ಪ್ರಸ್ತುತ ದಿನಗಳಲ್ಲಿ ಕೋವಿಡ್ ಸೋಂಕಿನಿಂದ ರಕ್ಷಣೆಯನ್ನು ಪಡೆಯಲು ಲಸಿಕೆಗಳನ್ನು(Vaccines) ಹಾಕಿಸಿಕೊಳ್ಳುವುದೇ ಉತ್ತಮ ವಿಧಾನ ಎಂದೆನಿಸಿದೆ. ಬೇರೆ ಬೇರೆ ಲಸಿಕೆಗಳು ಸಾಂಕ್ರಾಮಿಕದ ವಿರುದ್ಧ (Infectious disease)ಬೇರೆ ಬೇರೆ ರೀತಿಯಲ್ಲಿ ಪರಿಣಾಮವನ್ನು ಬೀರುತ್ತವೆ. ನಮ್ಮಲ್ಲಿರುವ ಹೆಚ್ಚಿನ ಲಸಿಕೆಗಳು ಗಮನಾರ್ಹವಾದ ಪರಿಣಾಮವನ್ನು ಬೀರುವಲ್ಲಿ ಸಿದ್ಧಹಸ್ತ ಎಂದೆನಿಸಿವೆ. ಕೋವಿಡ್‌ನ(Covid 19) ಬೇರೆ ಬೇರೆ ರೂಪಾಂತರ ವಿರುದ್ಧ ಸಾಕಷ್ಟು ರಕ್ಷಣೆಗಳನ್ನು ಹೊಂದಿವೆ ಎನ್ನಲಾಗುತ್ತಿದೆ. ಲಸಿಕೆಗಳ ಪರಿಣಾಮವನ್ನು ತಗ್ಗಿಸಲು ಜನಿಸಿರುವ ಹಲವಾರು ಅಂಶಗಳಿದ್ದರೂ ಹೊಸ ಸಂಶೋಧನೆಗಳು (New study) ಮತ್ತು ಹೊಸ ಪ್ರಗತಿಗಳು ಲಸಿಕೆಗಳು ಪರಿಣಾಮಕಾರಿಯಾಗುವಂತೆ ಕೆಲಸ ಮಾಡುತ್ತವೆ.
ರೋಗನಿರೋಧಕ ಶಕ್ತಿ
ನಮ್ಮ ರೋಗನಿರೋಧಕ (Antibody)ಶಕ್ತಿಯು ಕಾರ್ಯನಿರ್ವಹಿಸುವ ವ್ಯವಸ್ಥೆಯಾಗಿದ್ದು, ನಾವು ಯಾವ ಸಮಯದಲ್ಲಿ ಸೋಂಕಿಗೆ ಒಳಗಾಗಿದ್ದರೂ ನಮ್ಮನ್ನು ಸಂರಕ್ಷಿಸಲು ಕೆಲಸ ಮಾಡುತ್ತದೆ. ನಮ್ಮ ದೇಹದಲ್ಲಿರುವ ಸಮಯಕ್ಕೆ ತಕ್ಕಂತೆ ದೇಹವು ವಿಭಿನ್ನವಾಗಿ ಕಾರ್ಯನಿರ್ವಹಿಸಿದರೂ ಹಗಲಿನಿಂದ ರಾತ್ರಿಯವರೆಗೂ ಪ್ರತಿಕ್ರಿಯಿಸುತ್ತದೆ. ದೇಹದ ಗಡಿಯಾರ ಮತ್ತು ಕೋಶಗಳ ಸಿರ್ಕಾಡಿಯನ್ ಲಯವು ಉತ್ತಮವಾಗಿ ಕಾರ್ಯನಿರ್ವಹಿಸಲು ಮತ್ತು ಸರಿಯಾದ ಸಮಯದಲ್ಲಿ ದಾಳಿಯನ್ನು ಪ್ರಾರಂಭಿಸಲು ನಿರಂತರವಾಗಿ ವಿಕಸನಗೊಳ್ಳುತ್ತದೆ.
ಇದನ್ನೂ ಓದಿ: ಈ Chewing Gum ಜಗಿದರೆ ಸಾಕು, ಕೋವಿಡ್ ನಿಮ್ಮ ಹತ್ತಿರಕ್ಕೂ ಬರಲ್ಲ: ವಿಜ್ಞಾನಿಗಳ ಹೊಸಾ ಆವಿಷ್ಕಾರ!
SARS-CoV-2 ಲಸಿಕೆ
ಬೆಳಿಗ್ಗೆ ಲಸಿಕೆ ಪಡೆದವರಿಗಿಂತ ಮಧ್ಯಾಹ್ನ ಲಸಿಕೆ ಪಡೆದವರಲ್ಲಿ ಪ್ರತಿಕಾಯ ಮಟ್ಟ ಹೆಚ್ಚು
ಜರ್ನಲ್ ಆಫ್ ಬಯೋಲಾಜಿಕಲ್ ರಿದಮ್ಸ್‌ನಲ್ಲಿನ ವೀಕ್ಷಣಾ ಅಧ್ಯಯನ ತಿಳಿಸಿರುವಂತೆ, ಮಧ್ಯಾಹ್ನ SARS-CoV-2 ಲಸಿಕೆಯನ್ನು ಪಡೆದ ಆರೋಗ್ಯ ಕಾರ್ಯಕರ್ತರು ಬೆಳಿಗ್ಗೆ ಲಸಿಕೆ ಹಾಕಿದವರಿಗಿಂತ ಹೆಚ್ಚಿನ ಪ್ರತಿಕಾಯ ಮಟ್ಟವನ್ನು ಹೊಂದಿರುವುದು ಕಂಡುಬಂದಿದೆ. ಲಸಿಕೆಗೆ ಪ್ರತಿಕ್ರಿಯೆಯು ದೇಹದ ಸಿರ್ಕಾಡಿಯನ್ ಲಯದಿಂದ ಪ್ರಭಾವಿತವಾಗಬಹುದು ಎಂಬ ಪರಿಕಲ್ಪನೆಯ ಪುರಾವೆ ಇರುವುದಾಗಿ ಲೇಖಕರು ತಮ್ಮ ಸಂಶೋಧನೆಗಳನ್ನು ವಿವರಿಸಿದ್ದಾರೆ. ನಮ್ಮ ಆಂತರಿಕ 24-ಗಂಟೆಗಳ ಸರ್ಕಾಡಿಯನ್ ಗಡಿಯಾರವು ಸಾಂಕ್ರಾಮಿಕ ರೋಗ ಮತ್ತು ವ್ಯಾಕ್ಸಿನೇಷನ್‌ಗೆ ಪ್ರತಿಕ್ರಿಯೆ ಸೇರಿದಂತೆ ಶರೀರಶಾಸ್ತ್ರದ ಹಲವು ಅಂಶಗಳನ್ನು ನಿಯಂತ್ರಿಸುತ್ತದೆ.
ಮ್ಯಾಸಚೂಸೆಟ್ಸ್ ಜನರಲ್ ಹಾಸ್ಪಿಟಲ್
ಕೆಲವು ರೋಗಗಳ ಲಕ್ಷಣಗಳು ಮತ್ತು ಹಲವಾರು ಔಷಧಿಗಳ ಕ್ರಿಯೆಯು ದಿನದ ಸಮಯದಿಂದ ಬದಲಾಗುತ್ತದೆ. ಸಂಶೋಧನೆಯನ್ನು ಕುರಿತಂತೆ ಮಾಧ್ಯಮ ವರದಿಯಲ್ಲಿ, ಮ್ಯಾಸಚೂಸೆಟ್ಸ್ ಜನರಲ್ ಹಾಸ್ಪಿಟಲ್ ಹೆಚ್ಚಿನ ರೋಗಲಕ್ಷಣದ ತೀವ್ರತೆಯನ್ನು ಹೊಂದಿರುವ ಮತ್ತು ದಿನದ ಕೆಲವು ಸಮಯಗಳಲ್ಲಿ ಉಸಿರಾಟದ ಕಾರ್ಯವನ್ನು ಆಗಾಗ್ಗೆ ಬದಲಾಯಿಸುವ ಶ್ವಾಸಕೋಶದ ಕಾಯಿಲೆಗಳನ್ನು ಹೊಂದಿರುವ ಜನರ ಉದಾಹರಣೆಯನ್ನು ಉಲ್ಲೇಖಿಸಿದೆ.
ವೀಕ್ಷಣಾ ತಂಡದಿಂದ ಅಧ್ಯಯನ:
ವೀಕ್ಷಣಾ ಅಧ್ಯಯನವು ಇಂಗ್ಲೆಂಡ್‌ನಲ್ಲಿ 2,190 ಆರೋಗ್ಯ ಕಾರ್ಯಕರ್ತರಲ್ಲಿ SARS-CoV-2 ವ್ಯಾಕ್ಸಿನೇಷನ್ ನಂತರ ಪ್ರತಿಕಾಯ ಮಟ್ಟವನ್ನು ಮೌಲ್ಯಮಾಪನ ಮಾಡಿದೆ. ವ್ಯಾಕ್ಸಿನೇಷನ್ ಸಮಯದಲ್ಲಿ ರೋಗಲಕ್ಷಣಗಳಿಲ್ಲದ ಆಸ್ಪತ್ರೆಯ ಸಿಬ್ಬಂದಿಗಳಿಂದ ರಕ್ತದ ಮಾದರಿಗಳನ್ನು ಸಂಗ್ರಹಿಸಲಾಗಿದೆ. ವ್ಯಾಕ್ಸಿನೇಷನ್ ದಿನದ ಸಮಯ, ಲಸಿಕೆ ಪ್ರಕಾರ (ಫೈಜರ್ mRNA ಲಸಿಕೆ ಅಥವಾ ಅಸ್ಟ್ರಾಜೆನೆಕಾ ಅಡೆನೊವೈರಲ್ ಲಸಿಕೆ), ವಯಸ್ಸು, ಲಿಂಗ ಮತ್ತು ವ್ಯಾಕ್ಸಿನೇಷನ್ ನಂತರದ ದಿನಗಳ ಸಂಖ್ಯೆಯನ್ನು ಆಧರಿಸಿ ಪ್ರತಿಕಾಯ ಮಟ್ಟಗಳ ಮೇಲೆ ಪರಿಣಾಮವನ್ನು ತನಿಖೆ ಮಾಡಲು ಸಂಶೋಧಕರು ಒಂದು ಮಾದರಿಯನ್ನು ರಚಿಸಿದ್ದಾರೆ.
ಸಮಯದ ಪರಿಣಾಮ
ನಂತರದ ದಿನಗಳಲ್ಲಿ ಲಸಿಕೆ ಹಾಕಿದ ಪ್ರತಿಯೊಬ್ಬರಿಗೂ ಪ್ರತಿಕಾಯ ಪ್ರತಿಕ್ರಿಯೆಗಳು ಸಾಮಾನ್ಯವಾಗಿ ಹೆಚ್ಚಿವೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಫಿಜರ್ mRNA ಲಸಿಕೆಯನ್ನು ಪಡೆದ, ಮಹಿಳೆಯರು ಮತ್ತು ಯುವಜನರಲ್ಲಿ, ಲಸಿಕೆ ಹಾಕುವ ದಿನದ ಸಮಯದ ಪರಿಣಾಮದ ಜೊತೆಗೆ ಪ್ರತಿಕಾಯ ಪ್ರತಿಕ್ರಿಯೆಗಳು ಹೆಚ್ಚಿವೆ ಎಂಬುದು ಕಂಡುಬಂದಿದೆ ಎಂದು ಸಂಶೋಧಕರು ಅಭಿಪ್ರಾಯ ನೀಡಿದ್ದಾರೆ
ಇದನ್ನೂ ಓದಿ: ಕೋವಿಡ್ ಬಿಡಿ, ಮುಂದೆ ಬರುವ ಸಾಂಕ್ರಾಮಿಕ ಇನ್ನೂ ಭಯಾನಕವಾಗಿರುತ್ತದೆ: ಲಸಿಕೆ ಕಂಡುಹಿಡಿದ ವಿಜ್ಞಾನಿ ಎಚ್ಚರಿಕೆ
ಬೂಸ್ಟರ್‌ಗಳು ರೂಪಾಂತರಗಳ ವಿರುದ್ಧ ಎಷ್ಟು ಪರಿಣಾಮಕಾರಿಯಾಗಿದೆ?
ಬೂಸ್ಟರ್‌ಗಳು ಒಂದೇ ಲಸಿಕೆ ಪುನರಾವರ್ತನೆಯಾಗುವ 'ಹೋಮೋಲಾಜಸ್' ಆಗಿರಬಹುದು ಅಥವಾ ಬೇರೆ ಪ್ಲಾಟ್‌ಫಾರ್ಮ್‌ನಿಂದ ಲಸಿಕೆಯನ್ನು ಬಳಸುವ 'ಹೆಟೆರೊಲಾಜಸ್' ಆಗಿರಬಹುದು. ಪ್ರಾಥಮಿಕ ಅಧ್ಯಯನಗಳಿಂದ, ನಂತರದ ವಿಧಾನವು ಬಲವಾದ ಪ್ರತಿರಕ್ಷಣಾ ಪ್ರತಿಕ್ರಿಯೆಯನ್ನು ನೀಡುತ್ತದೆ. ಇನ್ನೂ ಉತ್ತರಿಸಲಾಗದ ದೊಡ್ಡ ಪ್ರಶ್ನೆಯೆಂದರೆ, ಹೊಸ ಸ್ಪೈಕ್ ಮ್ಯುಟೇಶನ್‌ಗಳೊಂದಿಗೆ ರೂಪಾಂತರಗಳ ವಿರುದ್ಧ ಕ್ಷೀಣಿಸುತ್ತಿರುವ ಪರಿಣಾಮಕಾರಿತ್ವವನ್ನು ತೋರಿಸಿರುವ ಸ್ಪೈಕ್-ನಿರ್ದಿಷ್ಟ ಲಸಿಕೆಯ ಬೂಸ್ಟರ್ ಡೋಸ್ ಅವುಗಳ ವಿರುದ್ಧ ಪರಿಣಾಮಕಾರಿಯಾಗಿದೆಯೇ? ಎಂಬುದಾಗಿದೆ ಅಥವಾ ಇನ್ನೂ ಕೆಲವು ಹಳೆಯ ಸ್ಪೈಕ್‌ಗಳಿಗೆ ವರ್ಧಿತ ಪ್ರತಿಕಾಯ ಪ್ರತಿಕ್ರಿಯೆಯು ರೂಪಾಂತರಗಳ ಜೊತೆಗೆ, ರೂಪಾಂತರವನ್ನು ನಾಶಗೊಳಿಸುತ್ತದೆಯೇ? ಈ ಕುರಿತು ಹೆಚ್ಚಿನ ಮಾಹಿತಿಗಾಗಿ ನಾವು ಕಾಯಬೇಕಾಗಿದೆ.
.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ