ. ಇದು ಸಿಸಿಟಿವಿಯಲ್ಲೂ ಈ ದೃಶ್ಯ ಸೆರೆಯಾಗಿದೆ. ಹಾಗೆಯೇ ಆರೋಪಿಗಳು ರೆಸ್ಟೋರೆಂಟ್​ನ ಬಾಗಿಲು ಮುಚ್ಚಿ ಎಲ್​ಪಿಜಿ ಸಿಲಿಂಡರ್ ಮೂಲಕ ಇಡೀ ಜಾಗಕ್ಕೆ ಬೆಂಕಿ ಹಚ್ಚುವ ಪ್ರಯತ್ನ ಕೂಡ ಮಾಡಿದ್ದರು.

ಹೋಟೆಲ್ ಮಾಲೀಕ ಮತ್ತು ಪ್ರಮುಖ ಆರೋಪಿ ಸಯದ್ ಅಲಿ ಅವರು ಅಪರಾಧದ  ಹಿನ್ನೆಲೆ ಇದ್ದವರಾಗಿದ್ದು, ಈ  ಮುಂಚೆಯೂ ಬೇರೆ ಪ್ರಕರಣಗಳಲ್ಲಿ ಬಂಧಿತರಾಗಿದ್ದರು. ಅಸ್ಸಾಮ್​ನ ವಿವಿಧ ರಾಜಕೀಯ ಪಕ್ಷಗಳು ಹಾಗೂ ಪತ್ರಿಕೋದ್ಯಮ ಸಂಘಟನೆಗಳು ಈ ಘಟನೆಯನ್ನು ಖಂಡಿಸಿವೆ.
First published:March 22, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ