ಜುಲೈ 5ಕ್ಕೆ ನೂತನ ಸರ್ಕಾರದ ಮೊದಲ ಬಜೆಟ್; ನೂತನ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ಗೂ ಮೊದಲ ಬಜೆಟ್

ಜೂನ್ 17ರಿಂದ ಜುಲೈ 26ರವರೆಗೆ ಒಟ್ಟು 40 ದಿನಗಳ ಕಾಲ ನೂತನ ಲೋಕಸಭೆಯ ಮೊದಲ ಅಧಿವೇಶನ ನಡೆಯಲಿದೆ. ಜುಲೈ 5ರಂದು ಮೊದಲ ಆಯವ್ಯಯ ಪತ್ರ ಪ್ರಕಟವಾಗಲಿದೆ.

Vijayasarthy SN | news18
Updated:May 31, 2019, 9:29 PM IST
ಜುಲೈ 5ಕ್ಕೆ ನೂತನ ಸರ್ಕಾರದ ಮೊದಲ ಬಜೆಟ್; ನೂತನ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ಗೂ ಮೊದಲ ಬಜೆಟ್
ನಿರ್ಮಲಾ ಸೀತರಾಮನ್​​
 • News18
 • Last Updated: May 31, 2019, 9:29 PM IST
 • Share this:
ನವದೆಹಲಿ(ಮೇ 31): ಭರ್ಜರಿ ಬಹುಮತದೊಂದಿಗೆ ಸತತ ಎರಡನೇ ಬಾರಿ ಅಧಿಕಾರಕ್ಕೇರಿರುವ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ಜುಲೈ 5ಕ್ಕೆ ಬಜೆಟ್ ಮಂಡಿಸಲಿದೆ. ಇವತ್ತು ನಡೆದ ನೂತನ ಸರ್ಕಾರದ ಮೊದಲ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಎನ್​ಡಿಎ-2 ಸರ್ಕಾರದ ಮೊದಲ ಬಜೆಟ್ ಆಗಿದೆ. ಇಂದಿರಾ ಗಾಂಧಿ ನಂತರ ದೇಶದ ಮೊದಲ ಮಹಿಳಾ ಹಣಕಾಸು ಸಚಿವೆಯಾದ ಗೌರವಕ್ಕೆ ಪಾತ್ರರಾಗಿರುವ ನಿರ್ಮಲಾ ಸೀತಾರಾಮನ್ ಅವರಿಗೂ ಇದು ಮೊದಲ ಬಜೆಟ್ ಆಗಿದೆ.

ಜುಲೈ 4ರಂದು ದೇಶದ ಆರ್ಥಿಕ ಸ್ಥಿತಿ ವಿಶದಪಡಿಸುವ ಆರ್ಥಿಕ ಸಮೀಕ್ಷೆಯ ವರದಿಯನ್ನು ಮಂಡಿಸಲಾಗುತ್ತದೆ.

ಇದನ್ನೂ ಓದಿ: ಪ್ರಧಾನಿ ಕಿಸಾನ್ ಯೋಜನೆ ಎಲ್ಲಾ ರೈತರಿಗೂ ಲಭ್ಯ: ನೂತನ ಸರ್ಕಾರದ ಮೊದಲ ಸಂಪುಟ ಸಭೆಯಲ್ಲಿ ಘೋಷಣೆ

ನೂತನ ಲೋಕಸಭೆಯ ಮೊದಲ ಅಧಿವೇಶನ ಜೂನ್ 17ರಿಂದ ಜುಲೈ 26ರವರೆಗೆ ನಡೆಯಲಿದೆ. ಜೂನ್ 19ರಂದು ಲೋಕಸಭೆಯ ಸ್ಪೀಕರ್ ಆಯ್ಕೆ ನಡೆಯಲಿದೆ. ಜೂನ್ 20ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಜಂಟಿ ಸದನವನ್ನುದ್ದೇಶಿಸಿ ಮಾತನಾಡಲಿದ್ದಾರೆ.

ಚುನಾವಣೆಗೆ ಮುನ್ನ ಫೆಬ್ರವರಿ 1ರಂದು ಪಿಯೂಶ್ ಗೋಯೆಲ್ ಅವರು ಮಧ್ಯಂತರ ಬಜೆಟ್ ಮಂಡನೆ ಮಾಡಿದ್ದರು. ಅದರಲ್ಲಿ ಘೋಷಿಸಲಾಗಿದ್ದ ಬಹುತೇಕ ಅಂಶಗಳನ್ನ ನಿರ್ಮಲಾ ಸೀತಾರಾಮನ್ ಅವರು ಮುಂದುವರಿಸುವ ನಿರೀಕ್ಷೆ ಇದೆ. ಇವತ್ತು ಸಂಪುಟ ಸಭೆಯಲ್ಲಿ ಪ್ರಧಾನಿ ರೈತ ಯೋಜನೆಯ ವ್ಯಾಪ್ತಿಯನ್ನು ಎಲ್ಲಾ ರೈತರಿಗೂ ವಿಸ್ತರಿಸಲು ನಿರ್ಧರಿಸಲಾಗಿದೆ. ಇದನ್ನೂ ಒಳಗೊಂಡಂತೆ ಒಂದಷ್ಟು ಹೊಸ ಯೋಜನೆಗಳನ್ನು ನೂತನ ಹಣಕಾಸು ಸಚಿವರು ಘೋಷಿಸುವ ಸಾಧ್ಯತೆ ಇದೆ.

ಇದನ್ನೂ ಓದಿ: Modi Cabinet 2.0: ಶಾ - ಗೃಹ, ನಿರ್ಮಲಾ - ಹಣಕಾಸು, ಸದಾನಂದ ಗೌಡ - ರಸಗೊಬ್ಬರ, ಜೋಶಿ - ಸಂಸದೀಯ ವ್ಯವಹಾರ

ಜಿಡಿಪಿ ಕುಸಿತ ಹಾಗೂ ನಿರುದ್ಯೋಗ ಸಮಸ್ಯೆಯಿಂದ ದೇಶದ ಆರ್ಥಿಕತೆ ಬಳಲುತ್ತಿರುವ ಹಿನ್ನೆಲೆಯಲ್ಲಿ ನಿರ್ಮಲಾ ಸೀತಾರಾಮನ್ ಅವರ ಮುಂದೆ ಪ್ರಬಲ ಸವಾಲುಗಳಿವೆ. ಆರ್ಥಿಕ ಪ್ರಗತಿಯ ವೇಗ ವೃದ್ಧಿಗೆ ಪುಷ್ಟಿ ಕೊಡುವ ಯೋಜನೆಗಳನ್ನು ಮತ್ತು ಕ್ರಮಗಳನ್ನು ನಿರ್ಮಲಾ ಸೀತಾರಾಮನ್ ತೆಗೆದುಕೊಳ್ಳುತ್ತಾರಾ ಎಂದು ಕಾದುನೋಡಬೇಕು. ಅರ್ಥಶಾಸ್ತ್ರದಲ್ಲಿ ಎಂಎ ಮಾಡಿರುವ ನಿರ್ಮಲಾ ಸೀತಾರಾಮನ್ ಅವರು ಹಿಂದಿನ ಸರ್ಕಾರದಲ್ಲಿ ರಕ್ಷಣಾ ಖಾತೆ ನಿಭಾಯಿಸಿದ್ದರು. ಈ ಬಾರಿ ದೇಶದ ಆರ್ಥಿಕ ಅಭಿವೃದ್ಧಿಗೆ ಆಧಾರವಾಗಿರುವ ಹಣಕಾಸು ಖಾತೆಯ ಹೊಣೆ ಅವರ ಹೆಗಲಿಗೇರಿದೆ. ಹಿಂದಿನ ಸರ್ಕಾರದಲ್ಲಿ ಅರುಣ್ ಜೇಟ್ಲಿ ಅವರು ಹಣಕಾಸು ಸಚಿವರಾಗಿದ್ದರು. ಅನಾರೋಗ್ಯದ ಕಾರಣ ಜೇಟ್ಲಿ ಅವರು ಯಾವುದೇ ಜವಾಬ್ದಾರಿಯಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ.ನಿಮ್ಮ ನ್ಯೂಸ್ 18 ಕನ್ನಡವನ್ನು ಶೇರ್​​ಚಾಟ್​ನಲ್ಲೂ ಹಿಂಬಾಲಿಸಿ
First published:May 31, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
 • India
 • World

India

 • Active Cases

  6,039

   
 • Total Confirmed

  6,761

   
 • Cured/Discharged

  515

   
 • Total DEATHS

  206

   
Data Source: Ministry of Health and Family Welfare, India
Hospitals & Testing centres

World

 • Active Cases

  1,205,178

   
 • Total Confirmed

  1,680,527

  +76,875
 • Cured/Discharged

  373,587

   
 • Total DEATHS

  101,762

  +6,070
Data Source: Johns Hopkins University, U.S. (www.jhu.edu)
Hospitals & Testing centres