UAE Visa: ಮುಂದಿನ ತಿಂಗಳಿನಿಂದ ಹೊಸ ಯುಎಇ ವೀಸಾ ಜಾರಿ: ಹೇಗಿರಲಿದೆ? ಇಲ್ಲಿದೆ ವಿವರ

ಯುಎಇಯ ವೀಸಾದ ನಿಯಮಗಳು ಬದಲಾವಣೆಯಾಗಿದ್ದು, ಪರಿಷೃತ ಹೊಸ ಯುಎಇ ವೀಸಾಗಳು ಮುಂದಿನ ತಿಂಗಳು ಜಾರಿಗೆ ಬರಲಿದೆ. ಪರ್ಕ್ವಿಸಿಟ್ ಹೂಡಿಕೆ ಮೊತ್ತವನ್ನುಅಂದಾಜು ರೂ. 4.2 ಕೋಟಿಗೆ ಕಡಿತ, ಐದು ವರ್ಷಗಳಿಂದ 10 ವರ್ಷಗಳಿಗೆ ವೀಸಾ ಅವಧಿ ವಿಸ್ತರಣೆ ಸೇರಿ ದುಬೈ ವೀಸಾ ನಿಯಮಗಳಲ್ಲಿ ಹಲವಾರು ಬದಲಾವಣೆಗಳಾಗಿವೆ. ಪರಿಷ್ಕೃತ ಕಾನೂನು ಗೋಲ್ಡನ್ ವೀಸಾವನ್ನು ಪಡೆದುಕೊಳ್ಳಲು ಆಸ್ತಿಗಳ ವಿಲೀನವನ್ನು ಅನುಮತಿಸಿದೆ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಯುಎಇಯ (UAE) ವೀಸಾದ ನಿಯಮಗಳು (Visa Rules) ಬದಲಾವಣೆಯಾಗಿದ್ದು, ಪರಿಷೃತ ಹೊಸ ಯುಎಇ ವೀಸಾಗಳು ಮುಂದಿನ ತಿಂಗಳು ಜಾರಿಗೆ ಬರಲಿದೆ. ಪರ್ಕ್ವಿಸಿಟ್ ಹೂಡಿಕೆ (Perquisite investment) ಮೊತ್ತವನ್ನುಅಂದಾಜು ರೂ. 4.2 ಕೋಟಿಗೆ ಕಡಿತ, ಐದು ವರ್ಷಗಳಿಂದ 10 ವರ್ಷಗಳಿಗೆ ವೀಸಾ ಅವಧಿ ವಿಸ್ತರಣೆ ಸೇರಿ ದುಬೈ ವೀಸಾ ನಿಯಮಗಳಲ್ಲಿ ಹಲವಾರು ಬದಲಾವಣೆಗಳಾಗಿವೆ. ಪರಿಷ್ಕೃತ ಕಾನೂನು ಗೋಲ್ಡನ್ ವೀಸಾವನ್ನು (Golden Visa) ಪಡೆದುಕೊಳ್ಳಲು ಆಸ್ತಿಗಳ ವಿಲೀನವನ್ನು ಅನುಮತಿಸಿದೆ, ಇದು ಭಾರತೀಯರಿಗೆ (Indians) ಬಹು ಯೋಜನೆಗಳಲ್ಲಿ ಹೂಡಿಕೆ ಮಾಡಲು ಸುಲಭವಾಗಿದೆ. ಹೊಸ ಕಾನೂನುಗಳ ಅಡಿಯಲ್ಲಿ ಉದ್ಯಮಿಗಳು ದುಬೈ ಸ್ಟಾರ್ಟಪ್‌ನಲ್ಲಿ (Startups) ಕೂಡ ಹೂಡಿಕೆ ಮಾಡಬಹುದು.

ಯಾರ‍್ಯಾರು ಈ ಗೋಲ್ಡನ್ ವೀಸಾ ಪಡೆದಿರುತ್ತಾರೆ?  
ನಮಗೆಲ್ಲಾ ಗೊತ್ತಿರುವಂತೆ ಭಾರತದ ಹಲವಾರು ಸೆಲೆಬ್ರಿಟಿಗಳು, ಉದ್ಯಮಿಗಳು, ಶ್ರೀಮಂತರು, ಕಲಾವಿದರು ಯುಎಇಯ ಗೋಲ್ಡನ್ ವೀಸಾ ಪಡೆದುಕೊಂಡಿದ್ದಾರೆ. ಈ ವೀಸಾ ತುಂಬಾ ಜನಪ್ರಿಯವಾಗಿದ್ದು, ಇದನ್ನು ಪಡೆದುಕೊಳ್ಳಲು ಹಾತೊರೆಯುತ್ತಾರೆ ಕೂಡ. ಇದಕ್ಕೆ ಕಾರಣ ಇಷ್ಟೇ ದುಬೈನ ಉನ್ನತ-ಮಟ್ಟದ ಆಸ್ತಿ ಅಥವಾ ಹೂಡಿಕೆಯ ಖರೀದಿಯ ಮೇಲೆ ಸುರಕ್ಷಿತವಾದ ಪರವಾನಗಿಯಾಗಿ ಈ ಗೋಲ್ಡನ್ ವೀಸಾ ಕೆಲಸ ಮಾಡುತ್ತದೆ. ಅಲ್ಲದೇ ಇತ್ತೀಚಿನ ದಿನಗಳಲ್ಲಿ ಭಾರತೀಯ ವಲಸಿಗರ ಆಯ್ಕೆಯ ತಾಣವಾಗಿ ದುಬೈ ಪ್ರಮುಖ ಸ್ಥಾನ ಪಡೆಯುತ್ತಿದ್ದು, ಗೋಲ್ಡನ್ ವೀಸಾ ಇದ್ದರೆ ಕನಿಷ್ಠ ಹತ್ತು ವರ್ಷ ಯುಎಇಯಲ್ಲಿ ವಾಸಿಸಬಹುದು ಎಂದು ಲೆಕ್ಕಾಚಾರ ಮಾಡುತ್ತಿದ್ದಾರೆ.

ಹೊಸ ವ್ಯವಸ್ಥೆಯು ಯುಎಇಯಲ್ಲಿ ವಾಸಿಸುವ ಮತ್ತು ಕೆಲಸ ಮಾಡುವ ವಲಸಿಗರು ಮತ್ತು ಸಂದರ್ಶಕರಿಗೆ ಗಮನಾರ್ಹವಾಗಿ ಪ್ರಯೋಜನವನ್ನು ನೀಡುತ್ತದೆ. ಇದು ಎಮಿರೇಟ್ಸ್ ಅನ್ನು ವಿದೇಶಿಯರಿಗೆ ಮತ್ತು ಯುಎಇಯಲ್ಲಿ ದೀರ್ಘಾವಧಿಯ ಅಸ್ತಿತ್ವವನ್ನು ಹೊಂದಲು ಬಯಸುವ ಹೆಚ್ಚಿನ ನಿವ್ವಳ ಮೌಲ್ಯದ ವ್ಯಕ್ತಿಗಳಿಗೆ ಇನ್ನಷ್ಟು ಹೂಡಿಕೆದಾರ-ಸ್ನೇಹಿ ದೇಶವನ್ನಾಗಿ ಮಾಡುತ್ತದೆ. ಏಪ್ರಿಲ್ ಮಧ್ಯದಲ್ಲಿ ಘೋಷಿಸಲಾದ ಯುಎಇ ಕ್ಯಾಬಿನೆಟ್ ನಿರ್ಧಾರದ ಪ್ರಕಾರ, ಪ್ರವೇಶ ಮತ್ತು ನಿವಾಸ ಕಾನೂನುಗಳಿಗೆ ಸಂಬಂಧಿಸಿದ ಈ ಎಲ್ಲಾ ಹೊಸ ಕಾರ್ಯನಿರ್ವಾಹಕ ನಿಯಮಗಳು ಅಧಿಕೃತ ಗೆಜೆಟ್‌ನಲ್ಲಿ ಪ್ರಕಟಿಸಿದ ದಿನಾಂಕದಿಂದ 90 ದಿನಗಳ ನಂತರ ಜಾರಿಗೆ ಬರುತ್ತವೆ.

ಬಹು-ಪ್ರವೇಶ ಪ್ರವಾಸಿ ವೀಸಾ
ಹೊಸ ಐದು ವರ್ಷಗಳ ಬಹು-ಪ್ರವೇಶ ಪ್ರವಾಸಿ ವೀಸಾಕ್ಕೆ ಪ್ರಾಯೋಜಕರ ಅಗತ್ಯವಿಲ್ಲ ಮತ್ತು ವ್ಯಕ್ತಿಗೆ 90 ದಿನಗಳವರೆಗೆ ದುಬೈನಲ್ಲಿ ಉಳಿಯಲು ಅವಕಾಶ ನೀಡುತ್ತದೆ. ಇದನ್ನು ಇನ್ನೂ 90 ದಿನಗಳವರೆಗೆ ನೀವು ವಿಸ್ತರಿಸಬಹುದು. ಈ ಪ್ರವಾಸಿ ವೀಸಾದಲ್ಲಿ ಒಬ್ಬ ವ್ಯಕ್ತಿ ಗರಿಷ್ಠ 180 ದಿನಗಳ ಕಾಲ ಅಲ್ಲಿ ಉಳಿಯಬಹುದು. ಅರ್ಜಿದಾರರು ಅರ್ಜಿ ಸಲ್ಲಿಸುವ ಮೊದಲು ಕಳೆದ ಆರು ತಿಂಗಳಲ್ಲಿ $4,000 (ದಿರ್ಹಮ್14,700) ಅಥವಾ ವಿದೇಶಿ ಕರೆನ್ಸಿಗಳಲ್ಲಿ ಅದರ ಸಮಾನವಾದ ಬ್ಯಾಂಕ್ ಬ್ಯಾಲೆನ್ಸ್ ಅನ್ನು ಹೊಂದಿರಬೇಕು.

ವ್ಯಾಪಾರ ವೀಸಾ
ಹೂಡಿಕೆದಾರರು ಮತ್ತು ಉದ್ಯಮಿಗಳು ಪ್ರಾಯೋಜಕರ ಅಗತ್ಯವಿಲ್ಲದೇ ವ್ಯಾಪಾರ ವೀಸಾಕ್ಕೆ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: Aung San Suu Kyi: ಅಂಗ್ ಸಾನ್ ಸೂಕಿಗೆ 6 ವರ್ಷ ಜೈಲು; ಮಯನ್ಮಾರ್​ನಲ್ಲಿ ಏನಾಗ್ತಿದೆ?

ಸಂಬಂಧಿಕರು/ಸ್ನೇಹಿತರನ್ನು ಭೇಟಿ ಮಾಡಲು ವೀಸಾ
ಯುಎಇ ಪ್ರಜೆಯ ಸಂಬಂಧಿ ಅಥವಾ ಸ್ನೇಹಿತರಾಗಿದ್ದರೆ ಅಥವಾ ನಿವಾಸಿಯಾಗಿದ್ದರೆ ವಿದೇಶಿಗರು ಈ ವೀಸಾಕ್ಕೆ ಅರ್ಜಿ ಸಲ್ಲಿಸಬಹುದು.

ತಾತ್ಕಾಲಿಕ ಕೆಲಸದ ವೀಸಾ
ಪ್ರಾಯೋಗಿಕ ಪರೀಕ್ಷೆ ಅಥವಾ ಪ್ರಾಜೆಕ್ಟ್ ಆಧಾರಿತ ಕೆಲಸದಂತಹ ತಾತ್ಕಾಲಿಕ ಕೆಲಸದ ನಿಮಿತ್ತ ಬರುವುದಾದರೆ ಈ ವೀಸಾಕ್ಕೆ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ತಾತ್ಕಾಲಿಕ ಕೆಲಸದ ಒಪ್ಪಂದ ಅಥವಾ ಉದ್ಯೋಗದಾತರಿಂದ ಪತ್ರ ಮತ್ತು ಫಿಟ್ನೆಸ್ ಪುರಾವೆಗಳನ್ನು ಅರ್ಜಿ ಸಂದರ್ಭದಲ್ಲಿ ಸಲ್ಲಿಸಬೇಕು.

ಅಧ್ಯಯನ/ತರಬೇತಿಗಾಗಿ ವೀಸಾ
ಈ ವೀಸಾವು ತರಬೇತಿ, ಅಧ್ಯಯನ ಕೋರ್ಸ್‌ಗಳು ಮತ್ತು ಇಂಟರ್ನ್‌ಶಿಪ್ ಕಾರ್ಯಕ್ರಮಗಳಿಗೆ ಹಾಜರಾಗಲು ಬಯಸುವವರನ್ನು ಗುರಿಯಾಗಿರಿಸಿಕೊಂಡಿದೆ. ಈ ವೀಸಾವನ್ನು ಸಾರ್ವಜನಿಕ ಮತ್ತು ಖಾಸಗಿ ವಲಯದ ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಗಳು ಪ್ರಾಯೋಜಿಸಬಹುದು. ಇದಕ್ಕೆ ಅಧ್ಯಯನ, ತರಬೇತಿ ಅಥವಾ ಇಂಟರ್ನ್‌ಶಿಪ್ ಕಾರ್ಯಕ್ರಮದ ವಿವರಗಳು ಮತ್ತು ಅದರ ಅವಧಿಯನ್ನು ಸ್ಪಷ್ಟಪಡಿಸುವ ಪತ್ರವನ್ನು ಲಗ್ಗತಿಸಬೇಕು.

India suspends tourist visas of Chinese nationals
ಸಾಂದರ್ಭಿಕ ಚಿತ್ರ


ಕುಟುಂಬ ವೀಸಾ
ಈ ಹಿಂದೆ, ಪೋಷಕರು 18 ವರ್ಷದೊಳಗಿನ ತಮ್ಮ ಮಕ್ಕಳನ್ನು ಮಾತ್ರ ಪ್ರಾಯೋಜಿಸಬಹುದಾಗಿತ್ತು, ಆದರೆ ಈಗ 25 ವರ್ಷ ವಯಸ್ಸಿನವರೆಗೆ ಮಕ್ಕಳನ್ನು ಪ್ರಾಯೋಜಿಸಬಹುದು. ಅಂಗವಿಕಲ ಮಕ್ಕಳು ಸಹ ವಿಶೇಷ ಪರವಾನಗಿಯನ್ನು ಪಡೆಯಬಹುದು ಮತ್ತು ಅವಿವಾಹಿತ ಹೆಣ್ಣುಮಕ್ಕಳು ಅನಿರ್ದಿಷ್ಟ ಅವಧಿಯವರೆಗೆ ಪ್ರಾಯೋಜಿಸಬಹುದು.

ಉದ್ಯೋಗ ವೀಸಾ
ಉದ್ಯೋಗಾಕಾಂಕ್ಷಿಗಳು ಯುಎಇಯಲ್ಲಿ ಅವಕಾಶಗಳನ್ನು ಅನ್ವೇಷಿಸಲು ಈ ಹೊಸ ವೀಸಾವನ್ನು ಪಡೆಯಬಹುದು. ಈ ವೀಸಾಕ್ಕೆ ಯಾವುದೇ ಪ್ರಾಯೋಜಕರ ಅಗತ್ಯವಿರುವುದಿಲ್ಲ ಮತ್ತು ಇದನ್ನು ಸ್ನಾತಕೋತ್ತರ ಪದವಿ ಹೊಂದಿರುವವರಿಗೆ ಅಥವಾ ವಿಶ್ವದ ಅತ್ಯುತ್ತಮ 500 ವಿಶ್ವವಿದ್ಯಾನಿಲಯಗಳ ಹೊಸ ಪದವೀಧರರಿಗೆ ಮತ್ತು ಮೊದಲ, ಎರಡನೇ ಅಥವಾ ಮೂರನೇ ಕೌಶಲ್ಯ ಮಟ್ಟಗಳಲ್ಲಿ ವರ್ಗೀಕರಿಸಿದವರಿಗೆ ನೀಡಲಾಗುತ್ತದೆ. ಮಾನವ ಸಂಪನ್ಮೂಲ ಮತ್ತು ಎಮಿರೇಟೀಕರಣ ಸಚಿವಾಲಯ ನೀಡುತ್ತದೆ.

ಇದನ್ನೂ ಓದಿ:  Mukesh Ambani Threat Call: ಮಾನಸಿಕ ಅಸ್ವಸ್ಥ ವ್ಯಕ್ತಿಯಿಂದ ಮುಕೇಶ್ ಅಂಬಾನಿಗೆ ಕೊಲೆ ಬೆದರಿಕೆ; ಪೊಲೀಸ್ ಮೂಲಗಳಿಂದ ಮಾಹಿತಿ

ಹಸಿರು ವೀಸಾ
ಈ ಐದು ವರ್ಷಗಳ ವೀಸಾ ಹೊಂದಿರುವವರು ಪ್ರಾಯೋಜಕರು ಅಥವಾ ಉದ್ಯೋಗದಾತರಿಲ್ಲದೆ ತಮ್ಮ ಕುಟುಂಬಗಳನ್ನು ಇಲ್ಲಿಗೆ ಕರೆತರಲು ಅನುಮತಿಸುತ್ತದೆ. ನುರಿತ ಕೆಲಸಗಾರರು, ಸ್ವಯಂ ಉದ್ಯೋಗದಾತರು, ಸ್ವತಂತ್ರೋದ್ಯೋಗಿಗಳು ಇತ್ಯಾದಿಗಳಿಗೆ ಈ ವೀಸಾ ಲಭ್ಯವಿದೆ.

ಗೋಲ್ಡನ್ ವೀಸಾಗಳು
ದುಬೈ ಹಲವಾರು ವೃತ್ತಿಪರ ವರ್ಗಗಳಿಗೆ ಮತ್ತು ದೀರ್ಘಾವಧಿಯ ಆಧಾರದ ಮೇಲೆ ದೇಶದ ಉತ್ತಮ ಗುಣಮಟ್ಟದ ಜೀವನವನ್ನು ಆನಂದಿಸಲು ಬಯಸುವ ಹೂಡಿಕೆದಾರರಿಗೆ ಗೋಲ್ಡನ್ ವೀಸಾವನ್ನು ಘೋಷಿಸಿದೆ. ವಿವಿಧ ವರ್ಗಗಳಿಗೆ ಗೋಲ್ಡನ್ ವೀಸಾಗಳ ಪಟ್ಟಿಯು ಈ ಕೆಳಕಂಡಂತಿದೆ.

ರಿಯಲ್ ಎಸ್ಟೇಟ್
ಈ ವೀಸಾಗೆ ಅರ್ಹತೆ ಪಡೆಯಲು ರಿಯಲ್ ಎಸ್ಟೇಟ್‌ನಲ್ಲಿ ಕನಿಷ್ಠ 2 ಮಿಲಿಯನ್ ಹೂಡಿಕೆಯ ಅಗತ್ಯವಿದೆ.

ಸ್ಟಾರ್ಟ್‌ಅಪ್‌ಗಳು
ವಾಣಿಜ್ಯೋದ್ಯಮಿಗಳು ಈಗ ಮೂರು ವಿಭಾಗಗಳ ಅಡಿಯಲ್ಲಿ ಗೋಲ್ಡನ್ ವೀಸಾವನ್ನು ಪಡೆಯಬಹುದು (1) ದೇಶದಲ್ಲಿ ನೋಂದಾವಣೆ, (2) SME ಅಡಿಯಲ್ಲಿ , (3) ವಾರ್ಷಿಕ ಆದಾಯವು 1 ಮಿಲಿಯನ್ ಅಥವಾ ಅದಕ್ಕಿಂತ ಹೆಚ್ಚಿದ್ದಲ್ಲಿ. ಈ ಮೂರರ ಅಡಿಯಲ್ಲಿ ಸ್ಟಾರ್ಟ್‌ಅಪ್‌ ಗೆ ವೀಸಾ ಲಭ್ಯವಾಗುತ್ತದೆ.

ವಿಜ್ಞಾನಿಗಳು
ಎಮಿರೇಟ್ಸ್ ಸೈನ್ಸ್ ಕೌನ್ಸಿಲ್‌ನಿಂದ ಶಿಫಾರಸು, ಜೀವ ವಿಜ್ಞಾನ, ನೈಸರ್ಗಿಕ ವಿಜ್ಞಾನ, ತಂತ್ರಜ್ಞಾನ ಮತ್ತು ಎಂಜಿನಿಯರಿಂಗ್‌ನಲ್ಲಿ ಉನ್ನತ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಅಥವಾ ಸ್ನಾತಕೋತ್ತರ ಪದವಿ ಹೀಗೆ ತಮ್ಮ ಕ್ಷೇತ್ರದಲ್ಲಿ ಕೌಶಲ್ಯ ಹೊಂದಿರುವ ಜನರು ಈ ಮೇಲಿನ ಅವಶ್ಯಕತೆಗಳನ್ನು ಪೂರೈಸಿದರೆ ಗೋಲ್ಡನ್ ವೀಸಾಗೆ ಅರ್ಜಿ ಸಲ್ಲಿಸಬಹುದು .

ಅಸಾಧಾರಣ ಪ್ರತಿಭೆ
ಕಲೆ, ಸಂಸ್ಕೃತಿ, ಡಿಜಿಟಲ್ ತಂತ್ರಜ್ಞಾನ, ಕ್ರೀಡೆ, ನಾವೀನ್ಯತೆ, ವೈದ್ಯಕೀಯ ಮತ್ತು ಕಾನೂನು ಕ್ಷೇತ್ರದಲ್ಲಿ ಅಸಾಧಾರಣ ಪ್ರತಿಭೆ ಹೊಂದಿರುವವರು ಗೋಲ್ಡನ್ ವೀಸಾಗೆ ಅರ್ಜಿ ಸಲ್ಲಿಸಬಹುದು. ಅವರಿಗೆ ಸಂಬಂಧಿತ ಸರ್ಕಾರಿ ಘಟಕದಿಂದ ಶಿಫಾರಸು ಪತ್ರ ಅಥವಾ ಅನುಮೋದನೆಯ ಅಗತ್ಯವಿದೆ.

ಇದನ್ನೂ ಓದಿ:  Carbon Footprint: ರೆಸ್ಟೊರೆಂಟ್​ ಮೆನುಲಿ ಫುಡ್​ ಮಾತ್ರ ಅಲ್ಲ ಅದರ ಕಾರ್ಬನ್​ ಮಟ್ಟ ಕೂಡ ಇರುತ್ತಂತೆ

ನುರಿತ ಕೆಲಸಗಾರರು
ಅರ್ಜಿದಾರರು ಸ್ನಾತಕೋತ್ತರ ಪದವಿ, ಮಾನ್ಯ ಉದ್ಯೋಗ ಒಪ್ಪಂದವನ್ನು ಹೊಂದಿರಬೇಕು, ಮಾನವ ಸಂಪನ್ಮೂಲ ಮತ್ತು ಎಮಿರೈಸೇಶನ್ ಸಚಿವಾಲಯವು ವ್ಯಾಖ್ಯಾನಿಸಿದಂತೆ ಉದ್ಯೋಗದ ಒಂದು ಅಥವಾ ಎರಡು ಔದ್ಯೋಗಿಕ ಹಂತದ ಅಡಿಯಲ್ಲಿ ಬರಬೇಕು ಮತ್ತು ಕನಿಷ್ಠ ಮಾಸಿಕ ವೇತನ ದಿರ್ಹಮ್ 30,000 ಆಗಿರಬೇಕು.

ವಿದ್ಯಾರ್ಥಿಗಳು
ದುಬೈ ಮಾಧ್ಯಮಿಕ ಶಾಲೆಗಳು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ಹೆಚ್ಚಿನ ಅಂಕಗಳನ್ನು ಪಡೆದಿರುವ ಅಸಾಧಾರಣ ವಿದ್ಯಾರ್ಥಿಗಳು ಅಥವಾ ವಿಶ್ವದಾದ್ಯಂತ ಅತ್ಯುತ್ತಮ 100 ವಿಶ್ವವಿದ್ಯಾಲಯಗಳ ಅಡಿಯಲ್ಲಿ ಬರುವವರು ಗೋಲ್ಡನ್ ವೀಸಾಗೆ ಅರ್ಜಿ ಸಲ್ಲಿಸಬಹುದು.
Published by:Ashwini Prabhu
First published: