• Home
 • »
 • News
 • »
 • national-international
 • »
 • ಪಂಜಾಬ್ ಹೊರತುಪಡಿಸಿ, ಕೃಷಿ ಕಾಯ್ದೆಗಳ ಬಗ್ಗೆ ಇತರೆ ರಾಜ್ಯಗಳ ಜನರ ಅಭಿಪ್ರಾಯವೇನು?

ಪಂಜಾಬ್ ಹೊರತುಪಡಿಸಿ, ಕೃಷಿ ಕಾಯ್ದೆಗಳ ಬಗ್ಗೆ ಇತರೆ ರಾಜ್ಯಗಳ ಜನರ ಅಭಿಪ್ರಾಯವೇನು?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಹೊಸ ಕಾನೂನುಗಳಿಂದ ರೈತರು ತಮ್ಮ ಉತ್ಪನ್ನಗಳಿಗೆ ಉತ್ತಮ ಬೆಲೆ ಪಡೆಯಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಇದರಲ್ಲಿ ಉತ್ತರ ಭಾರತದಿಂದ ಹೆಚ್ಚಿನ ಸಂಖ್ಯೆಯಲ್ಲಿ (69.81%) ಪ್ರತಿಕ್ರಿಯಿಸಿದ್ದಾರೆ.

 • Share this:

  ನವದೆಹಲಿ (ಡಿ. 20): ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ನವೆಂಬರ್ 26ರಿಂದ ದೆಹಲಿಯ ಗಡಿಗಳಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಸಿಂಘು ಗಡಿಯಲ್ಲಿ 32ಕ್ಕೂ ಹೆಚ್ಚು ರೈತ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದು, ಅದರಲ್ಲೂ ಪಂಜಾಬ್ ಪ್ರಾಂತ್ಯದ ರೈತರು ಈ ಹೋರಾಟದ ಮುಂದಾಳತ್ವ ವಹಿಸಿಕೊಂಡಿದ್ದಾರೆ. ಆದರೆ ಪಂಜಾಬ್ ಹಾಗೂ ಹರಿಯಾಣ ರಾಜ್ಯಗಳ ರೈತರನ್ನು ಹೊರತುಪಡಿಸಿ ಇತರೆ ರಾಜ್ಯಗಳ ಕೃಷಿಕರು ಈ ಹೋರಾಟದಲ್ಲೇಕೆ ಕಾಣಿಸಿಕೊಳ್ಳುತ್ತಿಲ್ಲ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಈ ಬಗ್ಗೆ ನ್ಯೂಸ್ 18 ನಡೆಸಿದ ಸಮೀಕ್ಷೆಯಲ್ಲಿ ಇತರೆ ರಾಜ್ಯಗಳ ಜನರು ಕೇಂದ್ರ ಸರ್ಕಾರ ಕಾಯ್ದೆ ಪರ ತಮ್ಮ ಒಲವು ವ್ಯಕ್ತಪಡಿಸಿದ್ದಾರೆ.


  ಪಂಜಾಬ್ ರಾಜ್ಯದಲ್ಲಿ 2 ವರ್ಷಗಳಲ್ಲಿ ಚುನಾವಣೆ ಬರಲಿದ್ದು, ಹೀಗಾಗಿ ಅಲ್ಲಿನ ರಾಜಕೀಯ ಪಕ್ಷಗಳು ಕೇಂದ್ರ ಕೃಷಿ ಕಾಯ್ದೆಯನ್ನು ರಾಜಕೀಯಗೊಳಿಸಿ ಅದರ ಲಾಭ ಪಡೆಯಲು ಮುಂದಾಗಿದೆ ಎಂಬ ಅಭಿಪ್ರಾಯಗಳು ಕೇಳಿ ಬಂದಿವೆ. ಏಕೆಂದರೆ ಉತ್ತರ ಪ್ರದೇಶ, ಮಧ್ಯಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ನೂತನ ಕೃಷಿ ಕಾಯ್ದೆ ಬಗ್ಗೆ ಸಾಕಷ್ಟು ಬೆಂಬಲ ವ್ಯಕ್ತವಾಗಿವೆ. ಈ ಬಗ್ಗೆ ನ್ಯೂಸ್ 18 ಹಲವು ರಾಜ್ಯಗಳಲ್ಲಿ ಸಂಗ್ರಹಿಸಿದ ಜನಾಭಿಪ್ರಾಯದ ಅಂಕಿ ಅಂಶಗಳನ್ನು ಗಮನಿಸುವುದಾದರೆ...


  - ಕೃಷಿಯಲ್ಲಿ ಸುಧಾರಣೆ ಮತ್ತು ಆಧುನೀಕರಣಕ್ಕೆ  ಶೇ.70 ರಷ್ಟು ದೇಶದ ಇತರೆ ಪ್ರದೇಶದ ಜನರು ಬೆಂಬಲ ವ್ಯಕ್ತಪಡಿಸಿದ್ದಾರೆ.


  - ದಕ್ಷಿಣ ರಾಜ್ಯಗಳು ಶೇ.74 ರಷ್ಟು ಬೆಂಬಲ ವ್ಯಕ್ತಪಡಿಸಿವೆ.


  - ಕೇರಳದವರು ಕೃಷಿಯಲ್ಲಿ ಸುಧಾರಣೆ ಮತ್ತು ಆಧುನೀಕರಣಕ್ಕೆ ಹೆಚ್ಚಿನ (96.59%) ಬೆಂಬಲ ವ್ಯಕ್ತಪಡಿಸಿದ್ದಾರೆ. ಮಹಾರಾಷ್ಟ್ರ (86.11%), ಒಡಿಶಾ (85.5%) ಮತ್ತು ಬಿಹಾರದವರು ಶೇ 84.87 ರಷ್ಟು ಬೆಂಬಲ ಸೂಚಿಸಿದ್ದಾರೆ.


  - ಹರಿಯಾಣದ 80% ರಷ್ಟು ಜನರು ಕೃಷಿ ಸುಧಾರಣಾ ಕಾನೂನುಗಳನ್ನು ಬೆಂಬಲಿಸಿದ್ದಾರೆ. ಪಂಜಾಬ್‌ನಲ್ಲಿ 56.36% ರಷ್ಟು ಜನರು ಕಾನೂನು ಪರ ಇದ್ದಾರೆ. ಮಹಾರಾಷ್ಟ್ರದ ಕೃಷಿ ಸುಧಾರಣಾ ಕಾನೂನುಗಳಿಗೆ ಹೆಚ್ಚಿನ ಬೆಂಬಲ (83.33%) ವ್ಯಕ್ತವಾಗಿವೆ. ಉತ್ತರ ಭಾರತೀಯರು (63.77%) ಹೆಚ್ಚಿನ ಸಂಖ್ಯೆಯಲ್ಲಿ ಕಾನೂನನ್ನು ಬೆಂಬಲಸಿದ್ದಾರೆ. ಇದರ ನಂತರ ಹೆಚ್ಚಿನ ಬೆಂಬಲ ವ್ಯಕ್ತವಾಗಿರುವುದು ಪಶ್ಚಿಮ ಭಾರತದ (62.90%) ಜನರಿಂದ ಎಂಬುದು ವಿಶೇಷ.


  - ಇನ್ನು ಎಪಿಎಂಸಿ ಮಂಡಿಗಳ ಹೊರಗೆ ಉತ್ಪನ್ನಗಳನ್ನು ಮಾರಾಟ ಮಾಡುವ ಹಕ್ಕನ್ನು ರೈತರಿಗೆ ನೀಡಲು ಎಲ್ಲಾ ವಲಯದವರು ಬೆಂಬಲ ವ್ಯಕ್ತಪಡಿಸಿದ್ದಾರೆ. ಇದರಲ್ಲೂ ಉತ್ತರ ಭಾರತದವರು ಅತಿ ಹೆಚ್ಚು ಬೆಂಬಲ (75.72%) ಸೂಚಿಸಿದ್ದಾರೆ. ನಂತರದ ಸ್ಥಾನದಲ್ಲಿ (73.56%) ಪಶ್ಚಿಮ ರಾಜ್ಯದರಿದ್ದಾರೆ. ಹಾಗೆಯೇ 59.57% ರಷ್ಟು ದಕ್ಷಿಣ ಭಾರತೀಯರು ಬೆಂಬಲ ವ್ಯಕ್ತಪಡಿಸಿದ್ದಾರೆ.


  - ಹೊಸ ಕಾನೂನುಗಳಿಂದ ರೈತರು ತಮ್ಮ ಉತ್ಪನ್ನಗಳಿಗೆ ಉತ್ತಮ ಬೆಲೆ ಪಡೆಯಬಹುದು ಎಂದು ಹೆಚ್ಚಿನವರು ಅಭಿಪ್ರಾಯಪಟ್ಟಿದ್ದಾರೆ. ಇದರಲ್ಲಿ ಉತ್ತರ ಭಾರತದಿಂದ ಹೆಚ್ಚಿನ ಸಂಖ್ಯೆಯಲ್ಲಿ (69.81%) ಪ್ರತಿಕ್ರಿಯಿಸಿದ್ದಾರೆ. ಇನ್ನು ಹರಿಯಾಣದವರು 80% ಈ ಬಗ್ಗೆ ತಮ್ಮ ಅಭಿಮತ ಮಂಡಿಸಿದರೆ, ಪಂಜಾಬ್‌ನವರು 76.36% ರಷ್ಟು ಅನುಕೂಲ ಎಂದಿದ್ದಾರೆ.


  - ಉತ್ತರ ಭಾರತದ 68.84% ರಷ್ಟು ಜನರು ಕೃಷಿ ಕಾಯ್ದೆ ನಿಷೇಧಿಸುವ ಬೇಡಿಕೆ ಸಮರ್ಥನೀಯವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಪೂರ್ವ ಭಾರತವರು (ಶೇ. 75.56) ಕೂಡ ರದ್ದುಗೊಳಿಸುವ ಬೇಡಿಕೆ ನ್ಯಾಯಸಮ್ಮತವಲ್ಲ ಎಂದು ತಿಳಿಸಿದ್ದಾರೆ.


  - ಕೃಷಿ ಸುಧಾರಣಾ ಕಾನೂನುಗಳ ವಿರುದ್ಧದ ಪ್ರತಿಭಟನೆಗಳು ರಾಜಕೀಯ ಪ್ರೇರಿತವಾಗಿವೆ ಎಂದು ಮಧ್ಯಪ್ರದೇಶದಿಂದ 80.43% ರಷ್ಟು ಜನರು ತಿಳಿಸಿದ್ದಾರೆ. ಹಾಗೆಯೇ ಹರಿಯಾಣದಿಂದ 75%, ಪಂಜಾಬ್‌ನಿಂದ 60%, ಉತ್ತರ ಪ್ರದೇಶದ 57.23% ರಷ್ಟು ಜನರು ಇದು ರಾಜಕೀಯ ಪ್ರೇರಿತ ಹೋರಾಟ ಎಂದು ಪ್ರತಿಕ್ರಿಯಿಸಿದ್ದಾರೆ.


  - ಇನ್ನು ಜನಾಭಿಪ್ರಾಯದಲ್ಲಿ ಪ್ರತಿಕ್ರಿಯಿಸಿದ ಹೆಚ್ಚಿನವರು ಕೂಡ ರೈತರು ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದರಲ್ಲಿ ಪಶ್ಚಿಮ ರಾಜ್ಯದ 66.36% ಜನರು ರೈತರು ಹೋರಾಟ ಕೈಬಿಡಬೇಕೆಂದು ತಿಳಿಸಿದರೆ, ಪೂರ್ವ ರಾಜ್ಯದ 64.67% ಮಂದಿ ಮತ್ತು ಉತ್ತರ ರಾಜ್ಯದ 62.08% ರಷ್ಟು ಜನರು ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಬೇಕೆಂದು ತಿಳಿಸಿದ್ದಾರೆ.


  ಹಾಗೆಯೇ ದೆಹಲಿಯ 76.47% ಜನರು, ಪಂಜಾಬ್‌ನಿಂದ 63.64% ಮಂದಿ, ಉತ್ತರ ಪ್ರದೇಶದಿಂದ 65.06% ಜನರು, ಒಡಿಶಾದಿಂದ 83.50% ಮಂದಿ ಹಾಗೂ ಮಹಾರಾಷ್ಟ್ರದ 80.56% ರಷ್ಟು ಜನರು ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.

  Published by:Vinay Bhat
  First published: