ಮಗಳ ಮದುವೆಗೆ ಚಿನ್ನ ಕೊಳ್ಳುವ ಚಿಂತೆ ಇನ್ನಿಲ್ಲ; ನವ ವಧುಗಳಿಗೆ ಸರ್ಕಾರದಿಂದ ಸಿಹಿಸುದ್ದಿ

ಮದುವೆಯಾಗುವ ಯುವತಿಯರು ತಮ್ಮ ಮದುವೆಯ ನೋಂದಣಿ ವೇಳೆ ಚಿನ್ನ ಖರೀದಿಸಿದ ರಶೀದಿಯನ್ನು ರಿಜಿಸ್ಟ್ರಾರ್​ಗೆ ನೀಡಬೇಕು. ಬಿಲ್ ನೀಡಿದರೆ ಮಾತ್ರ ಅವರಿಗೆ ಈ ಅರುಂಧತಿ ಚಿನ್ನದ ಯೋಜನೆಯ ಪ್ರಕಾರ 30 ಸಾವಿರ ರೂ. ನೀಡಲಾಗುತ್ತದೆ.

Sushma Chakre | news18-kannada
Updated:January 1, 2020, 9:37 AM IST
ಮಗಳ ಮದುವೆಗೆ ಚಿನ್ನ ಕೊಳ್ಳುವ ಚಿಂತೆ ಇನ್ನಿಲ್ಲ; ನವ ವಧುಗಳಿಗೆ ಸರ್ಕಾರದಿಂದ ಸಿಹಿಸುದ್ದಿ
ಸಾಂದರ್ಭಿಕ ಚಿತ್ರ
  • Share this:
ಗುವಾಹಟಿ (ಡಿ. 31): ಅಸ್ಸಾಂ ರಾಜ್ಯದಲ್ಲಿ ಜಾರಿಗೆ ತರಲಾಗಿರುವ 'ಅರುಂಧತಿ ಚಿನ್ನದ ಯೋಜನೆ' ಅನ್ವಯ ಇಂದಿನಿಂದ ಮದುವೆಯಾಗುವ ಈ ರಾಜ್ಯದ ವಧುಗಳಿಗೆ ಮದುವೆ ನೋಂದಣಿ ವೇಳೆ 10 ಗ್ರಾಂ ಚಿನ್ನ ಖರೀದಿಸಲು ಹಣ ನೀಡಲಾಗುತ್ತದೆ.

ಅಸ್ಸಾಂನಲ್ಲಿ ಬಾಲ್ಯ ವಿವಾಹವನ್ನು ನಿಯಂತ್ರಿಸುವ ಮತ್ತು ಮದುವೆಯ ನೋಂದಣಿಯನ್ನು ಉತ್ತೇಜಿಸುವ ಸಲುವಾಗಿ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ. 2020ರ ಜನವರಿ 1ರಿಂದ ಈ ಯೋಜನೆ ಕಾರ್ಯರೂಪಕ್ಕೆ ಬರಲಿದೆ. ಈ ಯೋಜನೆಯ ಅನ್ವಯ ಅಸ್ಸಾಂನ ವಧುವಿಗೆ ಚಿನ್ನ ಖರೀದಿಗೆಂದು ರಾಜ್ಯ ಸರ್ಕಾರದಿಂದ 30 ಸಾವಿರ ರೂ. ನೀಡಲಾಗುತ್ತದೆ. ಇದಕ್ಕಾಗಿ ವಾರ್ಷಿಕವಾಗಿ 800 ಕೋಟಿ ರೂ. ಮೀಸಲಿಡಲಾಗಿದೆ.

ಮದುವೆಯಾಗುವ ಯುವತಿಯರು ತಮ್ಮ ಮದುವೆಯ ನೋಂದಣಿ ವೇಳೆ ಚಿನ್ನ ಖರೀದಿಸಿದ ರಶೀದಿಯನ್ನು ರಿಜಿಸ್ಟ್ರಾರ್​ಗೆ ನೀಡಬೇಕು. ಬಿಲ್ ನೀಡಿದರೆ ಮಾತ್ರ ಅವರಿಗೆ ಈ ಅರುಂಧತಿ ಚಿನ್ನದ ಯೋಜನೆಯ ಪ್ರಕಾರ 30 ಸಾವಿರ ರೂ. ನೀಡಲಾಗುತ್ತದೆ. ವಾರ್ಷಿಕ ಆದಾಯ 5 ಲಕ್ಷ ರೂ.ಗಿಂತ ಕಡಿಮೆ ಇರುವವರು ಮಾತ್ರ ಈ ಯೋಜನೆಯ ಲಾಭ ಪಡೆಯಬಹುದು. ಹಾಗೇ, ಈ ಯೋಜನೆಯನ್ವಯ ಸರ್ಕಾರ ನೀಡುವ ಹಣ ಪಡೆಯಬೇಕೆಂದರೆ ವಧುವಿಗೆ 18 ವರ್ಷ ಮತ್ತು ವರನಿಗೆ 21 ವರ್ಷ ತುಂಬಿರಬೇಕು.

ಇದನ್ನೂ ಓದಿ: ಯಶವಂತಪುರ ಫ್ಲೈಓವರ್​ನಲ್ಲಿ ಸಿಎಂ ಯಡಿಯೂರಪ್ಪ ಬೆಂಗಾವಲು ಕಾರು ಅಪಘಾತ; ಚಾಲಕನಿಗೆ ಗಂಭೀರ ಗಾಯ

1954ರ ವಿಶೇಷ ವಿವಾಹ (ಅಸ್ಸಾಂ) ಕಾಯ್ದೆಯಡಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಮದುವೆಯನ್ನು ಔಪಚಾರಿಕವಾಗಿ ನೋಂದಾಯಿಸಿಕೊಂಡ ನಂತರ ಈ ಯೋಜನೆಯ ಲಾಭ ಪಡೆಯಬಹುದು. ಇದಾದ ಬಳಿಕ ಶಾಸ್ತ್ರೋಕ್ತವಾಗಿ ಮದುವೆ ಮಾಡಿಕೊಳ್ಳಲು ಅವಕಾಶವಿದೆ.
First published:December 31, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ