• Home
 • »
 • News
 • »
 • national-international
 • »
 • Covid XBB.1.5: ಕೋವಿಡ್ ಹೊಸ ರೂಪಾಂತರಿ: ಅನಗತ್ಯವಾಗಿ ಹೊರಗೆ ಹೋಗಬೇಡಿ, ಎಚ್ಚರಿಕೆಯಿಂದಿರಿ ಅಂತಾರೆ ತಜ್ಞರು

Covid XBB.1.5: ಕೋವಿಡ್ ಹೊಸ ರೂಪಾಂತರಿ: ಅನಗತ್ಯವಾಗಿ ಹೊರಗೆ ಹೋಗಬೇಡಿ, ಎಚ್ಚರಿಕೆಯಿಂದಿರಿ ಅಂತಾರೆ ತಜ್ಞರು

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಚೀನಾ ಕೆಲದಿನಗಳಿಂದ ಬಿಎಫ್​-7 ಎಂಬ ಕೋವಿಡ್​ ರೂಪಾಂತರಿಯಿಂದ ತತ್ತರಿಸಿ ಹೋಗಿದೆ. ಇದನ್ನು ತಿಳಿದ ಭಾರತೀಯರ ಮನದಲ್ಲಿ ಆತಂಕ ಉಂಟಾಗಿತ್ತು. ಇದೀಗ ಭಾರತದ ಗುಜರಾತ್​ನಲ್ಲಿ ಒಮಿಕ್ರಾನ್​ನ ಸಬ್​ವೇರಿಯಂಟ್​ ಆಗಿ ಎಕ್ಸ್​ಬಿಬಿ 1.5 ಎಂಬ ಪ್ರಕರಣ ಕಂಡುಬಂದಿದೆ.

 • Share this:

  ಎರಡುವರ್ಷ ಇಡೀ ವಿಶ್ವವೇ ಒಂದು ಸಾಂಕ್ರಾಮಿಕ ರೋಗದಿಂದ ತತ್ತರಿಸಿ ಹೋಗಿತ್ತು. ಆದರೆ ಇದೀಗ ಮತ್ತೆ ಜನರಲ್ಲಿ ಆತಂಕವನ್ನುಂಟು ಮಾಡಿದೆ. ಚೀನಾದಲ್ಲಿ ಕೋವಿಡ್‌ (Covid) ಸಾಂಕ್ರಾಮಿಕದ ಉಲ್ಬಣಕ್ಕೆ ಕಾರಣವಾಗಿರುವ ಬಿಎಫ್‌7 (BF-7) ಭಾರತದಲ್ಲಿ ಕಾಣಿಸಿಕೊಂಡಿರುವ ಬೆನ್ನಲ್ಲೇ ಕೋವಿಡ್‌ ನ ಮತ್ತೊಂದು ಹೊಸ ರೂಪಾಂತರಿ ಪತ್ತೆಯಾಗಿದೆ. ಅದೇ ಕೋವಿಡ್ ಎಕ್ಸ್‌ಬಿಬಿ 1.5 (Covid XBB 1.5 Virus) ರೂಪಾಂತರಿ ವೈರಸ್. ಈಗಾಗಲೇ ಅಮೆರಿಕದಲ್ಲಿ ಶೇ. 40.5 ಪ್ರಕರಣಗಳಿಗೆ ಕಾರಣವಾಗಿರುವ ಎಕ್ಸ್​​ಬಿಬಿ 1.5 ರೂಪಾಂತರಿ ಇದೀಗ ಭಾರತದಲ್ಲೂ ಪತ್ತೆಯಾಗಿದೆ. ಹೌದು ಒಮಿಕ್ರಾನ್‌ ನ ಸಬ್‌ವೇರಿಯೆಂಟ್‌ ಎಕ್ಸ್​​​ಬಿಬಿ 1.5 ಪ್ರಕರಣವು ಡಿಸೆಂಬರ್‌ 31 ರಂದು ಗುಜರಾತ್‌ನಲ್ಲಿ ವರದಿಯಾಗಿದೆ.


  ಚೀನಾ ಕೆಲದಿನಗಳಿಂದ ಬಿಎಫ್​-7 ಎಂಬ ಕೋವಿಡ್​ ರೂಪಾಂತರಿಯಿಂದ ತತ್ತರಿಸಿ ಹೋಗಿದೆ. ಇದನ್ನು ತಿಳಿದ ಭಾರತೀಯರ ಮನದಲ್ಲಿ ಆತಂಕ ಉಂಟಾಗಿತ್ತು. ಇದೀಗ ಭಾರತದ ಗುಜರಾತ್​ನಲ್ಲಿ ಒಮಿಕ್ರಾನ್​ನ ಸಬ್​ವೇರಿಯಂಟ್​ ಆಗಿ ಎಕ್ಸ್​ಬಿಬಿ 1.5 ಎಂಬ ಪ್ರಕರಣ ಕಂಡುಬಂದಿದೆ. ಇದನ್ನು ಅರಿತಂತಹ ತಜ್ಞರು ಹೊರಗಡೆ ಅನಗತ್ಯವಾಗಿ ಹೋಗಬೇಡಿ, ಎಚ್ಚರದಿಂದಿರಿ ಎಂದು ಹೇಳಿದ್ದಾರೆ.


  “ XBB.1.5 ರೂಪಾಂತರಿ ಬಗ್ಗೆ ಹೆಚ್ಚು ಚಿಂತಿಸಬೇಕಿಲ್ಲ”


  ಈ ಮಧ್ಯೆ XBB.1.5 ರೂಪಾಂತರಿಯು ಮೇಲ್ನೋಟಕ್ಕೆ ಅಷ್ಟೊಂದು ಅಪಾಯಕಾರಿಯಲ್ಲ ಎಂಬುದಾಗಿ ತಜ್ಞರು ಹೇಳಿದ್ದಾರೆ. ಎಕ್ಸ್‌ಬಿಬಿ 1.5 ಹೊಸ ಕೋವಿಡ್ ರೂಪಾಂತರದ ಬಗ್ಗೆ ಹೆಚ್ಚು ಚಿಂತಿಸಬೇಕಾಗಿಲ್ಲ. ಏಕೆಂದರೆ, ಭಾರತದಲ್ಲಿ ಶೇ. 90ರಷ್ಟು ಜನರು ಲಸಿಕೆ ಪಡೆದಿದ್ದಾರೆ. ಅಲ್ಲದೇ 30-40% ಜನರು ಬೂಸ್ಟರ್ ಡೋಸ್‌ಗಳನ್ನು ಹಾಕಿಸಿಕೊಂಡಿದ್ದಾರೆ ಎಂಬುದಾಗಿ ನವದೆಹಲಿಯ ಸರ್. ಗಂಗಾ ರಾಮ್ ಆಸ್ಪತ್ರೆಯ ವೈದ್ಯ ಡಾ. ಎಂ.ವಾಲಿ ಹೇಳಿದ್ದಾರೆ.


  ಇದನ್ನೂ ಓದಿ: ವಾಹನ ಚಲಾಯಿಸುವಾಗ ಮೊಬೈಲ್ ಬಳಸಿ 1,040 ಜನರ ಸಾವು


  ಇದೇ ವೇಳೆ ಡಾ ವಾಲಿ ಅವರು ಎಚ್ಚರಿಕೆಯಿಂದ ಇರುವಂತೆ ಮತ್ತು ಅನಗತ್ಯವಾಗಿ ಹೊರಗೆ ಕಾಲಿಡದಂತೆ ಸಲಹೆ ನೀಡಿದರು. ಅಲ್ಲದೇ ತಮ್ಮ ಹಿರಿಯರು ಮತ್ತು ಮಕ್ಕಳನ್ನು ಪ್ರತ್ಯೇಕವಾಗಿರಿಸುವಂತೆಯೂ ಹೇಳಿದ್ದಾರೆ. ಬೂಸ್ಟರ್ ಡೋಸೇಜ್, ಬಲವಾದ ರೋಗನಿರೋಧಕ ಶಕ್ತಿ ನೀಡುತ್ತದಲ್ಲದೇ, ಆರಂಭಿಕ ಸೋಂಕಿನಿಂದ ರಕ್ಷಿಸುತ್ತದೆ. ಅಲ್ಲದೇ ಪ್ರತಿರಕ್ಷಣೆ ನೀಡುವುದಲ್ಲದೇ ಒಟ್ಟಾರೆ ವೈರಸ್‌ನ ಶಕ್ತಿಯನ್ನು ಕಡಿಮೆ ಮಾಡುತ್ತದೆ ಎಂದು ಡಾ. ವಾಲಿ ಹೇಳಿದರು.


  ಸಾಂಕೇತಿಕ ಚಿತ್ರ


  ಜೊತೆಗೆ ವೈರಸ್ ವಿರುದ್ಧ ಹೋರಾಡುವಲ್ಲಿ ರೋಗನಿರೋಧಕತೆಯ ಮಹತ್ವವನ್ನು ಅವರು ಒತ್ತಿ ಹೇಳಿದರು. ಆದ್ರೆ ಸೋಂಕಿತ ವ್ಯಕ್ತಿಗಳನ್ನು ಮಾತ್ರ ಪ್ರತ್ಯೇಕವಾಗಿ ಇರಿಸಬೇಕಾಗುತ್ತದೆ ಮತ್ತು ಅವರ ಮಾದರಿಗಳನ್ನು ಜೀನೋಮ್ ಅನುಕ್ರಮಕ್ಕಾಗಿ ಕಳುಹಿಸಲಾಗುತ್ತದೆ. ಆದ್ರೆ ಅವರನ್ನು ಆಸ್ಪತ್ರೆಗೆ ಕಳುಹಿಸುವ ಅಗತ್ಯವಿಲ್ಲ ಎಂದಿದ್ದಾರೆ.


  “ಸೋಂಕಿತ ವಿದೇಶಿ ಪ್ರಯಾಣಿಕರು ಆರೋಗ್ಯವಾಗಿದ್ದಾರೆ”


  ಗುಜರಾತ್‌ ನಲ್ಲಿ ವರದಿಯಾದ ಪ್ರಕರಣದಲ್ಲಿ ಚೀನಾ ಮತ್ತು ಆಸ್ಟ್ರೇಲಿಯಾದಿಂದ ಬಂದವರು ಸೇರಿದಂತೆ ಮೂವರು ವಿದೇಶಿ ಪ್ರಯಾಣಿಕರು ಆರೋಗ್ಯವಾಗಿದ್ದಾರೆ ಎಂದು ಹೇಳಲಾಗಿದೆ. ಆಸ್ಟ್ರೇಲಿಯಾ ಮತ್ತು ಚೀನಾದಿಂದ ವಿಮಾನದ ಮೂಲಕ ಗುಜರಾತ್‌ಗೆ ಆಗಮಿಸಿದ ಸಾಗರೋತ್ತರ ಪ್ರಯಾಣಿಕರಿಗೆ ಸೋಂಕು ತಗಲಿರುವುದು ದೃಢಪಟ್ಟಿತ್ತು.


  ಅದರಲ್ಲಿ ಮಹಿಳೆ ಮತ್ತು ಆಕೆಯ ಪತಿಗೆ ಸೋಂಕು ತಗುಲಿರುವುದು ಪತ್ತೆಯಾಗಿತ್ತು. ಇವರಿಬ್ಬರೂ ತಮ್ಮ ಎರಡು ವರ್ಷದ ಮಗುವಿನೊಂದಿಗೆ ವಿದೇಶದಿಂದ ಪ್ರಯಾಣಿಸುತ್ತಿದ್ದರು.


  ಸಾಂಕೇತಿಕ ಚಿತ್ರ


  ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಪರೀಕ್ಷೆ


  ಇನ್ನು, ಹೊರಡುವ ಮೊದಲು, ಚೀನಾ, ಹಾಂಗ್ ಕಾಂಗ್, ಜಪಾನ್, ದಕ್ಷಿಣ ಕೊರಿಯಾ, ಸಿಂಗಾಪುರ್ ಮತ್ತು ಥೈಲ್ಯಾಂಡ್‌ನಿಂದ ಭಾರತಕ್ಕೆ ಪ್ರಯಾಣಿಸುವ ಎಲ್ಲಾ ಸಾಗರೋತ್ತರ ಪ್ರಯಾಣಿಕರು ಈಗ ಆರ್‌ಟಿ-ಪಿಸಿಆರ್ ವರದಿಗಳನ್ನು ಸಲ್ಲಿಸಬೇಕಾಗುತ್ತದೆ. ಏರ್ ಸುವಿಧಾ ವೆಬ್‌ಪುಟಕ್ಕೆ ವರದಿಯನ್ನು ಅಪ್‌ಲೋಡ್ ಮಾಡಲು ಜನವರಿ 1, 2023 ರಿಂದ ಇದು ಅಗತ್ಯವಾಗಿರುತ್ತದೆ.


  ಈ ಮಧ್ಯೆ ಭಾರತಕ್ಕೆ ಆಗಮಿಸುವ ಸಾಗರೋತ್ತರ ಪ್ರಯಾಣಿಕರನ್ನು ಪರೀಕ್ಷೆ ಒಳಪಡಿಸಲಾಗುತ್ತಿದೆ. ಅಂತರರಾಷ್ಟ್ರೀಯ ಆಗಮನಗಳು ಸಹ ಥರ್ಮಲ್ ಸ್ಕ್ರೀನಿಂಗ್‌ಗೆ ಒಳಪಟ್ಟಿದ್ದು ಅದರ ನಂತರ, ಧನಾತ್ಮಕ ಪರೀಕ್ಷೆಯ ಮಾದರಿಗಳನ್ನು ಜೀನೋಮಿಕ್ ಸೀಕ್ವೆನ್ಸಿಂಗ್ ಗಾಗಿ ಕಳುಹಿಸಲಾಗುತ್ತದೆ.


  ಈ ಮಧ್ಯೆ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಪ್ರಕಟಿಸಿದ ಡೇಟಾ ಫಲಿತಾಂಶಗಳ ಪ್ರಕಾರ, XBB.1.5 ಪ್ರಕರಣಗಳು ಅಮೆರಿಕದಲ್ಲಿ ಅದರಲ್ಲೂ ವಿಶೇಷವಾಗಿ ನ್ಯೂಯಾರ್ಕ್‌ನಲ್ಲಿ ಸುಮಾರು ಶೇ. 41 ರಷ್ಟು ಕಂಡುಬಂದಿವೆ. ಕಳೆದ ವಾರದಲ್ಲಿ ಪ್ರಕರಣಗಳು ದ್ವಿಗುಣಗೊಂಡಿದೆ ಎಂದು ವರದಿಯಾಗಿದೆ.


  ಒಟ್ಟಾರೆ, ಈ XBB1.5 ರೂಪಾಂತರಿಯು ಮೇಲ್ನೋಟಕ್ಕೆ ಅಷ್ಟೇನೂ ಅಪಾಯಕಾರಿಯಲ್ಲ. ಹಾಗಾಗಿ ಜನರು ಭಯ ಪಡುವ ಅಗತ್ಯವಿಲ್ಲ. ಆದ್ರೆ ಖಂಡಿತವಾಗಿಯೂ ಎಚ್ಚರಿಕೆಯಿಂದಿರಬೇಕು ಎಂಬುದಾಗಿ ತಜ್ಞರು ಎಚ್ಚರಿಕೆ ನೀಡಿದ್ದಾರೆ.

  Published by:Prajwal B
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು