ಒಂದು ತೆಂಗಿನಕಾಯಿ ಒಡೆದಿದ್ದಕ್ಕೆ ಒಂದೂವರೆ ಕೋಟಿ ವೆಚ್ಚದ ರಸ್ತೆ ಬಿರುಕುಬಿಟ್ಟಿದೆ, ಅದಿನ್ನೆಂಥಾ ಡಬ್ಬಾ ರಸ್ತೆ ಇರ್ಬೇಡ

Uttar Pradesh: ತನ್ನ ಬೆಂಬಲಿಗರೊಂದಿಗೆ ಸ್ಥಳದಲ್ಲೇ ಇದ್ದ ಚೌಧರಿ, ಪೂಜೆ ಮುಹೂರ್ತದ ಸಮಯದಲ್ಲಿ ರಸ್ತೆಯ ಮೇಲೆ ತೆಂಗಿನಕಾಯಿ ಹೊಡೆದಾಗ, ಎಲ್ಲರಿಗೂ ಆಘಾತವಾಗುವಂತೆ ರಸ್ತೆಯಲ್ಲಿ ಬಿರುಕುಗಳು ಹೊರಹೊಮ್ಮಿದವು.

ರಸ್ತೆ ಬಿರುಕು

ರಸ್ತೆ ಬಿರುಕು

  • Share this:
ರಸ್ತೆ ಉದ್ಘಾಟನೆ ವೇಳೆ ಜನನಾಯಕರು ಅದಕ್ಕೆ ಚಾಲನೆ ನೀಡೋದು ನಮ್ಮ ದೇಶದಲ್ಲಂತೂ ಸಾಮಾನ್ಯವಾಗಿದೆ. ಈ ವೇಳೆ ಸಾಂಪ್ರದಾಯಿಕವಾಗಿ(Worshiping) ಪೂಜೆ ಮುಂತಾದುದನ್ನು ಮಾಡುವ ಘಟನೆಗಳೂ ಆಗಾಗ್ಗೆ ನಡೆಯುತ್ತೆ. ಆದರೆ, ಇಂತಹ ಸಮಯದಲ್ಲಿ ಏನಾದರೂ ಎಡವಟ್ಟಾದರೆ, ಆ ಜನ ನಾಯಕರಿಗೆ, ಸರ್ಕಾರಕ್ಕೆ ಎಷ್ಟು ಮುಜುಗರ (Embarrassing)ಆಗುತ್ತಲ್ವಾ.. ಉದಾಹರಣೆಗೆ ಉದ್ಘಾಟನೆ ಸಮಯದಲ್ಲೇ, ಅಥವಾ ಉದ್ಘಾಟನೆಗೂ (Inauguration)ಮುನ್ನವೇ ರಸ್ತೆ ಕುಸಿದರೆ, ಬಿರುಕು ಬಿಟ್ಟರೆ (Crack in the road)ಸರ್ಕಾರದ(Government) ವಿರುದ್ಧ ಸಾಕಷ್ಟು ಟೀಕೆ ಕೇಳಿಬರುತ್ತದೆ. ಅಕ್ರಮದ ವಾಸನೆ, ಆರೋಪವೂ ಕೇಳಿಬರುತ್ತದೆ. ಇನ್ನು, ರಸ್ತೆ ಉದ್ಘಾಟನೆ ಮಾಡುವಾಗ ತೆಂಗಿನ ಕಾಯಿ ಹೊಡೆದು ರಸ್ತೆ ಬಿರುಕು ಬಿಟ್ಟರೆ ಹೇಗಿರುತ್ತೆ.. ಇದೆಂತಹ ತಮಾಷೆ ಅಂತೀರಾ..?

ಉತ್ತರ ಪ್ರದೇಶದಲ್ಲಿ ಘಟನೆ
ಇದು ತಮಾಷೆಯಲ್ಲ, ಉತ್ತರ ಪ್ರದೇಶದಲ್ಲಿ ಇದೇ ರೀತಿ ಘಟನೆ ನಡೆದಿದೆ. ಉತ್ತರ ಪ್ರದೇಶದ ಬಿಜ್ನೋರ್‌ನಲ್ಲಿ ನೀರಾವರಿ ವಿಭಾಗ ನಿರ್ಮಿಸಿದ ಉದ್ದೇಶಿತ ಏಳೂವರೆ ಕಿಲೋಮೀಟರ್ ರಸ್ತೆಯ ಒಂದು ಭಾಗವು ಉದ್ಘಾಟನಾ ಸಮಾರಂಭದ ಸಮಯದಲ್ಲೇ ಬಿರುಕು ಬಿಟ್ಟಿದೆ. ಬಿಜೆಪಿ ಶಾಸಕಿ ಶುಚಿ ಚೌಧರಿ ಸಮ್ಮುಖದಲ್ಲಿ ಈ ಘಟನೆ ನಡೆದಿದೆ. ಅವರು ಉದ್ಘಾಟನೆ ಮಾಡಲು ತೆಂಗಿನಕಾಯಿ ಒಡೆದಂತೆ ಆ ಕಾಯಿಯ ಜತೆ ರಸ್ತೆಯೂ ಬಿರುಕು ಬಿಟ್ಟು ಶಾಸಕಿ ಶುಚಿ ಚೌಧರಿಗೆ ಆಭಾಸ ಹಾಗೂ ಆಕ್ರೋಶವೂ ಆಗಿದೆ.

 ಇದನ್ನೂ ಓದಿ: ಸ್ವಂತ ಖರ್ಚಿನಲ್ಲಿ ಗ್ರಾಮದ ಜನರಿಂದಲೇ ರಸ್ತೆ ನಿರ್ಮಾಣ: ಅಧಿಕಾರಿಗಳು, ಜನಪ್ರತಿನಿಧಿಗಳ ವಿರುದ್ಧ ಕಿಡಿ

ಶಾಸಕಿ ಶುಚಿ ಚೌಧರಿಗೆ ಆಹ್ವಾನ
ರಸ್ತೆ ನಿರ್ಮಾಣಕ್ಕೆ ಉತ್ತರ ಪ್ರದೇಶದ ಬಿಜೆಪಿ ಸರಕಾರ 1,16,38,000 ರೂ.ಗಳನ್ನು ಮಂಜೂರು ಮಾಡಿತ್ತು. ಮುಜುಗರದ ಪರಿಸ್ಥಿತಿಯ ನಂತರ, ಜಿಲ್ಲಾಧಿಕಾರಿಗಳು ಈ ರಸ್ತೆಯ ಸ್ಟ್ರೆಚ್‌ ನಿರ್ಮಾಣದ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ. ಪ್ರಶ್ನಾರ್ಹ ರಸ್ತೆಯನ್ನು ಹಲ್ದೌರ್ ಪೊಲೀಸ್ ಠಾಣೆಯ ಖೇಡಾ ಅಜೀಜ್‌ಪುರ ಗ್ರಾಮದಲ್ಲಿ ಬಿಜ್ನೋರ್ ಸದರ್ ಕ್ಷೇತ್ರದಲ್ಲಿ ನಿರ್ಮಿಸಲಾಗಿದ್ದು, ಪ್ರಸ್ತುತ ಶುಚಿ ಚೌಧರಿ ಈ ಕ್ಷೇತ್ರದ ಶಾಸಕಿಯಾಗಿದ್ದಾರೆ. ಅಧಿಕಾರಿಗಳಿಗೆ ಮಾದರಿಯಾಗಿ 700 ಮೀಟರ್ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ. ರಸ್ತೆ ಉದ್ಘಾಟನೆ ಹಾಗೂ ಕಾಮಗಾರಿ ಪೂರ್ಣಗೊಳಿಸಲು ಮುಂದಿನ ಆದೇಶ ಹೊರಡಿಸಲು ನೀರಾವರಿ ಇಲಾಖೆ ಅಧಿಕಾರಿಗಳು ಸದರ್‌ ಶಾಸಕಿ ಶುಚಿ ಚೌಧರಿ ಅವರನ್ನು ಆಹ್ವಾನಿಸಿದ್ದರು.

ತೆಂಗಿನಕಾಯಿ ಹೊಡೆದಾಗ ರಸ್ತೆಯಲ್ಲಿ ಬಿರುಕು
ಕುತೂಹಲಕಾರಿಯಾಗಿ, ತನ್ನ ಬೆಂಬಲಿಗರೊಂದಿಗೆ ಸ್ಥಳದಲ್ಲೇ ಇದ್ದ ಚೌಧರಿ, ಪೂಜೆ ಮುಹೂರ್ತದ ಸಮಯದಲ್ಲಿ ರಸ್ತೆಯ ಮೇಲೆ ತೆಂಗಿನಕಾಯಿ ಹೊಡೆದಾಗ, ಎಲ್ಲರಿಗೂ ಆಘಾತವಾಗುವಂತೆ ರಸ್ತೆಯಲ್ಲಿ ಬಿರುಕುಗಳು ಹೊರಹೊಮ್ಮಿದವು. ಇದರಿಂದ ಕೆರಳಿದ ಶಾಸಕಿ, ಕಳಪೆ ಕಾಮಗಾರಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ಧರಣಿ ಕುಳಿತರು.

ಗಂಭೀರ ಆರೋಪ
ಶಾಸಕಿಯ ಬೆಂಬಲಿಗರು ಸಹ ನೀರಾವರಿ ಇಲಾಖೆ ವಿರುದ್ಧ ವಾಗ್ದಾಳಿ ನಡೆಸಿದರು. ಈ ಹಿನ್ನೆಲೆ ಬಿಜ್ನೋರ್ ಜಿಲ್ಲಾ ಅಧಿಕಾರಿ ಉಮೇಶ್ ಕುಮಾರ್ ನೇತೃತ್ವದ ತಂಡ ಈ ಬಗ್ಗೆ ತನಿಖೆ ನಡೆಸುತ್ತಿದೆ. ನೀರಾವರಿ ಇಲಾಖೆಯ ಜೆಇ, ಎಸ್‌ಡಿಒ ಹಾಗೂ ಕಾರ್ಯಪಾಲಕ ಎಂಜಿನಿಯರ್ ವಿರುದ್ಧ ಶಾಸಕ ಶುಚಿ ಚೌಧರಿ ಗಂಭೀರ ಆರೋಪ ಮಾಡಿದ್ದು, ಈ ಅಧಿಕಾರಿಗಳು ಶಾಮೀಲಾಗಿ ಈ ಅವ್ಯವಹಾರ ನಡೆದಿದೆ ಎಂದಿದ್ದಾರೆ. ಹಗರಣದಲ್ಲಿ ಭಾಗಿಯಾಗಿರುವ ಎಲ್ಲರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆಯೂ ಶಾಸಕಿ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ರಸ್ತೆಗಳು ಖಾಲಿ ಇದ್ದಾಗಲೇ ಅಪಘಾತಗಳು ಹೆಚ್ಚು; Bengaluru Accidents ಹಿಂದಿನ ಕಾರಣ ನಿಜಕ್ಕೂ ದುಃಖಕರ

ಇತ್ತೀಚೆಗೆ ರಸ್ತೆಗಳು ಬಿರುಕು ಬಿಟ್ಟು ಅನೇಕ ಸಾವುನೋವುಗಳು ಸಂಭವಿಸುವುದು ಹೆಚ್ಚಾಗಿದೆ. ಅದಕ್ಕಾಗಿ ಜಾಗೃತಿ ಮೂಡಿಸಲು ಸಾಕಷ್ಟು ಜನರು ಬಿರುಕು ಬಿಟ್ಟ ರಸ್ತೆಗಳ ಮೇಲೆಯೇ ಪ್ಯಾಷನ್‌ ಶೋ ನಡೆಸಿ ಸ್ಥಳೀಯ ಸರಕಾರದ ಗಮನ ತರಲಾಗುತ್ತಿದೆ. ಇನ್ನು ಗುಂಡಿ ಬಿದ್ದ ರಸ್ತೆಗಳ ಮೇಲೆ ವಿಭಿನ್ನ ರೀತಿಯಾ ಚಿತ್ರಗಳನ್ನು ಬಿಡಿಸಿ ಪ್ರತಿಭಟನೆ ನಡೆಸುವುದನ್ನು ಸಂಘಟನೆಗಳು ಮಾಡುತ್ತಿದೆ.
Published by:vanithasanjevani vanithasanjevani
First published: