ನ್ಯೂಜಿಲ್ಯಾಂಡ್​ ಮಸೀದಿಯಲ್ಲಿ ಗುಂಡಿನ ದಾಳಿ ಎಸಗುವ 9 ನಿಮಿಷಕ್ಕೂ ಮುನ್ನ ಪ್ರಧಾನಿ ಕಚೇರಿಗೆ ಪ್ರಣಾಳಿಕೆ ಕಳುಹಿಸಿದ್ದ ದಾಳಿಕೋರ

ವಾಸ್ತವ ಏನೆಂದರೆ ದಾಳಿಯ ದೃಷ್ಟಿಕೋನಗಳನ್ನು ಇಟ್ಟುಕೊಂಡ ಸೈದ್ಧಾಂತಿಕ ಪ್ರಣಾಳಿಕೆ ಅದಾಗಿತ್ತು. ಈ ದಾಳಿ ಎಲ್ಲರನ್ನು ಆಳವಾಗಿ ಘಾಸಿಗೊಳಿಸಿದೆ. ಆಧುನಿಕ ಕಾಲದ ಪಶ್ಚಿಮದಲ್ಲಿ ಮುಸ್ಲಿಮರ ವಿರುದ್ಧ ನಡೆದ ಮಾರಣಾಂತಿಕ ದಾಳಿ ಇದಾಗಿದೆ. ಈ ಘಟನೆಯಿಂದ ಇಡೀ ದೇಶವೇ ಆಘಾತಕ್ಕೆ ಒಳಗಾಗಿದೆ. ಇದು ದೇಶದ ಅತಿ ಕರಾಳ ದಿನ ಎಂದು ಪ್ರಧಾನಿ ಮರುಗಿದರು.

HR Ramesh | news18
Updated:March 17, 2019, 12:53 PM IST
ನ್ಯೂಜಿಲ್ಯಾಂಡ್​ ಮಸೀದಿಯಲ್ಲಿ ಗುಂಡಿನ ದಾಳಿ ಎಸಗುವ 9 ನಿಮಿಷಕ್ಕೂ ಮುನ್ನ ಪ್ರಧಾನಿ ಕಚೇರಿಗೆ ಪ್ರಣಾಳಿಕೆ ಕಳುಹಿಸಿದ್ದ ದಾಳಿಕೋರ
ನ್ಯೂಜಿಲ್ಯಾಂಡ್ ಪ್ರಧಾನಿ ಜಸಿಂದಾ ಆರ್ಡ್ರೆನ್
  • News18
  • Last Updated: March 17, 2019, 12:53 PM IST
  • Share this:
ಕ್ರಿಸ್ಟ್​ಚರ್ಚ್​ (ನ್ಯೂಜಿಲ್ಯಾಂಡ್​): ಕ್ರಿಸ್ಟ್​ಚರ್ಚ್​ ನಗರದ ಎರಡು ಮಸೀದಿಗಳ ಮೇಲೆ ಶುಕ್ರವಾರ ಗುಂಡಿನ ದಾಳಿ ನಡೆಸಿ 50 ಜನರ ಸಾವಿಗೆ ಕಾರಣನಾದ ವ್ಯಕ್ತಿಯಿಂದ ಪ್ರಧಾನಿ ಕಚೇರಿ ಆತನಿಂದ ದಾಳಿ ನಡೆಸುವ 9 ನಿಮಿಷಗಳ ಮುನ್ನ ಪ್ರಣಾಳಿಕೆಯೊಂದನ್ನು ಸ್ವೀಕರಿಸಿದೆ ಎಂದು ಪ್ರಧಾನಿ ಜಸೀಂದಾ ಆರ್ಡ್ರೇನ್​ ಹೇಳಿದ್ದಾರೆ. 

ದಾಳಿ ನಡೆಯುವ 9 ನಿಮಿಷದ ಮುನ್ನ ದಾಳಿಕೋರ ಇ- ಮೇಲ್​ ಮುಖಾಂತರ  ಪ್ರಣಾಳಿಕೆ ಕಳುಹಿಸಿದ್ದಾನೆ. ನನ್ನನ್ನು ಸೇರಿದಂತೆ 30ಕ್ಕೂ ಹೆಚ್ಚು ಜನ ಮೇಲ್​ಅನ್ನು ಸ್ವೀಕರಿಸಿದ್ದಾರೆ ಎಂದು ತಿಳಿಸಿದ್ದಾರೆ.

ಆ ಸಂದೇಶದಲ್ಲಿ ಯಾವುದೇ ವಿಳಾಸವನ್ನು ಒಳಗೊಂಡಿರಲಿಲ್ಲ. ಯಾವುದೇ ನಿಖರ ಮಾಹಿತಿಯೂ ಇರಲಿಲ್ಲ. ಮತ್ತು ಆ ಮೇಲ್​ ಅನ್ನು ಎರಡು ನಿಮಿಷದಲ್ಲಿ ಭದ್ರತಾ ವ್ಯಾಪ್ತಿಗೆ ಕಳುಹಿಸಿಕೊಡಲಾಗಿದೆ ಎಂದು ಪ್ರಧಾನಿ ತಿಳಿಸಿದರು.

ಪ್ರಣಾಳಿಕೆಯ ಅಂಶಗಳು ಸುದೀರ್ಘವಾಗಿ, ಅಡ್ಡಾದಿಡ್ಡಿಯಾಗಿ ಮತ್ತು ಪಿತೂರಿಯಿಂದ ಕೂಡಿದ್ದಾಗಿ ಪ್ರಧಾನಿ ಆರ್ಡ್ರೇನ್ ಹೇಳಿದರು.

ಇದನ್ನು ಓದಿ: 28 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ​ ಫೈನಲ್? ಹಾಸನದಲ್ಲಿ ಎ.ಮಂಜುಗೆ ಟಿಕೆಟ್, ಮಂಡ್ಯದಲ್ಲಿ ಸಿದ್ದರಾಮಯ್ಯ ಸ್ಪರ್ಧೆ!

ವಾಸ್ತವ ಏನೆಂದರೆ ದಾಳಿಯ ದೃಷ್ಟಿಕೋನಗಳನ್ನು ಇಟ್ಟುಕೊಂಡ ಸೈದ್ಧಾಂತಿಕ ಪ್ರಣಾಳಿಕೆ ಅದಾಗಿತ್ತು. ಈ ದಾಳಿ ಎಲ್ಲರನ್ನು ಆಳವಾಗಿ ಘಾಸಿಗೊಳಿಸಿದೆ. ಆಧುನಿಕ ಕಾಲದ ಪಶ್ಚಿಮದಲ್ಲಿ ಮುಸ್ಲಿಮರ ವಿರುದ್ಧ ನಡೆದ ಮಾರಣಾಂತಿಕ ದಾಳಿ ಇದಾಗಿದೆ. ಈ ಘಟನೆಯಿಂದ ಇಡೀ ದೇಶವೇ ಆಘಾತಕ್ಕೆ ಒಳಗಾಗಿದೆ. ಇದು ದೇಶದ ಅತಿ ಕರಾಳ ದಿನ ಎಂದು ಪ್ರಧಾನಿ ಮರುಗಿದರು.

First published:March 17, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading