Honor Killing: ಅಂತರ್ಜಾತಿ ವಿವಾಹವಾದ ತಂಗಿಯನ್ನು ಕೊಚ್ಚಿ ಕೊಂದ ಅಣ್ಣ! ಬೆಚ್ಚಿಬೀಳಿಸಿದ ಮರ್ಡರ್

ಅಂತರ್ಜಾತಿ ವಿವಾಹವಾದ ತಂಗಿಯನ್ನು ತವರು ಮನೆಗೆ ಊಟಕ್ಕೆ ಕರೆದಿದ್ದರು. ತವರಿನ ಕರೆಗೆ ಗಂಡನೊಂದಿಗೆ ಓಡೋಡಿ ಬಂದ ತಂಗಿ ಅಲ್ಲಿಯೇ ಮನೆಯವರಿಂದಲೇ ಭೀಕರವಾಗಿ ಕೊಲೆಯಾದಳು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಚೆನ್ನೈ(ಜೂ.14): ದೇಶದಲ್ಲಿ ಆಗಾಗ ಮರ್ಯಾದಾ ಹತ್ಯೆಗಳು (Honor Killing) ನಡೆಯುತ್ತಿರುವುದು ನಿಜಕ್ಕೂ ಆಘಾತಕಾರಿ ಬೆಳವಣಿಗೆ. ಹೈದರಾಬಾದ್​ನಲ್ಲಿ (Hyderabad) ಅಂತರ್ ಧರ್ಮ ವಿವಾಹವಾದ ಜೋಡಿಯಲ್ಲಿ ವಧುವಿನ ಕುಟುಂಬಸ್ಥರು ವರನನ್ನು ಕೊಂದ ಘಟನೆಯ ನಂತರ ಈಗ ತಮಿಳುನಾಡಿನಲ್ಲಿ (Tamil Nadu) ಅಂತದ್ದೇ ಘಟನೆಯೊಂದು ವರದಿಯಾಗಿದೆ. ಯಾವುದೇ ಸಿನಿಮಾ ಕಥೆಗೆ ಕಮ್ಮಿ ಇಲ್ಲ ಎನ್ನುವಂತಹ ಘಟನೆಯೊಂದು ಚೆನ್ನೈ ಮಂದಿಯನ್ನು ಬೆಚ್ಚಿಬೀಳಿಸಿದೆ. ಬೆಳ್ಳಂಬೆಳಗ್ಗೆ ನವಜೋಡಿಯ ಮರ್ಡರ್ ಸ್ಟೋರಿ (Murder Story) ಕೇಳಿ ತಮಿಳುನಾಡು ಬಂದಿ ದಿನ ಆರಂಭಿಸುವಂತಾಗಿದೆ. ದೇಶವನ್ನೇ ಬೆಚ್ಚಿಬೀಳಿಸಿದ ಮರ್ಯಾದಾ ಹತ್ಯೆ ಪ್ರಕರಣದಲ್ಲಿ ಯುವ ದಂಪತಿಯ ಭೀಕರ ಹತ್ಯೆ (Murder) ನಡೆದಿದೆ.

ತಂಜಾವೂರಿನ ಕುಂಭಕೋಣಂ ನಗರದಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ ಅಂತರ್ಜಾತಿ ವಿವಾಹದ ಕಾರಣಕ್ಕಾಗಿ ನವವಿವಾಹಿತರನ್ನು ವಧುವಿನ ಸಹೋದರ ಜೂನ್ 13 ರಂದು ಹತ್ಯೆಗೈದಿದ್ದಾರೆ. ನವದಂಪತಿಯನ್ನು ಹತ್ಯೆಗೈದ ಆರೋಪಿಗಳಾದ ಶಕ್ತಿವೇಲ್ ಮತ್ತು ಬಂಧು ರಂಜಿತ್ ನನ್ನು ಬಂಧಿಸಲಾಗಿದೆ.

24 ವರ್ಷದ ಶರಣ್ಯ 21 ವರ್ಷದ ಮೋಹನ್ ಲವ್

ಕುಂಭಕೋಣಂ ಬಳಿಯ ಚೋಳಪುರಂ ಮೂಲದ ದಲಿತ ಮಹಿಳೆ 24 ವರ್ಷದ ಶರಣ್ಯ ಚೆನ್ನೈನ ನಾಯ್ಕರ್ ಸಮುದಾಯದ 21 ವರ್ಷದ ಮೋಹನ್‌ನನ್ನು ಪ್ರೀತಿಸುತ್ತಿದ್ದಳು.

5 ತಿಂಗಳ ಹಿಂದೆ ಶುರುವಾದ ಸ್ನೇಹ

ಐದು ತಿಂಗಳ ಹಿಂದೆ, ಶರಣ್ಯ ಮೋಹನ್‌ನನ್ನು ಭೇಟಿಯಾಗಿ ಸ್ನೇಹ ಬೆಳೆಸಿದಳು. ಅವಳು ಅನಾರೋಗ್ಯದಿಂದ ಬಳಲುತ್ತಿದ್ದ ತನ್ನ ತಾಯಿಯನ್ನು ಚಿಕಿತ್ಸೆಗಾಗಿ ಚೆನ್ನೈನ ಆಸ್ಪತ್ರೆಗೆ ಕರೆದೊಯ್ದಿದ್ದಳು. ಅಲ್ಲಿ ಅವಳು ದಾದಿಯಾಗಿ ಕೆಲಸ ಮಾಡುತ್ತಿದ್ದಳು. ಮೋಹನ್ ಆಸ್ಪತ್ರೆಯಲ್ಲಿ ಶರಣ್ಯಳ ತಾಯಿಯ ಪಕ್ಕದ ಬೆಡ್‌ನಲ್ಲಿ ರೋಗಿಯೊಬ್ಬರ ಅಟೆಂಡರ್ ಆಗಿದ್ದರು.

ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ 28 ವರ್ಷದ ರಂಜಿತ್‌ನೊಂದಿಗೆ  ಶರಣ್ಯ ಮದುವೆ ಮಾಡಲು ಕುಟುಂಬದವರು ಈಗಾಗಲೇ ನಿರ್ಧರಿಸಿದ್ದರಿಂದ, ಶರಣ್ಯ ಕಳೆದ ವಾರ ಮೋಹನ್ ಅವರನ್ನು ತನ್ನ ಮನೆಯವರಿಗೆ ತಿಳಿಸದೆ ವಿವಾಹವಾದರು.

ಇದನ್ನೂ ಓದಿ: Newborn Baby: ಹೆತ್ತ ಮಗುವನ್ನೇ ಮಾರಾಟ ಮಾಡಿ ಬಾಯ್​ಫ್ರೆಂಡ್​ಗೆ ಬೈಕ್, ಮನೆಗೆ ಫ್ರಿಡ್ಜ್, ಟಿವಿ ತಂದ ಯುವತಿ

ಮನೆಗೆ ಭೋಜನಕ್ಕೆ ಆಹ್ವಾನಿಸಿದ ಶರಣ್ಯ ಸಹೋದರ

ಇದರ ನಂತರ, ಶರಣ್ಯ ಅವರ ಸಹೋದರ ಶಕ್ತಿವೇಲ್ ಅವರಿಗೆ ಮದುವೆಯಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಭರವಸೆ ನೀಡಿದರು. ನವವಿವಾಹಿತರನ್ನು ಕೊಲ್ಲುವ ಉದ್ದೇಶದಿಂದ ಅವರ ಮನೆಗೆ ಊಟಕ್ಕೆ ಆಹ್ವಾನಿಸಿದ್ದಾರೆ. ಮನೆಯವರು ಒಪ್ಪಿಕೊಂಡಿದ್ದಾರೆ ಎಂದು ನಂಬಿದ ನವವಿವಾಹಿತರು ಜೂನ್ 13 ರಂದು ಶರಣ್ಯ ಅವರ ತವರು ಕುಂಭಕೋಣಂಗೆ ಆಗಮಿಸಿದ್ದರು.

ಇದನ್ನೂ ಓದಿ: Honour Killing: ಪಿರಿಯಾಪಟ್ಟಣದಲ್ಲಿ ಮರ್ಯಾದಾ ಹತ್ಯೆ; ಪೋಷಕರಿಂದಲೇ ಹತಳಾದ ಅಪ್ರಾಪ್ತ ಮಗಳು

ಇದಾದ ನಂತರ, ಶರಣ್ಯ ಅವರ ಸಹೋದರ ಶಕ್ತಿವೇಲ್ ಮತ್ತು ಸಂಬಂಧಿಕರಾದ ರಂಜಿತ್ ನವವಿವಾಹಿತರು ರಾತ್ರಿ ಊಟ ಮಾಡಿ ಮನೆಯಿಂದ ಹೊರಬಂದ ನಂತರ ಅವರನ್ನು ಕಡಿದು ಕೊಂದರು.

ಮೃತದೇಹ ವಶಕ್ಕೆ ಪಡೆದ ಪೊಲೀಸರು

ಈ ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ ಇಬ್ಬರ ಮೃತದೇಹವನ್ನು ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ತಲೆಮರೆಸಿಕೊಂಡಿದ್ದ ಶಕ್ತಿವೇಲ್ ಮತ್ತು ರಂಜಿತ್ ರಾತ್ರಿ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾರೆ. ತಂಜಾವೂರು ಎಸ್ಪಿ ಪ್ರಕಾರ, ಆರೋಪಿಗಳನ್ನು ರಕ್ಷಿಸಲಾಗಿದೆ ಎಂಬ ಮಾತು ಕೇಳಿ ಬರುತ್ತಿದೆ. ಈ ವಿಷಯದ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸಲಾಗಿದೆ.

ಈ ರೀತಿಯ ಮರ್ಯಾದಾ ಹತ್ಯೆ ಪ್ರಕರಣಗಳು ನಡೆಯುತ್ತಿರುವುದು ಇದೇ ಮೊದಲೇನಲ್ಲ. ಆದರೆ ಭೋಜನಕ್ಕೆಂದು ಪ್ರೀತಿಯಿಂದ ತವರಿಗೆ ಕರೆದು ಕೊಲೆ ಮಾಡಿರುವುದು ನಿಜಕ್ಕೂ ಅಮಾನವೀಯವಾಗಿದ್ದು ಜನರನ್ನು ಬೆಚ್ಚಿಬೀಳಿಸಿದೆ.
Published by:Divya D
First published: