ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳ ಹೊಸ ಪಟ್ಟಿ ಬಿಡುಗಡೆ; ನಿಮ್ಮ ಹೆಸರಿದೆಯಾ ತಿಳಿಯಿರಿ

ಕರ್ನಾಟಕದ 51.38 ಲಕ್ಷ ರೈತರು ಪಿಎಂ ಕಿಸಾನ್ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ದೇಶದ್ಯಂತ ಇರುವ ಸುಮಾರು 10 ಕೋಟಿ ಫಲಾನುಭವಿಗಳ ಪಟ್ಟಿ ಬಿಡುಗಡೆಯಾಗಿದೆ.

news18-kannada
Updated:June 10, 2020, 3:44 PM IST
ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳ ಹೊಸ ಪಟ್ಟಿ ಬಿಡುಗಡೆ; ನಿಮ್ಮ ಹೆಸರಿದೆಯಾ ತಿಳಿಯಿರಿ
ಸಾಂದರ್ಭಿಕ ಚಿತ್ರ
  • Share this:
ರೈತರಿಗೆ ವರ್ಷಕ್ಕೆ ಆರು ಸಾವಿರ ರೂಪಾಯಿ ನೀಡುವ ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳ ಹೊಸ ಪಟ್ಟಿ ಬಿಡುಗಡೆಯಾಗಿದೆ. ಹತ್ತಿರ ಹತ್ತಿರ 10 ಕೋಟಿ ರೈತರ ಹೆಸರು ಈ ಪಟ್ಟಿಯಲ್ಲಿವೆ. ಕರ್ನಾಟಕದ ರೈತರು ರಾಜ್ಯ ಸರ್ಕಾರದ ಹೆಚ್ಚುವರಿ 4 ಸಾವಿರ ರೂ ಸೇರಿ ವರ್ಷಕ್ಕೆ ಒಟ್ಟು 10 ಸಾವಿರ ರೂಪಾಯಿಗಳನ್ನ ಐದು ಕಂತುಗಳಲ್ಲಿ ಪಡೆಯುತ್ತಾರೆ. ಆದರೆ, ಬೇರೆ ರಾಜ್ಯಗಳಲ್ಲಿನ ರೈತರಿಗೆ ವರ್ಷಕ್ಕೆ 6 ಸಾವಿರ ರೂ ಸಿಗುತ್ತಿದೆ.

ಇನ್ನು ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳ ಸಂಖ್ಯೆಯಲ್ಲಿ ಉತ್ತರ ಪ್ರದೇಶಕ್ಕೆ ಸಿಂಹ ಪಾಲು ಇದೆ. ದೊಡ್ಡ ರಾಜ್ಯವಾಗಿರುವ ಉತ್ತರ ಪ್ರದೇಶದಲ್ಲಿ 2.26 ಕೋಟಿ ರೈತರ ಖಾತೆಗೆ ಹಣ ವರ್ಗಾವಣೆ ಆಗಿದೆ. ಕರ್ನಾಟಕದಲ್ಲಿ 51 ಲಕ್ಷಕ್ಕೂ ಹೆಚ್ಚು ರೈತರು ಈ ಯೋಜನೆಯ ಫಲಾನುಭವಿಗಳಾಗಿದ್ಧಾರೆ. ಮಹಾರಾಷ್ಟ್ರ, ಮಧ್ಯಪ್ರದೇಶ, ಬಿಹಾರ, ಗುಜರಾತ್ ಮತ್ತು ರಾಜಸ್ಥಾನ ರಾಜ್ಯಗಳಲ್ಲಿ ಕರ್ನಾಟಕಕ್ಕಿಂತ ಹೆಚ್ಚು ಫಲಾನುಭವಿಗಳಿದ್ದಾರೆ.

ಇದನ್ನೂ ಓದಿ: ಸಿಬಿಎಸ್ಇ 12ನೇ ತರಗತಿ ಪರೀಕ್ಷೆ ನಡೆಸದಂತೆ ಕೋರಿ ಸುಪ್ರೀಂ ಮೆಟ್ಟಿಲೇರಿದ ಪೋಷಕರು

ಫಲಾನುಭವಿಗಳ ರಾಜ್ಯವಾರು ಪಟ್ಟಿ:

ಉತ್ತರ ಪ್ರದೇಶ 2,26,03,619
ಮಹಾರಾಷ್ಟ್ರ 99, 64,421
ಮಧ್ಯಪ್ರದೇಶ 71,52,643ಬಿಹಾರ 66,77,343
ಗುಜರಾತ್ 53,29,394
ರಾಜಸ್ಥಾನ 64,63,353
ಕರ್ನಾಟಕ 51,38,119
ತಮಿಳುನಾಡು 40,49,364
ಒಡಿಶಾ 36,94,751
ತೆಲಂಗಾಣ 36,59,658
ಅಸ್ಸಾಮ್ 31,11,250
ಕೇರಳ 30,67,712
ಛತ್ತೀಸ್​ಗಡ 24,27,910
ಪಂಜಾಬ್ 23,42,427
ಜಾರ್ಖಂಡ್ 17,47,745
ಹರಿಯಾಣ 16,78,267
ಹಿಮಾಚಲ ಪ್ರದೇಶ 8,93,197
ಉತ್ತರಾಖಂಡ್ 7,79,154

ಇದನ್ನೂ ಓದಿ: ಪರಿಣಿತಿಗೆ ತಕ್ಕಂತೆ ಕೆಲಸ; ಸ್ವಂತ ವ್ಯವಹಾರಕ್ಕೆ ಉತ್ತೇಜನ: ಕಾರ್ಮಿಕರ ಉದ್ಧಾರಕ್ಕೆ ಹೊಸ ಆ್ಯಪ್ನಿಮ್ಮ ಹೆಸರಿದೆಯೇ ಎಂದು ತಿಳಿಯುವುದು ಹೀಗೆ:

ಯೋಜನೆಗೆ ನೀವು ನೊಂದಾಯಿಸಿದಲ್ಲಿ ಫಲಾನುಭವಿಗಳ ಹೊಸ ಪಟ್ಟಿಯಲ್ಲಿ ನಿಮ್ಮ ಹೆಸರು ಹೇಗೆ ನೋಡುವುದು? ಕೇಂದ್ರ ಸರ್ಕಾರ ಈ ಯೋಜನೆಗಾಗಿಯೇ ರೂಪಿಸಿರುವ pmkisan.gov.in ವೆಬ್ ಸೈಟ್​ನಲ್ಲಿ ನೀವು ಪಟ್ಟಿ ವೀಕ್ಷಿಸಬಹುದು. ನೀವು ಆ ವೆಬ್​ಸೈಟ್ ತೆರೆದಾಗ ಅಲ್ಲಿ ‘Farmer Corner’ ಟ್ಯಾಬ್ ಕಾಣುತ್ತದೆ. ಅದರಲ್ಲಿ ನೀವು ನಿಮ್ಮ ರಾಜ್ಯ, ಜಿಲ್ಲೆ, ಉಪವಿಭಾಗ, ಬ್ಲಾಕ್ ಮತ್ತು ಗ್ರಾಮದ ಹೆಸರನ್ನ ನಮೂದಿಸಿದರೆ ಪಟ್ಟಿ ಸಿಗುತ್ತದೆ. ಅಥವಾ ನೀವು ಯೋಜನೆಗೆ ನೀಡಿರುವ ಮೊಬೈಲ್ ಸಂಖ್ಯೆ ಅಥವಾ ಆಧಾರ್ ಸಂಖ್ಯೆ ನಮೂದಿಸಿ ನಿಮ್ಮ ಹೆಸರು ಪಟ್ಟಿಯಲ್ಲಿದೆಯಾ ಎಂದು ಪರೀಕ್ಷಿಸಬಹುದು.
First published: June 10, 2020, 3:44 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading