Coronavirus: ನ್ಯೂಯಾರ್ಕ್​ನಲ್ಲಿ ಹೆಚ್ಚಾಯ್ತು ಹೊಸ ತಳಿ ಆತಂಕ : `ವಿಪತ್ತು ತುರ್ತುಸ್ಥಿತಿ’ ಘೋಷಿಸಿದ ಗರ್ವನರ್​!

Coronavirus: ಪ್ರತಿದಿನ ಕೊರೋನಾ ಪ್ರಕರಣಗಳ ಸಂಖ್ಯೆ ಏರುತ್ತಲೇ ಇದೆ. ಅದರಲ್ಲೂ ಹೊಸ ತಳಿಯ ಆತಂಕ ಹೆಚ್ಚಾಗಿದೆ. ಹೀಗಾಗಿ ನ್ಯೂಯಾರ್ಕ್ ಗರ್ವನರ್​  ಕ್ಯಾಥಿ ಹೊಚುಲ್ ‘ವಿಪತ್ತು ತುರ್ತುಸ್ಥಿತಿ’ಯನ್ನು ಘೋಷಣೆ ಮಾಡಿದ್ದಾರೆ. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಇಡೀ ವಿಶ್ವವನ್ನೇ ಕೊರೋನಾ(Corona) ತನ್ನ ಕಪಿ ಮುಷ್ಟಿಯಲ್ಲಿಟ್ಟುಕೊಂಡು ಹಿಂಡಿ ಹಿಪ್ಪೆ ಮಾಡಿತ್ತು. ಇದೀಗ ಕೊಂಚ ಗ್ಯಾಪ್​ ಕೊಟ್ಟಿತ್ತು. ಎಲ್ಲವೂ ಮುಗಿತು. ಇನ್ನು ಮುಂದೆ ಯಾವ ಕೊರೋನಾನೂ ನಮ್ಮನ್ನು ಏನು ಮಾಡಕ್ಕಾಗಲ್ಲ ಅಂತ ಜನ ನಿಟ್ಟುಸಿರು ಬಿಟ್ಟಿದ್ದರು. 3ನೇ ಅಲೆ(3rd Wave) ಅನ್ನೋದೆಲ್ಲ ಸುಳ್ಳು.. ಖಂಡಿತ ಮತ್ತೆ ಕರೋನಾ ಬರಲ್ಲ ಅಂತ ನಿರ್ಲಕ್ಷ್ಯ ತೋರಿದ್ದರು. ಆದರೆ ಮಾಹಾಮಾರಿ ಕೊರೋನಾ ಮತ್ತೆ ಬಂದಿದೆ. ಮತ್ತಷ್ಟು ಬಲಿಷ್ಟವಾಗಿ. ಹೌದು, ಹಲವು ದೇಶಗಳಲ್ಲಿ ಕೊರೋನಾ ಕೇಸ್​ ಕಡಿಮೆಯಾಗಿತ್ತು, ಹೀಗಾಗಿ ಹೇರಲಾಗಿದ್ದ ನಿಬಂಧನೆಗಳನ್ನೆಲ್ಲ ಹಿಂಪಡೆಯಲಾಗಿತ್ತು, ಇದೇ ಸಮಯಕ್ಕೆ ಕಾಯುತ್ತಿದ್ದ ಕ್ರೂರಿ ಕೊರೋನಾ ತನ್ನ ಆರ್ಭಟವನ್ನು ಮತ್ತೆ ಶುರುಮಾಡಿದೆ. ಅದರಲ್ಲೂ ನ್ಯೂಯಾರ್ಕ್​(New York)ನಲ್ಲಿ ಕೊರೋನಾ ಅಬ್ಬರ ಮೀತಿಮಿರಿದೆ. ಸಿಕ್ಕ ಸಿಕ್ಕವರ ಮೇಲೆ ವೈರಸ್(Virus)​ ಅಟ್ಯಾಕ್​ ಮಾಡಿ ಜೀವ ತೆಗೆಯುತ್ತಿದೆ. WHO ಕೂಡ ಕೊರೋನಾ ಬಗ್ಗೆ ಅಸಡ್ಡೆ ತೋರದಂತೆ ಎಚ್ಚರಿಸುತ್ತಲೇ ಬರುತ್ತಿದೆ. ಎಲ್ಲ ದೇಶಗಳು ಆ ಮಾತನ್ನು ಈ ಕಿವಿಯಲ್ಲಿ ಕೇಳಿ, ಆ ಕಿವಿಯಲ್ಲಿ ಬಿಡುತ್ತಿದ್ದಾರೆ. ಆದರೆ ಮತ್ತೆ ಬಂದಿರುವ ಈ ಕೊರೋನಾ ಅಬ್ಬರ ಹೇಗಿದೆ ಅಂದರೆ ನೀವೂ ದಂಗಾಗೋದು ಗ್ಯಾರಂಟಿ. ಹೌದು, ನ್ಯೂಯಾರ್ಕ್​ನಲ್ಲಿ ಮತ್ತೆ ಪರಿಸ್ಥಿತಿ ಹದಗೆಟ್ಟಿದೆ. ಅಲ್ಲಿನ ಸರ್ಕಾರ(Government) ಏನು ಮಾಡದ ಸ್ಥಿತಿ ಉಂಟಾಗಿದೆ. ಪ್ರತಿದಿನ ಕೊರೋನಾ ಪ್ರಕರಣಗಳ ಸಂಖ್ಯೆ ಏರುತ್ತಲೇ ಇದೆ. ಅದರಲ್ಲೂ ಹೊಸ ತಳಿಯ ಆತಂಕ ಹೆಚ್ಚಾಗಿದೆ. ಹೀಗಾಗಿ ನ್ಯೂಯಾರ್ಕ್ ಗರ್ವನರ್​(Governor)  ಕ್ಯಾಥಿ ಹೊಚುಲ್(Kathy Hochul) ‘ವಿಪತ್ತು ತುರ್ತುಸ್ಥಿತಿ’(Disaster emergency)ಯನ್ನು ಘೋಷಣೆ ಮಾಡಿದ್ದಾರೆ. 

  Omicron ರೂಪಾಂತರಿ ತಡೆಯಲು ಕ್ರಮ!

  ಹೆಚ್ಚುತ್ತಿರುವ COVID-19 ಸೋಂಕುಗಳು ಮತ್ತು ಆಸ್ಪತ್ರೆಗೆ ದಾಖಲಾದ ದರಗಳ ಮಧ್ಯೆ, ನ್ಯೂಯಾರ್ಕ್ ಗವರ್ನರ್ ಕ್ಯಾಥಿ ಹೊಚುಲ್  COVID-19 "ವಿಪತ್ತು ತುರ್ತು" ಘೋಷಣೆಯನ್ನು ಹೊರಡಿಸಿದ್ದಾರೆ. "COVID-19 ಹರಡುವುದನ್ನು ತಡೆಯಲು ನಾವು ಅಸಾಧಾರಣ ಕ್ರಮವನ್ನು ತೆಗೆದುಕೊಂಡಿದ್ದೇವೆ... ಆದಾಗ್ಯೂ, ಮುಂಬರುವ ಚಳಿಗಾಲದಲ್ಲಿ ಸ್ಪೈಕ್‌ಗಳ ಎಚ್ಚರಿಕೆಯ ಚಿಹ್ನೆಗಳನ್ನು ನಾವು ನೋಡುತ್ತಲೇ ಇದ್ದೇವೆ ಮತ್ತು ಹೊಸ Omicron ರೂಪಾಂತರವು ನ್ಯೂಯಾರ್ಕ್‌ನಲ್ಲಿ ಇನ್ನೂ ಪತ್ತೆಯಾಗಿಲ್ಲ, ಆದರೆ ಮುಂಬರುವ ದಿನಗಳಲ್ಲಿ ಅದು ನಮ್ಮನ್ನು ಕಾಡಲಿದೆ ಎಂದು ಅವರು ಹೇಳಿದ್ದಾರೆ. ಅಲ್ಲಿನ ಜನರು ಎಚ್ಚರದಿಂದ ಇರುವಂತೆ ಸೂಚನೆ ಕೂಡ ನೀಡಲಾಗಿದ್ಯಂತೆ.

  ಇದನ್ನು ಓದಿ : ಒಮಿಕ್ರಾನ್ ವೈರಸ್ ಬಗ್ಗೆ ICMR ವಿಜ್ಞಾನಿಗಳು ಹೇಳಿದ್ದೇನು ಗೊತ್ತೇ?

  ಏನಿದು ಒಮಿಕ್ರಾನ್​ ರೂಪಾಂತರಿ ವೈರಸ್?

  ಹೊಸ ಕೊರೊನಾ ವೈರಸ್ ರೂಪಾಂತರ ಬಿ.1.1.529, ಅಧಿಕೃತವಾಗಿ ವಿಶ್ವ ಆರೋಗ್ಯ ಸಂಸ್ಥೆಯು ಇದನ್ನು 'ಒಮಿಕ್ರಾನ್' ಎಂದು ಹೆಸರಿಸಿದ್ದಾರೆ. ಆತಂಕಕಾರಿಯಾಗಿ ಹೆಚ್ಚಿನ ಸಂಖ್ಯೆಯ ರೂಪಾಂತರಗಳಿಂದಾಗಿ ವಿಜ್ಞಾನಿಗಳು ವೈರಸ್ ಅನ್ನು ಲಸಿಕೆಗಳಿಗೆ ಹೆಚ್ಚು ಪ್ರತಿರೋಧಕವಾಗಿಸಬಹುದು ಎಂದು ಹೇಳಿದ್ದಾರೆ. ಈ ವೈರಸ್ ಹೆಚ್ಚು ತೀವ್ರವಾದ ರೋಗ ಲಕ್ಷಣಗಳಿಗೆ ಕಾರಣವಾಗಬಹುದು ಎಂದು ನಿರೀಕ್ಷಿಸಿದ್ದಾರೆ. ಈ ರೂಪಾಂತರವು ಒಟ್ಟಾರೆಯಾಗಿ 50 ರೂಪಾಂತರಗಳನ್ನು ಹೊಂದಿವೆ ಎಂದು ಹೇಳಿದ್ದಾರೆ.​ ಈ ತಳಿಯ ವೈರಸ್​ ದಕ್ಷಿಣ ಆಫ್ರಿಕಾದಲ್ಲಿ ಹೆಚ್ಚು ಜನರಲ್ಲಿ ಕಾಣಿಸಿಕೊಂಡಿದೆ.

  ಇದನ್ನು ಓದಿ : ದಕ್ಷಿಣ ಆಫ್ರಿಕಾದಲ್ಲಿ ಹೊಸ ತಳಿ ಪತ್ತೆ, ಭಾರೀ ವೇಗದಲ್ಲಿ ಹರಡುತ್ತಿದೆ ವೈರಸ್!

  ಮಾರಣಾಂತಿಕ ವೈರಸ್

  ಕೆಲವೊಮ್ಮೆ ವೈರಸ್ ರೂಪಾಂತರಗೊಳ್ಳುತ್ತಿರುವುದರಿಂದ ಈ ವೈರಸ್ ಪ್ರಬೇಧಕ್ಕೆ ಸ್ವಲ್ಪ ಪ್ರಯೋಜನ ನೀಡುತ್ತವೆ ಮತ್ತು ನಾವು ಡೆಲ್ಟಾದಲ್ಲಿ ನೋಡಿದಂತೆ ಅದನ್ನು ಹೆಚ್ಚು ಪ್ರಸರಣ ದಕ್ಷ ಗೊಳಿಸುತ್ತವೆ ಎಂಬುದನ್ನು ಸಹ ಗಮನಿಸಬೇಕು" ಎಂದು ಅವರು ಹೇಳಿದರು. "ವೈರಸ್ ತನ್ನ ಪ್ರಸರಣಕ್ಕಾಗಿ ಜೀವಂತ ದೇಹದ ಮೇಲೆ ಅವಲಂಬಿತವಾಗಿರುವುದರಿಂದ, ಮನುಷ್ಯನು ಜೀವಂತವಾಗಿ ಉಳಿಯದಿರುವವರೆಗೆ ಮಾತ್ರ ವೈರಸ್ ಮಾರಣಾಂತಿಕವಾಗಿ ಹರಡುವ ಸಾಧ್ಯತೆ ಇರುತ್ತದೆ. ಮರಣದ ನಂತರ ವೈರಸ್ ಉಳಿದಿರುವ ಸಾಧ್ಯತೆ ಬಹಳ ಕಡಿಮೆ ಇರುತ್ತದೆ" ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ನಲ್ಲಿ ಸಾಂಕ್ರಾಮಿಕ ರೋಗಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿರುವ ಪಾಂಡಾ ಹೇಳಿದ್ದಾರೆ.
  Published by:Vasudeva M
  First published: