Sweden: ಅಧಿಕಾರ ವಹಿಸಿಕೊಂಡ ದಿನವೇ ರಾಜೀನಾಮೆ ನೀಡಿದ ಸ್ವೀಡನ್‌ನ ಮೊದಲ ಮಹಿಳಾ ಪ್ರಧಾನಿ..!

ಈ ಪಕ್ಷಗಳು ಬಜೆಟ್ ಒಪ್ಪಿಕೊಳ್ಳಲು ಸಾಧ್ಯವಾಗದಿದ್ದರೂ, ಅವರು ಜನಪರ, ವಲಸೆ-ವಿರೋಧಿ ಪಕ್ಷವಾದ ಸ್ವೀಡನ್ ಡೆಮೋಕ್ರಾಟ್ ಅನ್ನು ಸರ್ಕಾರದಲ್ಲಿ ಪಾತ್ರ ಹೊಂದದಂತೆ ಮಾಡುವ ಗುರಿಯಲ್ಲಿ ಒಂದಾಗಿದ್ದಾರೆ.

ಮ್ಯಾಗ್ಡಲೀನಾ ಆ್ಯಂಡರ್ಸನ್

ಮ್ಯಾಗ್ಡಲೀನಾ ಆ್ಯಂಡರ್ಸನ್

  • Share this:
ಸ್ವೀಡನ್(Sweden)‌ನ ಮೊದಲ ಮಹಿಳಾ ಪ್ರಧಾನ ಮಂತ್ರಿ(First Woman Prime Minister) ಎನಿಸಿಕೊಂಡಿದ್ದ ಸೋಶಿಯಲ್ ಡೆಮೋಕ್ರಾಟ್‌ ಮ್ಯಾಗ್ಡಲೀನಾ ಆ್ಯಂಡರ್ಸನ್ ಅಧಿಕಾರ ವಹಿಸಿಕೊಂಡ ಮೊದಲ ದಿನದಲ್ಲೇ ರಾಜೀನಾಮೆ(Resign) ನೀಡಿದ್ದಾರೆ. ಹೌದು, ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ 12 ಗಂಟೆಗಳಿಗಿಂತ ಕಡಿಮೆ ಅವಧಿಯ ನಂತರ ಬುಧವಾರ ರಾಜೀನಾಮೆ ನೀಡಿದ್ದಾರೆ. ಇದಕ್ಕೆ ಕಾರಣ ಗ್ರೀನ್ ಪಾರ್ಟಿ(Green Party)ಯು ತಮ್ಮ ಎರಡು-ಪಕ್ಷಗಳ ಒಕ್ಕೂಟವನ್ನು ತೊರೆದ ನಂತರ ಉಂಟಾದ ರಾಜಕೀಯ ಅನಿಶ್ಚಿತತೆ.

ರಾಜೀನಾಮೆ ನೀಡಿದರೂ, ಸಂಸತ್ತಿನ ಸ್ಪೀಕರ್‌ಗೆ ತಾನು ಮತ್ತೊಮ್ಮೆ ಪ್ರಧಾನ ಮಂತ್ರಿಯಾಗಿ ಏಕ-ಪಕ್ಷದ ಸರ್ಕಾರದ ಮುಖ್ಯಸ್ಥರಾಗಿ ನೇಮಕಗೊಳ್ಳಲು ಆಶಿಸುವುದಾಗಿ ಹೇಳಿದ್ದೇನೆ ಮತ್ತು ಅದು ಸಂಭವಿಸುವ ಸಾಧ್ಯತೆಗಳು ಇತರ ಪಕ್ಷಗಳ ಬೆಂಬಲದಿಂದ ಸಾಕಷ್ಟು ಬಲವಾಗಿ ಕಂಡುಬಂದಿದೆ ಎಂದು ಆ್ಯಂಡರ್ಸನ್ ಹೇಳಿದರು.

ಮ್ಯಾಗ್ಡಲೀನಾ ಆ್ಯಂಡರ್ಸನ್ ಹೇಳಿದ್ದೇನು?

ಸಂಸತ್ತು ಒಕ್ಕೂಟದ ಬಜೆಟ್ ಮಸೂದೆ ತಿರಸ್ಕರಿಸಿದ ನಂತರ ಗ್ರೀನ್ ಪಾರ್ಟಿ ಸರ್ಕಾರದಿಂದ ಹೊರಹೋಯಿತು. ಇನ್ನು, ''ಪ್ರಧಾನಿ ಹುದ್ದೆಯಿಂದ ಮುಕ್ತಗೊಳಿಸುವಂತೆ ಸ್ಪೀಕರ್‌ಗೆ ಮನವಿ ಮಾಡಿದ್ದೇನೆ''. "ನಾನು ಏಕಪಕ್ಷೀಯ, ಸೋಶಿಯಲ್ ಡೆಮಾಕ್ರಟ್ ಸರ್ಕಾರದಲ್ಲಿ ಪ್ರಧಾನಿಯಾಗಲು ಸಿದ್ಧ" ಎಂದು ಮ್ಯಾಗ್ಡಲೀನಾ ಆ್ಯಂಡರ್ಸನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಗ್ರೀನ್ ಪಾರ್ಟಿಯು ಸಂಸತ್ತಿನಲ್ಲಿ ಯಾವುದೇ ಹೊಸ ದೃಢೀಕರಣದ ಮತದಲ್ಲಿ ಮ್ಯಾಗ್ಡಲೀನಾ ಆ್ಯಂಡರ್ಸನ್‌ರನ್ನು ಬೆಂಬಲಿಸುವುದಾಗಿ ಹೇಳಿದ್ದರೆ, ಸೆಂಟರ್ ಪಾರ್ಟಿ ಮತದಾನ ಪ್ರಕ್ರಿಯೆಯಿಂದ ದೂರವಿರುವುದಾಗಿ ಭರವಸೆ ನೀಡಿತು. ಇದು ಪ್ರಾಯೋಗಿಕವಾಗಿ ಆಕೆಯ ಉಮೇದುವಾರಿಕೆಯನ್ನು ಬೆಂಬಲಿಸುವಂತೆಯೇ ಇರುತ್ತದೆ. ಇನ್ನು, ಎಡಪಕ್ಷ ಕೂಡ ಆಕೆಗೆ ಬೆಂಬಲ ನೀಡುವುದಾಗಿ ಹೇಳಿದೆ.

ಇದನ್ನೂ ಓದಿ: Gautam Gambhir: ಗೌತಮ್​ ಗಂಭೀರ್​ಗೆ ಜೀವ ಬೆದರಿಕೆ ಹಾಕಿದ್ದು ಪಾಕ್ ವಿದ್ಯಾರ್ಥಿ; ತನಿಖೆಯಲ್ಲಿ ಬಹಿರಂಗ

ಈ ಪಕ್ಷಗಳು ಬಜೆಟ್ ಒಪ್ಪಿಕೊಳ್ಳಲು ಸಾಧ್ಯವಾಗದಿದ್ದರೂ, ಅವರು ಜನಪರ, ವಲಸೆ-ವಿರೋಧಿ ಪಕ್ಷವಾದ ಸ್ವೀಡನ್ ಡೆಮೋಕ್ರಾಟ್ ಅನ್ನು ಸರ್ಕಾರದಲ್ಲಿ ಪಾತ್ರ ಹೊಂದದಂತೆ ಮಾಡುವ ಗುರಿಯಲ್ಲಿ ಒಂದಾಗಿದ್ದಾರೆ.

"ಸೆಂಟರ್ ಪಾರ್ಟಿಯು ಆ್ಯಂಡರ್ಸನ್‌ ಪ್ರಧಾನಿಯಾಗಲು ಮತ್ತೆ ಬಾಗಿಲು ತೆರೆಯುತ್ತದೆ" ಎಂದು ಅದರ ನಾಯಕಿ ಆ್ಯನ್ನಿ ಲೂಫ್ ಟ್ವಿಟ್ಟರ್‌ನಲ್ಲಿ ಹೇಳಿದ್ದಾರೆ.

"ಸ್ವೀಡನ್ ಡೆಮೋಕ್ರಾಟ್‌ಗಳ ಮೇಲೆ ಅವಲಂಬಿತವಾಗಿಲ್ಲದ ಸರ್ಕಾರವನ್ನು ಸ್ವೀಡನ್ ಹೊಂದಬಹುದು ಎಂದು ನಾವು ಮತ್ತೊಮ್ಮೆ ಖಚಿತಪಡಿಸಿಕೊಳ್ಳುತ್ತೇವೆ" ಎಂದೂ ತಿಳಿಸಿದರು.

ವಿರೋಧ ಪಕ್ಷದ ಬಲಪಂಥೀಯ ಮಾಡರೇಟ್‌ಗಳು ಮತ್ತು ಕ್ರಿಶ್ಚಿಯನ್ ಡೆಮೋಕ್ರಾಟ್‌ಗಳು ಸ್ವೀಡನ್ ಡೆಮೋಕ್ರಾಟ್‌ಗಳಿಂದ ಬೆಂಬಲಿತರಾಗಿದ್ದಾರೆ. ಆದರೆ ಸಂಸತ್ತಿನಲ್ಲಿ ಬಹುಮತ ಪಡೆಯಲು ಅವರಿಗೆ ಈಗ ಸಾಧ್ಯವಿಲ್ಲ ಎನ್ನಲಾಗಿದೆ.

ಸವಾಲುಗಳು

ಆ್ಯಂಡರ್ಸನ್‌ ಎಡ ಮತ್ತು ಕೇಂದ್ರ ಪಕ್ಷಗಳಿಂದ ಬೆಂಬಲಿತವಾದ ಅಲ್ಪಸಂಖ್ಯಾತ 2-ಪಕ್ಷಗಳ ಒಕ್ಕೂಟದ ಮುಖ್ಯಸ್ಥರಾಗಿ ಸ್ಟೀಫನ್ ಲೋಫ್ವೆನ್‌ರಿಂದ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಆದರೆ ಸೆಂಟರ್‌ ಪಾರ್ಟಿ ಹೊಸ ಸರ್ಕಾರದ ಹಣಕಾಸು ಮಸೂದೆಯನ್ನು ಬೆಂಬಲಿಸಲು ನಿರಾಕರಿಸಿದಾಗ ಆ ಮೈತ್ರಿ ಕುಸಿಯಿತು.

ಮೂರು ವಿರೋಧ ಪಕ್ಷಗಳು ರೂಪಿಸಿದ ಖರ್ಚು ವೆಚ್ಚದ ಯೋಜನೆಗಳನ್ನು ಸಂಸತ್ತು ಬುಧವಾರ ಅಂಗೀಕರಿಸಿತು. ಇದು ಗ್ರೀನ್ ಪಾರ್ಟಿಯನ್ನು ಒಕ್ಕೂಟ ತೊರೆಯುವಂತೆ ಪ್ರೇರೇಪಿಸಿತು ಮತ್ತು ಆ್ಯಂಡರ್ಸನ್‌ಗೆ ರಾಜೀನಾಮೆ ನೀಡುವುದನ್ನು ಬಿಟ್ಟು ಬೇರೆ ದಾರಿ ಇರಲಿಲ್ಲ.

ಸಂಸತ್ತಿನ ಸ್ಪೀಕರ್ ಈಗ ನೂತನ ಸರ್ಕಾರವನ್ನು ಹುಡುಕುವ ಪ್ರಕ್ರಿಯೆಯಲ್ಲಿ ಮುಂದಿನ ಹಂತವನ್ನು ನಿರ್ಧರಿಸುತ್ತಾರೆ. ಆದರೆ ಮುಂಬರುವ ದಿನಗಳಲ್ಲಿ ಮತ್ತೆ ಆ್ಯಂಡರ್ಸನ್‌ರನ್ನು ಮುಂದಿಟ್ಟು ಹೊಸ ಮತಕ್ಕಾಗಿ ಪರಿಗಣಿಸಲಿದ್ದಾರೆ ಎನ್ನಲಾಗಿದೆ.

"ಮುಂಬರುವ ಮತದಾನದಲ್ಲಿ ಲೆಫ್ಟ್‌, ಗ್ರೀನ್‌ ಮತ್ತು ಸೆಂಟರ್‌ ಪಾರ್ಟಿಗಳು ದೂರವಿರುತ್ತವೆ ಮತ್ತು ಆದ್ದರಿಂದ ಆ್ಯಂಡರ್ಸನ್‌ರನ್ನು ಮತ್ತೊಮ್ಮೆ ಪ್ರಧಾನ ಮಂತ್ರಿಯಾಗಿ ಪರಿಣಾಮಕಾರಿಯಾಗಿ ಅನುಮೋದಿಸಬೇಕೆಂದು ನಾವು ನಿರೀಕ್ಷಿಸುತ್ತೇವೆ"."ಬೇರೆ ರೀತಿಯಲ್ಲಿ ಹೇಳುವುದಾದರೆ, ಅನಿರೀಕ್ಷಿತವಾಗಿ ಏನೂ ಸಂಭವಿಸುವವರೆಗೆ ರಾಜಕೀಯ ಗೊಂದಲವು ಮುಗಿದಿದೆ" ಎಂದು ಎಂದು ಬ್ಯಾಂಕಿಂಗ್ ಗುಂಪು ನೋರ್ಡಿಯಾ ತಿಳಿಸಿದೆ.

ಯಾರು ಪ್ರಧಾನ ಮಂತ್ರಿಯಾಗುತ್ತಾರೋ ಅವರು ಪ್ರಮುಖ ಸವಾಲುಗಳನ್ನು ಎದುರಿಸುವ ಸಾಧ್ಯತೆ ಇದ್ದು, ಮುಂದಿನ ವರ್ಷ ಸೆಪ್ಟೆಂಬರ್‌ನಲ್ಲಿ ಸ್ವೀಡನ್‌ನಲ್ಲಿ ರಾಷ್ಟ್ರೀಯ ಚುನಾವಣೆ ನಡೆಯಲಿದೆ. ಗುಂಪು ಹಿಂಸಾಚಾರ ಮತ್ತು ಗುಂಡಿನ ದಾಳಿಗಳು ಸ್ವೀಡನ್‌ನ ಅನೇಕ ಪ್ರಮುಖ ನಗರಗಳಲ್ಲಿ ಜನರ ಜೀವನವನ್ನು ಹಾಳುಮಾಡಿವೆ.

ಇದನ್ನೂ ಓದಿ: Thai Guavas: ಥಾಯ್ ಪೇರಲೆ ಹಣ್ಣಿನಿಂದ ವರ್ಷಕ್ಕೆ 32 ಲಕ್ಷ ರೂ ಆದಾಯ ಪಡೆಯುತ್ತಿರುವ ರೈತ!

ಅಲ್ಲದೆ, COVID-19 ಸಾಂಕ್ರಾಮಿಕ ಹೆಚ್ಚು ಪ್ರಚಾರದಲ್ಲಿರುವ ಕಲ್ಯಾಣ ರಾಜ್ಯದಲ್ಲಿನ ಅಂತರವನ್ನು ಬಹಿರಂಗಪಡಿಸಿದೆ ಮತ್ತು ಸರ್ಕಾರವು ತನ್ನ ಹವಾಮಾನ ಬದಲಾವಣೆಯ ಗುರಿಗಳನ್ನು ಪೂರೈಸಬೇಕಾದರೆ ಹಸಿರು ಆರ್ಥಿಕತೆಗೆ ಬದಲಾವಣೆಯನ್ನು ವೇಗಗೊಳಿಸಬೇಕಾಗಿದೆ.

ಸೆಂಟರ್-ಲೆಫ್ಟ್‌ ಮತ್ತು ಸೆಂಟರ್-ರೈಟ್‌ ಬ್ಲಾಕ್‌ಗಳು ಮೂಲತಃ ಮತದಾನದಲ್ಲಿ ಡೆಡ್‌ಲಾಕ್ ಆಗಿವೆ. 100 ವರ್ಷಗಳ ಹಿಂದೆ ಸಾರ್ವತ್ರಿಕ ಮತದಾನದ ಹಕ್ಕನ್ನು ಪರಿಚಯಿಸಿದ ಮತ್ತು ಲಿಂಗ ಸಮಾನತೆಯನ್ನು ದೀರ್ಘಕಾಲ ಪ್ರತಿಪಾದಿಸಿದ ದೇಶದಲ್ಲಿ ಸ್ವೀಡನ್‌ಗೆ ಮಹಿಳಾ ಪ್ರಧಾನ ಮಂತ್ರಿಯಾಗಲು ಇಷ್ಟು ಸಮಯ ತೆಗೆದುಕೊಂಡಿದೆ ಎಂಬ ಅಂಶವು ಅನೇಕರಿಗೆ ಮುಜುಗರದ ಸಂಗತಿಯಾಗಿದೆ.

ಸ್ವೀಡನ್‌ನ ನೆರೆಯ ರಾಷ್ಟ್ರವಾದ ನಾರ್ವೆಗೆ 40 ವರ್ಷಗಳ ಹಿಂದೆ ಮೊದಲ ಮಹಿಳಾ ನಾಯಕಿ ಸಿಕ್ಕರೆ, 1960ರಲ್ಲಿ ಮಹಿಳಾ ಪ್ರಧಾನ ಮಂತ್ರಿಯನ್ನು ಆಯ್ಕೆ ಮಾಡಿದ ಮೊದಲ ದೇಶ ಶ್ರೀಲಂಕಾ.
Published by:Latha CG
First published: