ಹೆರಿಗೆಗಾಗಿ ಸೈಕಲ್ ತುಳಿದು ಆಸ್ಪತ್ರೆಗೆ ಹೋದ ನ್ಯೂಜಿಲೆಂಡ್ನ ಸಚಿವೆ..!
news18
Updated:August 21, 2018, 6:11 PM IST
news18
Updated: August 21, 2018, 6:11 PM IST
ನ್ಯೂಸ್18 ಕನ್ನಡ
ವೆಲ್ಲಿಂಗ್ಟನ್ (ಆ. 21): ನ್ಯೂಜಿಲೆಂಡ್ ದೇಶದ ಮಹಿಳಾ ಖಾತೆ ಸಚಿವೆ ಮತ್ತು ಸಾರಿಗೆ ಖಾತೆಯ ಸಹಾಯಕ ಸಚಿವೆಯೂ ಆಗಿರುವ ಜೂಲಿ ಆನ್ನೆ ಜೆಂಟರ್ ತಮ್ಮ ಮೊದಲ ಹೆರಿಗೆಯ ತಪಾಸಣೆಗಾಗಿ ಸೈಕಲ್ ತುಳಿದುಕೊಂಡೇ ಆಸ್ಪತ್ರೆಯನ್ನು ತಲುಪಿದ್ದಾರೆ.
ಸೈಕ್ಲಿಂಗ್ಪ್ರಿಯರಾಗಿರುವ ಜೂಲಿ ಅವರು ಭಾನುವಾರ ತಮ್ಮ ಮನೆಯಿಂದ 1 ಕಿ.ಮೀ. ದೂರ ಇರುವ ಆಕ್ಲೆಂಡ್ ಸಿಟಿ ಹಾಸ್ಪಿಟಲ್ಗೆ ಸೈಕಲ್ನಲ್ಲೇ ಪ್ರಯಾಣ ಮಾಡಿದ್ದಾರೆ. 42 ವಾರಗಳ ಗರ್ಭಿಣಿಯಾಗಿರುವ ಇವರು ತಮ್ಮ ರೆಗ್ಯುಲರ್ ತಪಾಸಣೆಗೆ ಸೈಕಲ್ನಲ್ಲೇ ತೆರಳಿದ್ದಾರೆ. ಈ ಬಗ್ಗೆ ಸ್ವತಃ ಫೋಟೋ ಹಾಕಿ ಪೋಸ್ಟ್ ಮಾಡಿರುವ ಸಚಿವೆಯ ಬಗ್ಗೆ ಸಾಕಷ್ಟು ಉತ್ತಮ ಪ್ರಶಂಸೆಗಳು ವ್ಯಕ್ತವಾಗುತ್ತಿವೆ.
ನ್ಯೂಜಿಲೆಂಡ್ ಪ್ರಧಾನಮಂತ್ರಿ ಜೆಸಿಂಡಾ ಆರ್ಡರ್ನ್ ಅಧಿಕಾರದಲ್ಲಿದ್ದಾಗಲೇ ಹೆರಿಗೆ ರಜೆ ಪಡೆದು ಮಗುವಿಗೆ ಜನ್ಮ ನೀಡಿದ್ದರು. ಇದೀಗ ನ್ಯೂಜಿಲೆಂಡ್ ಸರ್ಕಾರದ ಸಚಿವೆಯಾಗಿರುವ ಜೂಲಿ ಅವರು ಕೂಡ ಅಧಿಕಾರದಲ್ಲಿರುವಾಗಲೇ ಮಗುವಿಗೆ ಜನ್ಮ ನೀಡಲಿದ್ದಾರೆ.ಅಂದಹಾಗೆ, ಪಾಕಿಸ್ತಾನದ ಪ್ರಧಾನಿಯಾಗಿದ್ದ ಬೆನಜೀರ್ ಬುಟ್ಟೋ ತನ್ನ ಎರಡನೇ ಮಗುವಿಗೆ ಜನ್ಮ ನೀಡಿದ್ದಾಗ ಅಧಿಕಾರದಲ್ಲಿರುವಾಗಲೇ ಮಗುವಿಗೆ ಜನ್ಮ ನೀಡಿದ ಮೊದಲ ಜಾಗತಿಕ ನಾಯಕಿ ಎನ್ನುವ ಖ್ಯಾತಿ ಪಡೆದಿದ್ದಾರೆ.

Loading...