New Zealand Mosque Attack: ಸಾವು-ಬದುಕಿನ ನಡುವೆ ಹೈದರಾಬಾದ್​ ಮೂಲದ ವ್ಯಕ್ತಿ- ಸ್ಥಳಕ್ಕೆ ಕಳುಹಿಸಿಕೊಡುವಂತೆ ಕುಟುಂಬಸ್ಥರ ಮನವಿ

ಅಪರಾಧ ಪ್ರಕರಣಗಳು ತೀರಾ ಕಡಿಮೆ ಇರುವಂತಹ ನ್ಯೂಜಿಲ್ಯಾಂಡ್​ನಲ್ಲಿ ಇಂತಹ ದುರ್ಘಟನೆ ನಡೆಯುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಇದು ನಿಜಕ್ಕೂ ದುರಾದೃಷ್ಟ. ನನ್ನ ತಾಯಿ ಸುದ್ದಿ ಕೇಳಿದ ತಕ್ಷಣದಿಂದ ಪ್ರಜ್ಞೆ ಕಳೆದುಕೊಂಡಿದ್ದಾರೆ. ನಾವೆಲ್ಲ ತುಂಬಾ ಭಯಭೀತರಾಗಿದ್ದೇವೆ ಎಂದು ಹೇಳಿದ್ದಾರೆ.

HR Ramesh | news18
Updated:March 16, 2019, 1:23 PM IST
New Zealand Mosque Attack: ಸಾವು-ಬದುಕಿನ ನಡುವೆ ಹೈದರಾಬಾದ್​ ಮೂಲದ ವ್ಯಕ್ತಿ- ಸ್ಥಳಕ್ಕೆ ಕಳುಹಿಸಿಕೊಡುವಂತೆ ಕುಟುಂಬಸ್ಥರ ಮನವಿ
ಸಾವು-ಬದುಕಿನ ನಡುವೆ ಹೋರಾಡುತ್ತಿರುವ ಮಹ್ಮದ್​ ಇಕ್ಬಾಲ್​ ಜಹಾಂಗಿರ್
HR Ramesh | news18
Updated: March 16, 2019, 1:23 PM IST
ನವದೆಹಲಿ: ನ್ಯೂಜಿಲ್ಯಾಂಡ್​ನ ಕ್ರಿಸ್ಟ್​ಚರ್ಚ್​ನ ಎರಡು ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದವರ ಮೇಲೆ ವ್ಯಕ್ತಿಯೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ 49 ಮಂದಿ ಹತರಾಗಿದ್ದಾರೆ. ದಾಳಿಯಲ್ಲಿ ಹಲವು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಇವರಲ್ಲಿ ಹೈದರಾಬಾದ್ ಮೂಲದ ಅಹ್ಮದ್​ ಇಕ್ವಾಲ್​ ಜಹಾಂಗಿರಿ ಒಬ್ಬರಾಗಿದ್ದಾರೆ. ಇವರನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.  ಗುಂಡಿನ ದಾಳಿಯಲ್ಲಿ 49 ಮಂದಿ ಮೃತಪಟ್ಟಿದ್ದು, 20 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಕ್ರಿಸ್ಟ್​ಚರ್ಚ್​ನಲ್ಲಿ ಅಹ್ಮದ್​ ರೆಸ್ಟೋರೆಂಟ್​ ನಡೆಸಿಕೊಂಡಿದ್ದರು. ಘಟನೆ ನಂತರ ಅಹ್ಮದ್​ ಕುಟುಂಬ ಸದಸ್ಯರು ಕೇಂದ್ರ ಸರ್ಕಾರ ಹಾಗೂ ತೆಲಂಗಾಣ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದು, ನ್ಯೂಜಿಲ್ಯಾಂಡ್​ಗೆ ತೆರಳಿ, ಅಹ್ಮದ್​ ಅವರ ನಿಗಾ ನೋಡಿಕೊಳ್ಳಬೇಕಿದೆ. ಹೀಗಾಗಿ ಶೀಘ್ರದಲ್ಲಿ ನ್ಯೂಜಿಲ್ಯಾಂಡ್​ಗೆ ತೆರಳಲು ವೀಸಾ ಪ್ರಕ್ರಿಯೆಯನ್ನು ಶೀಘ್ರದಲ್ಲಿ ಮುಗಿಸಿಕೊಡುವಂತೆ ಮನವಿ ಅಹ್ಮದ್​ ಸಹೋದರ ಮೊಹಮ್ಮದ್​ ಖುರ್ಷಿದ್​ ಮನವಿ ಮಾಡಿದ್ದಾರೆ.

Loading...ಶುಕ್ರವಾರ ಅವರ ಪ್ರಾರ್ಥನೆ ಸಲ್ಲಿಸಲು ಮಸೀದಿಗೆ ತೆರಳಿದ್ದರು. ಇದೇ ದಾಳಿಯಲ್ಲಿ ಅವರ ಇಬ್ಬರು ಸ್ನೇಹಿತರು ಮೃತರಾಗಿದ್ದಾರೆ. ನನ್ನ ಸಹೋದರ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಅಲ್ಲಿನಿಖರವಾಗಿ ಏನಾಗಿದೆ ಎಂಬುದರ ಸ್ಪಷ್ಟ ಮಾಹಿತಿ ನಮಗೆ ಇಲ್ಲ. ಅವರಿಗೆ ಹೆಂಡತಿ ಮತ್ತು ಮೂರು ಮತ್ತು ಒಂದು ವರ್ಷದ ಇಬ್ಬರು ಮಕ್ಕಳಿದ್ದಾರೆ ಎಂದು ಖುರ್ಷಿದ್ ತಿಳಿಸಿದ್ದಾರೆ.

ಇದನ್ನು ಓದಿ: New Zealand​ Shootout: 49 ಮಂದಿ ಸಾವು, ಮೂವರನ್ನು ಬಂಧಿಸಿದ ಪೊಲೀಸರು; ಉಗ್ರ ಕೃತ್ಯ ಎಂದ ಪಿಎಂ ಜಸಿಂಡಾ

ಆರೇಳು ತಿಂಗಳ ಹಿಂದೆ ಅವರು ಮನೆಗೆ ಬಂದಿದ್ದರು. ಅಪರಾಧ ಪ್ರಕರಣಗಳು ತೀರಾ ಕಡಿಮೆ ಇರುವಂತಹ ನ್ಯೂಜಿಲ್ಯಾಂಡ್​ನಲ್ಲಿ ಇಂತಹ ದುರ್ಘಟನೆ ನಡೆಯುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಇದು ನಿಜಕ್ಕೂ ದುರಾದೃಷ್ಟ. ನನ್ನ ತಾಯಿ ಸುದ್ದಿ ಕೇಳಿದ ತಕ್ಷಣದಿಂದ ಪ್ರಜ್ಞೆ ಕಳೆದುಕೊಂಡಿದ್ದಾರೆ. ನಾವೆಲ್ಲ ತುಂಬಾ ಭಯಭೀತರಾಗಿದ್ದೇವೆ ಎಂದು ಹೇಳಿದ್ದಾರೆ.

ಖುರ್ಷಿದ್​ ಅವರು ಹೈದರಾಬಾದ್​ ಸಂಸದ ಅಸಾದುದೀನ್​ ಓವೈಸಿ ಬಳಿಕೆ ತೆರಳಿದ್ದು, ಅವರು ವಿದೇಶಾಂಗ ವ್ಯವಹಾರ ಸಚಿವಾಲಯ ತಲುಪಿ, ಶೀಘ್ರದಲ್ಲಿ ಖುರ್ಷಿದ್​ ಮತ್ತು ಅವರ ಕುಟುಂಬ ನ್ಯೂಜಿಲ್ಯಾಂಡ್​ಗೆ ತೆರಳಲು ಅನುಮತಿ ಮಾಡಿಕೊಡುವಂತೆ ಸುಷ್ಮಾ ಸ್ವರಾಜ್​ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ.

First published:March 15, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626