Viral News : ಅಬ್ಬಬ್ಬಾ.. ಅದೆಂಥಾ ಗಟ್ಟಿಗಿತ್ತಿ.. ಹೆರಿಗೆ ನೋವಿನಲ್ಲೂ ಸೈಕಲ್ ತುಳಿದೇ ಆಸ್ಪತ್ರೆ ಸೇರಿದ ಮಹಾತಾಯಿ!

Viral News : ನ್ಯೂಜಿಲೆಂಡ್(New Zealand)​ನ ಮಹಿಳೆಯೊಬ್ಬರು ಈಗ ಸುದ್ದಿಯಲ್ಲಿದ್ದಾರೆ. ಹೆರಿಗೆ ನೋವಲ್ಲೂ ಸೈಕಲ್​(Cycle) ತುಳಿದುಕೊಂಡು ಹೋಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಶಾಕ್(Shock)​ ಆಯ್ತಾ? ಆಗಲೇ ಬೇಕು, ಆಗಲಿ ಅಂತಾನೆ ಅಲ್ವಾ ಈ ಒಂದು ಸೂಪರ್​ ಸ್ಟೋರಿನಾ ನಿಮ್ಮ ಮುಂದೆ ತಂದಿದ್ದು.

ಸೈಕಲ್​ ತುಳಿದು ಆಸ್ಪತ್ರೆ ಸೇರಿದ ಸಂಸದೆ

ಸೈಕಲ್​ ತುಳಿದು ಆಸ್ಪತ್ರೆ ಸೇರಿದ ಸಂಸದೆ

  • Share this:
ಜೀವ ಕೊಟ್ಟವಳು ತುತ್ತು ಇಟ್ಟವಳು ಒಬ್ಬಳೇ.. ಪ್ರಾಣ ಒತ್ತೆ ಇಟ್ಟು ಜನ್ಮ ನೀಡುವಳು .. ತಾಯಿ(Mother) ಇಲ್ಲಿ ಒಬ್ಬಳೇ..ಹೌದು, ತಾಯಿ ಪದ ಕೇಳಿದರೆ ಸಾಕು ಎಲ್ಲರ ಮನಸ್ಸಲ್ಲೂ ಅದೇನೋ ನೆಮ್ಮದಿ, ಸಂತಸ. 9 ತಿಂಗಳು ಹೊಟ್ಟೆಯಲ್ಲಿಟ್ಟುಕೊಂಡು ಜನ್ಮ ನೀಡುತ್ತಾಳೆ. ನಾವು ಕಣ್ಣು ಬೀಡಬೇಕಾದರೆ ಆಕೆ ಪಡುವ ನೋವು(Pain).. ಅಬ್ಬಬ್ಬಾ ಯಾರಿಗೂ ಬೇಡ. ಆ ನೋವನ್ನು ತಡೆಯುವ ಶಕ್ತಿ ಇರುವುದು ಆ ತಾಯಿಗೆ ಮಾತ್ರ. ಹೆರಿಗೆ(Delivery) ಸಮಯದಲ್ಲಿ ತನ್ನ ಮಕ್ಕಳಿಗೆ ಏನೂ ತೊಂದರೆಯಾಗಬಾರದು ಅಂತ ಅಮ್ಮ ಹೆಚ್ಚಿನ ಕಾಳಜಿ(Care) ವಹಿಸುತ್ತಾರೆ. ಹೆರಿಗೆ ಡೇಟ್(Date)​ ಮುಂಚೆಯೇ ಆಸ್ಪತ್ರೆಗೆ ಸೇರುತ್ತಾರೆ. ಆದರೆ ಇಲ್ಲೋಬ್ಬರು ಮಹಾತಾಯಿ ಹೆರಿಗೆ ನೋವು ಬಂದರೂ ಮಾಡಿರುವ ಕೆಲಸ ಕೇಳಿದರೆ ದಂಗಾಗಿ ಹೋಗ್ತಿರಾ. ಅದು ಆಕೆ ಸಾಮನ್ಯರಲ್ಲ. ಹೌದು, ನ್ಯೂಜಿಲೆಂಡ್(New Zealand)​ನ ಮಹಿಳೆಯೊಬ್ಬರು ಈಗ ಸುದ್ದಿಯಲ್ಲಿದ್ದಾರೆ. ಹೆರಿಗೆ ನೋವಲ್ಲೂ ಸೈಕಲ್​(Cycle) ತುಳಿದುಕೊಂಡು ಹೋಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಶಾಕ್(Shock)​ ಆಯ್ತಾ? ಆಗಲೇ ಬೇಕು, ಆಗಲಿ ಅಂತಾನೆ ಅಲ್ವಾ ಈ ಒಂದು ಸೂಪರ್​ ಸ್ಟೋರಿನಾ ನಿಮ್ಮ ಮುಂದೆ ತಂದಿದ್ದು. ಹೆರಿಗೆ ನೋವು ಬಂದಾಗ ಅಲ್ಲಾಡಲು ಆಗದೇ ಅದೆಷ್ಟೋ ಮಂದಿ ಸಂಕಟ ಪಡುತ್ತಾರೆ. ಆದರೆ ಈ ಮಹಾತಾಯಿ ಆಸ್ಪತ್ರೆಗೆ ಸೈಕಲ್​ ತುಳಿದುಕೊಂಡು ಹೋಗಿದ್ದಾರೆ. ಈ ಗಟ್ಟಿಗಿತ್ತಿ ತಾಯಿಯ ಕಾರ್ಯ ನೋಡಿ ಎಲ್ಲರೂ ದಂಗಾಗಿ ಹೋಗಿದ್ದಾರೆ. 

ನ್ಯೂಜಿಲ್ಯಾಂಡ್ ಸಂಸದೆ ಜೂಲಿ ಅನ್ನೆ ಸಾಹಸ!

ನ್ಯೂಜಿಲೆಂಡ್​​ನ ಸಂಸದೆ ಜೂಲಿ ಅನ್ನೆ ಈ ಸಾಹಸ ಮಾಡಿದವರು. ಇವರು ರಾಜಕಾರಣಿಯಾಗುವುದಕ್ಕೂ ಮೊದಲು ಒಬ್ಬರು ಸೈಕ್ಲಿಸ್ಟ್​. ಆದರೆ ತುಂಬು ಗರ್ಭ, ಆ ಹೆರಿಗೆ ನೋವಿನ ಮಧ್ಯೆ ಮಧ್ಯರಾತ್ರಿ 2 ಗಂಟೆ ಹೊತ್ತಿಗೆ ಸೈಕಲ್​ ತುಳಿದುಕೊಂಡು ಬಂದು ಆಸ್ಪತ್ರೆ ಸೇರಿ ಒಂದೇ ತಾಸಿನಲ್ಲಿ ಮಗುವಿಗೆ ಜನ್ಮ ನೀಡಿದ್ದು ಇದೀಗ ಬಹುದೊಡ್ಡ ಸುದ್ದಿಯಾಗಿದೆ. ಒಂದು ಸುಂದರವಾದ, ಆರೋಗ್ಯಯುತವಾದ ಮಗುವಿಗೆ ಜನ್ಮ ನೀಡಿದ್ದಾರೆ. ಅದಾದ ಬಳಿಕ ಈ ಬಗ್ಗೆ ಫೇಸ್​ಬುಕ್​​ನಲ್ಲಿ ಪೋಸ್ಟ್​ ಹಾಕಿದ್ದಾರೆ. ಈಕೆಯ ಕೆಲಸಕ್ಕೆ ಸೋಷಿಯಲ್​ ಮೀಡಿಯಾದಲ್ಲಿ ಮಿಶ್ರ ಬೆಂಬಲ ವ್ಯಕ್ತವಾಗಿದೆ. ಈ ರೀತಿಯ ಮಹಾತಾಯಿಯನ್ನು ನಾನು ನೋಡೇ ಇಲ್ಲ ಅಂತ ಒಬ್ಬರು ಕಮೆಂಟ್​ ಮಾಡಿದ್ದಾರೆ.

ಇದನ್ನು ಓದಿ : ಅನಾರೋಗ್ಯದಿಂದ ತಡವಾಗಿ ಆರ್ಡರ್ ಮಾಡಿದ ಗ್ರಾಹಕ… ಆದ್ರೆ ರೆಸ್ಟೋರೆಂಟ್ ಹೇಗೆ ಪ್ರತಿಕ್ರಿಯಿಸಿದೆ ಗೊತ್ತಾ?

ಮಧ್ಯರಾತ್ರಿ ಸೈಕಲ್​ ತುಳಿದು ಹೊರಟ ಗಟ್ಟಿಗಿತ್ತಿ!

ಹೆರಿಗೆಯಾದ ಬಳಿಕ ಫೋಟೋಗಳನ್ನು ಶೇರ್​ ಮಾಡಿಕೊಂಡಿರುವ ಅನ್ನೆ, ಬಿಗ್​ ನ್ಯೂಸ್​ ! ಇಂದು ಮುಂಜಾನೆ 3.04ಗಂಟೆ ಹೊತ್ತಿಗೆ ನಮ್ಮ ಕುಟುಂಬಕ್ಕೆ ಹೊಸ ಸದಸ್ಯರೊಬ್ಬರ ಎಂಟ್ರಿಯಾಗಿದ್ದಾರೆ. ಈ ಸಲ ಹೆರಿಗೆಗೆ ಸೈಕಲ್ ತುಳಿದು ಕೊಂಡು ಹೋಗಿ ಅಡ್ಮಿಟ್ ಆಗುವ ಯೋಜನೆ ಇರಲಿಲ್ಲ. ಆದರೆ ಕೊನೆಯಲ್ಲಿ ಹಾಗೆಯೇ ಬರುವಂತಾಯ್ತು ಎಂದಿದ್ದಾರೆ. ಹಾಗೇ, ನನಗೆ 2 ಗಂಟೆ ಹೊತ್ತಿಗೆ ಹೆರಿಗೆ ನೋವು ಬರಲು ಶುರುವಾಯಿತು. ಆದರೆ ಅದು ತೀವ್ರವಾಗಿ ಇರಲಿಲ್ಲ. 2-3 ನಿಮಿಷಕ್ಕೊಮ್ಮೆ ಬಿಟ್ಟುಬಿಟ್ಟು ಬರುತ್ತಿತ್ತು. ಆದರೆ ಆಸ್ಪತ್ರೆಗೆ ಹೋಗುವಷ್ಟರಲ್ಲಿ ತೀವ್ರವಾಯಿತು. ನಾನು ಆಸ್ಪತ್ರೆ ಸೇರಿದ ಬಳಿಕ ನನಗೆ ಹೆರಿಗೆ ನೋವು ತೀವ್ರವಾಗಿ ಕಾಣಿಸಿಕೊಳ್ತು. ಒಂದು ತಾಸಿನ ಬಳಿಕ ಮಗು ಹುಟ್ಟಿದೆ ಎಂದು ಹೇಳಿಕೊಂಡಿದ್ದಾರೆ.

ಇದನ್ನು ಓದಿ :ಪೊಲೀಸ್ ಕೆಲಸಕ್ಕೆ ಬೈ, Instagramಗೆ ಹಾಯ್.. ಯಾವ ರೇಂಜಿಗೆ ದುಡ್ಡು ಮಾಡ್ತಿದಾಳಪ್ಪಾ...!

ಮೊದಲ ಹೆರಿಗೆಗೂ ಹೀಗೆ ಮಾಡಿದ್ದ ಸಂಸದೆ!


ಈ ಸಂಸದೆ ಹೀಗೆ ಸೈಕಲ್​ ಹೊಡೆದುಕೊಂಡು ಹೋಗಿ ಹೆರಿಗೆಗೆ ಅಡ್ಮಿಟ್​ ಆಗಿದ್ದು ಇದೇ ಮೊದಲಲ್ಲ. 2018ರಲ್ಲಿ ಇವರು ತಮ್ಮ ಮೊದಲ ಮಗನಿಗೆ ಜನ್ಮ ನೀಡುವಾಗಲೂ ಸೈಕಲ್​ ತುಳಿದುಕೊಂಡು ಹೋಗಿಯೇ ಆಕ್ಲೆಂಡ್​ ನಗರದ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದರು. ಆಗ  ಈ ವಿಚಾರ ಕೂಡ ಸಖತ್​ ವೈರಲ್ ಆಗಿತ್ತು. ಇದೀಗ ಮತ್ತೆ ಎರಡನೇ ಬಾರಿ ಈ ಸಾಹಸ ಮಾಡಿದ್ದಾರೆ. ಇನ್ನೂ ನೆಟ್ಟಿಗರು ಇವರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ತಾಯಿ ಮಗುವಿಗೆ ಶುಭ ಹಾರೈಸುತ್ತಿದ್ದಾರೆ.
Published by:Vasudeva M
First published: