ಮದುವೆಯಲ್ಲಿ ಕೊಟ್ಟಿದ್ದ ಗಿಫ್ಟ್ ಸ್ಫೋಟ: 5 ದಿನಗಳ ಹಿಂದಷ್ಟೇ ಮದುವೆಯಾಗಿದ್ದ ವರ ಸಾವು


Updated:February 24, 2018, 2:00 PM IST
ಮದುವೆಯಲ್ಲಿ ಕೊಟ್ಟಿದ್ದ ಗಿಫ್ಟ್ ಸ್ಫೋಟ: 5 ದಿನಗಳ ಹಿಂದಷ್ಟೇ ಮದುವೆಯಾಗಿದ್ದ ವರ ಸಾವು
  • Share this:
-ನ್ಯೂಸ್ 18

ಭುವನೇಶ್ವರ್(ಫೆ.24): ಮದುವೆಯಲ್ಲಿ ಅತಿಥಿಯೊಬ್ಬರು ನೀಡಿದ್ದ ಉಡುಗೊರೆ ಸ್ಫೋಟಗೊಂಡು ಹೊಸದಾಗಿ ಮದುವೆಯಾಗಿದ್ದ ವರ, ಆತನ ಅಜ್ಜಿ ಸಾವನ್ನಪ್ಪಿದ್ದು, ನವವಧು ಗಂಭೀರವಾಗಿ ಗಾಯಗೊಂಡಿರುವ ಘಟನೆ ಒಡಿಶಾದ ಬೊಲಂಗಿರ್ ಜಿಲ್ಲೆಯಲ್ಲಿ ನಡೆದಿದೆ.

ಸ್ಫೋಟದ ರಭಸಕ್ಕೆ ಅಜ್ಜಿ ಸ್ಥಳದಲ್ಲೇ ಮೃತಪಟ್ಟಿದ್ದು, 5 ದಿನಗಳ ಹಿಂದಷ್ಟೇ ಮದುವೆಯಾಗಿದ್ದ ವರ ಗಂಭೀರವಾಗಿ ಗಾಯಗೊಂಡು ರೌಕೆಲಾ ಆಸ್ಪತ್ರೆಯಲ್ಲಿ ಅಸುನೀಗಿದ್ದಾನೆ. ಗಾಯಗೊಂಡಿದ್ದ ವಧುವಿಗೆ ಬುರ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಸ್ಫೋಟಗೊಂಡ ಉಡುಗೊರೆಯನ್ನ ಫೆಬ್ರವರಿ 21ರಂದು ನಡೆದ ಆರತಕ್ಷತೆ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ನವದಂಪತಿಗೆ ನೀಡಿದ್ದ ಎಂದು ತಿಳಿದುಬಂದಿದೆ. ಮನೆಯಲ್ಲಿ ಉಡುಗೊರೆ ತೆರೆಯುತ್ತಿದ್ದಂತೆ ಸ್ಫೋಟಗೊಂಡಿದೆ.

ಸಾಕ್ಷ್ಯ ಕಲೆಹಾಕಿರುವ ಸ್ಥಳೀಯ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ವಯೋವೃದ್ಧ ಮಹಿಳೆ ಆಸ್ಪತ್ರೆಗೆ ಕರೆತರುವ ಮುನ್ನವೇ ಮೃತಪಟ್ಟಿದ್ದರು. ತೀವ್ರ ಗಾಯಗೊಂಡಿದ್ದ ವರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಗಿ ಜಿಲ್ಲಾ ವೈದ್ಯಾಧಿಕಾರಿ ಸ್ಪಷ್ಟಪಡಿಸಿದ್ದಾರೆ.

 
First published:February 24, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ